ವಿಕಿಪೀಡಿಯ ಚರ್ಚೆಪುಟ:ಸಮುದಾಯ ಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೭ ನೇ ಸಾಲು:
 
[[ಸದಸ್ಯ:I JethroBT (WMF)|I JethroBT (WMF)]] ([[ಸದಸ್ಯರ ಚರ್ಚೆಪುಟ:I JethroBT (WMF)|ಚರ್ಚೆ]]) ೨೦:೫೫, ೨೯ ಡಿಸೆಂಬರ್ ೨೦೧೫ (UTC)
 
 
"ಸ್ವ-ಪರಿಚಯ"
 
ದೀಪ್ತಿ. ಆರ್.
 
ಜನನ:
 
ನಾನು ಶ್ರೀಮತಿ. ಉಷಾ ಹಾಗೂ ಶ್ರೀ. ಎ. ರಾಘವೇಂದ್ರ ದಂಪತಿಗಳ ಜ್ಯೇಷ್ಠ ಪುತ್ರಿಯಾಗಿ ಜೂನ್ ೨೧, ೧೯೯೮ರಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ್ದೇನೆ. ನನ್ನ ಹೆತ್ತವರು ಉತ್ತರ ಕನಾ‌‌ಟಕದ ರಾಯಚೂರು ಜಿಲ್ಲೆಯಲ್ಲಿ ವೃತ್ತಿ ನಿಮಿತ್ತ ನೆಲೆಸಿರುವುದರಿಂದ ಹುಟ್ಟಿದ (೦೩) ತಿಂಗಳಿನಲ್ಲೇ ಮಂಗಳೂರಿನ ಕಡಲಕಿನಾರೆಯ ಪರಿಸರದಿಂದ ಬಿಸಿಲನಾಡು ರಾಯಚೂರಿಗೆ ಪಾದಾಪ‍ಣೆ ಮಾಡಬೇಕಾಯಿತು.
 
ಬಾಲ್ಯ:
ನನ್ನ ಬಾಲ್ಯದ ದಿನಗಳನ್ನು ನನ್ನ ನೆರೆಹೊರೆಯ ಮಕ್ಕಳಾದ ಪದ್ಮಿನಿ, ರಾಜೇಶ್ವರಿ, ರಾಹುಲ್ ಇವರ ಜತೆಗೂಡಿ ಆಟವಾಡಿ ನಕ್ಕು ನಲಿದು ಕಳೆದೆ. ತದನಂತರ ನಾನು (೩) ವಷ‍ದವಳಾದ ಕೂಡಲೇ ಶಿಶುವಿಹಾರಕ್ಕೆ ಹೋಗಬೇಕಾಯಿತು. ಆ ದಿನದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಾಗಿದೆ. ತಂದೆ ತಾಯಿ ಅಜ್ಜಿ ಎಲ್ಲರನ್ನೂ ಬಿಟ್ಟು ಮೊದಲಸಲ ಮನೆಯಿಂದ ಹೊರಗೆ ಕಾಲಿಡುವಾಗ ಕಂಡೂ ಕಾಣದಂತೆ ಕಣ್ಣಂಚಿನಲ್ಲಿ ನೀರು ಮಡುಗಟ್ಟಿತ್ತು. ನನ್ನನ್ನು ಶಿಶುವಿಹಾರಕ್ಕೆ ಬಿಟ್ಟು ಬರುವಾಗ ಅಮ್ಮನ ಮನದಲ್ಲಿ ದುಃಖ ಒತ್ತರಿಸಿ ಬರುತ್ತಿತ್ತು. ಆದರೂ ಎಲ್ಲವನ್ನು ಸಾವರಿಸಿಕೊಂಡು ನನ್ನ ಮೊದಲ ದಿನದ ಅಭ್ಯಾಸವನ್ನು ಎಲ್ಲ ಗೆಳೆಯ ಗೆಳತಿಯರ ಜೊತೆ ಸಂತೋಷದಿಂದಲೇ ಕಳೆದೆ. ನೋಡ ನೋಡುತ್ತಾ (೦೬) ತಿಂಗಳು ಮುಗಿದು ತರಗತಿಯಲ್ಲೇ ಶೇ.೯೦ ಅಂಕಗಳನ್ನು ಗಳಿಸಿ ಉಪಾಧ್ಯಾಯರ ಮೆಚ್ಚುಗೆಗೆ ಪಾತ್ರರಾಗಿ ಬಹುಮಾನವನ್ನು ಸಹ ಗಳಿಸಿಕೊಂಡೆ ನಂತರ ಶುರುವಾಯಿತು ಎಲ್.ಕೆ.ಜಿ. ಯು.ಕೆ.ಜಿ. ಯಿಂದ ೧೦ನೇ ತರಗತಿಯವರೆಗೆ ಸಂತ ಮೇರಿ ಕಾನ್ವೆಂಟ್ ಶಾಲೆ ರಾಯಚೂರಿನಲ್ಲಿ ವಿದ್ಯಾಭ್ಯಾಸ ಮುಂದುವರಿಯಿತು.
 
