ಬ್ರುಸೆಲ್ಲೋಸಿಸ್ - ಜಾನುವಾರು ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
==ಜಾನುವಾರುಗಳಲ್ಲಿ ಸೊಂಕು==
*ಕಂದು ರೋಗ (ಕಂದ ರೋಗ) ಮತ್ತು ಮಾಲ್ಟ ಜ್ವರ ಎನ್ನಲಾಗುವ ಈ ರೋಗವು ಹಸು, ಕುದುರೆ, ಹಂದಿ, ನಾಯಿ, ಕುರಿ, ಮೇಕೆ ಅಲ್ಲದೇ ವನ್ಯ ಪ್ರಾಣಿಗಳಾದ ಕಾಡೆಮ್ಮೆ ಮತ್ತು ಜಿಂಕೆಗಳನ್ನೂ ಬಾಧಿಸುತ್ತದೆ. ಹಸುಗಳು ಗರ್ಭಧರಿಸಿದ ಮೂರು ನಾಲ್ಕು ತಿಂಗಳ ಸಮಯದಲ್ಲಿಯೇ ಕರುಹಾಕಿದರೆ ಅಥವಾ ಗರ್ಭಪಾವಾದರೆ 'ಕಂದಹಾಕಿದೆ'ಎನ್ನುವರು. ಅದೊಂದು ರೋಗ ಎನ್ನುವುದು ಪಶುವೈದ್ಯರ ಆಗಮನದ ನಂತರವಷ್ಟೇ ತಿಳಿದಿದೆ. ಪ್ರಾರಂಭಿಕ ಹಂತದಲ್ಲಿ ಈ ಕಾಯಿಲೆಯನ್ನು ಪತ್ತೆ ಮಾಡುವುದು ಬಹಳ ಕಷ್ಟ. ಈ ರೋಗವು ಜಾನುವಾರುಗಳಲ್ಲಿ ಬ್ರುಸೆಲ್ಲಾ ಅಬೋರ್ಟಸ್ ಎಂಬ ರೋಗಾಣುವಿನಿಂದ ಬರುತ್ತದೆ. ಲೈಂಗಿಕವಾಗಿ ಪ್ರಬುದ್ಧತೆ ಹೊಂದಿದ ರಾಸುಗಳಲ್ಲಿ ರೋಗಲಕ್ಷಣಗಳು ಕಂಡು ಬರುತ್ತವೆ. ರೋಗಗ್ರಸ್ಥ ಹಸುಗಳು ಮೊದಲು ಕಂದು ಹಾಕುವುದು (ಗರ್ಭಪಾತ) ಇತ್ಯಾದಿ ಲಕ್ಷಣಗಳನ್ನು ತೋರಿಸಿದರೂ ನಂತರ ಸಾಮಾನ್ಯವಾಗಿಯೇ ಕರು ಹಾಕಬಹುದು. ಆದರೆ ಈ ಕರುಗಳು ರೋಗ ತಗಲಿಸಿಕೊಂಡೇ ಜನಿಸಬಹುದು. ಇಂತಹ ಕರುಗಳು ಪ್ರೌಢಾವಸ್ಥೆಗೆ ಬರುವವರೆಗೂ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಗರ್ಭ ಧರಿಸಿದಾಗ ಮಾತ್ರ ರೋಗಾಣುಗಳು ಬೆಳವಣಿಗೆ ಹೊಂದುತ್ತವೆ.
[[File:BrucellaMelitensis.jpg|thumb|ಅಪಾಯಕಾರಿ ಬ್ರುಸೆಲ್ಲಾ ಮೆಲಿಟೆನ್ಸಿಸ್-BrucellaMelitensis]]
 
*ಸೋಂಕು ಹೊಂದಿರುವ ಹೋರಿಗಳ ವೀರ್ಯದಲ್ಲಿ ರೋಗಾಣುಗಳು ಇರುತ್ತಿದ್ದು ಇವೂ ರೋಗಪ್ರಸಾರದಲ್ಲಿ ಮಹತ್ವದ ಪಾತ್ರ ಹೊಂದಿವೆ. ಕೆಲವು ಜಾನುವಾರುಗಳು ರೋಗದ ಲಕ್ಷಣ ತೋರಿಸದಿದ್ದರೂ ರೋಗವಾಹಕಗಳಾಗಿ ಕೆಲಸ ಮಾಡಬಲ್ಲವು.<ref>http://www.prajavani.net/news/article/2016/09/13/437483.html</ref>