ಅಥೆನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು Wikipedia python library
೩೮ ನೇ ಸಾಲು:
}}
'''ಅಥೆನ್ಸ್''' ([[ಗ್ರೀಕ್ ಭಾಷೆ|ಗ್ರೀಕ್]]:Αθήνα, ''Athina'',) ನಗರವು [[ಗ್ರೀಸ್]] ದೇಶದ [[ರಾಜಧಾನಿ]] ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದ್ದು, ಇದರ ಇತಿಹಾಸ ೩೦೦೦ವರ್ಷಗಳಿಗಿಂತಲೂ ಹೆಚ್ಚು.ಇದರ ಹೆಸರು ಕೇಳದ ವಿದ್ವಾಂಸರು ಪ್ರಪಂಚದಲ್ಲೆಲ್ಲೂ ಇಲ್ಲವೆನ್ನಬಹುದು. ಕಾರಣ, ಐರೋಪ್ಯ ಜನಾಂಗಗಳ ನಾಗರಿಕತೆ ಬೆಳೆದದ್ದು ಇಲ್ಲಿಂದ. ಪ್ರಪಂಚದ ಸಂಸ್ಕøತಿಯ ಬೆಳೆವಣಿಗೆಗೆ ಈ ನಗರ ನೀಡಿರುವ ಕಾಣಿಕೆ ಅಪಾರ.
 
==ಇತಿಹಾಸ==
[[File:Map athenian empire 431 BC-en.svg|thumb|[[Delian League]], under the leadership of Athens before the [[Peloponnesian War]] in 431 BC]]
[[File:Monument de Philopappos crop.jpg|thumb|The Roman-era [[Philopappos Monument]]]]
 
ಅಥೆನ್ಸ್ ನಗರ ಸ್ಥಾಪಿತವಾದದ್ದು ಕ್ರಿ.ಪೂ. ಹದಿನೈದನೆಯ ಶತಮಾನದಲ್ಲಿರಬಹುದು ಎಂದು ಕೆಲವರ ಅಭಿಪ್ರಾಯ. ಆದರೆ ಅದರ ಭವ್ಯ ಭವಿಷ್ಯತ್ತಿನ ಮುನ್ಸೂಚನೆ ಕಂಡುಬಂದದ್ದು ಕ್ರಿ.ಪೂ.6ನೆಯ ಶತಮಾನದ ಕಾಲಕ್ಕೆ. ಅದಕ್ಕೆ ಮೊದಲು ನಿರಂಕುಶಾಧಿಪತಿಗಳು ರಾಜ್ಯವಾಳುತ್ತಿದ್ದರು. ಕ್ರಮೇಣ ಅಧಿಕಾರ ಶ್ರೀಮಂತವರ್ಗದವರ ಹತೋಟಿಗೆ ಬಂದಿತು. 6ನೆಯ ಶತಮಾನದಲ್ಲಿ ಸರ್ವಾಧಿಕಾರಿಯಾಗಿ ಬಂದ ಸೋಲನ್ ಸಾಮಾನ್ಯ ಜನರ ಪರಿಸ್ಥಿತಿಯನ್ನು ಉತ್ತಮಗೊಳಿಸಬೇಕೆಂಬ ಉದ್ದೇಶದಿಂದ ಸುಧಾರಣೆಗಳನ್ನು ಜಾರಿಗೆ ತಂದವರಲ್ಲಿ ಮೊದಲಿಗ. ರೈತರೇ ರಾಷ್ಟ್ರದ ಜೀವನಾಡಿ ಎಂಬುದನ್ನರಿತ ಅವನು, ಅವರು ಶ್ರೀಮಂತರಿಂದ ಪಡೆದಿದ್ದ ಸಾಲಗಳನ್ನೆಲ್ಲ ವಜಾ ಮಾಡಿದ, ಸಾಲಕ್ಕಾಗಿ ರೈತ ತನ್ನ ಹೆಂಡತಿ ಮಕ್ಕಳನ್ನು ಮಾರುವ ಪದ್ಧತಿಯನ್ನು ನಿಲ್ಲಿಸಿದ. ಇದರಿಂದ, ಶ್ರೀಮಂತರ ಹಿಡಿತಕ್ಕೆ ಸಿಕ್ಕಿ ಅವರ ದಾಸರಾಗಿ ಹತಾಶರಾಗಿದ್ದ ರೈತರಲ್ಲಿ ಹೊಸ ಭರವಸೆ ಮೂಡಿತು. ಜೀವನದಲ್ಲಿ ಅವರಿಗೆ ಹೊಸ ಉತ್ಸಾಹ ಬಂದಿತು. ಆಲಿವ್ ಗಿಡ ಬೆಳೆಯುವುದಕ್ಕೆ ಅನುಕೂಲತೆ ಹೊಂದಿದ್ದ ಅಟಿಕ ಬಯಲಿನಲ್ಲಿ ಅದನ್ನು ಬೆಳೆಸಲು ರೈತರಿಗೆ ಪ್ರೋತ್ಸಾಹ ನೀಡಿದ್ದರಿಂದ ಅದರ ಬೆಳೆ ಹೆಚ್ಚಿತು. ಆಲಿವ್ ಎಣ್ಣೆಯನ್ನು ಹೊರದೇಶಗಳಿಗೆ ಮಾರಿ ಅದಕ್ಕೆ ಬದಲಾಗಿ ಗೋದಿ ಮುಂತಾದ ಆಹಾರಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಅನುಕೂಲವಾಯಿತು. ಕೆಳವರ್ಗದ ಜನರ ನೆಮ್ಮದಿಗೆ ಪ್ರತಿಕೂಲವಾಗಿದ್ದ ಕಾಯಿದೆಗಳು ತೊಡೆದು ಹಾಕಲ್ಪಟ್ಟವು. ನೆಮ್ಮದಿಯ ಪರಿಣಾಮವಾಗಿ, ಹೊರದೇಶಗಳಿಂದ ಜನರು ಅಥೆನ್ಸಿಗೆ ಬಂದು ನೆಲಸತೊಡಗಿದರು. ಹೊರದೇಶಗಳೊಡನೆ ವ್ಯಾಪಾರ ಬೆಳೆಯಿತು. ಜನರು ಕುಶಲಕಲೆಗಳ ಕಡೆಗೆ ಗಮನ ಕೊಟ್ಟರು. ಕುಶಲ ವಿದ್ಯೆಗಳಾಗಲಿ ಲಲಿತ ಕಲೆಗಳಾಗಲೆ ಒಂದು ಜನಾಂಗದಲ್ಲಿ ಬೆಳೆಯಬೇಕಾದರೆ, ಅವರಿಗೆ ವ್ಯಕ್ತಿಸ್ವಾತಂತ್ರ್ಯವಿರಬೇಕು; ಆ ವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟು ಐದನೆಯ ಶತಮಾನದಲ್ಲಿ ಅಥೆನ್ಸ್ ನಾಗರಿಕರು ಬೆಳೆಸಿದ ವಿಸ್ಮಯಕರವಾದ ಕಲಾಪ್ರೌಢಿಮೆಗೆ ಸೋಲನ್ ಸ್ಫೂರ್ತಿಯನ್ನಿತ್ತ.
 
ಸೋಲನ್ನನ ತರುವಾಯ ಬಂದ ಪಿಸಿಸ್ಟ್ರಾಟಸ್ ಮತ್ತು ಅವನ ಮಕ್ಕಳು ಹಿಪಿಯಾಸ್ ಮತ್ತು ಹಿಪಾರ್ಕಸ್ಸರ ಕಾಲದಲ್ಲೂ ಅಥೆನ್ಸಿನ ಪ್ರಗತಿ ಯಾವ ಅಡೆತಡೆಯೂ ಇಲ್ಲದೆ ಸಾಗಿತು. ನೀರಾವರಿ ಕೆಲಸಗಳು ನಡೆದವು; ಕೈಗಾರಿಕೆ, ವ್ಯಾಪಾರ, ರಸ್ತೆನಿರ್ಮಾಣ, ಹಬ್ಬಹರಿದಿನಗಳಲ್ಲಿ ಸಾರ್ವಜನಿಕ ಸಮಾರಂಭಗಳಿಗೆ ಪ್ರೋತ್ಸಾಹ, ಕಲೆಗಳಿಗೆ ಉತ್ತೇಜನ-ಇವೆಲ್ಲ ಜನರಿಗೆ ದೊರೆತು, ಅಥೆನ್ಸ್ ಗ್ರೀಕ್ ಸಂಸ್ಕøತಿಯ ಕೇಂದ್ರವಾಯಿತು. ಕ್ರಿ.