ಭಾರತದಲ್ಲಿ ಜನಗಣತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೫೧ ನೇ ಸಾಲು:
|}
 
==ಭಾರತದಲ್ಲಿ ಲಿಂಗಾನುಪಾತ==
==ನೋಡಿ==
*ಹೆಣ್ಣು ಮಕ್ಕಳ ಜನನ ಪ್ರಮಾಣ ಇಳಿಮುಖವಾಗುತ್ತಿದೆ ಎಂಬುದು ಸರ್ಕಾರದ ಇತ್ತೀಚಿನ ವರದಿಯಿಂದ ವ್ಯಕ್ತ. ಕಳೆದ ಕೆಲವು ವರ್ಷಗಳಲ್ಲಿ ಹೆಣ್ಣು ಮಕ್ಕಳ ಜನನ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿತ್ತು. ಆದರೆ ಮತ್ತೆ ಅದು ಇಳಿಮುಖದ ಹಾದಿಯಲ್ಲಿ ಸಾಗಿರುವುದು ಆತಂಕಕಾರಿ. ಸ್ಯಾಂಪಲ್ ರಿಜಿಸ್ಟ್ರೇಷನ್ ಸಾಂಖ್ಯಿಕ (ಎಸ್‍ಆರ್ಎಸ್) ವರದಿಯ ಪ್ರಕಾರ, 2012-14ರ ಅವಧಿಯಲ್ಲಿ ರಾಷ್ಟ್ರದಲ್ಲಿ ಪ್ರತಿ 1000 ಗಂಡು ಶಿಶುಗಳ ಜನನಕ್ಕೆ ಪ್ರತಿಯಾಗಿ 906 ಹೆಣ್ಣು ಶಿಶುಗಳ ಜನನವಾಗಿದೆ.
*[[ಭಾರತ]] <-ಭಾರತದಲ್ಲಿ ಜನಗಣತಿ -
 
*2011-13ರಲ್ಲಿ ಈ ಪ್ರಮಾಣ 909 ಇತ್ತು. ಹೆಣ್ಣು ಮಕ್ಕಳ ಜನನ ಪ್ರಮಾಣ ಅಲ್ಪಪ್ರಮಾಣದಲ್ಲಾದರೂ ಸುಧಾರಿಸುತ್ತಿದೆ ಎಂದು ಸಮಾಧಾನಪಟ್ಟುಕೊಳ್ಳುತ್ತಿರುವಾಗಲೇ ಹೊರಬಿದ್ದಿರುವ ಈ ಅಂಕಿಅಂಶ ಕಳವಳಕಾರಿಯಾದುದು. ಏಕೆಂದರೆ, 2008-10ರಲ್ಲಿ ಹೆಣ್ಣು ಮಕ್ಕಳ ಜನನ ಪ್ರಮಾಣ 1000 ಗಂಡು ಶಿಶುಗಳಿಗೆ 905ರಷ್ಟು ಇತ್ತು. ನಂತರ 2009-11ರಲ್ಲಿ 906ಕ್ಕೆ ಏರಿತು. 2010-12ರಲ್ಲಿ 908ಕ್ಕೆ ಏರಿತ್ತು. ಈಗ ಮತ್ತೆ ಇಳಿಮುಖದ ಹಾದಿಗೆ ಹೊರಳಿಕೊಂಡಿದೆ.
*ಕರ್ನಾಟಕದಲ್ಲೂ 2011-13ರಲ್ಲಿ ಹೆಣ್ಣು ಮಕ್ಕಳ ಜನನ ಪ್ರಮಾಣ 958 ಇದ್ದದ್ದು 2012-14ಕ್ಕೆ 950ಕ್ಕೆ ಇಳಿಮುಖವಾಗಿದೆ. ಹೆಣ್ಣು ಮಕ್ಕಳ ಜನನ ಪ್ರಮಾಣ ಹರಿಯಾಣ ಹಾಗೂ ದೆಹಲಿಗಳಲ್ಲಿ ಕ್ರಮವಾಗಿ 866 ಹಾಗೂ 876 ಇದ್ದು ರಾಷ್ಟ್ರದಲ್ಲೇ ಅತ್ಯಂತ ಕೆಳಮಟ್ಟದಲ್ಲಿವೆ. ಕಾನೂನಿನ ನಿಷೇಧವಿದ್ದರೂ ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿ ನಡೆಯುತ್ತಿದೆ ಎಂಬುದಕ್ಕೆ ಈ ಅಂಕಿಅಂಶಗಳು ದ್ಯೋತಕ.
 
