ಪರಮಾಣು ಸಿದ್ಧಾಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
 
No edit summary
೧ ನೇ ಸಾಲು:
{{Under construction}}
[[File:Helium atom QM.svg|right|thumb|200px|ಇಂದಿನ ಅಣುಸಿದ್ಧಾಂತ]]
[[:w:John Dalton|ಜಾನ್‍ ಡಾಲ್ಟನ್‍]]ನ ಪರಮಾಣುಪರಮಾಣುವಾದದ[https://en.wikipedia.org/wiki/Atomic_theory#John_Dalton ವಾದ] ಪ್ರಕಾರ ಪ್ರತಿಯೊಂದು ಪದಾರ್ಥವೂ ಅತಿಸೂಕ್ಷ್ಮವಾದ ಮತ್ತು ಅಭೇದ್ಯವಾದ ಪರಮಾಣುಗಳೆಂಬ ಕಣಗಳಿಂದ ಆಗಿವೆ ; ಪ್ರತಿಯೊಂದು ಪದಾರ್ಥದ (ಅದು ರಾಸಾಯನಿಕ ಧಾತುವಾಗಿರಲಿ, ಸಂಯುಕ್ತವಾಗಿರಲಿ) ಪರಮಾಣುವೂ ಅದಕ್ಕೆ ವಿಶಿಷ್ಟವಾದ ಗಾತ್ರ, ತೂಕ, ಮುಂತಾದ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಡಾಲ್ಟನ್ನನ ಈ ಪರಮಾಣುವಿನ ಕಲ್ಪನೆಯನ್ನು ಕೆಲಕಾಲಾನಂತರ ಬದಲಾಯಿಸಬೇಕಾಗಿ ಬಂತು. ಅನಿಲಗಳು ರಾಸಾಯನಿಕ ಕ್ರಿಯೆಗಳಲ್ಲಿ ಭಾಗವಹಿಸುವಾಗ ಪಾಲಿಸುವ ನಿಯಮಗಳನ್ನು ಡಾಲ್ಟನ್ನನ ಪರಮಾಣು ವಾದದ ಆಧಾರದ ಮೇಲೆ ಅರ್ಥಪೂರ್ಣವಾಗಿ ವಿವರಿಸುವುದು ಸಾಧ್ಯವಾಗದೆ ಹೋಯಿತು. ಈ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಪಾರಾಗಲು ಅಣುವಿನ ಕಲ್ಪನೆ ಅವಶ್ಯವಾಯಿತು. ಈ ಅಣುಸಿದ್ಧಾಂತವನ್ನು ([[:w:Atomic theory|ಮೊಲೆಕ್ಯೂಲರ್ ಥಿಯೊರಿ]]) ಪ್ರತಿಪಾದಿಸಿದವನು ಇಟಲಿಯ [[:w:Amedeo Avogadro|ಅಮಿಡಿಯೊ ಅವೊಗ್ಯಾಡ್ರೊ]].
[[File:Daltons symbols.gif|right|thumb|ವಿವಿಧ ಅಣು ಮತ್ತು ಪರಮಾಣುಗಳು [[:w:John Dalton|ಜಾನ್‍ ಡಾಲ್ಟನ್‍]]ನ ಹೊಸ ರಾಸಾಯನ ಸಿದ್ಧಾಂತದಲ್ಲಿ (೧೮೦೮]]
==ಸಿದ್ಧಾಂತಗಳು==
ಅಣುಸಿದ್ಧಾಂತದ ಪ್ರಕಾರ ಒಂದು ಪದಾರ್ಥ [[ಅನಿಲಸ್ಥಿತಿ]]ಯಲ್ಲಿದ್ದಾಗ, ಇಲ್ಲವೇ ಒಂದು ದ್ರವದಲ್ಲಿ ವಿಲೀನವಾಗಿ ದ್ರಾವಣರೂಪದಲ್ಲಿದ್ದಾಗ ಆ ಪದಾರ್ಥದ ರಾಸಾಯನಿಕ ಸಂಯೋಜನೆ ಮತ್ತು ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿರುವ ಮತ್ತು ಸ್ವತಂತ್ರವಾಗಿ ಇರುವ ಅದರ ಅತಿ ಚಿಕ್ಕ ಕಣವನ್ನು ಅಣು ([[:w:Molecule|ಮಾಲಿಕ್ಯೂಲ್]]) ಎಂದು ಕರೆಯಲಾಗುವುದು. ಈ ಅಣುವಿನಲ್ಲಿ ರಾಸಾಯನಿಕ ಧಾತುಗಳ ಪರಮಾಣುಗಳು ಹಲವಾರು ಇರಬಹುದು. [[ಜಲಜನಕ]] ([[ಹೈಡ್ರೊಜನ್]]), [[ಆಮ್ಲಜನಕ]] (ಆಕ್ಸಿಜನ್), [[ಕ್ಲೋರಿನ್]]-ಮುಂತಾದ ಧಾತುಗಳ ಅಣುಗಳಲ್ಲಿ ಆಯಾ ಧಾತುವಿನ ಪರಮಾಣುಗಳು ಮಾತ್ರ ಇರುತ್ತವೆ. ನೀರು, [[ಅಮೋನಿಯ]]-ಮುಂತಾದ ಸಂಯುಕ್ತಗಳ ಅಣುಗಳಲ್ಲಿ ಬೇರೆ ಬೇರೆ ಧಾತುಗಳ ಪರಮಾಣುಗಳು ಒಂದು ನಿರ್ದಿಷ್ಟ ಸಂಖ್ಯೆಯಲ್ಲಿರುತ್ತವೆ. [[ಹೀಲಿಯಮ್]], [[ಆರ್ಗಾನ್]] ಮುಂತಾದ ಅನಿಲ ಧಾತುಗಳಲ್ಲಿರುವ ಅಣುಗಳೂ ಏಕ ಪರಮಾಣ್ವಕ ಅಣುಗಳು. ಅಂದರೆ, ಅವುಗಳ ಬಿಡಿ ಪರಮಾಣುಗಳೇ ಅವುಗಳ ಅಣುಗಳು.
==ಉಲ್ಲೇಖ==
http://web.lemoyne.edu/~giunta/avogadro.html
"https://kn.wikipedia.org/wiki/ಪರಮಾಣು_ಸಿದ್ಧಾಂತ" ಇಂದ ಪಡೆಯಲ್ಪಟ್ಟಿದೆ