"ಮರಾಠಾ ಸಾಮ್ರಾಜ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಇನ್ನೊಂದು ಪ್ಯಾರಾ ನುಡಿಬದಲು
(ಇನ್ನೊಂದು ಪ್ಯಾರಾ ನುಡಿಬದಲು)
ಚು (ಇನ್ನೊಂದು ಪ್ಯಾರಾ ನುಡಿಬದಲು)
ಬಾಳಿನುದ್ದಕ್ಕೂ [[ಬಿಜಾಪುರ]]ದ ಆದಿಲಶಾಹ ಮತ್ತು [[ಮುಘಲ್]] ಚಕ್ರವರ್ತಿ [[ಔರಂಗಜೇಬ]]ರೊಂದಿಗೆ [[ಗೆರಿಲ್ಲಾ ಹೋರಾಟ]] ಮತ್ತು ಅನೆಕ ಸಾಹಸಗಳ ಮೂಲಕ [[ರಾಯಗಢ]]ವನ್ನು ರಾಜಧಾನಿಯಾಗಿಟ್ಟುಕೊಂಡ ಸ್ವತಂತ್ರ ಮರಾಠಾ ರಾಜ್ಯವೊಂದನ್ನು ಸ್ಥಳೀಯ ರಾಜ [[ಶಿವಾಜಿ]]ಯು ೧೬೭೪ ರಲ್ಲಿ ಸ್ಥಾಪಿಸಿದನು. ಶಿವಾಜಿಯು ವಿಶಾಲ ರಾಜ್ಯವನ್ನು ಬಿಟ್ಟು ತೀರಿಕೊಂಡನು. ಮುಘಲರು ಆಕ್ರಮಣಮಾಡಿದರಾದರೂ ೧೬೮೨ರಿಂದ ೧೭೦೭ ರವರೆಗಿನ ೨೫ ವರ್ಷಗಳಷ್ಟು ದೀರ್ಘವಾದ ಯುದ್ಧವು ಫಲನೀಡಲಿಲ್ಲ. [[ಶಿವಾಜಿ]]ಯ ಮೊಮ್ಮಗ [[ಶಾಹು]]ವು ೧೭೪೯ ರವರೆಗೆ ಚಕ್ರವರ್ತಿಯಾಗಿ ಆಳಿದನು. ತನ್ನ ಆಳಿಕೆಯ ಕಾಲದಲ್ಲಿ ಶಾಹುವು [[ಪೇಶ್ವೆ]] ( ಅಂದರೆ ಪ್ರಧಾನಮಂತ್ರಿ) ಯನ್ನು ಸರಕಾರದ ಮುಖ್ಯಸ್ಥನನ್ನಾಗಿ ನೇಮಿಸಿದನು. ಶಾಹುವಿನ ಮರಣಾನಂತರ ೧೭೪೯ ರಿಂದ ೧೭೬೧ ರವರೆಗೆ ಪೇಶ್ವೆಗಳು ವಸ್ತುಶಃ ಸಾಮ್ರಾಜ್ಯದ ಅಧಿಪತಿಗಳೇ ಆದರು. ಈ ಅವಧಿಯಲ್ಲಿ ಶಿವಾಜಿಯ successors [[ಸತಾರಾ]]ದ ತಮ್ಮ ನೆಲೆಯಿಂದ ಹೆಸರಿಗೆ ಮಾತ್ರ ರಾಜರಾಗಿ ಮುಂದುವರೆದರು. [[ಭಾರತೀಯ ಉಪಖಂಡ]]ದ ಬಲುಭಾಗವನ್ನು ವ್ಯಾಪಿಸಿ , ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ [[ಬ್ರಿಟಿಷ್ ಸಾಮ್ರಾಜ್ಯ]]ದ ಬೆಳವೆಣಿಗೆಗೆ , ನಂತರ ಪೇಶ್ವೆಗಳು ಮತ್ತು ಅವರ ಸರದಾರರ ನಡುವಿನ ಮತಭೇದಗಳಿಂದಾಗಿ ಅವರ ಒಕ್ಕಟ್ಟು ಒಡೆಯುವವರೆಗೆ , ಕಡಿವಾಣ ಹಾಕಿತು.
 
