ಬಾಬು ರಾಜೇಂದ್ರ ಪ್ರಸಾದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ using AWB
ಚುNo edit summary
೩೫ ನೇ ಸಾಲು:
ಅಂದಿನ ಕಾಲದಲ್ಲಿ ಇಡೀ ದೇಶವೇ ಒಂದು ಹೊಸ ಚೈತನ್ಯವನ್ನು ಪಡೆದಿತ್ತು. ಅಂದಿನ ವಾತಾವರಣವೇ ಒಂದು ಹೊಸ ಬಾಳಿನ ನಿರೀಕ್ಷೆ ಮತ್ತು ಆದರ್ಶದ ಅಲೆಗಳಿಂದ ತುಂಬಿತ್ತು ಎಂದು ಪ್ರಸಾದರು ಹೇಳುತ್ತಾರೆ. ಬಂಗಾಲದ ವಿಭಜನೆ, ವಿದೇಶಿ ವಸ್ತುಗಳ ನಿರಾಕರಣೆ, ಸ್ವದೇಶಿ ಚಳುವಳಿ ಮುಂತಾದ ಅನೇಕ ವಿಷಯಗಳು ಎಲ್ಲೆಡೆಯೂ ಚರ್ಚಿತವಾಗುತ್ತಿದ್ದವು. ಬಿಹಾರದ ಸ್ಥಿತಿಗತಿಗಳನ್ನು ಸುಧಾರಿಸಲು ಪ್ರಸಾದರು ನಡೆಸುತ್ತಿದ್ದ ಚಟುವಟಿಕೆಗಳು ಗೋಪಾಲಕೃಷ್ಣ ಗೋಖಲೆಯವರ ಗಮನಕ್ಕೆ ಬಂತು. ಆಗ ತಾನೇ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದ ಗಾಂಧೀಜಿಯವರ ಗಮನವನ್ನೂ ಸೆಳೆಯಿತು.
 
ಗಾಂಧೀಜಿಯವರನ್ನು ಪ್ರಸಾದರು ೧೯೧೫ರ ವರ್ಷದಲ್ಲಿ ಮೊದಲು ಭೇಟಿಯಾದರು. ಆದರೆ ಈ ಭೇಟಿಗಳು ಅಷ್ಟೇನೂ ಪರಿಣಾಮ ಬೀರಿರಲಿಲ್ಲ. ಗಾಂಧೀಜಿಯವರ ವ್ಯಕ್ತಿತ್ವ ಮತ್ತು ಕ್ರಿಯಾಶಕ್ತಿಗಳ ಪರಿಚಯವಾದದ್ದು [[ಚಂಪಾರಣ್‌|ಚಂಪಾರಣ್‌ದಲ್ಲಿ]]. ಪ್ರಸಾದರು ಅಲ್ಲಿಂದ ಮುಂದೆ ಗಾಂಧೀಜಿಯವರ ಅನುಯಾಯಿಯಾದರು. ಕೈತುಂಬ ವರಮಾನ ತರುತ್ತಿದ್ದ ವಕೀಲ ವೃತ್ತಿಯನ್ನು ತ್ಯಜಿಸಿದರು. ಜನರ ಹಿತಕ್ಕೆ ಮಾರಕವಾದ ಕಾನೂನುಗಳೆಲ್ಲವನ್ನೂ ವಿರೋಧಿಸಿದರು. ಈ ಅಸಹಕಾರಗಳಿಂದ ಸರ್ಕಾರದ ದೃಷ್ಟಿಯಲ್ಲಿ ದೇಶದ್ರೋಹಿ ಎನಿಸಿಕೊಂಡರು. ಸೆರೆಮನೆವಾಸ, ಸ್ವಂತ ಗಳಿಕೆ ಇಲ್ಲದ್ದರಿಂದ ಕಷ್ಟಕಾರ್ಪಣ್ಯಗಳು, ಎಡೆಬಿಡದೆ ಕಾಡುತ್ತಿದ್ದ ಅಸ್ತಮಾ ಇವು ಯಾವುವೂ ಅವರ ಕಾರ್ಯಚಟುವಟಿಕೆಗಳಿಗೆ ಅಡ್ಡಿಬರಲಿಲ್ಲ. ಸದಾ ಭಾರತದ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದರು. ಭಾಷಣ ಮತ್ತು ಲೇಖನಗಳ ಮೂಲಕ ಜನ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದರು.
 
೧೯೩೪ರ ಜನವರಿ ೧೫ರಂದು ಸಂಭವಿಸಿದ ಭಯಂಕರ ಭೂಕಂಪ ಹಾಗೂ ಪ್ರವಾಹಗಳಿಂದ ಇಡೀ ಬಿಹಾರವೇ ತತ್ತರಿಸಿತ್ತು. ಅದರ ಮರುದಿನವೇ ಸೆರೆಮನೆಯಿಂದ ಬಿಡುಗಡೆ ಹೊಂದಿದ ಪ್ರಸಾದರು, ತಮ್ಮ ತೀವ್ರ ಅನಾರೋಗ್ಯವನ್ನೂ ಲೆಕ್ಕಿಸದೆ ಬಹುದೊಡ್ಡ ಪ್ರಮಾಣದಲ್ಲಿ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯವನ್ನು ಸಂಘಟಿಸಿದರು. ಮರುವರ್ಷವೇ ಕ್ವೆಟ್ಟಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಂತ್ರಸ್ತರಾದವರಿಗೂ ನೆರವು ಕಳಿಸಲು ಶ್ರಮಿಸಿದರು. ಸರ್ಕಾರದ ಕಾರ್ಯಕ್ರಮಕ್ಕಿಂತ ಯಶಸ್ವಿಯಾದ ಅವರ ಕಾರ್ಯಕ್ರಮ ಅವರ ಸಂಘಟನಾ ಚಾತುರ್ಯಕ್ಕೆ ಹಾಗೂ ಕ್ರಿಯಾಶಕ್ತಿಗೆ ಸಾಕ್ಷಿಯಾಗಿದ್ದವು. ಅವರ ಈ ಎಲ್ಲ ಜನಹಿತ ಕಾರ್ಯಗಳಿಂದಾಗಿ ರಾಜೇಂದ್ರ ಪ್ರಸಾದರು ಜನರ ಪ್ರೀತಿಯ “ರಾಜೆನ್ ಬಾಬು” ಆದರು.