ಅಂಟಾರ್ಕ್ಟಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೯ ನೇ ಸಾಲು:
ಹದಿನೆಂಟನೆಯ ಶತಮಾನದ ಉತ್ತರಾರ್ಧದಿಂದ ಪ್ರಾರಂಭಿಸಿ 1957-58ರಲ್ಲಿ ಅಂತರಾಷ್ಟ್ರೀಯ ಭೂಭೌತ ವರ್ಷದ ಆಚರಣೆಯವರೆಗೆ ಈ ಖಂಡ ಕುರಿತು ವ್ಯಾಪಕ ಸಂಶೋಧನೆಯಾಗಿದೆ. ಪ್ರತಿಕೂಲ ವಾತಾವರಣವಿರುವ, ಸಾಹಸಿಗರಿಗೂ ಸವಾಲಾಗಿರುವ ಈ ಖಂಡದ ಬಗ್ಗೆ ವಿವರಗಳನ್ನು ಪಡೆಯಲು ಸಾಕಷ್ಟು ಕಾಲವೇ ಬೇಕಾಯಿತು.[[ಸಪ್ತರ್ಷಿ ಮಂಡಲ]]ದ ಕೆಳಗಿರುವ ಪ್ರದೇಶ ಎಂಬರ್ಥದಲ್ಲಿ ಉತ್ತರ ಧ್ರುವ ಪ್ರದೇಶವನ್ನು ಗ್ರೀಕರು ಆರ್ಕ್‍ಟಿಕ್ ಎಂದರು. ಅದಕ್ಕೆ ವಿರುದ್ಧ ದಿಕ್ಕಿನಲ್ಲಿರುವ ದಕ್ಷಿಣ ಧ್ರುವ ಪ್ರದೇಶವನ್ನು ಅಂಟಾರ್ಕ್‍ಟಿಕ ಎಂದರು. ಗ್ರೀಕ್ ಭೂಗೋಳ ತಜ್ಞ [[ಟಾಲಮೀ]] (ಕ್ರಿ.ಶ. 127-151) ದಕ್ಷಿಣ ಧ್ರುವ ಪ್ರದೇಶ ನೆಲವಾಗಿರಬಹುದೆಂದು ಊಹಿಸಿ ಅದಕ್ಕೆ ಟೆರ್ರಾ ಆಸ್ಟ್ರೇಲಿಸ್ ಇನ್‍ಕಾಗ್ನೇಟಾ (ಅಜ್ಞಾತ ದಕ್ಷಿಣ ನೆಲ) ಎಂದು ಕರೆದ.ಅಂಟಾರ್ಕ್‍ಟಿಕ ಖಂಡದ ವೃತ್ತದ ಸುತ್ತ ಗಸ್ತು ಹೊಡೆದ ಮೊದಲಿಗ [[ಕೊಲಂಬಸ್]] (1768). ಇದು ಪ್ರಾಯಃ ಯೂರೋಪಿನ ವಿಸ್ತೀರ್ಣಕ್ಕೆಂದು ಕೈಗೊಂಡ ಯಾನಗಳಲ್ಲೊಂದು. ಅಂಟಾರ್ಕ್‍ಟಿಕ ವೃತ್ತದ ಒಳಗೆ ಪ್ರವೇಶಿಸಿದ ಕೀರ್ತಿ [[ಕ್ಯಾಪ್ಟನ್ ಕುಕ್‍]]ಗೆ ಸೇರುತ್ತದೆ (1772-75). ಈತ ಮೂರು ಬಾರಿ ಯಾನ ಕೈಗೊಂಡು ನೆಲವೆಲ್ಲ ಹಿಮಾವೃತವಾಗಿದೆ ಎಂದಷ್ಟೇ ವಿವರಣೆ ನೀಡಲು ಸಾಧ್ಯವಾಯಿತು. ಸ್ವಲ್ಪ ದೂರದಲ್ಲೇ ಅಂಟಾರ್ಕ್‍ಟಿಕ ಪರ್ಯಾಯ ದ್ವೀಪವಿದ್ದುದು ಅವನಿಗೆ ಗೋಚರಿಸಲಿಲ್ಲ. ಹತ್ತಿರದಲ್ಲಿದ್ದ ಜಾರ್ಜಿಯ ಎಂಬ ದ್ವೀಪವನ್ನು ಪತ್ತೆಮಾಡಿದ. ಅದೇ ಹೆಸರಿನಿಂದ ಈಗಲೂ ಆ ದ್ವೀಪ ಪರಿಚಿತ. 