ಬ್ರುಸೆಲ್ಲೋಸಿಸ್ - ಜಾನುವಾರು ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪ ನೇ ಸಾಲು:
 
*'''ಮನುಷ್ಯರಿಗೆ ಬ್ರುಸೆಲ್ಲೊಸಿಸ್''' ರೋಗ ಬಂದರೆ ಸಾವು ಬರುವುದಿಲ್ಲ. ಆದರೆ ಬಿಟ್ಟು ಬಿಟ್ಟು ಜ್ವರ ಬರುತ್ತದೆ. ಮೈಕೈ ಸ್ನಾಯುಗಳಲ್ಲಿ ವಿಪರೀತ ನೋವು ಇರುತ್ತದೆ. ಜ್ವರ 102-103 ಡಿಗ್ರಿಗೂ ಏರಿ, ಸನ್ನಿ ಅಥವಾ ಭಾವೋನ್ಮಾದವೂ ಆಗಿ ಜ್ವರ ಇಳಿಯುತ್ತದೆ. ತೀರಾ ತೀರಾ ಅಪರೂಪಕ್ಕೆ ಸಾವು ಬಂದೀತು. ಪದೇ ಪದೇ ಹಾಗೆ ಜ್ವರ ಬಾರದಂತೆ ಔಷಧ ಇದೆ; ಆದರೆ ಐದಾರು ತಿಂಗಳುಗಳ ಕಾಲ ಮಾತ್ರೆ ಸೇವಿಸಬೇಕು. ಅದಕ್ಕಿಂತ ದೊಡ್ಡ ಫಜೀತಿ ಏನೆಂದರೆ ಜ್ವರಪೀಡಿತ ಗಂಡಸರ ವೃಷಣದಲ್ಲಿ ಭಾರೀ ಹಿಂಸೆಯಾಗುತ್ತದೆ.ಕ್ರಮೇಣ ಕೆಲವರಿಗೆ ಷಂಡತನ ಬರುತ್ತದೆ. ರೋಗಾಣುಭರಿತ ಹಸಿ ಹಾಲನ್ನು ಸೇವಿಸಿದ ಹೆಂಗಸರಲ್ಲೂ ಕೆಲವರು ಬಂಜೆಯಾಗುತ್ತಾರೆ.
{| class="wikitable"|24em| align="right"
|- bgcolor="#C1E0FF"
|ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ನಡೆದ ಘಟನೆ. ವೈದಿಕ ವೃತ್ತಿಯಲ್ಲಿರುವರೊಬ್ಬರಿಗೆ
ರಾತ್ರಿಯಲ್ಲಿ ಜ್ವರ ಮತ್ತು ಚಳಿ–ನಡುಕ, ಅಸಹನೀಯ ಕೀಲು–ಬೆನ್ನು ನೋವು... ವೈದ್ಯರು ಇದನ್ನು ಮಲೇರಿಯಾ, ಟೈಫಾಯ್ಡ್‌ ಎಂದೆಲ್ಲಾ ಹೇಳಿ ಚಿಕಿತ್ಸೆ ನೀಡಿದರು. ಪ್ರಯೋಜನ ಆಗಲಿಲ್ಲ. ಕೊನೆಗೂ ದಾವಣಗೆರೆಯ ವೈದ್ಯರೊಬ್ಬರಿಗೆ ಇದು ‘ಬ್ರುಸಲ್ಲೋಸಿಸ್’ ರೋಗ ಎಂದು ತಿಳಿದು, ಚಿಕಿತ್ಸೆ ನೀಡಿದರು. ಈಗ ಅವರು ಚೇತರಿಸಿಕೊಂಡಿದ್ದಾರೆ.
ವೈದಿಕರು ಸೇವಿಸಿದ ಪಂಚಗವ್ಯದಲ್ಲಿ ಯಾವುದೋ ಆಕಳಿಗೆ ಬ್ರುಸೆಲ್ಲೋಸಿಸ್ ಕಾಯಿಲೆ ಇದ್ದು ರೋಗಾಣು ಸೇರಿರುವ ಕಾರಣ ಅವರಿಗೆ ರೋಗ ಬಂದಿತ್ತು! ಎಲ್ಲ ಜಾತಿಯ ಆಕಳುಗಳನ್ನು ಬಾಧಿಸುವ ಬ್ರುಸೆಲ್ಲೋಸಿಸ್ ಎಂಬ ಕಾಯಿಲೆ ಗೋಮೂತ್ರ, ಹಾಲು ಇವುಗಳಿಂದ ಮನುಷ್ಯರಿಗೆ ಹರಡಿ ಕಾಡುತ್ತದೆ.
 
