ಇಂಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೯ ನೇ ಸಾಲು:
 
ಈ ಜನರಲ್ಲಿ ಬಳಕೆಯಲ್ಲಿದ್ದ ಶಿಲ್ಪಕಲೆ ಸಾಧಾರಣಮಟ್ಟದ್ದು. ಹೆಚ್ಚಿನವೆಲ್ಲ ಅಲಂಕರಣಕ್ಕಾಗಿ ಮಾಡಿದ ಗೀಚು ಚಿತ್ರಗಳು ಅಥವಾ ಅಲ್ಪ ಉಬ್ಬಿನ ಶಿಲ್ಪಗಳು ಅಷ್ಟೆ. ಈ ಜನಗಳಿಗೆ ಕಬ್ಬಿಣದ ಉಪಯೋಗ ತಿಳಿದಿರಲಿಲ್ಲ. ಚಿನ್ನ, ಬೆಳ್ಳಿ, ಮತ್ತು ತವರವನ್ನು ಗಣಿಗಳಿಂದ ತೆಗೆಯುತ್ತಿದ್ದರಲ್ಲದೆ ಅವುಗಳಿಂದ ಉತ್ತಮವಾದ ಬಳಕೆಯ ವಸ್ತುಗಳನ್ನು, ಕಲಾತ್ಮಕವಾದ ಆಭರಣಗಳನ್ನು ಮಾಡುತ್ತಿದ್ದರು. ಬೆರಕೆ ಲೋಹಗಳ ಬಳಕೆ ರೂಢಿಯಲ್ಲಿತ್ತು. ಇಂಕಾ ಜನ ಲೋಹ ವಿದ್ಯೆಯಲ್ಲಿ ಕುಶಲತೆಯನ್ನು ಸಾಧಿಸಿದ್ದರು. ಕಾಲಕಾಲಕ್ಕೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ಅವು ವ್ಯತ್ಯಾಸಗೊಳ್ಳುತ್ತಿದ್ದವು. ಕೆಲವೆಡೆ ಸಾಮಾನ್ಯವಾದ ಕೆಂಪು ಮಡಕೆಗಳೂ ಬಿಳಿಯ ಬಣ್ಣದ ಮೇಲೆ ಕೆಂಪು ಚಿತ್ರಗಳುಳ್ಳ ಮಡಕೆಗಳೂ ಇನ್ನೂ ಕೆಲವು ಭಾಗಗಳಲ್ಲಿ ನಾನಾ ಪ್ರಾಣಿಯಾಕೃತಿಯಲ್ಲಿ ಮಾಡಿದ ಅಥವಾ ಪ್ರಾಣಿಯ ಅಥವಾ ಮನುಷ್ಯರ ಚಿತ್ರಗಳನ್ನೊಳಗೊಂಡ ಮಡಕೆಗಳೂ ಬಳಕೆಯಲ್ಲಿದ್ದುವು. ಕೆಲವಂತೂ ಅಂದಿನ ಕುಂಬಾರನ ಉನ್ನತಕಲೆಯ ದ್ಯೋತಕಗಳಾಗಿವೆ. ಇಂಕಾ ಜನರ ಬಟ್ಟೆಗಳಲ್ಲಿ ಕಂಡುಬರುವ ದಾರದ ನಯ, ನೇಯ್ಗೆಯ ತಂತ್ರ ಮತ್ತು ಆಕರ್ಷಕ ರಂಗಿನ ಮಾಟಗಳು ಉಚ್ಚಮಟ್ಟದ್ದಾಗಿದ್ದು, ನೇಯ್ಗೆಯ ಕೆಲಸಕ್ಕೆ ಕಲೆಯ ಸ್ಥಾನವನ್ನು ದೊರಕಿಸಿಕೊಟ್ಟಿವೆ.
[[File:Tupa-inca-tunic.png|thumb|ಇಂಕಾ ಜನರ ಬಟ್ಟೆ]]
 
ಪಿತೃಪೂಜೆ ಇಂಕಾ ಜನರ ಧಾರ್ಮಿಕ ನಡವಳಿಕೆಗಳಲ್ಲಿ ಮುಖ್ಯವಾದುದು. ಸತ್ತವರ ದೇಹಗಳನ್ನು ಒಣಗಿಸಿ ಜೋಪಾನವಾಗಿ ಬಟ್ಟೆ ಮುಂತಾದುವುಗಳಲ್ಲಿ ಸಂರಕ್ಷಿಸಿ ಕಾಲಕಾಲಕ್ಕೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದರು. ಹಲವು ಇಂಕಾ ದೊರೆಗಳ ಒಣಗಿಸಿದ ದೇಹಗಳು ಕುಜ್ಕೊದ ಸೂರ್ಯ ದೇವಾಲಯದಲ್ಲಿದ್ದುವಂತೆ. ಧಾರ್ಮಿಕ ವಿಧಿಗಳಲ್ಲಿ ಪುರೋಹಿತರು ಮುಖ್ಯಪಾತ್ರವಹಿಸುತ್ತಿದ್ದರು. ಜೋತಿಷ್ಯ, ಶಕುನ, ಯಜ್ಞ, ಪಂಚಾಂಗದ ಪ್ರಕಾರ ಹಬ್ಬಗಳ ನಿಷ್ಕರ್ಷೆ ಮತ್ತು ರೋಗಗಳನ್ನು ಗುಣಪಡಿಸುವುದು-ಪುರೋಹಿತರ ಮುಖ್ಯ ಕೆಲಸವಾಗಿತ್ತು. ದೇಶದ ಮುಖ್ಯ ದೇವತೆ ಸೂರ್ಯ. ವೀರಕೋಚ ಮುಂತಾದ ಹಲವು ದೇವರುಗಳನ್ನು ಪೂಜಿಸುತ್ತಿದ್ದರು. ಪ್ರಮುಖ ನಗರಗಳಲ್ಲಿ ಸೂರ್ಯ ದೇವಾಲಯಗಳು ಇದ್ದುವು. ಹುಯಕ ಎಂದು ಕರೆಯಲ್ಪಡುತ್ತಿದ್ದ ಪುಣ್ಯಸ್ಥಾನಗಳಲ್ಲೂ ಜನ ಪೂಜೆ ಸಲ್ಲಿಸುತ್ತಿದ್ದರು.
"https://kn.wikipedia.org/wiki/ಇಂಕಾ" ಇಂದ ಪಡೆಯಲ್ಪಟ್ಟಿದೆ