'ಯಾರಾದರೂ ಧೈರ್ಯದಿಂದ ಮುನ್ನುಗ್ಗಿ ಖಂಡವಿದೆಯೆಂದು ಸಾಬೀತು ಪಡಿಸಿದರೆ ನಾನು ಕೆಚ್ಚಿನಿಂದ ಈ ಮಾತನ್ನು ಹೇಳುತ್ತಿದ್ದೇನೆ. ಅದರಿಂದ ಬಿಡಿಗಾಸಿನ ಪ್ರಯೋಜನವೂ ಇಲ್ಲ' ಎಂದು ಬರೆದ. ಕುಕ್‍ನ ಸಾಹಸದ ಯಾನದ ಹಿಂದೆಯೇ ಯೂರೋಪು [[ಚೀನ]]ದೊಡನೆ ವ್ಯಾಪಾರ ಕುದುರಿಸಲು ಕೇಪ್ ಹಾರನ್ ಮೂಲಕ ಯಾನ ಮಾಡಿದ ನಾವಿಕರು ಸೀಲ್ ಬೇಟೆಗಳನ್ನು ಮಾಡಿದರು. ಕೆಲವೊಮ್ಮೆ ಅವರ ನೌಕೆಗಳು ತೀರ ದಕ್ಷಿಣಕ್ಕೆ ಒಯ್ಯಲ್ಪಡುತ್ತಿದ್ದವು. ಈ ವಾಣಿಜ್ಯ ಯಾನದಿಂದಾಗಿ ಅಂಟಾರ್ಕ್‍ಟಿಕ ಖಂಡದ ಸುತ್ತ ನಾವಿಕರು ಸುತ್ತಬೇಕಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನ, ಅಂದಿನ ಸೋವಿಯತ್ ರಷ್ಯ, ಇಂಗ್ಲೆಂಡ್ ಈ ಮೂರೂ ರಾಷ್ಟ್ರಗಳು ಈ ಅಜ್ಞಾತ ಖಂಡವನ್ನು ಕಂಡ ಖ್ಯಾತಿ ತಮ್ಮ ದೇಶಕ್ಕೇ ಸಲ್ಲಬೇಕೆಂದು ವಾದಿಸುತ್ತ ಬಂದವು. ಸೀಲ್ ಬೇಟೆಗೆಂದು ಹೊರಟ 20ರ ತರುಣ ಅಮೆರಿಕದ ಪಾಮರ್, ಹೀರೋ ಎಂಬ ಹೆಸರಿನ ಪುಟ್ಟ ನೌಕೆಯನ್ನು ತಾನೇ ನಡೆಸಿ ಸೀಲ್ ಸಂತಾನಾಭಿವೃದ್ಧಿಯ ತಾಣವನ್ನು ಹುಡುಕುವಾಗ ಹಿಮಾಚ್ಛಾದಿತ ಕೋಡುಗಲ್ಲನ್ನು ಅಂಟಾರ್ಕ್‍ಟಿಕ ಖಂಡದಲ್ಲಿ ಕಂಡನೆಂದು (1820) ಅಮೆರಿಕ ವಾದಿಸಿದೆ.ಇದೇ ಅವಧಿಯಲ್ಲಿ 'ವೋಸ್ತೋಕ್ ಮತ್ತು ಮಿರ್ನಿ' ಎಂಬ ಎರಡು ನೌಕೆಗಳೊಡನೆ ರಷ್ಯದ ಬೆಲ್ಲಿಂಗ್ ಹ್ಯಾಸನ್ ಎಂಬ ನಾವಿಕ ಪಾಮರ್‍ಗೆ ಎದುರಾಗಿದ್ದ. ಕೇವಲ 30 ಕಿ.ಮೀ. ದೂರ ಸಾಗಿದ್ದರೆ ಅಂಟಾರ್ಕ್‍ಟಿಕ ಖಂಡಕ್ಕೆ ಕಾಲಿಟ್ಟ ಮೊದಲಿಗ ಎನ್ನುವ ಖ್ಯಾತಿ ಅವನದಾಗುತ್ತಿತ್ತು. ಆದರೆ ಹಿಮಾಚ್ಛಾದಿತ ಖಂಡವನ್ನು ಕಂಡು ಹಿಂತಿರುಗಬೇಕಾಯಿತು. 