ಕಾವೇರಿ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬೨ ನೇ ಸಾಲು:
==ಪರಿಹಾರ==
*ಸರ್ವೋಚ್ಚ ನ್ಯಾಯಾಲಯವು ಪ್ರತಿದಿನವೂ 15 ಸಹಸ್ರ ಕ್ಯುಸೆಕ್‌ ನೀರನ್ನು ಬಿಡುವಂತೆ ಆದೇಶಿಸಿರುವುದನ್ನು ನಮ್ಮ ಸಮಸ್ಯೆ ಎಂದು ನಾವು ಭಾವಿಸುತ್ತಿದ್ದೇವೆ. ಆದರೆ ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಯಿದು: ಕರ್ನಾಟಕದಲ್ಲಿ ಬೀಳುವ ಮಳೆಯ ಮೂಲಕ ಕಾವೇರಿ ಮತ್ತು ಅದರ ಉಪನದಿಗಳಲ್ಲಿ ಸಂಗ್ರಹವಾಗುವ ನೀರಿನ ಮೇಲೆ ಕನ್ನಡಿಗರಿಗೆ ಮೊದಲ, ಸಮಗ್ರ ಮತ್ತು ನಿರಂಕುಶ ಹಕ್ಕು ಇದೆ ಎನ್ನುವುದನ್ನು ನ್ಯಾಯಾಲಯಗಳಾಗಲಿ, ನ್ಯಾಯಮಂಡಳಿ ಯಾಗಲಿ (ಟ್ರಿಬ್ಯುನಲ್) ಅಥವಾ ಕೇಂದ್ರ ಸರ್ಕಾರವಾಗಲಿ ಒಪ್ಪುವುದಿಲ್ಲ. ಆದರೆ ನಮ್ಮ ವಾದಗಳನ್ನು ಈ ಅರಿವಿನ ಆಧಾರದ ಮೇಲೆಯೇ ಮಾಡುತ್ತಿದ್ದೇವೆ. ಬೇರೆಯವರು ನಮ್ಮ ವಾದವನ್ನು ಒಪ್ಪದಿರುವುದಕ್ಕೆ ಇರುವ ಕಾರಣವು ಸರಳವಾದುದು.
*ಓದುಗರಲ್ಲಿ ನನ್ನ ಸರಳ ಸಲ್ಲಿಕೆಯೆಂದರೆ, ನೀರು ಹಂಚಿಕೆಗೆ ಸಂಬಂಧಿಸಿದ ನ್ಯಾಯಸಿದ್ಧಾಂತವನ್ನು, ನೀರಿನ ಹಕ್ಕುಗಳಿಗೆ ಸಂಬಂಧಿಸಿದ ನಮ್ಮ ಗ್ರಹಿಕೆಗಳನ್ನು ಮರುಚಿಂತನೆ ಮಾಡಬೇಕಾದ ಸವಾಲನ್ನು ಎದುರಿಸುತ್ತಿದ್ದೇವೆ.<ref>[http://www.prajavani.net/news/article/2016/09/09/436633.html ನೀರಿನ ಹಕ್ಕು: ಮರುಚಿಂತನೆಯ ಸವಾಲು
9 Sep, 2016]</ref>
*ಮೋಹನ ಕಾತರಕಿ ಕಾನೂನು ತಜ್ಜ್ಞರ ಅಭಿಪ್ರಾಯ:
*ಪ್ರ: ಕರ್ನಾಟಕದ ಕಾನೂನು ತಂಡ ರಾಜ್ಯದಲ್ಲಿ ಎದುರಾಗಿರುವ ಮಳೆಯ ಕೊರತೆಯ ಕುರಿತು ಸುಪ್ರೀಂ ಕೋರ್ಟ್‌ಗೆ ಸಮರ್ಥವಾಗಿ ಮನವರಿಕೆ ಮಾಡಲಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆಯಲ್ಲ?
