ಬಿ.ಜಯಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
ಹುಟ್ಟಿದ್ದು [[೧೯೫೦]], [[ಜೂನ್ ೯]]ರಂದು [[ಬೆಂಗಳೂರು|ಬೆಂಗಳೂರಿನಲ್ಲಿ]]. ತಂದೆ ಬಸವರಾಜ್, ತಾಯಿ ಜಿ.ವಿ.ಮಾಲತಮ್ಮ. ಜಯಶ್ರೀ ವೃತ್ತಿರಂಗಭೂಮಿಯ ಹೆಸರಾಂತ [[ಗುಬ್ಬಿ ವೀರಣ್ಣ]]ನವರ ಮೊಮ್ಮಗಳು ಕೂಡಾ. ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಪ್ರಸಿದ್ಧ ಗಾಯಕರೂ ಆಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ನಮ್ಮ ಸರ್ಕಾರ ಅವರನ್ನು ೨೦೧೦ ರಲ್ಲಿ ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಇವರು ಪ್ರಸಿದ್ಧ
[[W:National_School_of_Drama| National School of Drama]] ದಿಂದ ಪದವಿ ಪಡೆದಿದ್ದಾರೆ. ಇವರು [[ರಂಗಾಯಣ]]ದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಇವರು ೨೦೧೩ ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪದಾರ್ಪಣೆ. [[ರಂಗಭೂಮಿ]]ಯ ಅಭಿಯದಿಂದ ಗಳಿಸಿದ ಜನಪ್ರಿಯತೆ ಇವರನ್ನು ನಾಟಕಗಳ ನಿರ್ದೇಶನಕ್ಕೆ ಕೊಂಡೊಯ್ದಿತು.
==ರಾಜ್ಯಸಭೆ ಸದಸ್ಯರಾಗಿ ==
ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕಂಡ ಅಪೂರ್ವ ಕಲಾವಿದರಲ್ಲಿ ಬಿ. ಜಯಶ್ರೀ ಒಬ್ಬರು. ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ಮಾಧ್ಯಮಗಳಲ್ಲಿ ತಮ್ಮ ಛಾಪು ಮೂಡಿಸಿರುವ ಅವರು, ‘ಗುಬ್ಬಿ ವೀರಣ್ಣನವರ ಮೊಮ್ಮಗಳು’ ಎನ್ನುವ ‘ವಿಶೇಷಣ’ದ ಆಚೆಗೆ ಸಾಧನೆಯಿಂದ ಗುರ್ತಿಸಿಕೊಂಡವರು.
 
‘ರಂಗಾಯಣ’ದ ಮುಖ್ಯಸ್ಥರಾಗಿ, ರಾಜ್ಯಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಜಯಶ್ರೀ ತಮ್ಮ ಅಪೂರ್ವ ಕಂಠಸಿರಿಯಿಂದಲೂ ಪ್ರಸಿದ್ಧರು. ಈ ಹಿರಿಯ ಕಲಾವಿದೆ ಈಗ ಆತ್ಮಕಥೆಯ ನೆಪದಲ್ಲಿ ತಮ್ಮ ಬದುಕನ್ನು ಹಿಂತಿರುಗಿ ನೋಡಿದ್ದಾರೆ.
 
== ಇವರ ಅಭಿನಯದ ಕೆಲವು ನಾಟಕಗಳು ==
"https://kn.wikipedia.org/wiki/ಬಿ.ಜಯಶ್ರೀ" ಇಂದ ಪಡೆಯಲ್ಪಟ್ಟಿದೆ