ಬ್ರುಸೆಲ್ಲೋಸಿಸ್ - ಜಾನುವಾರು ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
[[File:BrucellaMelitensis.jpg|thumb|ಅಪಾಯಕಾರಿ ಬ್ರುಸೆಲ್ಲಾ ಮೆಲಿಟೆನ್ಸಿಸ್-BrucellaMelitensis]]
*ಸೋಂಕು ಹೊಂದಿರುವ ಹೋರಿಗಳ ವೀರ್ಯದಲ್ಲಿ ರೋಗಾಣುಗಳು ಇರುತ್ತಿದ್ದು ಇವೂ ರೋಗಪ್ರಸಾರದಲ್ಲಿ ಮಹತ್ವದ ಪಾತ್ರ ಹೊಂದಿವೆ. ಕೆಲವು ಜಾನುವಾರುಗಳು ರೋಗದ ಲಕ್ಷಣ ತೋರಿಸದಿದ್ದರೂ ರೋಗವಾಹಕಗಳಾಗಿ ಕೆಲಸ ಮಾಡಬಲ್ಲವು.<ref>http://www.prajavani.net/news/article/2016/09/13/437483.html</ref>
==ಅಪಾಯಕಾರಿ ಸೋಂಕು==
*ಬ್ರುಸೆಲ್ಲಾ ಎಂಬುದು ಮೇಲೆ ಹೇಳಿದಂತೆ ಅತಿಸೂಕ್ಷ್ಮ ಕಡ್ಡಿಯಂಥ ಏಕಾಣುಜೀವಿ. ಹಸುವಿಗೆ ಅದರ ಸೋಂಕು ತಗುಲಿತೆಂದರೆ ಅದಕ್ಕೆ ಔಷಧವಿಲ್ಲ. ಹಸು ಸಾಯುವುದಿಲ್ಲ ನಿಜ. ಅದಕ್ಕೆ ಗರ್ಭ ನಿಲ್ಲುವುದಿಲ್ಲ, ಆರೇಳನೆ ತಿಂಗಳಿಗೆ ಅಬಾರ್ಶನ್ ಆಗುತ್ತದೆ. ಎರಡನೆಯ ಬಾರಿ ಗರ್ಭ ಕಟ್ಟಿದರೆ ಅದೂ ಬಿದ್ದುಹೋಗಬಹುದು. ಮೂರನೆಯ ಬಾರಿ ಗರ್ಭ ನಿಲ್ಲುತ್ತದೆ. ಆದರೆ ತಾಯಿ ಹಸುವಿನ ಹಾಲಿನಲ್ಲಿ ರೋಗಾಣು ಇರುತ್ತದೆ. ಅಂಥ ಹಾಲನ್ನು ಕಾಯಿಸದೇ ಸೇವಿಸಿದರೆ ಕೆಲವರಿಗೆ ಬ್ರುಸೆಲ್ಲೊಸಿಸ್ ರೋಗ ಬರಬಹುದು. ಗೋಮಾಂಸವನ್ನು ಅರೆಬರೆ ಬೇಯಿಸಿ ತಿಂದರೂ ರೋಗ ಬಂದೀತು. ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ರೋಗ ಬರಲಿಕ್ಕಿಲ್ಲ.
 
*'''ಮನುಷ್ಯರಿಗೆ ಬ್ರುಸೆಲ್ಲೊಸಿಸ್''' ರೋಗ ಬಂದರೆ ಸಾವು ಬರುವುದಿಲ್ಲ. ಆದರೆ ಬಿಟ್ಟು ಬಿಟ್ಟು ಜ್ವರ ಬರುತ್ತದೆ. ಮೈಕೈ ಸ್ನಾಯುಗಳಲ್ಲಿ ವಿಪರೀತ ನೋವು ಇರುತ್ತದೆ. ಜ್ವರ 102-103 ಡಿಗ್ರಿಗೂ ಏರಿ, ಸನ್ನಿ ಅಥವಾ ಭಾವೋನ್ಮಾದವೂ ಆಗಿ ಜ್ವರ ಇಳಿಯುತ್ತದೆ. ತೀರಾ ತೀರಾ ಅಪರೂಪಕ್ಕೆ ಸಾವು ಬಂದೀತು. ಪದೇ ಪದೇ ಹಾಗೆ ಜ್ವರ ಬಾರದಂತೆ ಔಷಧ ಇದೆ; ಆದರೆ ಐದಾರು ತಿಂಗಳುಗಳ ಕಾಲ ಮಾತ್ರೆ ಸೇವಿಸಬೇಕು. ಅದಕ್ಕಿಂತ ದೊಡ್ಡ ಫಜೀತಿ ಏನೆಂದರೆ ಜ್ವರಪೀಡಿತ ಗಂಡಸರ ವೃಷಣದಲ್ಲಿ ಭಾರೀ ಹಿಂಸೆಯಾಗುತ್ತದೆ.ಕ್ರಮೇಣ ಕೆಲವರಿಗೆ ಷಂಡತನ ಬರುತ್ತದೆ. ರೋಗಾಣುಭರಿತ ಹಸಿ ಹಾಲನ್ನು ಸೇವಿಸಿದ ಹೆಂಗಸರಲ್ಲೂ ಕೆಲವರು ಬಂಜೆಯಾಗುತ್ತಾರೆ.
 