ಪಶುವೈದ್ಯ ಮಿತ್ರರೊಬ್ಬರ ಪತ್ನಿಗೆ ಪದೇ ಪದೇ ಗರ್ಭಪಾತವಾಗುತ್ತಿತ್ತು. ಹಲವಾರು ಚಿಕಿತ್ಸೆಯ ನಂತರವೂ ಪರಿಣಾಮಕಾರಿಯಾಗಲೇ ಇಲ್ಲ. ನಂತರ ಅವರ ರಕ್ತ ಪರೀಕ್ಷೆ ಮಾಡಿಸಿದಾಗ ಬ್ರುಸೆಲ್ಲಾ ಕಾಯಿಲೆಯಿರುವುದು ಪತ್ತೆಯಾಯಿತು(ಡಾ. ಎನ್.ಬಿ.ಶ್ರೀಧರ).
|}
 
*'''ಸೋಂಕು ಹರಡುವಿಕೆ''': ಬ್ರುಸೆಲ್ಲಾ ರೋಗಾಣು ಭಾರೀ ಸಾಂಸರ್ಗಿಕವಂತೂ ಹೌದು. ಅಂದರೆ ಅದರ ಸೆಗಣಿ, ಗಂಜಳ, ಅದು ತಿಂದು ಬಿಟ್ಟ ಮೇವು, ಅದರ ಮೈತೊಳೆದ ನೀರು ಎಲ್ಲವನ್ನೂ ಪ್ರತ್ಯೇಕ ಇಡದಿದ್ದರೆ ಅಕ್ಕಪಕ್ಕದ ಇತರ ಹಸು, ಎಮ್ಮೆ, ಹೋರಿ ಎಲ್ಲವಕ್ಕೂ ರೋಗ ಬರುತ್ತದೆ. ಡೇರಿಯಲ್ಲಿ ಒಂದಕ್ಕೆ ಬ್ರುಸೆಲ್ಲೊಸಿಸ್ ಬಂದರೆ ಅದರ ಲಕ್ಷಣಗಳು ಗೊತ್ತಾಗುವ ಮೊದಲೇ ಇತರ ಹಸುಗಳೆಲ್ಲ ರೋಗಗ್ರಸ್ತ ಆಗಬಹುದು. ಗೊತ್ತಾದರೂ ಏನೂ ಮಾಡುವಂತಿಲ್ಲ. ಈ ಕಾಯಿಲೆಗೆ ಔಷಧಿ ಇಲ್ಲ. ಕರುಗಳಿಗೆ ರೋಗ ತಗುಲದ ಹಾಗೆ ಲಸಿಕೆ ಹಾಕಿಸಬಹುದು. ಆದರೆ ಲಸಿಕೆ ಹಾಕಿಸುವ ಮೊದಲೇ ರೋಗಾಣುಗಳು ಅದರ ದೇಹದಲ್ಲಿದ್ದರೆ ಏನೂ ಮಾಡುವಂತಿಲ್ಲ. ಆ ರೋಗ ಬೇರೆಡೆ ಹರಡದ ಹಾಗೆ ದಯಾಮರಣ ಕೊಡಿಸಬಹುದು.