ಪೂ.507ರಲ್ಲಿ ಕ್ಲೀಸ್ತನೀಸ್ ಅಧಿಕಾರ ವಹಿಸಿ, ಅಥೆನ್ಸಿನಲ್ಲಿ ಪ್ರಜಾಪ್ರಭುತ್ವವನ್ನೇರ್ಪಡಿಸಿದ. ಇವನ ಸುಧಾರಣೆಗೆ ಪೂರ್ತ ಯಶಸ್ವಿಯಾಗದಿದ್ದರೂ ಅದು ಮುಂದೆ ಪೆರಿಕ್ಲಿಸ್‍ನ ಕಾಲದ ಅಥೆನ್ಸ್‍ಗೆ ಮಾರ್ಗಸೂಚಿಯಾಯಿತು. ಆದರೆ ಈ ಮಧ್ಯೆ ಪರ್ಷಿಯಾದೊಡನೆ ಯುದ್ಧ ಮಾಡಬೇಕಾದ ಪ್ರಸಂಗವೊದಗಿ (ಕ್ರಿ.ಪೂ.500-449), ಅಥೆನ್ಸಿನ ಪರಿಸ್ಥಿತಿ ಬದಲಾಯಿಸಿತು. ಸ್ಪಾರ್ಟಾಗಿಂತ ಅಥೆನ್ಸ್ ಚಿಕ್ಕದು, ಯುದ್ಧದಲ್ಲೂ ಅದರಷ್ಟು ಬಲಯುತವಾಗಿರಲಿಲ್ಲ; ಆದರೂ ಕಾರ್ಯಪಟುತ್ವದಲ್ಲಿ, ದಕ್ಷತೆಯಲ್ಲಿ, ಅದಕ್ಕಿಂತ ಮೇಲು. ಈ ಯುದ್ಧದಲ್ಲಿ ಅಥೆನ್ಸಿನ ಮಿಲ್ಟಿಯಾಡಿಸ್, ಥೆಮಿಸ್ಟಾಕ್ಲಿಸ್, ಸೈಮನ್ ಮುಂತಾದ ಅನೇಕ ವೀರರ ಶೌರ್ಯ, ಕದನಕೌಶಲಗಳು ಅಥೆನ್ಸಿಗೆ ಕೀರ್ತಿತಂದುವು. ಮ್ಯಾರಥಾನ್, ಸೆಲ್ಯಾಮಿಸ್ ಮುಂತಾದ ಕದನಗಳಲ್ಲಿ ಅಥೆನ್ಸ್ ಗಳಿಸಿದ ವಿಜಯ ಪ್ರಖ್ಯಾತವಾದದ್ದು; ಆದರೆ ಈ ಕದನಗಳಿಂದ, ತನಗೆ ಬಲಿಷ್ಠ ನೌಕೆಯೊಂದಿಲ್ಲದ ಕೊರತೆಯನ್ನು ಅಥೆನ್ಸ್ ಮನಗಂಡಿತು; ಮತ್ತು ಅಂಥ ಅಂತ ನೌಕೆಯೊಂದನ್ನು ತ್ವರಿತವಾಗಿ ನಿರ್ಮಿಸಿತು. [[ಗ್ರೀಸ್]] ಸಣ್ಣದೇಶ; ಅಂಥ ಚಿಕ್ಕ ದೇಶದಲ್ಲೂ ನಗರ ರಾಜ್ಯಗಳಿದ್ದವೇ ವಿನಾ ಇಡೀ ದೇಶ ಒಂದಾಗಿರಲಿಲ್ಲ. ಅಥೆನ್ಸ್ ಆಗ ಯುದ್ಧದಲ್ಲಿ ಅಪ್ರತಿಮ ಸಾಹಸ ಪ್ರದರ್ಶಿಸಿ, ಬಲವಾದ ನೌಕೆಯೊಂದನ್ನು ಪಡೆದುದರ ಪರಿಣಾಮವಾಗಿ ಕ್ರಿ.ಪೂ.478ರಲ್ಲಿ ಡೇಲಿಯನ್ ಒಕ್ಕೂಟವನ್ನು ಸ್ಥಾಪಿಸಲು ಸಾಧ್ಯವಾಯಿತು. ಆದರೆ, ಸದಾ ವೈಮನಸ್ಯ ಹೊಂದಿದ್ದ ನಗರ ರಾಜ್ಯಗಳು, ಸ್ಪಾರ್ಟಾದ ಹುರುಡು, ಇವುಗಳಿಂದ ಅಥೆನ್ಸ್ ಪರ್ಷಿಯಾದೊಂದಿಗೆ ಶಾಂತಿ ಒಪ್ಪಂದವನ್ನು ಕ್ರಿ.ಪೂ.449ರಲ್ಲೂ ಸ್ಪಾರ್ಟಾದೊಂದಿಗೆ ರಾಜಿಯನ್ನು ಕ್ರಿ.ಪೂ.445ರಲ್ಲೂ ಮಾಡಿಕೊಂಡಿತು.