*'''ಸೋಂಕು ಹರಡುವಿಕೆ''': ಬ್ರುಸೆಲ್ಲಾ ರೋಗಾಣು ಭಾರೀ ಸಾಂಸರ್ಗಿಕವಂತೂ ಹೌದು. ಅಂದರೆ ಅದರ ಸೆಗಣಿ, ಗಂಜಳ, ಅದು ತಿಂದು ಬಿಟ್ಟ ಮೇವು, ಅದರ ಮೈತೊಳೆದ ನೀರು ಎಲ್ಲವನ್ನೂ ಪ್ರತ್ಯೇಕ ಇಡದಿದ್ದರೆ ಅಕ್ಕಪಕ್ಕದ ಇತರ ಹಸು, ಎಮ್ಮೆ, ಹೋರಿ ಎಲ್ಲವಕ್ಕೂ ರೋಗ ಬರುತ್ತದೆ. ಡೇರಿಯಲ್ಲಿ ಒಂದಕ್ಕೆ ಬ್ರುಸೆಲ್ಲೊಸಿಸ್ ಬಂದರೆ ಅದರ ಲಕ್ಷಣಗಳು ಗೊತ್ತಾಗುವ ಮೊದಲೇ ಇತರ ಹಸುಗಳೆಲ್ಲ ರೋಗಗ್ರಸ್ತ ಆಗಬಹುದು. ಗೊತ್ತಾದರೂ ಏನೂ ಮಾಡುವಂತಿಲ್ಲ. ಈ ಕಾಯಿಲೆಗೆ ಔಷಧಿ ಇಲ್ಲ. ಕರುಗಳಿಗೆ ರೋಗ ತಗುಲದ ಹಾಗೆ ಲಸಿಕೆ ಹಾಕಿಸಬಹುದು. ಆದರೆ ಲಸಿಕೆ ಹಾಕಿಸುವ ಮೊದಲೇ ರೋಗಾಣುಗಳು ಅದರ ದೇಹದಲ್ಲಿದ್ದರೆ ಏನೂ ಮಾಡುವಂತಿಲ್ಲ. ಆ ರೋಗ ಬೇರೆಡೆ ಹರಡದ ಹಾಗೆ ದಯಾಮರಣ ಕೊಡಿಸಬಹುದು.
*ಭಾರತದ ಅಪ್ಪಟ ನಾಟಿ ದನಗಳಿಗೆ ಬ್ರುಸೆಲ್ಲೊಸಿಸ್ ರೋಗ ಬರುವುದಿಲ್ಲ. ಆದರೆ ಈಗೀಗ ಎಲ್ಲೆಲ್ಲೂ ಸಂಕರ ತಳಿಗಳೇ ಕಾಣುತ್ತವೆ. ಗಿರ್ ಹಸುಗಳಲ್ಲೂ ಈ ಕಾಯಿಲೆ ಪತ್ತೆಯಾಗಿದೆ.
*ಶಿರಸಿಯ ಸರ್ಕಾರಿ ಪಶುವೈದ್ಯ ಡಾ. ಗಣೇಶ ನೀಲೇಸರ ಸ್ವತಃ ಬ್ರುಸೆಲ್ಲೊಸಿಸ್ ಕಾಯಿಲೆಗೆ ಸಿಕ್ಕು ಅನೇಕ ಬಾರಿ ನರಳಿದವರು. ಜ್ವರ ತಾರಕಕ್ಕೇರಿ ವಿಭ್ರಮೆಯುಂಟಾದಾಗಿನ ತಮ್ಮ ಅನುಭವವನ್ನು ತುಂಬ ಸ್ವಾರಸ್ಯಕರವಾಗಿ ಅವರು ‘ಡೇರಿ ಡಾಕ್ಟರ್, ಹೋರಿ ಮಾಸ್ಟರ್’ ಪುಸ್ತಕದಲ್ಲಿ ಬರೆದಿದ್ದಾರೆ. ಹಸುಗಳು ಸಾಲುಸಾಲಾಗಿ ಈ ಕಾಯಿಲೆಗೆ ಸಿಕ್ಕು ಒಂದರ ಮೇಲೊಂದು ಗರ್ಭಸ್ರಾವವಾಗಿ ಇಡೀ ಡೇರಿ ಫಾರ್ಮ್ ದಿವಾಳಿ ಆಗಿರುವ ಉದಾಹರಣೆಯೂ ಅವರ ಕಥನದಲ್ಲಿದೆ. ಅದಕ್ಕೆ ‘ಗರ್ಭಸ್ರಾವದ ಬಿರುಗಾಳಿ’ (ಸ್ಟಾರ್ಮ್ ಆಫ್ ಅಬಾರ್ಶನ್) ಎಂಬ ಗುಣವಾಚಕವೇ ಇದೆಯಂತೆ. ಅದು ಹಾಗಿರಲಿ, ‘ಪಂಚಗವ್ಯ ಸೇವನೆ ಮಾಡಿ ಬ್ರುಸೆಲ್ಲೊಸಿಸ್ ಕಾಯಿಲೆಗೆ ಸಿಕ್ಕು ನರಳಿದ ವೈದಿಕರೂ ನನಗೆ ಗೊತ್ತು’ ಎಂದು ಅವರು ಹೇಳುತ್ತಾರೆ.<ref>[http://www.prajavani.net/news/article/2016/09/08/436415.html ಪಂಚಗವ್ಯದಿಂದಲೂ ಬಂದೀತು ಬ್ರುಸೆಲ್ಲಾ] </ref>
 
==ನೋಡಿ==