1823ರಲ್ಲಿ ಬ್ರಿಟನ್ನಿನ ಸಾಗರಯಾನಿ ಜೇಮ್ಸ್ ವೆಡಲ್ ದಕ್ಷಿಣ ಸಾಗರದ 74 ಡಿಗ್ರಿ ರೇಖಾಂಶ ತಲಪಿ ಈಗಿನ ವೆಡಲ್ ಸಮುದ್ರದ ಬಗ್ಗೆ ಅನೇಕ ವಿವರಗಳನ್ನು ನೀಡಿದ. 1837ರಲ್ಲಿ [[ಫ್ರಾನ್ಸ್]] ಲೆಫ್ಟಿನೆಂಟ್ ದುಮಾಂಟ್ ದ ಊರ್ವಿಲ್, ಅಂಟಾರ್ಕ್‍ಟಿಕ ಖಂಡದ ಪರ್ಯಾಯ ದ್ವೀಪಕ್ಕೆ ಹೊಂದಿಕೊಂಡಿರುವ ಕೆಲವು ದ್ವೀಪಗಳನ್ನು ಪತ್ತೆಮಾಡಿದ. ಅದನ್ನು [[ಅದಿಲೇ ಲ್ಯಾಂಡ್]] ಎಂದು ತನ್ನ ಹೆಂಡತಿಯ ಹೆಸರಲ್ಲಿ ಕರೆದ (ಅದಿಲೆ ಪೆಂಗ್ವಿನ್‍ಗಳ ಹೆಸರಿನ ಮೂಲ ಇದೇ). 1838-41ರಲ್ಲಿ ಅಮೆರಿಕ ನೌಕಾಪಡೆಯ ಲೆಫ್ಟಿನೆಂಟ್ ವಿಲ್ಕಸ್, ಪೂರ್ವ ಅಂಟಾರ್ಕ್‍ಟಿಕದ 2400 ಕಿ. ಮೀ. ಉದ್ದದ ತೀರವನ್ನು ಸಮೀಕ್ಷೆ ಮಾಡಿ ಅಂಚನ್ನು ಮುಟ್ಟಿದ, ಪರ್ವತಗಳನ್ನು ಕಂಡ. ಹಿಂತಿರುಗಿದಾಗ ಯಥೋಚಿತ ಸ್ವಾಗತದ ಬದಲು ಸಂಗಡಿಗರನ್ನು ಹಿಂಸಿಸಿದ ಎನ್ನುವ ಕಾರಣಕ್ಕಾಗಿ ಅಮೆರಿಕ ಅವನಿಗೆ ಭಾರಿ ದಂಡ ವಿಧಿಸಿ ದಿವಾಳಿಗೆ ತಳ್ಳಿತು. 1839-43ರ ನಡುವೆ ಬ್ರಿಟನ್ನಿನ ಪರಿಶೋಧಕ ಜೇಮ್ಸ್ ಕ್ಲಾರ್ಕ್ ರಾಸ್, ಎರಬೆಸ್ ಮತ್ತು ಟೆರೆರ್ ಎಂಬ ಎರಡು ನೌಕೆಗಳೊಂದಿಗೆ ಅಂಟಾರ್ಕ್‍ಟಿಕ ಖಂಡದ ಪ್ರಕ್ಷುಬ್ಧ ಸಾಗರವನ್ನು ಹಾಯ್ದು ರಾಸ್ ಸಮುದ್ರವನ್ನು ಪತ್ತೆ ಹಚ್ಚಿದ. 1901-04ರ ನಡುವೆ ಇಂಗ್ಲೆಂಡಿನ ನೌಕಾಪಡೆಯ ರಾಬರ್ಟ್ ಫಾಲ್ಕನ್ ಸ್ಕಾಟ್ ಅಂಟಾರ್ಕ್‍ಟಿಕ ಖಂಡದ ಹಿಮನದಿಯನ್ನು ರಾಸ್ ಸಮುದ್ರ ಮಾರ್ಗವಾಗಿ ಹಾಯುವುದರಲ್ಲಿ ಯಶಸ್ವಿಯಾದ. ಆದರೆ ಬಿರುಗಾಳಿಯಿಂದಾಗಿ ಹಿಂತಿರುಗಬೇಕಾಯಿತು. 