==ಉಚ್ಛ್ರಾಯ==
ಈ ಪರಿಸ್ಥಿತಿಯಲ್ಲಿ [[ಪೆರಿಕ್ಲಿಸ್]] ಆಡಳಿತಸೂತ್ರಗಳನ್ನು ತನ್ನ ಕೈಗೆ ತೆಗೆದುಕೊಂಡ. ಇವನ ಕಾಲದಲ್ಲೇ ಅಥೆನ್ಸ್ ಏಳಿಗೆಯ ಪರಮಾವಧಿಯನ್ನು ತಲುಪಿದ್ದು. ಇವನ ಕಾಲದಲ್ಲೇ [[ಸಾಕ್ರಟೀಸ್]] ಅಥೆನ್ಸಿನ ಬೀದಿಗಳಲ್ಲಿ ಸಂಚರಿಸಿ ಸಂವಾದರೂಪದಲ್ಲಿ ಜನರಲ್ಲಿ ಜ್ಞಾನಪ್ರಸಾರ ಮಾಡಿದ್ದು; [[ಈಸ್ಕಿಲಸ್]] ತನ್ನ ಪ್ರಖ್ಯಾತ ರುದ್ರನಾಟಕಗಳನ್ನು ಬರೆದದ್ದು; [[ಸೊಫೊಕ್ಲಿಸ್]], [[ಯೂರಿಪಿಡೀಸ್]] ತಮ್ಮ ಉಜ್ವ್ವಲವಾದ ಅಸದೃಶವಾದ ಕೃತಿಗಳನ್ನು ರಚಿಸಿದ್ದು. ವಾಸ್ತುಶಿಲ್ಪ, ಮೂರ್ತಿಶಿಲ್ಪ, ವರ್ಣಚಿತ್ರಣ- ಎಲ್ಲ ಕಲೆಗಳಲ್ಲೂ ವಿಸ್ಮಯಕಾರಕವಾದ ಪ್ರಗತಿಯನ್ನು ಸಾಧಿಸಿದರು ಅಥೆನ್ಸಿನ ಪ್ರತಿಭಾವಂತರು. ಅನುಪಮವಾದ ಪಾರ್ಥೆನಾನ್ ನಿರ್ಮಿತವಾದದ್ದೂ ಈ ಕಾಲದಲ್ಲೇ.
 
ಪೆರಿಕ್ಲಿಸ್ ಜಾರಿಗೆ ತಂದ ಸುಧಾರಣೆಗಳು, ಅವನ ಕಾಲದಲ್ಲಾದ ಜನಪ್ರಗತಿ, ಇವಾವುದೂ ಬಹುಕಾಲ ಉಳಿಯಲಿಲ್ಲ. ಸ್ಪಾರ್ಟದೊಂದಿಗೆ ಇದ್ದ ವೈಮನಸ್ಯ ಬೆಳೆಯಿತು. ಕ್ರಿ.ಪೂ.431ರಲ್ಲಿ ಅವೆರಡು ರಾಜ್ಯಗಳ ನಡುವೆ ಪೆಲಪೊನೀಸಿಯನ್ ಯುದ್ಧ ಪ್ರಾರಂಭವಾಗಿ 404ರವರೆಗೂ ನಡೆಯಿತು. ಎರಡೂ ರಾಜ್ಯಗಳಿಗೂ ಅಪಾರ ನಷ್ಟವಾಯಿತು. ಎರಡೂ ಸೋತವು. ಒಕ್ಕೂಟಕ್ಕೆ ಸೇರಿದ್ದ ಮಿತ್ರ ರಾಜ್ಯಗಳು ಎಂದೋ ಅಥೆನ್ಸಿನ ಮೈತ್ರಿಯನ್ನು ತ್ಯಜಿಸಿದ್ದವು. ಕ್ರಿ.ಪೂ.338ರಲ್ಲಿ ಮ್ಯಾಸಿಡೋನಿಯಾದ ದೊರೆ ಫಿಲಿಪ್ಪನು ಗ್ರೀಸ್ ದೇಶವನ್ನು ಗೆದ್ದು ತನ್ನ ವಶಪಡಿಸಿಕೊಂಡ. ಅವನ ಮಗ [[ಅಲೆಕ್ಸಾಂಡರ್|ಅಲೆಗ್ಸಾಂಡರ್]] ಗ್ರೀಸಿನ ಮೇಲಣ ಹತೋಟಿಯನ್ನು ಇನ್ನೂ ಬಲಪಡಿಸಿದ. ಅಥೆನ್ಸ್ ಒಂದು ಪ್ರಾಂತೀಯ ನಗರವಾಗಿ ಉಳಿಯಿತು.
