ತ್ರಿಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
೨೭ ನೇ ಸಾಲು:
೨೦೧೨ ರ ಹಿಂದೆ ತ್ರಿಪುರಾದಲ್ಲಿ ಧಲಾಯ್, ಉತ್ತರ ತ್ರಿಪುರ, ದಕ್ಷಿಣ ತ್ರಿಪುರ, ಮತ್ತು ಪಶ್ಚಿಮ ತ್ರಿಪುರ ಎಂಬ ನಾಲ್ಕು ಜಿಲ್ಲೆಗಳಿದ್ದವು. ಜನವರಿ, ೨೦೧೨ ರಲ್ಲಿ ಖೊವಾಯ್, ಉನಾಕೋಟಿ, ಸಿಪಾಹಿ ಜಾಲಾ, ಮತ್ತು ಗೋಮತಿ ಎಂಬ ೪ ಹೊಸ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಅಗರ್ತಲಾ ರಾಜಧಾನಿ ಹಾಗೂ ಅತಿದೊಡ್ಡಪಟ್ಟಣ. ಬಧಾರ್ ಘಾಟ್, ಧರ್ಮನಗರ್, ಜೋಗೇಂದ್ರ ನಗರ್, ಕೈಲಾಶ್ ಶಹರ್, ಪ್ರತಾಪ್ ಘಡ್, ಉದಯ್ ಪುರ್, ಅಮರ್ ಪುರ್, ಭೇಲೋನಿಯಾ, ಗಾಂಧಿ ಗ್ರಾಮ್, ಇಂದ್ರ ನಗರ್, ಕುಮಾರ್ ಘಾಟ್, ರಾಣಿರ್ ಬಜಾರ್, ಸೋನಾಮುರಾ, ತೇಲಿಯಾಮುರಾ.
==ಭೂಗೋಳ ಹಾಗೂ ಹವಾಮಾನ==
ಈಶಾನ್ಯ [[ಭಾರತ]]ದ ಅಸ್ಸಾಮ್, ಅರುಣಾಚಲಪ್ರದೇಶ್, ಮಣಿಪುರ್, [[ಮೇಘಾಲಯ]], ಮಿಜೊರಂ, ನಾಗಾಲ್ಯಂಡ್, ಮತ್ತು ತ್ರಿಪುರ ರಾಜ್ಯಗಳನ್ನು ಜೊತೆಜೊತೆಯಾಗಿ ಸಪ್ತ ಸೋದರಿಯರು ಎನ್ನುತ್ತಾರೆ. ತ್ರಿಪುರದ ಒಟ್ಟು ವಿಸ್ತೀರ್ಣ ೪,೦೫೦.೮೬ ಚದರ ಮೈಲಿಗಳು. ಉತ್ತರದಿಂದ ದಕ್ಷಿಣಕ್ಕೆ ಗರಿಷ್ಠ ದೂರ ೭೦ ಮೈಲಿಗಳು. ಪೂರ್ವದಿಂದ ಪಶ್ಚಿಮಕ್ಕೆ ೧೧೪ ಮೈಲಿಗಳು. ಅಸ್ಸಾಮ್ ನ ಕರೀಮ್ ಗಂಜ್ ಜಿಲ್ಲೆ ಮತ್ತು ಮಿಜೊರಂನ ಐಜ್ವಾಲ್ ಜಿಲ್ಲೆಗಳಿಂದ ತ್ರಿಪುರಾಕ್ಕೆ ಹೋಗಲು ದಾರಿಗಳಿವೆ. ಐದು ಬೆಟ್ಟಗಳ ಸಾಲುಗಳು ರಾಜ್ಯದಲ್ಲಿ ಉತ್ತರದಿಂದ ಕಕ್ಷಿಣಕ್ಕೆ ಸಾಗುತ್ತವೆ. ಈ ಬೆಟ್ಟಗಳ [[ಹೆಸರು]] : (ಪಶ್ಚಿಮದಿಂದ ಪೂರ್ವಕ್ಕೆ)-ಬೋರೋಮುರಾ, ಅಥರಾಮುರಾ, ಲೋಂಗ್, ಥರೈ, ಶಾಖಾನ್, ಜಾಮ್ ಪ್ಯು. ಇವುಗಳ ಮಧ್ಯೆ ಅಗರ್ತಲಾ-ಉದಯಪುರ್, ಖೋವಾಇ-ತೆಲಿಯಾಮುರಾ, ಕಮಾಲ್ ಪುರಾ, ಅಂಬಾಸಾ, ಕೈಲಾಸ್ ಶಹರ್-ಮಾನು ಧರ್ಮನಗರ್-ಕಾಂಚನ್ಪುರ್ ಕಣಿವೆಗಳಿವೆ. ಜಾಮ್ ಪ್ಯು ಶ್ರೇಣಿಯಲ್ಲಿರುವ ೯೩೯ ಮೀಟರ್ (೩,೦೮೧ ಅಡಿ) ಎತ್ತರದ 'ಬೆಟ್ಲಿಂಗ್ ಶಿಬ್' ತ್ರಿಪುರದ ಅತಿ ಎತ್ತರದ ಬೆಟ್ಟ. ರಾಜ್ಯದ ತುಂಬಾ ಈಶ್ರೇಣಿಗೆ ಸೇರದ ಒಂಟಿಯಾಗಿರುವ ಹಲವಾರು ಬೆಟ್ಟಗಳೂ ಇವೆ. ಇವುಗಳಿಗೆ 'ತಿಲ್ಲಾ ' ಎಂದು ಹೆಸರು. ಕಣಿವೆಗಳ ನಡುವೆ ಇರುವ ಸಮೃದ್ಧ ಕೃಷಿ ಭೂಮಿಗೆ 'ಲುಂಗಾ' ಎಂಬ ಹೆಸರಿದೆ. ಕಣಿವೆಗಳ ನಡುವೆ ಹರಿಯುವ ಹಲವಾರು ನದಿಗಳು ಬಾಂಗ್ಲಾದೇಶಕ್ಕೆ[[ಬಾಂಗ್ಲಾದೇಶ]]ಕ್ಕೆ ಸಾಗುತ್ತವೆ. ಗುಮ್ತಿ ಪಶ್ಚಿಮಕ್ಕೆ ಹರಿದರೆ, ಕೊವ್ರಾ, ಧಾಲೃ, ಮಾನು, ಜುರಿ, ಲಾಂಗಾಯಿ, ಉತ್ತರಕ್ಕೆ ಹರಿಯುತ್ತವೆ. ಮುಹುರಿ, ಮತ್ತು ಫೆನಿ, ನೈಋತ್ಯ ದಿಕ್ಕಿಗೆ ಹರಿಯುತ್ತವೆ.
ಚಳಿಗಾಲ : ಡಿಸೆಂಬರ್ ನಿಂದ ಫೆಬ್ರವರಿ ತಿಂಗಳ ನಡುವೆ.
ಬೇಸಗೆ : ಮಾರ್ಚ್-ಏಪ್ರಿಲ್.
"https://kn.wikipedia.org/wiki/ತ್ರಿಪುರ" ಇಂದ ಪಡೆಯಲ್ಪಟ್ಟಿದೆ