ನುಗ್ಗೆಹಳ್ಳಿಯ ಹೊಯ್ಸಳ ದೇವಾಲಯಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Lakshminarasimha temple at Nuggehalli north western closeup view.jpg|thumb|350px|right|ನುಗ್ಗೆಹಳ್ಳಿಯ ಹೊಯ್ಸಳ ದೇವಾಲಯಗಳು]]
 
ಭಾರತೀಯ ಪ್ರವಾಸೋದ್ಯಮಕ್ಕೆ ಕರ್ನಾಟಕದ ಕೊಡುಗೆ ಅಪಾರ. ಶಿಲ್ಪಕಲೆಯ ಮಾತು ಬಂತೆಂದರೆ [[ಹಾಸನ ಜಿಲ್ಲೆ]] ನೆನಪಾಗುತ್ತದೆ. ಬೇಲೂರು ಹಳೇಬೀಡು ಮತ್ತು ಶ್ರವಣಬೆಳಗೊಳಗಳಲ್ಲಿನ ಹೊಯ್ಸಳ ಶಿಲ್ಪಕಲಾವೈಭವ ಕಣ್ಣಿಗೆ ಕಟ್ಟುತ್ತದೆ. ಶ್ರವಣಬೆಳಗೊಳಕ್ಕೆ ಪ್ರವಾಸಿಗರ ಮಹಾಪೂರವೇ ಹರಿದು ಬರಲಿದೆ. ಹಾಗೆ ಬಂದವರು ಕೇವಲ ಇಪ್ಪತ್ತೈದು ಕಿಲೋಮೀಟರ್‌ಗಳ ದೂರ ಪ್ರಯಾಣಿಸುವ ಉತ್ಸಾಹವಿದ್ದರೆ ಸಾಕು; ಹೊಸಹೊಳಲು ಮತ್ತು ಸೋಮನಾಥಪುರದ ತ್ರಿಕೂಟ ದೇವಾಲಯಗಳನ್ನೇ ಹೋಲುವ, ಸೋಮನಾಥಪುರದ ಕೇಶವದೇವಾಲಯಕ್ಕಿಂತ ಚಿಕ್ಕದಾದರೂ, ಅದಕ್ಕಿಂತ ಇಪ್ಪತ್ತು ವರ್ಷ ಹಳೆಯದಾದ ನುಗ್ಗೆಹಳ್ಳಿಯ ಲಕ್ಷ್ಮೀನರಸಿಂಹ ಮತ್ತು ಸದಾಶಿವ ದೇವಾಲಯಗಳನ್ನು ನೋಡಬಹುದು.
 
ನುಗ್ಗೇಹಳ್ಳಿಯು ಒಂದು ಪ್ರಾಚೀನ ಪಟ್ಟಣವಾಗಿದೆ. ೧೧೨೧ಕ್ಕೆ ಸೇರಿದ ವಿಷ್ಣುವರ್ಧನನ ಶಾಸನವು ಇಲ್ಲಿಂದ ಪ್ರಕಟವಾಗಿದೆ. ಕ್ರಿ.ಶ. ೧೨೪೬ ಕ್ಕೂ ಮುಂಚೆಯೇ ಹೊಯ್ಸಳ ಸೋಮೇಶ್ವರನ ದಂಡನಾಯಕನಾಗಿದ್ದ ಬೊಮ್ಮಣ್ಣನು ನುಗ್ಗೇಹಳ್ಳಿಯನ್ನು ‘ಸೋಮನಾಥಪುರ’ವೆಂಬ ಅಗ್ರಹಾರವನ್ನಾಗಿ ಮಾಡಿ, ದಾನ ಕೊಟ್ಟಿದ್ದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಇದೇ ಬೊಮ್ಮಣ್ಣ ದಂಡನಾಯಕನು ಪ್ರಸನ್ನಕೇಶವ ಮತ್ತು ಸದಾಶಿವ ದೇವಾಲಯಗಳೆರಡನ್ನೂ ಕಟ್ಟಿಸಿದ್ದಾನೆ.