ಇಂಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
ಇಂಕಾ - ಪ್ರಾಚೀನ ಕಾಲದಲ್ಲಿ ದಕ್ಷಿಣ ಅಮೆರಿಕದ ಪೆರು ಪ್ರಾಂತ್ಯವನ್ನೊಳಗೊಂಡು ಬೆಳೆದು ಬಾಳಿದ ಸಾಮ್ರಾಜ್ಯ. ಇಂಕಾ ಎಂಬುದು ಸಮ್ರಾಟನ ಹೆಸರಾದರೂ ಈಗ ಆ ಜನರನ್ನೂ ನಿರ್ದೇಶಿಸುತ್ತದೆ. ಇವರು ಕೆಚ್ವಾಭಾಷೆಯನ್ನಾಡುತ್ತಿದ್ದ ಒಂದು ಬುಡಕಟ್ಟಿಗೆ ಸೇರಿದವರು.
[[File:Over Machu Picchu.jpg|thumb| [[ಮಾಚು ಪಿಚು]]ದ ನೋಟ]]
 
ಕೊಲಂಬಸ್ ಅಮೆರಿಕವನ್ನು ಕಂಡುಹಿಡಿಯುವುದಕ್ಕೆ ಬಹಳ ಹಿಂದೆಯೇ ಅಲ್ಲಿ ಅನೇಕ ಸಾಮ್ರಾಜ್ಯಗಳು ಹುಟ್ಟಿ ಬೆಳೆದು ಲಯಹೊಂದಿದುವು. ಇಂದಿನವರೆಗೆ ತಿಳಿದು ಬಂದಿರುವಂತೆ ಈ ಸಂಸ್ಕೃತಿಗಳಲ್ಲಿ ಸಂಪತ್ತು, ಕಲಾಪ್ರೌಢಿಮೆ ಮತ್ತು ನಾಗರಿಕತೆಯ ದೃಷ್ಟಿಯಿಂದ, ಅತ್ಯಂತ ಭವ್ಯವಾದುವು-[[ಮಾಯಾ ನಾಗರಿಕತೆ|ಮಾಯಾ]], [[ಆಜ್ಟೆಕ್]] ಮತ್ತು ಇಂಕಾ ಸಂಸ್ಕೃತಿಗಳು. ಮಾಯಾ ನಾಗರಿಕತೆ ಬೆಳೆದದ್ದು [[ಮಧ್ಯ ಅಮೇರಿಕ|ಮಧ್ಯ ಅಮೆರಿಕ]]ದ ಅರಣ್ಯಗಳಲ್ಲಿ; ಆಜ್ಟೆಕ್, [[ಮೆಕ್ಸಿಕೋ|ಮೆಕ್ಸಿಕೋದಲ್ಲಿ]]; ಇಂಕಾ ನಾಗರಿಕತೆ, [[ಪೆರು]] ರಾಜ್ಯದಲ್ಲಿ. ಅಂತ್ಯದ ವೈಭವದ ಕಾಲದಲ್ಲಿ ಇಂಕಾ ನಾಗರಿಕತೆ ಉತ್ತರದ [[ಎಕ್ವಡಾರ್|ಎಕ್ವಡಾರ್‍ನಿಂದ]] ದಕ್ಷಿಣದ [[ಚಿಲಿ|ಚಿಲಿವರೆಗೂ]] ಉತ್ತರ ದಕ್ಷಿಣವಾಗಿ ಮೂರು ಸಾವಿರ ಮೈಲಿ ದೂರ ವ್ಯಾಪಿಸಿತ್ತು; ಮೂರೂವರೆ ಲಕ್ಷ ಚದರಮೈಲಿ ಪ್ರದೇಶವನ್ನೊಳಗೊಂಡಿತ್ತು.
 
"https://kn.wikipedia.org/wiki/ಇಂಕಾ" ಇಂದ ಪಡೆಯಲ್ಪಟ್ಟಿದೆ