ಇಂಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಕೀಕರಣ
೧ ನೇ ಸಾಲು:
ಇಂಕಾ - ಪ್ರಾಚೀನ ಕಾಲದಲ್ಲಿ ದಕ್ಷಿಣ ಅಮೆರಿಕದ ಪೆರು ಪ್ರಾಂತ್ಯವನ್ನೊಳಗೊಂಡು ಬೆಳೆದು ಬಾಳಿದ ಸಾಮ್ರಾಜ್ಯ. ಇಂಕಾ ಎಂಬುದು ಸಮ್ರಾಟನ ಹೆಸರಾದರೂ ಈಗ ಆ ಜನರನ್ನೂ ನಿರ್ದೇಶಿಸುತ್ತದೆ. ಇವರು ಕೆಚ್ವಾಭಾಷೆಯನ್ನಾಡುತ್ತಿದ್ದ ಒಂದು ಬುಡಕಟ್ಟಿಗೆ ಸೇರಿದವರು.
 
ಕೊಲಂಬಸ್ ಅಮೆರಿಕವನ್ನು ಕಂಡುಹಿಡಿಯುವುದಕ್ಕೆ ಬಹಳ ಹಿಂದೆಯೇ ಅಲ್ಲಿ ಅನೇಕ ಸಾಮ್ರಾಜ್ಯಗಳು ಹುಟ್ಟಿ ಬೆಳೆದು ಲಯಹೊಂದಿದುವು. ಇಂದಿನವರೆಗೆ ತಿಳಿದು ಬಂದಿರುವಂತೆ ಈ ಸಂಸ್ಕೃತಿಗಳಲ್ಲಿ ಸಂಪತ್ತು, ಕಲಾಪ್ರೌಢಿಮೆ ಮತ್ತು ನಾಗರಿಕತೆಯ ದೃಷ್ಟಿಯಿಂದ, ಅತ್ಯಂತ ಭವ್ಯವಾದುವು-[[ಮಾಯಾ ನಾಗರಿಕತೆ|ಮಾಯಾ]], [[ಆಜ್ಟೆಕ್]] ಮತ್ತು ಇಂಕಾ ಸಂಸ್ಕೃತಿಗಳು. ಮಾಯಾ ನಾಗರಿಕತೆ ಬೆಳೆದದ್ದು [[ಮಧ್ಯ ಅಮೇರಿಕ|ಮಧ್ಯ ಅಮೆರಿಕದಅಮೆರಿಕ]]ದ ಅರಣ್ಯಗಳಲ್ಲಿ; ಆಜ್ಟೆಕ್, [[ಮೆಕ್ಸಿಕೋ|ಮೆಕ್ಸಿಕೋದಲ್ಲಿ]]; ಇಂಕಾ ನಾಗರಿಕತೆ, [[ಪೆರು]] ರಾಜ್ಯದಲ್ಲಿ. ಅಂತ್ಯದ ವೈಭವದ ಕಾಲದಲ್ಲಿ ಇಂಕಾ ನಾಗರಿಕತೆ ಉತ್ತರದ [[ಎಕ್ವಡಾರ್|ಎಕ್ವಡಾರ್‍ನಿಂದ]] ದಕ್ಷಿಣದ [[ಚಿಲಿ|ಚಿಲಿವರೆಗೂ]] ಉತ್ತರ ದಕ್ಷಿಣವಾಗಿ ಮೂರು ಸಾವಿರ ಮೈಲಿ ದೂರ ವ್ಯಾಪಿಸಿತ್ತು; ಮೂರೂವರೆ ಲಕ್ಷ ಚದರಮೈಲಿ ಪ್ರದೇಶವನ್ನೊಳಗೊಂಡಿತ್ತು.