{{Polytonic|}}ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ ಶಾಹು ಮತ್ತು ಪೇಶ್ವೆ [[ಮೊದಲನೇ ಬಾಜೀರಾವ್ ]] ಕಾಲಕ್ಕೆ ತನ್ನ ತುತ್ತತುದಿಯನ್ನು ತಲುಪಿತು. ೧೭೬೧ ರಲ್ಲಿ [[ಮೂರನೆಯ ಪಾಣಿಪತ್ ಯುದ್ಧ]]ದ ಸೋಲು ಸಾಮ್ರಾಜ್ಯದ ಇನ್ನಷ್ಟು ವಿಸ್ತರಣೆಯನ್ನು ತಡೆದು ಪೇಶ್ವೆಗಳ ಅಧಿಕಾರವನ್ನು ಮೊಟಕುಗೊಳಿಸಿತು. ಆಗ ಅವರು ರಾಜ್ಯದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡರು. [[ಶಿಂಧೆ]] , [[ಹೋಳ್ಕರ್]] , [[ಗಾಯಕವಾಡ್]] , [[ಪಂತಪ್ರತಿನಿಧಿ]] ಮತ್ತು [[ನೇವಳ್ಕರ್]] ರು ತಂತಮ್ಮ ಪ್ರದೇಶಗಳಿಗೆ ರಾಜರಾದರು. ಸಾಮ್ರಾಜ್ಯವು ಸಡಿಲಾದ ಒಕ್ಕೂಟವೊಂದಕ್ಕೆ ದಾರಿ ಮಾಡಿಕೊಟ್ಟಿತು. ಅಧಿಕಾರವು ಐದು ಪ್ರಮುಖಮನೆತನಗಳಲ್ಲಿ ಉಳಿಯಿತು: [[ಪುಣೆ]]ಯ ಪೇಶ್ವೆಗಳು ; [[ಮಾಳವ]] ಮತ್ತು [[ಗ್ವಾಲಿಯರ್]] ನ [[ಸಿಂಧಿಯಾ]]ರು (ಮೂಲದಲ್ಲಿ ಇವರು ಶಿಂಧೆ);[[ಇಂದೂರ್]] ನ [[ಹೋಳ್ಕರ್]] ರು ;[[ನಾಗಪುರ]]ದ [[ಭೋಂಸ್ಲೆ]] ಗಳು ; [[ಬರೋಡ]]ದ [[ಗಾಯಕವಾಡ್]] ರು. ೧೯ ನೇ ಶತಮಾನದ ಮೊದಲಿಗೆ ಸಿಂಧಿಯ ಮತ್ತು ಹೋಳ್ಕರರ ನಡುವಿನ ವೈರತ್ವವು ಬ್ರಿಟಿಷರು ಮತ್ತು [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]]ಯ ಜತೆಗಿನ ಮೂರು [[ಆಂಗ್ಲೋ ಮರಾಠಾ ಯುದ್ಧಗಳು]] ಈ ಒಕ್ಕೂಟದ ಪ್ರಮುಖ ಘಟನೆಗಳಾಗಿದ್ದವು . [[ಮೂರನೇ ಆಂಗ್ಲೋ ಮರಾಠಾ ಯುದ್ಧ]]ದಲ್ಲಿ ಕೊನೆಯ ಪೇಶ್ವೆಯಾದ [[ಎರಡನೇ ಬಾಜೀರಾಯ]]ನನ್ನು ಬ್ರಿಟಿಷರು ೧೮೧೮ರಲ್ಲಿ ಸೋಲಿಸಿದರು. ಮೊದಲಿನ ಮರಾಠಾ ಸಾಮ್ರಾಜ್ಯದ ಬಹುಭಾಗವನ್ನು [[ಬ್ರಿಟಿಷ್ ಭಾರತ]]ವು ತನ್ನೊಳಗೆ ಸೇರಿಸಿಕೊಂಡಿತಾದರೂ ಕೆಲವು ಭಾಗಗಳು ಭಾರತವು ೧೯೪೭ರಲ್ಲಿ ಸ್ವತಂತ್ರವಾಗುವವರೆಗೆ ಅರೆ-ಸ್ವತಂತ್ರವಾಗಿ ಉಳಿದುಕೊಂಡವು.
೬,೨೬೧

edits

"https://kn.wikipedia.org/wiki/ವಿಶೇಷ:MobileDiff/70745" ಇಂದ ಪಡೆಯಲ್ಪಟ್ಟಿದೆ