*ಹೆಣ್ಣು ಮಕ್ಕಳ ಸಂಖ್ಯೆ ಕುಸಿಯುತ್ತಿರುವ ಭಾರತದಲ್ಲಿನ ವಿದ್ಯಮಾನವನ್ನು ‘ರಾಷ್ಟ್ರೀಯ ತುರ್ತುಪರಿಸ್ಥಿತಿ’ ಎಂದು ವಿಶ್ವಸಂಸ್ಥೆ ಕರೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಈ ಕುಸಿತವನ್ನು ನಿಯಂತ್ರಣಕ್ಕೆ ತರಲು ಭಾರತದಲ್ಲಿ ವಿಶೇಷ ಕಾನೂನೇ ಇದೆ. 1996ರ ಜನವರಿ 1ರಿಂದ ರಾಷ್ಟ್ರದಾದ್ಯಂತ ಪ್ರಸವಪೂರ್ವ ಲಿಂಗ ಪತ್ತೆ ತಂತ್ರಜ್ಞಾನ ನಿಯಂತ್ರಣ ಹಾಗೂ ದುರ್ಬಳಕೆ ತಡೆ ಕಾಯ್ದೆ (ಪಿಎನ್‌ಡಿಟಿ ಕಾಯ್ದೆ) ಅನುಷ್ಠಾನಗೊಳಿಸಲಾಗಿದೆ.
 
*ನಂತರ ಗರ್ಭಧಾರಣೆ ಪೂರ್ವ ಹಾಗೂ ಪ್ರಸವಪೂರ್ವ ಪತ್ತೆ ತಂತ್ರಜ್ಞಾನ (ಲಿಂಗ ಆಯ್ಕೆ ನಿಷೇಧ) ತಿದ್ದುಪಡಿ ಕಾಯ್ದೆಯು (ಪಿಸಿ ಅಂಡ್ ಪಿಎನ್‌ಡಿಟಿ ಕಾಯ್ದೆ) 2003ರಿಂದ ಜಾರಿಯಲ್ಲಿದೆ. ಕ್ರೋಮೊಸೋಮ್ ಬೇರ್ಪಡಿಕೆ ತಂತ್ರಜ್ಞಾನ ಸೇರಿದಂತೆ ಗರ್ಭಧಾರಣೆ ಪೂರ್ವ ಲಿಂಗ ಆಯ್ಕೆಯ ಎಲ್ಲಾ ತಂತ್ರಜ್ಞಾನಗಳ ಇತ್ತೀಚಿನ ಬೆಳವಣಿಗೆಗಳನ್ನೂ ಈ ಕಾಯ್ದೆ ವ್ಯಾಪ್ತಿಗೆ ತರಲಾಗಿದೆ.<ref>[http://www.prajavani.net/news/article/2016/09/21/439405.html ಲಿಂಗಾನುಪಾತ ಕುಸಿತ ಎಚ್ಚರಿಕೆ ಗಂಟೆಯಾಗಲಿ 21 Sep, 2016]</ref>
 
==ನೋಡಿ==
*[[ಭಾರತ]] <-ಭಾರತದಲ್ಲಿ ಜನಗಣತಿ -
*[[ಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆ]]
==ಉಲ್ಲೇಖ==
[[ವರ್ಗ : ಜನಗಣತಿ]]
"https://kn.wikipedia.org/wiki/ಭಾರತದಲ್ಲಿ_ಜನಗಣತಿ" ಇಂದ ಪಡೆಯಲ್ಪಟ್ಟಿದೆ