ಇಂಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯ ನೇ ಸಾಲು:
 
== ಸಾಮ್ರಾಜ್ಯದ ಅಳಿವು ==
ಕೇವಲ 180 ಜನ ಸ್ಪೇನಿನ ಸಾಹಸಿಗ ಯೋಧರು ಪ್ರಬಲವಾಗಿದ್ದ ಇಂಕಾ ಸಾಮ್ರಾಜ್ಯವನ್ನೇ ಗೆದ್ದರು. ನಂಬಲೂ ಕಷ್ಟವಾದ ಈ ಕಥೆ ವಿವಿಧ ಚರಿತ್ರಕಾರರಿಂದ ನಾನಾರೀತಿಯಲ್ಲಿ ವರ್ಣಿತವಾಗಿದೆ. ಪ್ರೆಸ್ಕಾಟ್ ಎಂಬ ಚರಿತ್ರಕಾರ ಬರೆದ ಕಾನ್‍ಕ್ವೆಸ್ಟ್ ಆಫ್ ಪೆರು ಎಂಬ ಪುಸ್ತಕದ ಕೆಲವು ಅಂಶಗಳನ್ನು ಇಲ್ಲಿ ಕೊಟ್ಟಿದೆ : ಹುಆಸ್ಕರನನ್ನು ಯುದ್ಧದಲ್ಲಿ ಸೋಲಿಸಿದ ಮೇಲೆ, ಸಿಂಹಾಸನವನ್ನು ವಶಪಡಿಸಿಕೊಳ್ಳುವುದಕ್ಕಾಗಿ ಅಟಾಹುಅಲ್ಪ ತನ್ನ ಪಾಳೆಯವಿದ್ದ ಕಜಾಮಾರ್ಕದಿಂದ ರಾಜಧಾನಿಯಾದ ಕುಜ್ಕೋಗೆ ಹೊರಡುವುದರಲ್ಲಿದ್ದ. ಆಗತಾನೆ ತುಂಬೆ¸óï ಎಂಬಲ್ಲೇ ಸ್ಪೇನಿನವರು ಬಂದಿಳಿದ ವರ್ತಮಾನ ಅವನಿಗೆ ತಿಳಿಯಿತು (1532). ಈ ಹೊರದೇಶದವರು ಬಂದ ಉದ್ದೇಶವನ್ನು ಖಚಿತಪಡಿಸಿಕೊಂಡೇ ಪ್ರಯಾಣ ಮಾಡೋಣವೆಂದು ನಿಶ್ಚಯಿಸಿ ಇದ್ದಲ್ಲಿಯೇ ನಿಂತ. ಅವರು ಕಜಾಮಾರ್ಕಕ್ಕೆ ಬಂದರು. ಅವನೂ ಸೌಜನ್ಯದಿಂದ ಕೊಂಚದೂರಹೋಗಿ ಅವರಿಗೆ ಸ್ವಾಗತ ನೀಡಿದ. ಅವನು ತೋರಿಸಿದ ಸೌಜನ್ಯಕ್ಕೆ ಪ್ರತಿಫಲವಾಗಿ ಸ್ಪೇನರು ಅವನನ್ನು ಕೈಸೆರೆ ಹಿಡಿದು ಅವನ ಪರಿವಾರದವರನ್ನೆಲ್ಲ ಕೊಂದುಹಾಕಿದರು.
 
ತನ್ನನ್ನು ಬಿಡುಗಡೆ ಮಾಡುವಂತಿದ್ದರೆ, ಒಬ್ಬ ಮನುಷ್ಯನಿಗೂ ಎಟುಕದಿದ್ದಷ್ಟು ಎತ್ತರದ ರಾಶಿ ಪ್ರಶಸ್ತಲೋಹಗಳನ್ನು ಕೊಡುವೆನೆಂದು ಇಂಕಾರಾಜ ಅವರಿಗೆ ಹೇಳಿದ. ಅವರು ಒಪ್ಪಿಕೊಂಡರು. ಕೂಡಲೆ ದೂತರಮೂಲಕ ರಾಜ್ಯದ ಧನವನ್ನು ಸಂಗ್ರಹಿಸಿ ತರಬೇಕೆಂದು ಎಲ್ಲ ಭಾಗಗಳಿಗೂ ಹೇಳಿಕಳುಹಿಸಿದ. ನಾಡಿನ ಎಲ್ಲ ಭಾಗಗಳಿಂದಲೂ ಚಿನ್ನದ ರಾಶಿ ಬಂದು ಬಿತ್ತು. ಕುಜ್ಕೊ ನಗರದ ಸೂರ್ಯ ದೇವಾಲಯದಿಂದಲೇ ಇದರ ಬಹುಭಾಗವೆಲ್ಲ ಬಂದಿತ್ತು. ಸುಮಾರು ಇಪ್ಪತ್ತೆರಡು ಅಡಿ ಉದ್ದ ಹದಿನೈದು ಅಡಿ ಅಗಲದ ಕೋಣೆಯಲ್ಲಿ ದ್ರವ್ಯ ಅವನು ಹೇಳಿದ ಎತ್ತರಕ್ಕೂ ನಿಂತಿತು. ಈ ರಾಶಿ ಪಿಜಾರೊಗೆ ತೃಪ್ತಿತಂದಿತು. ಬಿಡುಗಡೆ ದ್ರವ್ಯವೆಷ್ಟು ಬಂದಿದೆಯೆಂದು ಪಾವತಿ ರಸೀತಿಯನ್ನು ಬರೆಸಿಕೊಟ್ಟ. ಅವನ ಜೀವಮಾನದಲ್ಲೇ ಆತ ಸೆರೆಸಿಕ್ಕಿದವರ ವಿಷಯದಲ್ಲಿ ಇಷ್ಟು ಕೃಪೆ ತೋರಿಸಿದವನಲ್ಲ. ಚಕ್ರವರ್ತಿ ಸ್ವತಂತ್ರನೆಂದು ಘೋಷಣೆ ಮಾಡಿದರೂ ಆತ ಹಿಂತಿರುಗಿದರೆ ದೇಶದಲ್ಲಿ ಕ್ಷೋಭೆಯುಂಟಾಗುವುದೆಂಬ ನೆಪದಿಂದ ಅವನನ್ನು ಸ್ಪೇನ್ ಅಂಗರಕ್ಷಕರ ಕಾವಲಿನಲ್ಲಿಡಲಾಯಿತು. ದೊರೆ ಅಲ್ಲಿದ್ದರೆ ತಮ್ಮ ಚಲನವಲನಗಳಿಗೆ ಅಡ್ಡಿಯಾಗಬಹುದೆಂಬ ಕಾರಣದಿಂದ ಸ್ಪೇನ್ ಯೋಧರೆಲ್ಲ ಅವನನ್ನು ಕೊಂದುಬಿಡಬೇಕೆಂದು ಸಲಹೆಕೊಟ್ಟರು. ಪಿeóÁರೊ ಒಪ್ಪಿದ. ಅನೇಕ ಕಲ್ಪಿತ ಆಪಾದನೆಗಳನ್ನು ಅವನ ಮೇಲೆ ಹೊರಿಸಲಾಯಿತು. ಹುಆಸ್ಕರನನ್ನು ಕೊಂದದ್ದು, ಅನ್ಯಾಯವಾಗಿ ಸಿಂಹಾಸನವನ್ನು ಆಕ್ರಮಿಸಲೆತ್ನಿಸಿದ್ದು, ವಿಗ್ರಹಾರಾಧನೆ, ವ್ಯಭಿಚಾರ, ಸ್ವಗೋತ್ರ ಸಂಭೋಗ ಮುಂತಾದವು ಅವುಗಳಲ್ಲಿ ಕೆಲವು. ತಪ್ಪಿತಸ್ಥನೆಂದು ತೀರ್ಮಾನವಾಗಲಾಗಿ ಅವನಿಗೆ ಮರಣದಂಡನೆಯನ್ನು ವಿಧಿಸಿದರು. ಕಜಾಮಾರ್ಕ ನಗರದ ದೊಡ್ಡ ಚೌಕದಲ್ಲಿ ಅವನನ್ನು ಬಹಿರಂಗವಾಗಿ ಸುಡತಕ್ಕದೆಂದು ತೀರ್ಮಾನಿಸಲಾಯಿತು. ಸುಡಲು ಎಲ್ಲವೂ ಸಿದ್ಧವಾದಮೇಲೆ ಆತ ಕ್ರೈಸ್ತಧರ್ಮವನ್ನು ಸ್ವೀಕರಿಸಿದರೆ ಸುಡುವುದಿಲ್ಲವೆಂದೂ ಗಲ್ಲಿಗೇರಿಸುತ್ತೇವೆಂದೂ ಪಿeóÁರೊಪಿಝಾರೊ ತಿಳಿಸಿದ. ಅಟಾಹುಅಲ್ಪ ಅದಕ್ಕೊಪ್ಪಿದ. ಅನಂತರ ಅವನನ್ನು ಕತ್ತುಹಿಚುಕಿ ಕೊಂದರು. ಒಬ್ಬ ದೊಡ್ಡ ಸಾಮ್ರಾಟನನ್ನು ಈ ರೀತಿ ಸುಲಿಗೆಮಾಡಿ ಅನಂತರ ಹೀಗೆ ಕೊಂದ ಈ ರಾಕ್ಷಸೀಕೃತ್ಯ ಸ್ಪೇನ್ ಜನಾಂಗಕ್ಕೆ ಎಂದಿಗೂ ಅಳಿಸಲಾಗದ ಕಳಂಕವಾಯಿತು ಎಂದು ಪ್ರೆಸ್ಕಾಟ್ ಹೇಳಿದ್ದಾನೆ.
 
ಪೆರು ದೇಶವನ್ನು ಲೂಟಿಹೊಡೆದು ಸ್ಪೇನಿನವರು ತಮ್ಮ ದೇಶಕ್ಕೆ ಸಾಗಿಸಿದ ಸಂಪತ್ತಿನ ಬೆಲೆ ಎಷ್ಟಿರಬಹುದೆಂಬುದನ್ನು ಲೆಕ್ಕಮಾಡಲು ಅನೇಕರು ಯತ್ನಿಸಿದ್ದಾರೆ. ಅತ್ಯಂತ ಜಾಗರೊಕತೆಯಿಂದ ಎಣಿಕೆಮಾಡಿದ ಲಾತ್ರಾಪ್ ಎಂಬಾತ ಒಂದು ಔನ್ಸಿಗೆ 35-02 ಡಾಲರುಗಳಂತೆ ಅಟಾಹುಅಲ್ಪನ ಬಿಡುಗಡೆಗಾಗಿ ಕೊಟ್ಟ ಚಿನ್ನದ ಬೆಲೆಯೇ 83,44,307 ಡಾಲರುಗಳಾಗುತ್ತವೆಂದು ಹೇಳಿದ್ದಾನೆ. ಚಿನ್ನದ ಈಗಿನ ಬೆಲೆಯ ಪ್ರಕಾರ ಅದು ಇನ್ನೂ ಹೆಚ್ಚಾಗುತ್ತದೆ. ಇದೊಂದೇ ಸಂದರ್ಭದಲ್ಲಲ್ಲ, ಸ್ಪೇನಿನವರು ಈ ರೀತಿ ಲೊಟಿ ಹೊಡೆದದ್ದು, ಸ್ಪೇನಿನಿಂದ ಇನ್ನೂ ಹೆಚ್ಚು ಜನರು ವಲಸೆ ಬಂದ ಮೇಲಂತೂ ಇಂಥ ಸುಲಿಗೆ ಅನೇಕವೇಳೆ ನಡೆಯಿತು. ಹೀಗೆ ನಾನಾಕಡೆಗಳಿಂದ ಸುಲಿಗೆ ಮಾಡಿ ಸ್ಪೇನಿಗೆ ಸಾಗಿಸಿದ ಚಿನ್ನದ ಬೆಲೆ 2 ಕೋಟಿ ಡಾಲರುಗಳಿಗಿಂತ ಹೆಚ್ಚಾಗುತ್ತದೆ ಎಂದು ಲಾತ್ರಾಪ್‍ನ ಅಭಿಪ್ರಾಯ. ಇವುಗಳಲ್ಲಿ ಆಭರಣಗಳೇ ಹೆಚ್ಚಾಗಿದ್ದುವು. ಎಲ್ಲವೂ ಚತುರ ಕಲಾಶಿಲ್ಪಿಗಳು ತಯಾರಿಸಿದ ಅತ್ಯಂತ ಸುಂದರ ಆಭರಣಗಳು. ಅವುಗಳ ಕಲಾವೈಶಿಷ್ಟ್ಯದ ಕಡೆ ಗಮನವೇ ಇಲ್ಲದೆ ಎಲ್ಲವನ್ನೂ ಕರಗಿಸಿ ಗಟ್ಟಿ ಮಾಡಲಾಯಿತು. ಹಿಂದಿನ ಆಭರಣಗಳಲ್ಲೊಂದೂ ಈಗ ಉಳಿದಿಲ್ಲ.
 
== ನಾಗರಿಕತೆ ==
"https://kn.wikipedia.org/wiki/ಇಂಕಾ" ಇಂದ ಪಡೆಯಲ್ಪಟ್ಟಿದೆ