 
ಈ ಜನಾಂಗದಲ್ಲಿ ಬರವಣಿಗೆ ಇರಲಿಲ್ಲವಾದ್ದರಿಂದ ಇವರ ಬಗ್ಗೆ ಆ ಕಾಲದವೇ ಆದ ಯಾವ ಲಿಖಿತ ಆಧಾರಗಳೂ ಸಿಗಲಾರವು. 16ನೆಯ ಶತಮಾನದಲ್ಲಿ ಇವರ ಮೇಲೆ ದಾಳಿ ನಡೆಸಿದ ಸ್ಪೇನಿನ ಯೋಧರ ಬರಹಗಳು, ಇಂದಿಗೂ ಉಳಿದಿರುವ ಈ ಬುಡಕಟ್ಟಿನ ಜನರ ವ್ಯವಹಾರ ಸಂಪ್ರದಾಯಗಳ ಪರಿಶೀಲನೆ, ಸಂಬಂಧಪಟ್ಟ ಸ್ಥಳಗಳಲ್ಲಿ ನಡೆಸಿರುವ ಉತ್ಖನನಾದಿ ಪುರಾತತ್ತ್ವ ಶೋಧನೆಗಳು-ಈ ಆಧಾರಗಳಿಂದ ಇಂಕಾ ಸಂಸ್ಕೃತಿಯ ಬಗ್ಗೆ ಅನೇಕ ಮಾಹಿತಿಗಳು ದೊರೆಯುತ್ತವೆ.
 
== ಚರಿತ್ರೆ ==
[[ಸ್ಪೇನ್]] ದೇಶದವರು ಪೆರು ರಾಜ್ಯವನ್ನು ಗೆದ್ದು ಸ್ವಾಧೀನಪಡಿಸಿಕೊಂಡು ಅಲ್ಲಿನ ಚರಿತ್ರೆಯನ್ನು ಬರೆದಿಡುವವರೆಗೂ ಆ ದೇಶದ ಇತಿಹಾಸ ಪರಂಪರಾಗತವಾಗಿ ಬಂದ ಕಥೆಗಳ ರೂಪದಲ್ಲಿತ್ತು. ಹೀಗಾಗಿ ವಾಸ್ತವಾಂಶಗಳನ್ನು ತಿಳಿಯಲು ಬಹಳ ಕಷ್ಟವಾಗಿತ್ತು. ಇತ್ತೀಚೆಗೆ ಚಾರಿತ್ರಿಕ ಘಟನೆಗಳನ್ನು ಇನ್ನಷ್ಟು ಖಚಿತವಾಗಿ ತಿಳಿಯಲು ಸಾಧ್ಯವಾಗಿದೆ. ಇವೆರಡರ ಮಧ್ಯಕಾಲದ ಚರಿತ್ರೆ ಸ್ವಲ್ಪ ಅನಿರ್ದಿಷ್ಟ. [[ಯೂರೋಪ್|ಯೂರೋಪಿನ]] ದೇಶಗಳಲ್ಲಿದ್ದಂತೆಯೇ ಇತಿಹಾಸವನ್ನು ರಾಜರ ಆಳ್ವಿಕೆಯ ಕ್ರಮದಲ್ಲಿ ನಿರೂಪಿಸುವ ವಿಧಾನ ಅಮೆರಿಕದ ಪೆರು ದೇಶದಲ್ಲಿ ಮಾತ್ರ ಕಂಡುಬರುತ್ತದೆ; ಈ ದೊರೆಗಳು ಪೆರು ದೇಶವನ್ನಾಳುತ್ತಿದ್ದರೆಂದು ನಿಷ್ಕøಷ್ಟವಾಗಿಖಚಿತವಾಗಿ ತಿಳಿದುಬಂದಿದೆ; 1. ಮ್ಯಾಂಕೊ ಕೃಪಾಕ್ (ಕ್ರಿ.ಶ. 1200); 2. ಸಿಂಕಿ ರೋಕ; 3. ಲಾಳ ಉಪಾಂಕಿ; 4. ಮೆಯ್ಟ ಕೃಪಾಕ್; 5. ಕೃಪಾಕ್ ಯುಪ್ಯಾಂಕಿ; 6. ಇಂಕಾ ರೋಕ; 7. ಯಹ್ವಾರ್ ಹುವಾಕ್ಯಾಕ್; 8. ವಿಶಾಕೋ ಜಾ ಇಂಕಾ; 9. ಪಚಕೂಟಿ ಇಂಕಾಾ ಯುಆನ್‍ಕಿ (1438-71) : 10. ಟೋಪ್ ಇಂಕಾ ಯುಪ್ಯಾಂಕಿ (1471-93); 11. ಹುಆಯ್ನ ಕೃಪಾಕ್ (1493-1525) : 12. ಹುಆಸ್ಕರ್ (1525-32); 13. ಅಟಾಹುಅಲ್ಪ (1532-33).
