ಬ್ರುಸೆಲ್ಲೋಸಿಸ್ - ಜಾನುವಾರು ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
*ಶರೀರವನ್ನು ಪ್ರವೇಶಿಸಿದ ರೋಗಾಣುವು ದುಗ್ಧ ಗ್ರಂಥಿಗಳನ್ನು ಸೇರಿಕೊಂಡು ಅಲ್ಲಿ ವೃದ್ಧಿಗೊಳ್ಳುತ್ತದೆ. ನಂತರ ಗುಲ್ಮ, ಕೆಚ್ಚಲು, ಮೂತ್ರಾಶಯ ಮತ್ತು ಭ್ರೂಣವನ್ನು ಹೊಂದಿದ ಗರ್ಭಕೋಶದಲ್ಲಿ ಮನೆಮಾಡುತ್ತದೆ. ಗರ್ಭಕೋಶದಲ್ಲಿ ಇವು ಹುಣ್ಣುಗಳನ್ನು ಉಂಟು ಮಾಡುವುದರಿಂದ ಗರ್ಭಕೋಶಕ್ಕೆ ಧಕ್ಕೆ ತಗುಲಿ ಗರ್ಭಪಾತವಾಗುತ್ತದೆ. ಕೆಚ್ಚಲಿನಲ್ಲಿ ರೋಗಾಣುಗಳು ಸೇರಿಕೊಳ್ಳುವುದರಿಂದ ಹಾಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ರವಿಸಲ್ಪಡುತ್ತವೆ. ಈ ಹಾಲನ್ನು ಕಾಯಿಸದೇ ಕುಡಿದರೆ ರೋಗ ಬರುವುದು.
 
*'''ಜಾನುವಾರುಗಳಲ್ಲಿ''' ಈ ಕಾಯಿಲೆಯ ಲಕ್ಷಣಗಳೆಂದರೆ 5–8 ತಿಂಗಳ ಅವಧಿಯಲ್ಲಿ ಗರ್ಭಪಾತವಾಗುವುದು, ಸತ್ತೆ ಬೀಳದೇ ಇರುವುದು ಮತ್ತು ಗರ್ಭಕಟ್ಟದಿರುವುದು. ಯಾವುದೇ ವಯಸ್ಸಿನ ರಾಸುಗಳಲ್ಲಿ ಈ ಕಾಯಿಲೆ ಕಂಡುಬರಬಹುದು. ಹೋರಿಗಳಲ್ಲಿ ವೃಷಣದ ವ್ರಣ ಅಥವಾ ಉರಿಯೂತ ಕಾಣಿಸಿಕೊಳ್ಳಬಹುದು. ಕೆಲವು ಜಾನುವಾರುಗಳಲ್ಲಿ ಕೀಲು ಊದಿಕೊಳ್ಳುವಿಕೆ, ಕೀಲು ನೋವು ಇತ್ಯಾದಿ ಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು. ಹಂದಿಗಳಲ್ಲಿ ಬ್ರುಸೆಲ್ಲಾ ಕ್ರಿಮಿಯು ಗರ್ಭಪಾತವನ್ನುಂಟು ಮಾಡುವುದಿಲ್ಲ. ಆದರೆ ಕುರಿ, ಮೇಕೆ ಮತ್ತು ಕುದುರೆಗಳಲ್ಲಿ ಗರ್ಭಪಾತವಾಗುವುದನ್ನು ಗಮನಿಸಲಾಗಿದೆ. ರೋಗವನ್ನು ರಕ್ತಪ್ರಸರಣದ ಮಾದರಿಯನ್ನು ಪರೀಕ್ಷಿಸುವುದರಿಂದ ಪತ್ತೆ ಮಾಡುವುದು ಕಷ್ಟ. ರಕ್ತಸಾರವನ್ನು(ಸೀರಂ)ಆಧುನಿಕ ವಿಧಾನಗಳಿಂದ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸುವುದರಿಂದ ಅಥವಾ ಹಾಲನ್ನು ಪರೀಕ್ಷೆಯಿಂದ ಈ ರೋಗವನ್ನು ಪತ್ತೆ ಹಚ್ಚಬಹುದು.
 
==ಚಿಕಿತ್ಸೆ==
*'''ಮಾನವರಿಗೆ''':ಮನುಷ್ಯರಲ್ಲಿ ಈ ರೋಗವನ್ನು ಡಾಕ್ಸಿಸೈಕ್ಲಿನ್ ಮತ್ತು ರಿಫಾಮೈಸಿನ್ ಔಷಧಿಗಳ ಸಂಯುಕ್ತ ಚಿಕಿತ್ಸೆಯಿಂದ ಪರಿಣಾಮಕಾರಿಯಾಗಿ ವಾಸಿ ಮಾಡಬಹುದು.