ಶಾಲೆಯ ಅನುಭವ:
ಪ್ರಾಥಮಿಕ ಶಾಲೆಯಲ್ಲಿ ಸಣ್ಣ ಸಣ್ಣ ಮಕ್ಕಳು ಆಂಗ್ಲ ಮಾಧ್ಯಮದ ಸೊಗಡು ಮಾತೃಭಾಷೆ ಕನ್ನಡವಾಗಿದ್ದುದರಿಂದ ಆಂಗ್ಲ ಭಾಷೆಯನ್ನು ಕಲಿಯುವುದು ಕಷ್ಟವಾದರೂ ಏನೋ ಒಂದು ಕುತೂಹಲ ಮನೆ ಮೂಡಿತ್ತು ಹಾಗೂ ಹೀಗೂ ಶಾಲೆಯ ಆಟೋಟಗಳಲ್ಲಿ ಭಾಗವಹಿಸುವಿಕೆ, ಸಂಗೀತ ಸ್ಪಧೆ‍, ಬಹುಮಾನ ಗೆದ್ದ ಖುಷಿ ಎಲ್ಲವೂ ಮಿಳಿತವಾಗಿ ಪ್ರಾಥಮಿಕ ಹಂತ ಮುಗಿದು ಮಧ್ಯಮ ಹಂತ ನಂತರ ಪ್ರೌಢಶಾಲೆಗೆ ಪಾದಾಪ‍ಣೆ ಅಲ್ಲಿಂದ ೧೦ನೇ ತರಗತಿಯವರೆಗೆ ಅವಾಹತವಾಗಿ ಓದು ಸಾಗಿ ಉತ್ತಮ ಫಲಿತಾಂಶ ಪಡೆದು ವಿದ್ಯಾಥಿ‌‍ ಜೀವನವೇ ಮುಗಿದು ಹೋಯಿತು. ಈ ಮಧ್ಯೆ ನನಗೆ ಒಬ್ಬ ತಮ್ಮನು ಹುಟ್ಟಿದ್ದು. ಅವನು ಈಗ ಪ್ರಥಮ ದಜೆ‍ ವಿ.ಯು. ಕಾಲೇಜಿನಲ್ಲೇ ಓದುತ್ತಾನೆ. ಕಾಲೇಜು ಜೀವನಕ್ಕೆ ಕಾಲಿಡುವಾಗ ಎಲ್ಲಿಲ್ಲದ ಭಯ, ಆತಂಕ ನನ್ನಲ್ಲಿ ಮನೆಮಾಡಿತ್ತು. ರಾಯಚೂರು ಬಿಟ್ಟು ತವರು ನೆಲ ಮಂಗಳೂರು ನನ್ನನ್ನು ಕೈ ಬೀಸಿ ಕರೆಯಿತು "ಹತ್ತೂರು ಕೊಟ್ಟರೂ, ಹೆತ್ತೂರ ಮರೆಯಲಾಗದು". ಶಾರದಾ ವಿ.ಯು. ಕಾಲೇಜಿನ ಮಂಗಳೂರಿನಲ್ಲಿ ಪದವಿ ಪೂವ‍ ಶಿಕ್ಷಣದ ಪ್ರಥಮ ದಜೆ‍ಗೆ ನೊಂದಣಿ ಮಾಡಿಸಿಕೊಂಡಿರುತ್ತೇನೆ. ಹೆತ್ತವರು ರಾಯಚೂರಿನಲ್ಲೇ ಇರಬೇಕಾಗಿರುವುದರಿಂದ ಬಾಲಕಿಯರ ವಸತಿ ನಿಲಯದಲ್ಲಿ ಎರಡು ವಷ‍ಗಳನ್ನು ಕಳೆದು ವಿ.ಯು. (ವಿಜ್ಞಾನ) ವಿಭಾಗದಲ್ಲಿ ಅತ್ತ್ಯುತ್ತಮ ಅಂಕ ಗಳಿಸಿ ತೇಗ‍ಡೆಯಾಗಿರುತ್ತೇನೆ. ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದರೂ ಬಾಲ್ಯದಿಂದಲೂ ನನಗೆ ಭಾ.ಆ.ಸೇವೆಯಲ್ಲಿ ಆಸಕ್ತಿ ಇದ್ದುದರಿಂದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹೊಸದಾಗಿ ಆರಂಭವಾದ ಎಂ.ಎಸ್.ಇ. ವಿಜ್ಞಾನ ವಿಷಯಕ್ಕೆ ನೊಂದಣಿ ಮಾಡಿಸಿಕೊಂಡು ಈಗ ಇದೇ ಕಾಲೇಜಿನಲ್ಲಿ ಮುಂದುವರಿಯುತ್ತಿದ್ದೇನೆ. ಕಾಲೇಜಿಗೆ ಬಂದ ನಂತರ ತಿಳಿಯಿತು. ಇಲ್ಲಿರುವ ಉಪನ್ಯಾಸಕರ ಅಪಾರವಾದ ಜ್ಞಾನ ಪಾಂಡಿತ್ಯ, ಅವರ ಬೋಧನಾ ಕ್ರಮ ಎಲ್ಲವೂ ಬೆರಗುಗೊಳಿಸುವಂತೆ ಮಾಡಿದೆ.
 