 
ಈ ದುರ್ದಶೆಯ ಕಾಲದಲ್ಲೂ ಅಥೆನ್ಸಿನ ಸಾಂಸ್ಕತಿಕ ಚಟುವಟಿಕೆಗಳು, ಸಾಧನೆಗಳು ಮುಂದುವರೆದವು. [[ಅರಿಸ್ಟೋಫೆನೀಸ್| ಅರಿಸ್ಟೋಫೆನಿಸ್]] ತನ್ನ ಹರ್ಷನಾಟಕಗಳಲ್ಲಿ ಆಗಿನ ಜನಜೀವನವನ್ನು ವಿಡಂಬನಾತ್ಮಕವಾಗಿ ಚಿತ್ರಿಸಿದ. [[ಪ್ಲೇಟೊ]] ತನ್ನ ಅಕೆಡಮಿಯಲ್ಲಿ ಜೀವನ ರಹಸ್ಯಗಳನ್ನು ಹೊರಗೆಡವಿದ; ಅವನ ಗುರು [[ಸಾಕ್ರಟೀಸ್]], ಜನಸಾಮಾನ್ಯರಲ್ಲಿ ಜ್ಞಾನಪ್ರಸಾರಮಾಡುತ್ತಲಿದ್ದ, ಪ್ಲೇಟೋವಿನ ಶಿಷ್ಯ [[ಅರಿಸ್ಟಾಟಲ್]] ಜ್ಞಾನಭಂಡಾರವನ್ನೇ ಸೂರೆಗೊಳ್ಳಲೆತ್ನಿಸಿದ.
==ಅವನತಿ==
Line ೧೬೩ ⟶ ೧೫೮:
|accessdate=}}</ref>
}}
 
{{Weather box/concise C
| location=National Observatory of Athens (Thiseio), {{convert|107|m|ft|abbr=on}} asl (1971–2000), (1961–1990) rain
Line ೧೭೩ ⟶ ೧೬೭:
| 44.6| 48.3 | 42.6 | 28.2 | 17.2 | 9.7 | 4.2 | 4.6 | 11.9 | 47.7 | 50.6 | 66.6 <!--rain-->
}}
 
==ಆಧುನಿಕ ನಗರ==
ಅಥೆನ್ಸ್ ನಗರದ ಜನಸಂಖ್ಯೆ ೩.೩೭ದಶಲಕ್ಷ (೨೦೦೫ರಲ್ಲಿ).<ref>{{cite web |url=http://www.insee.fr/fr/ffc/chifcle_fiche.asp?ref_id=CMPTEF01103&tab_id=18 |title="Population des villes et unités urbaines de plus de 1 million d'habitants de l'Union Européenne" |work=Institut National de la Statistique et des Études Économiques |accessdate=2006-04-10 |language=French}}</ref> ಇದು ಗ್ರೀಸ್ ದೇಶದ ಆರ್ಥಿಕ, ಕೈಗಾರಿಕಾ, ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಇದು ತ್ವರಿತವಾಗಿ [[ಯುರೋಪ್ ಒಕ್ಕೂಟ]]ದ ಮುಖ್ಯ ವ್ಯವಹಾರದ ಕೇಂದ್ರವಾಗಿ ಬೆಳೆಯುತ್ತಿದೆ. ಗ್ರೀಸ್ ದೇಶದ ಕೈಗಾರಿಕೋತ್ಪನ್ನದ ಅರ್ಧದಷ್ಟು ಅಥೆನ್ಸ್ ಬಯಲಿನಲ್ಲಿ ಕೇಂದ್ರೀಕೃತವಾಗಿದೆ. ಮುಖ್ಯ ಉತ್ಪನ್ನಗಳು- [[ರೇಷ್ಮೆ]], [[ಉಣ್ಣೆ]], [[ಹತ್ತಿಬಟ್ಟೆ]], ಯಂತ್ರಸಾಧನಗಳು, ಮತ್ತಿತರ ಜೀವನ ಸಾಮಗ್ರಿಗಳು.
Line ೧೮೫ ⟶ ೧೭೮:
<br /><br />
== ಉಲ್ಲೇಖಗಳು ==
{{Reflist}}
<references/>
== ಹೊರಗಿನ ಸಂಪರ್ಕಗಳು ==
* [http://www.cityofathens.gr ಅಥೆನ್ಸ್ ನಗರದ ಅಧಿಕೃತ ತಾಣ]
"https://kn.wikipedia.org/wiki/ಅಥೆನ್ಸ್" ಇಂದ ಪಡೆಯಲ್ಪಟ್ಟಿದೆ