೧೬೯ ನೇ ಸಾಲು:
 
*ನ್ಯಾಯಮೂರ್ತಿಗಳು ಮೇಲುಸ್ತುವಾರಿ ಸಮಿತಿಗೆ ಸೂಚಿಸಬಹುದು ಎಂದು ಭಾವಿಸಿ, ಐದು ದಿನಗಳ ಕಾಲ 10,000 ಕ್ಯೂಸೆಕ್‌ ನೀರು ಬಿಡಲು ಒಪ್ಪಿಕೊಂಡಿದ್ದೆವು. ನ್ಯಾಯಮೂರ್ತಿಗಳು 10 ದಿನಗಳ ಕಾಲ ನಿತ್ಯವೂ 15,000 ಕ್ಯೂಸೆಕ್‌ ನೀರು ಬಿಡಲು ಸೂಚಿಸಿದರು. 2012ರ ಸೆಪ್ಟೆಂಬರ್‌ನಲ್ಲೂ ಇದೇ ಸ್ಥಿತಿ ಎದುರಾಗಿತ್ತು. ಆಗ ನಾವು 8 ದಿನಗಳ ಕಾಲ 10,000 ಕ್ಯೂಸೆಕ್‌ ನೀರು ಬಿಡಲು ಒಪ್ಪಿದ್ದರಿಂದ ನ್ಯಾಯಾಲಯ ಸಮ್ಮತಿ ಸೂಚಿಸಿ, ಕಾವೇರಿ ನದಿ ಪ್ರಾಧಿಕಾರಕ್ಕೆ ಪ್ರಕರಣದ ವಿಚಾರಣೆಯನ್ನು ಒಪ್ಪಿಸಿತ್ತು. ಕಾನೂನು ತಂಡ ಈಗಲೂ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದೆ. ತಜ್ಞರು ಅಧ್ಯಯನ ನಡೆಸಿ ಕಾನೂನು ತಂಡ ನಿರ್ವಹಿಸಿರುವ ಜವಾಬ್ದಾರಿಯ ಸತ್ಯಾಸತ್ಯತೆ ಅರಿಯಬಹುದು.
*'''1924ರ ಒಪ್ಪಂದದ ಪ್ರಕಾರ ತಮಿಳುನಾಡಿಗೆ ವಾರ್ಷಿಕ 380 ಟಿಎಂಸಿ ಅಡಿ ನೀರನ್ನು ನೀಡುತ್ತಿದ್ದ ಕರ್ನಾಟಕದ ಪರ ನ್ಯಾಯಮಂಡಳಿ ಎದುರು ವಾದ ಮಂಡಿಸಿರುವ ಇದೇ ತಂಡ ಆ ಪ್ರಮಾಣವನ್ನು 192 ಟಿಎಂಸಿ ಅಡಿಗೆ ಇಳಿಸಿದೆ. 1974ರವರೆಗೂ ಈ ಕುರಿತು ಧ್ವನಿಯೇ ಕೇಳಿ ಬಂದಿರಲಿಲ್ಲ. ಆ ಐತಿಹಾಸಿಕ ಒಪ್ಪಂದವನ್ನು ರದ್ದುಪಡಿಸಿದ ಹೆಗ್ಗಳಿಕೆ ಈ ತಂಡದ್ದಾಗಿದೆ. ಅಲ್ಲದೆ, ತಮಿಳುನಾಡಿನ ಪ್ರಮಾಣವನ್ನು ಇನ್ನೂ 40 ಟಿಎಂಸಿ ಅಡಿಗೆ ತಗ್ಗಿಸುವಂತೆ ಮನವಿ ಸಲ್ಲಿಸಿ ಹೋರಾಟ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ, ಕೃಷ್ಣಾ ಕಣಿವೆಯ ಆಲಮಟ್ಟಿ ಜಲಾಶಯದ ಎತ್ತರವನ್ನು ಮೊದಲು 512 ಅಡಿಯಿಂದ 519.6ಕ್ಕೂ, ನಂತರ 524ಕ್ಕೂ ಹೆಚ್ಚಿಸುವಂತೆ ಸಮರ್ಥ ವಾದ ಮಂಡಿಸಿದ್ದೂ ಈ ತಂಡವೇ ಎಂಬುದು ಉಲ್ಲೇಖನೀಯ ಅಲ್ಲವೇ? ಕೃಷ್ಣಾ ನೀರಿನ ಬಳಕೆಯನ್ನು 734 ಟಿಎಂಸಿ ಅಡಿಗೆ ಹೆಚ್ಚಿಸಲಾಗಿದೆ. ಅದರಲ್ಲಿ 173 ಟಿಎಂಸಿ ಅಡಿ ಹೆಚ್ಚುವರಿ ಬಳಕೆಗೂ ಅನುಮತಿ ಪಡೆಯಲಾಗಿದೆ.'''
