ಬ್ರುಸೆಲ್ಲೋಸಿಸ್ - ಜಾನುವಾರು ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨ ನೇ ಸಾಲು:
==ಪೀಠಿಕೆ==
*ಬ್ರುಸೆಲ್ಲೊಸೊಸ್ ಎನ್ನುವ ರೋಗಕ್ಕೆ, ಬ್ಯಾಂಗ್ ರೋಗ, ಕ್ರಿಮೀಯನ್ ಜ್ವರ, ಗಿಬ್ರಾಲ್ಟರ್ ಜ್ವರ, ಮಾಲ್ಟಾ ಜ್ವರ, ಮಾಲ್ಟೀಸ್ ಜ್ವರ, ಮೆಡಿಟರೇನಿಯನ್ ಜ್ವರ, ರಾಕ್ ಜ್ವರ, ಅಥವಾ ಮಾಲ್ಟ ಜ್ವರ ಎಂಬ ಹೆಸರುಗಳಿವೆ. ಸೋಂಕಿತ ಪ್ರಾಣಿಗಳ ಪಾಶ್ಚರೀಕರಿಸದ ಹಾಲು ಸೇವನೆಯಿಂದ ಅಥವಾ ಸರಿಯಾಗಿ ಬೇಯಿಸದ ಮಾಂಸದಿಂದ , ಅಥವಾ ನಿಕಟ ಸಂಪರ್ಕ/ಅವು ಸ್ರವಿಸುವ ದ್ರವದಿಂದ ಉಂಟಾಗುವ ಅತ್ಯಂತ ಸಾಂಕ್ರಾಮಿಕ ಪ್ರಾಣಿಜನ್ಯ (ಜೂನೋಸಿಸ್) ಸೊಂಕು ಖಾಯಿಲೆ.
[[File:Coxiella burnetii 01.JPG|thumb|Coxiella burnetii 01ಚಲಿಸದ ದಂಡಾಕಾರದ ರೂಪವಿರುವ(ಕೊಕೊಬ್ಯಸಿಲಿ) ಬ್ಯಾಕ್ಟೀರಿಯಾಗಳು; ಇದು ಅದೇ ಜಾತಿಯ ಕೊಕ್ಸಿಲ್ಲ ಬರ್ನೆಟಿಐ]]
 
*ಬ್ರುಸೆಲ್ಲಾ ಜಾತಿಯು ಸಣ್ಣ, ಗ್ರಾಮ್-ನಕಾರಾತ್ಮಕ, ಚಲಿಸದ ದಂಡಾಕಾರದ ರೂಪವಿರುವ(ಕೊಕೊಬ್ಯಸಿಲಿ) ಬ್ಯಾಕ್ಟೀರಿಯಾಗಳು. ಅವು ಸಾಮಾನ್ಯವಾಗಿ ಪ್ರಾಣಿಗಳು ಮತ್ತು ಮಾನವರಿಗೆ ಜೀವಮಾನವಿಡೀ ಮುಂದುವರಿಯುವ,ಅಥವಾ ಕಾಡುವ ದೀರ್ಘಕಾಲದ ಖಾಯಿಲೆಯಾಗಲು ಕಾರಣವಾಗುತ್ತದೆ, ನಾಲ್ಕುಬಗೆಯ ಅಣುಜೀವಿಗಳು ಮನುಷ್ಯರಿಗೆ ಸೋಂಕು ಉಂಟು ಮಾಡುತ್ತವೆ. ಅವು ಅನುಮೋದಕ ಜೀವಕೋಶಗಳ ಒಳಗಿನ(ಇನ್‍ಟ್ರಸೆಲ್ಯಲರ್) ಪರಾವಲಂಬಿಗಳು- ಕ್ರಿಯಾಶೀಲವಾಗಿರುತ್ತವೆ. ನಾಲ್ಕುವಿಧ: ೧.ಬಿ ಗರ್ಭಪಾತಕ, ೨.ಬಿ ಕಾನಿಸ್, ೩.ಬಿ ಮೆಲಿಟಾನ್ಸಿಸ್ ಮತ್ತು ೪.ಬಿ ಸುಯಿಸ್(suis). ಬಿ ಗರ್ಭಪಾತಕ, ಬಿ ಮೆಲಿಟಾನ್ಸಿಸ್ ಕಡಿಮೆ ವಿಷಪೂರಿತ; ಅದು ಪ್ರಮುಖವಾಗಿ ರಾಸುಗಳ ರೋಗ. ಬಿ ಕಾನಿಸ್ ನಾಯಿಗಳಿಗೆ ಸೋಂಕು ತರುವುದು. ಬಿ ಮೆಲಿಟಾನ್ಸಿಸ್ ಅತ್ಯಂತ ವಿಷಪೂರಿತ ಮತ್ತು ಆಕ್ರಮಣಕಾರಿ ಅಣುಜೀವಿ. ಇದು ಸಾಮಾನ್ಯವಾಗಿ ಆಡುಗಳನ್ನು ಆಕ್ರಮಿಸುವುದು ಮತ್ತು ಕೆಲವೊಮ್ಮೆ ಕುರಿಗಳಿಗೂ ಸೋಂಕು ತರುವುದು. ಬಿ-ಸುಯಿಸ್ ಮಧ್ಯಂತರ ವಿಷಮತೆಯೊಂದಿಗಿ ವಿಷಾಣು ಮತ್ತು ಮುಖ್ಯವಾಗಿ ಹಂದಿಗಳು ಸೋಂಕು ತರುವುದು. ಸೋಂಕಿನ ಲಕ್ಷಣಗಳು ಅಪಾರ ಬೆವರು ಮತ್ತು ಸಂಧಿ ಮತ್ತು ಸ್ನಾಯುಗಳ ತೀವ್ರ ನೋವು. ಬ್ರುಸೆಲ್ಲೊಸೊಸ್ ಸೋಂಕು 20 ನೇ ಶತಮಾನದಲ್ಲಿ ಪ್ರಾಣಿಗಳು ಮತ್ತು ಮಾನವರಲ್ಲಿ ಗುರುತಿಸಲ್ಪಟ್ಟಿದೆ.<ref>http://www.cdc.gov/brucellosis/transmission/index.html</ref><ref>[http://www.webmd.com/a-to-z-guides/brucellosis-symptoms-treatment brucellosis-symptoms-treatment]</ref>
 
==ಜಾನುವಾರುಗಳಲ್ಲಿ ಸೊಂಕು==
*ಕಂದು ರೋಗ (ಕಂದ ರೋಗ) ಮತ್ತು ಮಾಲ್ಟ ಜ್ವರ ಎನ್ನಲಾಗುವ ಈ ರೋಗವು ಹಸು, ಕುದುರೆ, ಹಂದಿ, ನಾಯಿ, ಕುರಿ, ಮೇಕೆ ಅಲ್ಲದೇ ವನ್ಯ ಪ್ರಾಣಿಗಳಾದ ಕಾಡೆಮ್ಮೆ ಮತ್ತು ಜಿಂಕೆಗಳನ್ನೂ ಬಾಧಿಸುತ್ತದೆ. ಹಸುಗಳು ಗರ್ಭಧರಿಸಿದ ಮೂರು ನಾಲ್ಕು ತಿಂಗಳ ಸಮಯದಲ್ಲಿಯೇ ಕರುಹಾಕಿದರೆ ಅಥವಾ ಗರ್ಭಪಾವಾದರೆ 'ಕಂದಹಾಕಿದೆ'ಎನ್ನುವರು. ಅದೊಂದು ರೋಗ ಎನ್ನುವುದು ಪಶುವೈದ್ಯರ ಆಗಮನದ ನಂತರವಷ್ಟೇ ತಿಳಿದಿದೆ. ಪ್ರಾರಂಭಿಕ ಹಂತದಲ್ಲಿ ಈ ಕಾಯಿಲೆಯನ್ನು ಪತ್ತೆ ಮಾಡುವುದು ಬಹಳ ಕಷ್ಟ. ಈ ರೋಗವು ಜಾನುವಾರುಗಳಲ್ಲಿ ಬ್ರುಸೆಲ್ಲಾ ಅಬೋರ್ಟಸ್ ಎಂಬ ರೋಗಾಣುವಿನಿಂದ ಬರುತ್ತದೆ. ಲೈಂಗಿಕವಾಗಿ ಪ್ರಬುದ್ಧತೆ ಹೊಂದಿದ ರಾಸುಗಳಲ್ಲಿ ರೋಗಲಕ್ಷಣಗಳು ಕಂಡು ಬರುತ್ತವೆ. ರೋಗಗ್ರಸ್ಥ ಹಸುಗಳು ಮೊದಲು ಕಂದು ಹಾಕುವುದು (ಗರ್ಭಪಾತ) ಇತ್ಯಾದಿ ಲಕ್ಷಣಗಳನ್ನು ತೋರಿಸಿದರೂ ನಂತರ ಸಾಮಾನ್ಯವಾಗಿಯೇ ಕರು ಹಾಕಬಹುದು. ಆದರೆ ಈ ಕರುಗಳು ರೋಗ ತಗಲಿಸಿಕೊಂಡೇ ಜನಿಸಬಹುದು. ಇಂತಹ ಕರುಗಳು ಪ್ರೌಢಾವಸ್ಥೆಗೆ ಬರುವವರೆಗೂ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಗರ್ಭ ಧರಿಸಿದಾಗ ಮಾತ್ರ ರೋಗಾಣುಗಳು ಬೆಳವಣಿಗೆ ಹೊಂದುತ್ತವೆ.