 
ಮ್ಯಾಂಕೊ ಕೃಪಾಕ್‍ನ ವಿಷಯದಲ್ಲಿ ತಿಳಿದುಬಂದಿರುವುದರಲ್ಲಿ ಅರ್ಧ ಕಾಲ್ಪನಿಕ. ಅರ್ಧದೇವನೆಂದು ಪರಿಗಣಿತನಾಗಿದ್ದ ಇವನ ವಿಷಯದಲ್ಲಿ ಸ್ಪೇನಿನ ಚರಿತ್ರಕಾರರು ಬರೆದಿರುವುದು ಅನೇಕ ಕಡೆ ಅಸಂಬದ್ಧವಾಗಿದೆ; ಅವನಿಗೆ ದೈವತ್ವವನ್ನು ಆರೋಪಿಸಲಾಗಿದೆ. ಸಿಂಕಿ ರೋಕ ದೊರೆಯಾದಮೇಲೆ ಅವನ ರಾಜವಂಶಕ್ಕೆ ದೈವಿಕಮೂಲ, ಪಾವಿತ್ರ್ಯ ಮತ್ತು ಘನತೆಗಳನ್ನು ಕಲ್ಪಿಸಲಾಯಿತೆಂದು ಕೆಲವರ ಅಭಿಪ್ರಾಯ. ಪೆರು ದೇಶದ ವಾಸ್ತವಿಕ ಇತಿಹಾಸ ಪ್ರಾರಂಭವಾಗುವುದು ಪಚಕೂಟಿಇಂಕಾನ ಆಳ್ವಿಕೆಯಿಂದ ಎಂದು ಹೇಳಬಹುದು. ಅವನ ಕಾಲದಲ್ಲೇ ಪೆರುರಾಜ್ಯದ ವಿಸ್ತರಣಾ ಕಾರ್ಯ ಪ್ರಾರಂಭವಾದದ್ದು; ಈ ಕಾರ್ಯ ವಿಸ್ಮಯಕರವಾದ ರೀತಿಯಲ್ಲಿ ನಡೆಯಿತು. ಸಾಮ್ರಾಜ್ಯ ಅತ್ಯಂತ ಉಚ್ಛ್ರಾಯಸ್ಥಿತಿಯನ್ನೇರಿದ್ದು ಅವನ ಮಗನ ಕಾಲದಲ್ಲಿ, ಮುಂದೆ ಅವನತಿ ಪ್ರಾರಂಭವಾಗಿ 1532ರಲ್ಲಿ ಸ್ಪೇನ್ ದೇಶದವರು ದೇಶವನ್ನೇ ವಶಪಡಿಸಿಕೊಂಡಾಗ ಅದರ ಅಸ್ತಿತ್ವ ಅಳಿಯಿತು. ಸುಮಾರು ಒಂದು ಶತಮಾನಕಾಲ ಮಾತ್ರ ಪೆರುಸಾಮ್ರಾಜ್ಯ ಸ್ವತಂತ್ರವಾಗಿ ಬಾಳಿದ್ದು, ಪಚಕೊಟಿ, ಟೋಪ್ ಇಂಕಾ ಇವರಿಬ್ಬರನ್ನೂ ಸಾಮ್ರಾಜ್ಯ ನಿರ್ಮಾಪಕರಲ್ಲಿ [[ಅಲೆಕ್ಸಾಂಡರ್]], [[ಚಂಗಿಸ್‍ಖಾನ್]], [[ನೆಪೋಲಿಯನ್ ಬೋನಪಾರ್ತ್|ನೆಪೋಲಿಯನ್ನರೊಂದಿಗೆ]] ಹೋಲಿಸಬಹುದು. ಇಂಕಾ ಜನರೇ ಅಲ್ಪಸಂಖ್ಯಾತರು; ಆದ್ದರಿಂದ ಗೆದ್ದರಾಜ್ಯಗಳ ಸೈನಿಕರನ್ನು ತಮ್ಮ ಸೈನ್ಯಕ್ಕೆ ಸೇರಿಸಿಕೊಂಡು ಹೊಸರಾಜ್ಯಗಳನ್ನು ಗೆಲ್ಲುತ್ತಿದ್ದರು. ಸಾಮ್ರಾಜ್ಯದಾಹವೇ ಈ ವಿಸ್ತರಣ ಕಾರ್ಯಕ್ಕೆ ಮುಖ್ಯಕಾರಣ.

ಪಚಕೂಟಿ ಪ್ರಸಿದ್ಧಿಪಡೆದಿರುವುದು ರಾಜ್ಯವಿಸ್ತರಣ ಕಾರ್ಯದಲ್ಲಿ ಮಾತ್ರ ಅಲ್ಲ; ನಗರನಿರ್ಮಾಣದಲ್ಲೂ ಅವರು ಪ್ರಖ್ಯಾತನಾಗಿದ್ದಾರೆ. ಸಾಮ್ರಾಜ್ಯದ ರಾಜಧಾನಿಯಾದ ಕುಜ್ಕೋನಗರ ವಿಶಾಲವಾಗಿ ಬೆಳೆದು ರಮ್ಯಸೌಧಗಳನ್ನು ಹೊಂದಿದ್ದು ಅವನ ಶ್ರಮದ ಫಲವಾಗಿ, ಸೂರ್ಯನಿಗೆ ಮೀಸಲಾದ ಪ್ರಸಿದ್ಧ ದೇವಮಂದಿರದ ನಿರ್ಮಾಣ ಅವನ ಕಾಲದಲ್ಲಾಯಿತು. ಹಿಂದಿನ ಚಕ್ರವರ್ತಿಗಳ ಮೃತದೇಹಗಳನ್ನು ಸುವಾಸನಾದ್ರವ್ಯಗಳಿಂದ ಪರಿಷ್ಕರಿಸಿ ಆತ ಈ ದೇವಾಲಯದಲ್ಲಿಡಿಸಿದ; ಮೂಲಪುರಷನಾದ ಮ್ಯಾಂಕೊ ಕ್ಯಪಾಕ್‍ನ ದೇಹ ಮಾತ್ರ ಕಲ್ಲಾಗಿ ಪರಿವರ್ತಿತವಾಯಿತಂತೆ. ನಗರವನ್ನು ವಿಸ್ತರಿಸಿ ಅದರ ಪ್ರಜೆಗಳಿಗೆ ಹೆಚ್ಚು ಜಾಗವನ್ನು ಕೊಡುವುದಕ್ಕೆಂದು ಅದರ ಸುತ್ತ ಆರುಮೈಲಿ ಫಾಸಲೆಯ ಗ್ರಾಮವನ್ನೆಲ್ಲ ಖಾಲಿಮಾಡಿಸಿ ಆ ಜನರಿಗೆ ದೂರ ಪ್ರದೇಶದಲ್ಲಿ ವಸತಿಗಳನ್ನು ಕಲ್ಪಿಸಿದ. ಚರಿತ್ರಕಾರನಾದ ಪ್ರೆಸ್ಕಾಟ್ ಆ ನಗರವನ್ನು ಹೀಗೆ ವರ್ಣಿಸಿದ್ದಾನೆ : ಈ ನಗರವಿರುವುದು, ಸಮುದ್ರಮಟ್ಟಕ್ಕಿಂತ 11,200 ಎತ್ತರದ ಪ್ರಸ್ಥಭೂಮಿಯ ಮೇಲೆ, ಒಂದು ರಮ್ಯವಾದ ಕಣಿವೆಯಲ್ಲಿ. [[ಆಲ್ಪ್ಸ್]] ಪರ್ವತಪ್ರದೇಶವಾಗಿದ್ದಿದ್ದರೆ ಈ ನಗರ ಹಿಮಾಚ್ಛಾದಿತವಾಗಿರುತ್ತಿತ್ತು : ಆದರೆ ಇದು ಉಷ್ಣವಲಯವಾದ್ದರಿಂದ ಇಲ್ಲಿಯ ವಾಯುಗುಣ ಹಿತಕರ, ಆರೋಗ್ಯಕರ. ಈ ನಗರ ದೊರೆಗಳ ನಿವಾಸಸ್ಥಾನ. ಇಲ್ಲಿ ಹಿಂದಿನ ಶ್ರೀಮಂತರ ವಿಶಾಲ ಭವ್ಯಸೌಧಗಳು ಅನೇಕವಿದ್ದವು. ಅವುಗಳ ಅವಶೇಷಗಳಲ್ಲಿ ದೊರೆತ ಚೂರುಗಳನ್ನೇ ಇಂದಿನ ದೊಡ್ಡ ಕಟ್ಟಡಗಳಿಗೆ ಉಪಯೋಗಿಸಿರುವುದನ್ನು ನೋಡಿದರೆ ಅವು ಎಷ್ಟು ಉತ್ತಮವಾದ ದೃಢವಾದ ಕಟ್ಟಡಗಳಾಗಿರಬೇಕು ಎಂಬುದನ್ನು ತಿಳಿಯಬಹುದು. ಕುಜ್ಕೊ ದೇವನಗರವೂ ಆಗಿತ್ತು; ಅದರ ಸೂರ್ಯಮಂದಿರಕ್ಕೆ ಸಾಮ್ರಾಜ್ಯದ ನಾನಾ ಭಾಗಗಳಿಂದ ಯಾತ್ರಿಕರು ಬರುತ್ತಿದ್ದರು. ಅದು ಅಮೆರಿಕದಲ್ಲೇ ಅತ್ಯಂತ ಘನವಾದ ಕಟ್ಟಡವಾಗಿತ್ತು. ಅಲಂಕರಣಕ್ಕಾಗಿ ಅದಕ್ಕೆ ಆಗಿದ್ದಷ್ಟು ವೆಚ್ಚ ಪ್ರಪಂಚದಲ್ಲಿ ಬೇರಾವ ದೇವಾಲಯಕ್ಕೂ ಆಗಿರಲಿಲ್ಲ.