1909ರಲ್ಲಿ ಇಂಗ್ಲೆಂಡಿನ ಷಾಕಲ್ಟನ್ ದಕ್ಷಿಣದ ಕಾಂತಧ್ರುವವನ್ನು ಮೆಟ್ಟಿನಿಲ್ಲುವುದರಲ್ಲಿ ಸಫಲನಾದ. ಅದೇ ವರ್ಷ ಅಮೆರಿಕದ ರಾಬರ್ಟ್ ಪಿಯರಿ ಉತ್ತರ ಧ್ರುವ ಯಾತ್ರೆಯಲ್ಲಿ ಯಶಸ್ಸು ಸಾಧಿಸುತ್ತಲೇ ದಕ್ಷಿಣ ಧ್ರುವ ತಲಪುವ ಸ್ಪರ್ಧೆ ಯೂರೋಪಿನಲ್ಲಿ ಮೂಡಿತು. ಈ ಸ್ಪರ್ಧೆಗಿಳಿದ ಇಬ್ಬರು ಪ್ರಮುಖರೆಂದರೆ ನಾರ್ವೆಯ ಅಮುಂಡ್‍ಸನ್ (1912), ಬ್ರಿಟನ್ನಿನ ರಾಬರ್ಟ್ ಫಾಲ್ಕನ್ ಸ್ಕಾಟ್ (1912).ಅಮುಂಡ್‍ಸನ್, ಫ್ರಾಮ್ ಎಂಬ ನೌಕೆಯಲ್ಲಿ ಹೊರಟ. 43 ಮಂದಿ ಪಳಗಿದ ಎಸ್ಕಿಮೋಗಳು, ನಾಲ್ಕು ಶ್ವಾನಬಂಡಿ, ಕುದುರೆಗಳೊಡನೆ ಕ್ವೀನ್ಸ್ ಮೌಡ್ ಪರ್ವತ ಸಾಲಿನ ಮೂಲಕ ಹಾದು 1911ರ ಡಿಸೆಂಬರ್ 4ರಂದು [[ದಕ್ಷಿಣ ಧ್ರುವ]]ವನ್ನು ಮೆಟ್ಟಿನಿಂತು ಇತಿಹಾಸ ನಿರ್ಮಿಸಿದ. 1912ರ ಜನವರಿ 17ರಂದು ಸ್ಕಾಟ್ ತನ್ನ ತಂಡದೊಂದಿಗೆ ಅದೇ ಧ್ರುವವನ್ನು ಮೆಟ್ಟಿ ನಿಂತಾಗ ಅಮುಂಡ್‍ಸನ್‍ನ ಹೆಜ್ಜೆ ಗುರುತು ನೋಡಿ ಖಿನ್ನನಾಗಿದ್ದ. ಹಿಂದಿರುಗುವಾಗ ಆಹಾರವೂ ಇಲ್ಲದೆ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ, ದಣಿದು ತನ್ನ ಸಂಗಡಿಗರೊಂದಿಗೆ ಕೊನೆಯುಸಿರೆಳೆದ. ಅವನ ದಿನಚರಿಯಲ್ಲಿ ಅಮೂಲ್ಯ ಮಾಹಿತಿಗಳು ದೊರೆತವು. ಧ್ರುವವನ್ನು ಮೆಟ್ಟಿ ನಿಲ್ಲುವ ಸ್ಪರ್ಧೆಗೆ ಇದು ತೆರೆ ಎಳೆಯಿತಾದರೂ, ವೈಜ್ಞಾನಿಕ ಅನ್ವೇಷಣೆಗೆ ನವಚೈತನ್ಯವನ್ನು ತಂದಿತು. ಶ್ವಾನಪಡೆ, ಬಂಡಿ, ಪುಟ್ಟ ನೌಕೆಗಳನ್ನು ಅಂಟಾರ್ಕ್‍ಟಿಕ ತಂಡದ ಪರಿಶೋಧನೆಗೆ ಒಯ್ಯುತ್ತಿದ್ದ ಕಾಲ ಹಿಂದೆ ಸರಿದು, ಈ ಖಂಡದ ಪರಿಶೋಧನೆಗೆ 1929ರಲ್ಲಿ ಅಮೆರಿಕದ ನೌಕಾಪಡೆಯ ಅಡ್ಮಿರಲ್ ರಿಚರ್ಡ್ ಬೈರ್ಡ್, ದಕ್ಷಿಣ ಧ್ರುವವನ್ನು ಮೊತ್ತಮೊದಲಿಗೆ ವಿಮಾನಯಾನದ ಮೂಲಕ ತಲಪಿದ. ಅನಂತರ ಇವನ ನೇತೃತ್ವದಲ್ಲಿ ನಾಲ್ಕು ಸಾಹಸಯಾನಗಳಾದವು. ಇದರ ಅನಂತರ ಅಂಟಾರ್ಕ್‍ಟಿಕ ಖಂಡದ ವೈಜ್ಞಾನಿಕ ಅಧ್ಯಯನಕ್ಕೆ ಅನೇಕ ದೇಶಗಳು ಮುಂದಾದವು.
==ಅಂತಾರಾಷ್ಟ್ರೀಯ ಭೂಭೌತ ವರ್ಷ==
[[File:Marie Byrd Land, West Antarctica by NASA.jpg|thumb|Glaciers and rock outcrops in Marie Byrd Land seen from NASA's [[DC-8]] aircraft]]
1957ರ ಜುಲೈ 1ರಿಂದ ಪ್ರಾರಂಭವಾಗಿ 1958ರ ಡಿಸೆಂಬರ್ 31ರವರೆಗಿನ ಅವಧಿಯನ್ನು '[[ಅಂತಾರಾಷ್ಟ್ರೀಯ ಭೂಭೌತ ವರ್ಷ]]' ಎಂಬ ಹೆಸರಿನಲ್ಲಿ ಆಚರಿಸಲು ಜಗತ್ತಿನ ಅನೇಕ ವಿಜ್ಞಾನಿಗಳೂ ಯೋಜನೆ ರೂಪಿಸಿದರು. ಅಂತಾರಾಷ್ಟ್ರೀಯ ವಿಜ್ಞಾನ ಒಕ್ಕೂಟಗಳ ಮಂಡಳಿಯನ್ನು (ಐ.ಸಿ.ಎಸ್.ಯು) ಸ್ಥಾಪಿಸಿ 40 ದೇಶಗಳನ್ನು ಈ ಅಧ್ಯಯನದಲ್ಲಿ ತೊಡಗಿಸಿಕೊಂಡಿತು. ಖಂಡದ ವ್ಯಾಪಕ ಸಂಶೋಧನಾ ಯೋಜನೆಗಳು ಮೈದಳೆದು ಅಲ್ಲಿ ಅನೇಕ ಶಿಬಿರಗಳನ್ನು ನಿರ್ಮಿಸಲು ಯೋಜಿಸಲಾಯಿತು. ಸಂಪರ್ಕ ಸಾಧನಗಳ ನೆರವು ಪಡೆಯುವುದು, ಹವಾಮಾನ ಕುರಿತು ಖಚಿತ ಮಾಹಿತಿಗಳನ್ನು ಪಡೆಯುವುದು, ಖಂಡದ ಬೆಟ್ಟಗುಡ್ಡಗಳನ್ನು ಸಮೀಕ್ಷೆ ಮಾಡುವುದು ಯೋಜನೆಯ ಮುಖ್ಯ ಗುರಿಯಾಗಿತ್ತು. ಇದಕ್ಕಾಗಿ 12 ದೇಶಗಳು ಮುಂದಾದವು. ಅಂಟಾರ್ಕ್‍ಟಿಕ, ಅದರ ಸುತ್ತಮುತ್ತಲಿನ ಸಣ್ಣಪುಟ್ಟ ದ್ವೀಪಗಳಲ್ಲಿ ಒಟ್ಟು 60 ಕೇಂದ್ರಗಳನ್ನು ಸ್ಥಾಪಿಸಲಾಯಿತು. ಈ ಪೈಕಿ ಅಮೆರಿಕ ಸಂಯುಕ್ತ ಸಂಸ್ಥಾನವೊಂದೇ ಆರು ಸಂಶೋಧನಾ ಕೇಂದ್ರಗಳನ್ನು ತೆರೆಯಿತು. ಆಗ ತೆರೆದ ಮ್ಯಾಕ್ ಮುರ್ಡೋ ಸೌಂಡ್ ಎಂಬ ಕೇಂದ್ರ ಈಗಲೂ ಅಂಟಾರ್ಕ್‍ಟಿಕ ಖಂಡದಲ್ಲಿ ಸ್ಥಾಪಿಸಿರುವ, ಸರ್ವಋತುವಿನಲ್ಲೂ ಕೆಲಸ ಮಾಡುವ ಬಹುದೊಡ್ಡ ಕೇಂದ್ರ, ರಷ್ಯ, [[ಬ್ರಿಟನ್]], [[ನ್ಯೂಜಿಲೆಂಡ್]], [[ಆಸ್ಟ್ರೇಲಿಯ]] ಕೂಡ ನೆಲ, ಜಲ, ಬಾನಿಗೆ ಸಂಬಂಧಿಸಿದಂತೆ, ಅತ್ಯುಚ್ಚ ಉಪಕರಣಗಳನ್ನು ಬಳಸಿ ಮಾಹಿತಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದುವು. ಈ ಖಂಡಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಭೂಭೌತ ವರ್ಷದ ಅತ್ಯುನ್ನತ ಸಾಧನೆ ಎಂದರೆ ಇಡೀ ಖಂಡವನ್ನು ಅಡ್ಡಹಾಯಲು ರೂಪಿಸಿದ ಕಾಮನ್‍ವೆಲ್ತ್ ಟ್ರಾನ್ಸ್ ಅಂಟಾರ್ಕ್‍ಟಿಕ್ ಯಾತ್ರೆ. ಇದರ ಮುಂದಾಳುಗಳು ಸರ್ ವಿವಿಯನ್ ಫುಟ್ ಮತ್ತು [[ಸರ್ ಎಡ್ಮಂಡ್ ಹಿಲರಿ]]. 1957ರಿಂದ ಪ್ರಾರಂಭಿಸಿ ಈ ಯಾತ್ರೆ ಮೂರು ತಿಂಗಳ ಅವಧಿಯಲ್ಲಿ ಮೊತ್ತಮೊದಲ ಬಾರಿಗೆ ಖಂಡವನ್ನು ಅಡ್ಡ ಹಾಯಿತು. 12 ರಾಷ್ಟ್ರಗಳ ಪ್ರತಿನಿಧಿಗಳು [[ವಾಷಿಂಗ್‍ಟನ್ ಡಿ.ಸಿ.]]ಯಲ್ಲಿ ಸಭೆ ಸೇರಿ 1959ರಲ್ಲಿ ಅಂಟಾರ್ಕ್‍ಟಿಕ ಖಂಡದ ಒಪ್ಪಂದಕ್ಕೆ ಸಂಬಂಧಿಸಿದಂತೆ ಕರಡು ಸಿದ್ಧಪಡಿಸಿದುವು. ಈ ಒಪ್ಪಂದದಂತೆ ಇಡೀ ಖಂಡವೇ ವೈಜ್ಞಾನಿಕ ಸಂಶೋಧನೆಗಷ್ಟೇ ಮೀಸಲಾಗಿರಬೇಕು. ಅಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವಂತಿಲ್ಲ, ಯಾವ ದೇಶವೂ ನೆಲ, ಜಲದ ಮೇಲೆ ಸ್ವಾಮ್ಯ ಘೋಷಿಸುವಂತಿಲ್ಲ. ಅಂಟಾರ್ಕ್‍ಟಿಕದ ಪರಿಸರವನ್ನು ಕಲುಷಿತಗೊಳಿಸುವಂತಿಲ್ಲ. ಈ ಖಂಡದಲ್ಲಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದ್ದ ಹನ್ನೆರಡೂ ದೇಶಗಳು 1961ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದುವು. ಅನಂತರ 1991ರಲ್ಲಿ ಸ್ಪೇನ್ ದೇಶದ [[ಮ್ಯಾಡ್ರಿಡ್]] ಎಂಬಲ್ಲಿ 39 ದೇಶಗಳ ಪ್ರತಿನಿಧಿಗಳು ಕಲೆತು ಅಂಟಾರ್ಕ್‍ಟಿಕ ಖಂಡದ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕೆಲವೊಂದು ಷರತ್ತುಗಳಿಗೆ ಸಹಿ ಹಾಕಿದುವು. ಈ ಷರತ್ತಿನಂತೆ ಮುಂದಿನ 50 ವರ್ಷಗಳ ತನಕ ಈ ಖಂಡದಲ್ಲಿ ಯಾವುದೇ ಗಣಿಗಾರಿಕೆಗೆ ಅವಕಾಶವಿಲ್ಲ. ಈ ಷರತ್ತನ್ನು 1998ರ ಏಪ್ರಿಲ್‍ನಿಂದ ಜಾರಿಗೆ ತರಲಾಗಿದೆ. ಭಾರತವು ಈಗ ಅಂಟಾರ್ಕ್‍ಟಿಕ ಕೂಟದ ಸದಸ್ಯತ್ವ ಹೊಂದಿದೆ. ಈಗ ಸ್ಕಾರ್ (ಸೈಟಿಂಫಿಕ್ ಕಮಿಟಿ ಆನ್ ಅಂಟಾರ್ಕ್‍ಟಿಕ್ ರೀಸರ್ಚ್) ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಈ ಸಮಿತಿ ಖಂಡದ ಪರಿಸರ ಸಂರಕ್ಷಣೆಗೆ ಕಟಿಬದ್ಧವಾಗಿ ನಿಂತಿದೆ. ಇಲ್ಲಿನ ಸೀಲ್ ಸಂತತಿಯನ್ನು ಸಂರಕ್ಷಿಸಲು 'ಕನ್ಸರ್ವೇಷನ್ ಆಫ್ ಅಂಟಾರ್ಕ್‍ಟಿಕ್ ಸೀಲ್ಸ್' ಹೆಸರಿನಲ್ಲಿ ಸಮಿತಿಯು ರಚನೆಯಾಗಿದೆ. ಅಲ್ಲಿನ ಜೀವ ಸಂಪನ್ಮೂಲವನ್ನು ರಕ್ಷಿಸಲು 'ಕನ್ಸರ್ವೇಷನ್ ಆಫ್ ಅಂಟಾರ್ಕ್‍ಟಿಕ್ ಮೇರೈನ ಲಿವಿಂಗ್ ರಿಸೋರ್ಸ್' ಎಂಬ ಸಮಿತಿಯೂ ಅಸ್ತಿತ್ವದಲ್ಲಿದೆ. ಅಂಟಾರ್ಕ್‍ಟಿಕ ಹಾಗೂ ಅದರ ಸುತ್ತಮುತ್ತಲ ದ್ವೀಪ, ಸಾಗರ, ತೀರದಲ್ಲದಿರುವ ಜೈವಿಕ ವೈವಿಧ್ಯದ ಬಗ್ಗೆ ತಪಶೀಲು ಸಮೀಕ್ಷೆಯಾಗಿಲ್ಲ. ಇದನ್ನು ಕೇಂದ್ರ ಗುರಿಯನ್ನಾಗಿರಿಸಿಕೊಂಡು ಬಯೋಮಾಸ್ (ಬಯಾಲಾಜಿಕಲ್ ಇನ್ವೇಸ್ಟಿಗೇಷನ್ ಆಫ್ ಮೆರೈನ್ ಅಂಟಾರ್ಕ್‍ಟಿಕ್ ಸಿಸ್ಟಮ್) ಎಂಬ ಯೋಜನೆಯನ್ನು ಈಗಾಗಲೇ ಕೂಟದ ಸದಸ್ಯ ರಾಷ್ಟ್ರಗಳು ಅನುಷ್ಠಾನಕ್ಕೆ ತಂದಿವೆ. ಮುಂದಿನ ತಲೆಮಾರಿಗೆ ಅಂಟಾರ್ಕ್‍ಟಿಕ ಖಂಡವನ್ನು ಉಳಿಸಲೆಂದೇ ಮ್ಯಾಡ್ರಿಡ್ ಒಪ್ಪಂದದಲ್ಲಿ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಮುಖ್ಯವಾದವು ಈ ಖಂಡದ ಮೇಲೆ ಪರಿಸರ ಬೀರಿರುವ ಪ್ರಭಾವದ ಮೌಲ್ಯಮಾಪನ, ಅಲ್ಲಿನ ಜೀವಿ ವೈವಿಧ್ಯದ ಸಂರಕ್ಷಣೆ, ತ್ಯಾಜ್ಯ ಪದಾರ್ಥಗಳ ವಿಲೇವಾರಿ-ನಿರ್ವಹಣೆ, ಸಾಗರ ಮಾಲಿನ್ಯ ವಿಶೇಷವಾಗಿ ತೈಲ ಸೋರಿಕೆಯಿಂದುಂಟಾಗುವ ಅವಘಡಗಳನ್ನು ಕುರಿತು ತೆಗೆದುಕೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮಗಳು ಸೇರಿವೆ. ಸಂಶೋಧನೆಯ ಹೆಸರಿನಲ್ಲಿ ಅಲ್ಲಿ ಯಾವ ಹೊಸ ಜೀವಿಗಳನ್ನೂ ತರುವಂತಿಲ್ಲ. ಕೆಳಮಟ್ಟದಲ್ಲಿ ವಿಮಾನ ಹಾರಾಟ ಮಾಡಿ ಅಲ್ಲಿನ ಜೀವಿಗಳನ್ನು ಗಲಿಬಿಲಿಗೊಳಿಸುವಂತಿಲ್ಲ. ಏಪ್ರಿಲ್ 2000ದಲ್ಲಿ ಅಂಟಾರ್ಕ್‍ಟಿಕ ಒಪ್ಪಂದಕ್ಕೆ ಕೆಲವೊಂದು ತಿದ್ದುಪಡಿಗಳನ್ನು ತರಲಾಗಿದೆ. ಈ ತಿದ್ದುಪಡಿಯಲ್ಲಿ ಅಂಟಾರ್ಕ್‍ಟಿಕ ತೀರದಲ್ಲಿ ನೌಕೆಗಳ ಚಲನವಲನಗಳ ಮೇಲೆ ನಿಯಂತ್ರಣ ತರಲಾಗಿದೆ. ಹೆಚ್ಚುತ್ತಿರುವ ಪ್ರವಾಸೀ ಒತ್ತಡವನ್ನು ನಿರ್ವಹಿಸಲು ಮತ್ತು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಲಾಗಿದೆ. (ನೋಡಿ- ಅಂತರರಾಷ್ಟ್ರೀಯ-ಭೂಭೌತ-ವರ್ಷ).
==ಭಾರತ ಮತ್ತು ಅಂಟಾರ್ಕ್‍ಟಿಕ ಯಾನ==
"https://kn.wikipedia.org/wiki/ಅಂಟಾರ್ಕ್ಟಿಕ" ಇಂದ ಪಡೆಯಲ್ಪಟ್ಟಿದೆ