ಯಗಚಿ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ
No edit summary
೧ ನೇ ಸಾಲು:
ಯಗಚಿ ಜಲಾಶಯವು [[ಹಾಸನ]] ಜಿಲ್ಲೆಯಿಂದ 45ಕಿ.ಮೀ ದೂರದಲ್ಲಿ ಬೇಲೂರು ಬಳಿಯಲ್ಲಿದೆ. ಇದು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆ. ಈ ಜಲಾಶಯವು 2004 ರಲ್ಲಿ ಹಾಸನ, ಚಿಕ್ಕ ಮಗಳೂರು ಮತ್ತು ಬೇಲೂರು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಮತ್ತು ನೀರಾವರಿ ಸೌಲಭ್ಯವನ್ನು ನೀಡುವ ಉದ್ದೇಶದಿಂದ ನಿರ್ಮಾಣಗೊಂಡಿತು. ಯಗಚಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಜಲಾಶಯವು ಸಮುದ್ರ ಮಟ್ಟದಿಂದ 965 ಅಡಿ ಎತ್ತರದಲ್ಲಿದೆ. ಯಗಚಿ ಜಲಾಶಯದ ಹೊರಹರಿವು 4300 ಕ್ಯುಸೆಕ್ಸ್ ಮತ್ತು ಒಳ ಹರಿವು 4500 ಕ್ಯುಸೆಕ್ಸ್ ಇರುತ್ತದೆ. ಈ ಜಲಾಶಯವನ್ನು ನಕ್ಸಲ್ ಸಮಸ್ಯೆಯಿಂದಾಗಿ ಪೋಲಿಸರು ಕಾಯುತ್ತಿರುತ್ತಾರೆ.ಇತ್ತೀಚೆಗೆ ಈ ಜಲಾಶಯದ ಹಿನ್ನೀರಿನಲ್ಲಿ ಯಗಚಿ ವಾಟರ್ ಆಡ್ವೇಂಚರ್ ಸ್ಪೋರ್ಟ್ಸ್ ಸೆಂಟರ್ ಎಂಬ ಸಾಹಸ ಕ್ರೀಡಾ ಕೇಂದ್ರವು ತಲೆ ಎತ್ತಿದ್ದು ಬಹು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಶಿಸುತ್ತಿದೆ. ಹಾಗಾಗಿ ಇಲ್ಲಿ ಪ್ರವಾಸಿಗರು ಬನಾನ ಬೋಟ್ ರೈಡ್, ಕ್ರೂಸ್ ಬೋಟ್, ಸ್ಪೀಡ್ ಬೋಟ್ , ಜೆಟ್ ಸ್ಕೈಯಿಂಗ್ ಮತ್ತು ಬಂಪರ್ ರೈಡ್ಸ್ ನಂತಹ ಸಾಹಸ ದೋಣಿ ಯಾನಗಳನ್ನು ಇಲ್ಲಿ ಮಾಡಬಹುದು. ಇಷ್ಟೇ ಅಲ್ಲದೆ ಈ ಸ್ಥಳದಲ್ಲಿ ಪ್ರವಾಸಿಗರು ಪ್ರಶಾಂತವಾಗಿ ಕಾಲ ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ.
'''ಯಗಚಿ ನದಿ'''ಯು [[ಹೇಮಾವತಿ]] ನದಿಯ ಮುಖ್ಯ [[ಉಪನದಿ]]. ಇದು [[ಚಿಕ್ಕಮಗಳೂರು]] ಜಿಲ್ಲೆಯಲ್ಲಿ ಹುಟ್ಟಿ [[ಹಾಸನ]] ಜಿಲ್ಲೆಯ ಗೊರೂರಿನ ಬಳಿ ಹೇಮಾವತಿ ನದಿಯನ್ನು ಸೇರುತ್ತದೆ. ವಿಶ್ವವಿಖ್ಯಾತ [[ಬೇಲೂರು]] ಈ ನದಿಯ ದ೦ಡೆಯಲ್ಲಿದೆ.
ಬೇಲೂರಿನ ಬಳಿ ಈ ನದಿಗೆ ಸುಮಾರು ೪ ಟಿ ಎ೦ ಸಿ ಸಾಮರ್ಥ್ಯದ ಅಣೆಕಟ್ಟೆ ನಿರ್ಮಿಸಲಾಗಿದೆ.
[[File:Yagachi Dam.jpg|thumb|right|ಯಗಚಿ ನದಿಗೆ ಕಟ್ಟಲಾದ ಆಣೆಕಟ್ಟು]]
[[ವರ್ಗ:ಕರ್ನಾಟಕದ ನದಿಗಳು]]
"https://kn.wikipedia.org/wiki/ಯಗಚಿ_ನದಿ" ಇಂದ ಪಡೆಯಲ್ಪಟ್ಟಿದೆ