 
ಟೋಪ್ ಇಂಕಾನ ಮಗ ಹುಆಯ್ನ ಕೃಪಾಕನ ಕಾಲದಲ್ಲೇ ಸಾಮ್ರಾಜ್ಯದಲ್ಲಿ ಅಶಾಂತಿ ತಲೆದೋರಿತು. ಅರ್ಧದೇವನೆಂದು ಪರಿಗಣಿತನಾಗಿದ್ದ ಸಾಮ್ರಾಟನೊಬ್ಬ ಒಂದು ಕೇಂದ್ರದಿಂದ ಆಳಲು ಸಾಧ್ಯವಾಗದಷ್ಟು ಆ ಸಾಮ್ರಾಜ್ಯ ವಿಶಾಲವಾಗಿತ್ತು, ಅವನ ಅನುಮತಿಯಿಲ್ಲದೆ ಏನೂ ನಡೆಯುವಂತಿರಲಿಲ್ಲ. ಸಿಂಹಾಸನಕ್ಕೆ ಉತ್ತರಾಧಿಕಾರದ ವಿಷಯದಲ್ಲೂ ಸ್ಪರ್ಧೆ, ಜಗಳಗಳು ಪ್ರಾರಂಭವಾದುವು. ಅವನ ಮಗನ ಕಾಲದಲ್ಲಿ ಇದು ಉಗ್ರರೂಪ ತಾಳಿತು.
Line ೧೪ ⟶ ೧೬:
ಹುಆಯ್ನ ಕೃಪಾಕ್ ತನ್ನ ಆಳ್ವಿಕೆಯ ಕೊನೆಗಾಲವನ್ನು ಎಕ್ವಡಾರ್‍ನ ಕ್ವಿಟೊ ಪ್ರಾಂತ್ಯದಲ್ಲೇ ಕಳೆದ, ಅವನಿಗೆ ರಾಜಧಾನಿಯಾದ ಕುಜ್ಕೊ ನಗರಕ್ಕಿಂತ ಕ್ವಿಟೋನೇ ಹೆಚ್ಚು ಹಿತಕರವಾಗಿ ಕಂಡಿತು. ಅವನ ಮಕ್ಕಳಲ್ಲಿ ರಾಜಕೀಯ ಪ್ರಾಮುಖ್ಯ ಪಡೆದಿದ್ದವರು ಇಬ್ಬರು : ಒಬ್ಬ ಹುಆಸ್ಕರ್, ರಾಣಿಯಾಗಿದ್ದ ರಾಜನ ತಂಗಿಗೆ ಜನಿಸಿದವನು (ಈ ಪದ್ಧತಿ ಕೆಲವುಕಾಲ ರೂಢಿಯಲ್ಲಿತ್ತು); ಇನ್ನೊಬ್ಬ ಅಟಾಹುಅಲ್ಪ, ಕಿರಿಯ ರಾಣಿಯೊಬ್ಬಳ ಮಗ. ನ್ಯಾಯವಾಗಿ ಸಿಂಹಾಸನಕ್ಕೆ ಉತ್ತರಾಧಿಕಾರಿ ಹುಆಸ್ಕರ್; ಅದರೆ ಅಟಾಹುಅಲ್ಪನ ಮೇಲೆ ಅವನಿಗೆ ಹೆಚ್ಚು ಪ್ರೀತಿ. ಅಟಾಹುಅಲ್ಪ ತಂದೆಯೊಂದಿಗೆ ಕ್ವಿಟೊದಲ್ಲಿದ್ದ; ಹುಆಸ್ಕರ್ ಕುಜ್ಕೊದಲ್ಲಿದ್ದ. ಕ್ವಿಟೊ ರಾಜ್ಯವನ್ನೇ ಪ್ರತ್ಯೇಕಿಸಿ ಅದನ್ನು ಅಟಾಹುಅಲ್ಪನಿಗೂ ಉಳಿದ ಭಾಗವನ್ನು ಹುಆಸ್ಕರನಿಗೂ ಹಂಚಬೇಕೆಂದು ಹುಅಯ್ನನ ಯೋಚನೆಯಾಗಿತ್ತೆಂದು ಒಂದು ಕಡೆ ಹೇಳಿದೆ; ಆದರೆ ಇದು ನೆರವೇರಲಿಲ್ಲ. ಇದೇ ಕಾಲದಲ್ಲಿ ಸ್ಪೇನಿನವರು ಯೂರೋಪಿನಿಂದ ತಂದ ಅಂಟುಜಾಡ್ಯವೊಂದು ಸಾಮ್ರಾಜ್ಯದ ಎಲ್ಲ ಕಡೆ ಹರಡಿ ಅಸಂಖ್ಯಾತ ಜನರನ್ನು ಆಹುತಿ ತೆಗೆದುಕೊಂಡಿತು : ಹುಆಯ್ನನೂ ಈ ಉಪದ್ರವಕ್ಕೆ ತುತ್ತಾದ, ಕುಜ್ಕೊದ ಪುರೋಹಿತ ಹುಅಸ್ಕರ್‍ನನ್ನು ಸಿಂಹಾಸನಕ್ಕೇರಿಸಿದ. ಆದರೆ ಎಕ್ವಡಾರ್‍ನ ಪ್ರಜೆಗಳು ಮತ್ತು ಸೈನಿಕರು ಅಟಾಹುಅಲ್ಪನೇ ತಮಗೆ ದೊರೆಯೆಂದು ಘೋಷಿಸಿದರು. ಯಾದವೀಕಲಹ ಪ್ರಾರಂಭವಾಯಿತು. ಸ್ವಲ್ಪಕಾಲ ಯುದ್ಧ ನಡೆದು ಕೊನೆಗೆ ಅಟಾಹುಅಲ್ಪನೇ ಸಾಮ್ರಾಟನಾದ.
 
ತಾವು ಈ ಸಾಮ್ರಾಜ್ಯವನ್ನು ಗೆದ್ದು ವಶಪಡಿಸಿಕೊಳ್ಳಬೇಕೆಂದಿದ್ದ ಕಾಲದಲ್ಲೇ ಅಲ್ಲಿ ಭಯಂಕರ ಯಾದವೀಕಲಹವೆದ್ದು ತಮಗೆ ಅನುಕೂಲವಾದದ್ದು ದೈವೇಚ್ಛೆಯೆಂದೇ ಸ್ಪೇನಿನವರು ನಂಬಿದರು. ಜೆ.ಎ.ಮೇಸನ್ ಎಂಬ ಪ್ರಾಕ್ತನ ಸಂಶೋಧಕ ಹೀಗೆ ಹೇಳಿದ್ದಾನೆ : ಈ ಸ್ಪೇನಿನವರು ಹತ್ತುವರ್ಷ ಮುಂಚೆ ಅಥವಾ ಹತ್ತು ವರ್ಷ ತರುವಾಯ ಬಂದಿದ್ದರೆ, ಪಿeóÁರೊಪಿಝಾರೊ ದಳಪತಿಯ ಜೊತೆ ಬಂದ ಕೆಲವೇ ಸ್ಪೇನರಿಗೆ ಅವರು ಸೋಲುತ್ತಿರಲಿಲ್ಲ.
 
== ಸಾಮ್ರಾಜ್ಯದ ಅಳಿವು ==
"https://kn.wikipedia.org/wiki/ಇಂಕಾ" ಇಂದ ಪಡೆಯಲ್ಪಟ್ಟಿದೆ