ಹವ್ಯಾಸಗಳು:
 
ಸಂಗೀತ, ಕ್ರೀಡೆ (ಉದಾ: ಉದ್ದ ಜಿಗಿತ, ಕೋಕೋ, ಕಬಡ್ಡಿ ಇತ್ಯಾದಿ), ಸಂಗೀತ (ಪಾಶ್ಚಿಮಾತ್ಯ ಸಂಗೀತ, ದೇವರ ನಾಮ ಇತ್ಯಾದಿ) ಪುಸ್ತಕಗಳನ್ನು ಓದುವ ಹವ್ಯಾಸ, ಹೊಸತನ್ನು ಕಲಿಯಬೇಕೆಂಬ ತುಡಿತ, ಯಾವುದೇ ವಿಷಯವಾಗಿರಲಿ ಅದರಲ್ಲಿ ಮೇಲ್ಮಟ್ಟದಲ್ಲಿ ಇರಬೇಕೆಂಬ ಹಂಬಲ ಇವೆಲ್ಲವೂ ನಾನು ಅಳವಡಿಸಿಕೊಂಡು ಕಾಯ‍ರೂಪಕ್ಕೆ ತರಬಯಸುವ ಹವ್ಯಾಸಗಳಾಗಿವೆ.
 
ಒಟ್ಟಿನಲ್ಲಿ ಹೇಳುವುದಾದರೆ ರಾಯಚೂರಿನ ಹಬ್ಬದ ಸಂಬ್ರಮ, ಜಾನಪದ ಸೊಗಡು, ಹಳ್ಳಿಯ ವೈಭವ, ಬುದ್ದಿ ತಿಳಿದಾಗಿನಿಂದ ಹಿಡಿದು ಇಲ್ಲಿಯವರೆಗಿನ ಅನುಭವಗಳು, ಬಾಲ್ಯದ ಹಾಗುಹೋಗುಗಳು, ಏಳುಬೀಳುಗಳಲ್ಲವನ್ನೂ ಮೆಲಕು ಹಾಕಿದಾಗ ಆಗುವ ಸಂತೋಷದ ಮಧುರ ಕ್ಷಣಗಳನ್ನು ಪದಗಳಲ್ಲಿ ವಣಿ‍ಸಲಸದಳ ಆಗೊಮ್ಮೆ ಈಗೊಮ್ಮೆ ಮನಹಪಟಲದಲ್ಲಿ ಸುಳಿದು ನೆನಪಿನಂಗಲದಲ್ಲಿ ಇಣುಕಿ ಮರೆಯಾಗುತ್ತಿದೆ. ಉತ್ತಮ ಭವಿಷ್ಯದ ಕನಸುಗಳನ್ನು ಹೊತ್ತು ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವ ಅನಿವಾಯ‍ತೆ ನಮ್ಮದಾಗಿದೆ. ಹಾಗೂ ಗುರಿಯೂ ಸಹ ಆಗಿದೆ.
Return to the project page "ಸಮುದಾಯ ಪುಟ".