ಗ್ರಾನೈಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ ಸೇರ್ಪಡೆ
೧ ನೇ ಸಾಲು:
ಗ್ರಾನೈಟ್ - ಸಾಮಾನ್ಯವಾಗಿ ಎಲ್ಲೆಲ್ಲೂ ದೊರೆಯುವ [[ಅಗ್ನಿಶಿಲೆ]], ನಮ್ಮ ಸುತ್ತಮುತ್ತ ಕಾಣುವ ಬಿಳುಪು ಅಥವಾ ಕೆಂಪು ಛಾಯೆಯ ಬಂಡೆಗಳಾಕಾರದಲ್ಲಿ ನೆಲದ ಮೇಲೆ ಎದ್ದು ನಿಂತಿರುವ ಕಲ್ಲು. ಇದರ ಚಪ್ಪಡಿಗಳನ್ನು ಎಬ್ಬಿಸುವುದಕ್ಕೆ ಬೆಂಕಿಯನ್ನು ಉಪಯೋಗಿಸುವುದರಿಂದ ಇದಕ್ಕೆ ಸುಟ್ಟುಗಲ್ಲು ಎಂಬ ಹೆಸರು ವಾಡಿಕೆಯಲ್ಲಿದೆ.
[[ಚಿತ್ರ:Fjæregranitt3.JPG|thumb|ಗ್ರಾನೈಟ್ ಶಿಲೆ]]
[[ಚಿತ್ರ:IndianGranite.jpg|thumb|ಗ್ರಾನೈಟ್ ಶಿಲೆ- ಹತ್ತಿರದಿಂದ ನೋಡಿದಾಗ]]
==ರಚನೆ==
ಈ ಬಗೆಯ ಕಲ್ಲು ಭೂಮಿಯ ಒಳಗೆ ಅತಿ ಉಷ್ಣದ ಫಲವಾಗಿ ರೂಪುಗೊಳ್ಳುವುದರಿಂದ ಹರಳು ಹರಳಾಗಿರುವುದು. ಸಾಮಾನ್ಯವಾಗಿ ಆರ್ಥೋಕ್ಲೇಸ್, ಪ್ಲೇಜಿಯೋಕ್ಲೇಸ್, ಕ್ವಾಟ್ರ್ಸ್, ಹಾರ್ನ್‍ಬ್ಲೆಂಡ್ ಮತ್ತು ಬಯೊಟೈಟ್ ಖನಿಜಗಳು. ಗ್ರಾನೈಟಿನಲ್ಲಿ ಮುಖ್ಯವಾಗಿ ಸೇರಿರುತ್ತದೆ. ಅದಕ್ಕೂ ಕಡಿಮೆ ಪ್ರಮಾಣದಲ್ಲಿ ಮ್ಯಾಗ್ನೆಟೈಟ್, ಅಪೆಟೈಟ್, ಗಾರ್ನೆಟ್‍ಗಳೂ ಇರಬಹುದು. ಕಪ್ಪು ಬಣ್ಣದ ಖನಿಜಗಳಾದ ಹಾರ್ನ್‍ಬ್ಲೆಂಡ್ ಬಯೋಟೈಟ್ (ಕರಿ ಅಭ್ರಕ) ಇವು ಹೆಚ್ಚಿದ್ದರೆ ಕಲ್ಲು ಕಪ್ಪು ಛಾಯೆ ಪಡೆಯುತ್ತದೆ. ಫೆಲ್ಡ್ಸ್‍ಪಾರ್ ಖನಿಜ ಕೆಂಪು ಬಣ್ಣದ್ದಾಗಿದ್ದರೆ ಕಲ್ಲಿಗೆ ಕೆಂಪು ಛಾಯೆ ಬರುವುದು. ರಾಮನಗರ ಬಳಿ ದೊರೆಯುವ ಗ್ರಾನೈಟ್ ಕಲ್ಲು ತಿಳಿ ಬೂದು ಬಣ್ಣದ್ದು.
"https://kn.wikipedia.org/wiki/ಗ್ರಾನೈಟ್" ಇಂದ ಪಡೆಯಲ್ಪಟ್ಟಿದೆ