 
*ಪ್ರ: ಮಹಾದಾಯಿ ಆಯಿತು ಈಗ ಕಾವೇರಿಯ ಸರದಿ. ಇದೇ ರೀತಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಇದೆ. ಇದಕ್ಕೆ ಕೊನೆ ಎಂಬುದೇ ಇಲ್ಲವೇ?
೧೭೮ ನೇ ಸಾಲು:
*ಉ: ನೀರನ್ನು ಎಲ್ಲ ರಾಜ್ಯಗಳೂ ಹಂಚಿಕೊಳ್ಳಬೇಕು ಎಂದು ಜಲ ವಿವಾದ ಕಾಯ್ದೆ ಹೇಳುತ್ತದೆ. ಎಷ್ಟು ಪಾಲು ದೊರೆಯಬೇಕು ಎಂಬುದಕ್ಕೆ ಆಯಾ ಜಲಾನಯನ ಪ್ರದೇಶ, ಹಂಚಿಕೆಗೆ ಮೊದಲು ಮಾಡಲಾಗುತ್ತಿದ್ದ ಬಳಕೆಯ ಪ್ರಮಾಣ, ಜನಸಂಖ್ಯೆ, ಮಳೆಯ ಪ್ರಮಾಣವನ್ನೂ ಪರಿಗಣಿಸಲಾಗುತ್ತದೆ. ಇತಿಹಾಸದಲ್ಲಿ ಬಳಕೆ ಮಾಡಿಕೊಳ್ಳಲಾದ ಪ್ರಮಾಣವೂ ನದಿ ಪಾತ್ರದ ಮೇಲ್ಭಾಗದ ರಾಜ್ಯಗಳ ಹಂಚಿಕೆಯನ್ನು ಕಡಿಮೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
* ಪ್ರ: ಜಲವಿವಾದ ಕಾಯ್ದೆಗಳಲ್ಲಿ ದೋಷ ಇದೆಯೇ? ಇದ್ದರೆ ಅವುಗಳಿಗೆ ತಿದ್ದುಪಡಿ ತರಬೇಕೇ?
*ಉ: '''ನೀರು ಹಂಚಿಕೆ ಮಾಡುವಾಗ ಹೊಸ ಬಳಕೆದಾರರು ಮತ್ತು ಹಳೆಯ ಬಳಕೆದಾರರನ್ನ ಪರಿಗಣಿಸಲಾಗುತ್ತದೆ. ನದಿಯ ಮೇಲ್ಭಾಗದ ರಾಜ್ಯ ಅಣೆಕಟ್ಟೆ ಕಟ್ಟಿ ನೀರು ಬಳಸಲು ಹೋದಾಗ ಆ ರಾಜ್ಯವನ್ನು ಹೊಸ ಬಳಕೆದಾರ ಎಂದೇ ಪರಿಗಣಿಸಲಾಗುತ್ತದೆ. ಸಂಸತ್‌ನಲ್ಲಿ ಈ ಕುರಿತು ಸೂಕ್ತ ಕಾಯ್ದೆ ರಚಿಸಿದರೆ ಮಾತ್ರ ಹೊಸ ವ್ಯಾಖ್ಯಾನ ದೊರೆಯಲು ಸಾಧ್ಯ. ಅಲ್ಲಿಯವರೆಗೆ ನ್ಯಾಯಾಲಯಗಳು ಸಮರ್ಪಕವಾಗಿ ನೀರನ್ನು ಹಂಚಿಕೆ ಮಾಡುವುದು ಕಷ್ಟಕರ. ರಾಷ್ಟ್ರೀಯ ಜಲ ನೀತಿ ಜಾರಿಯಾದರೆ ಮಾತ್ರ ನ್ಯಾಯ ದೊರೆಯಲು ಸಾಧ್ಯ.'''<ref>[http://www.prajavani.net/news/article/2016/09/08/436461.htmlವಿವಾದ ನಿವಾರಣೆಗೆ ರಾಷ್ಟ್ರೀಯ ಜಲ ನೀತಿ ಅಗತ್ಯ
ಸಿದ್ದಯ್ಯ ಹಿರೇಮಠ;8 Sep, 2016]</ref>
 
==ನೋಡಿ==
*[[ಭಾರತದ ನದಿಗಳು]]
"https://kn.wikipedia.org/wiki/ಕಾವೇರಿ_ನದಿ" ಇಂದ ಪಡೆಯಲ್ಪಟ್ಟಿದೆ