ಕಮ್ಯೂನಿಸಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
2405:204:5483:F427:8D1:AB44:752:A047 (talk) ರ 704995 ಪರಿಷ್ಕರಣೆಯನ್ನು ವಜಾ ಮಾಡಿ
೪ ನೇ ಸಾಲು:
[[File:Communism.svg|thumb|Countries of the world now (red) or previously (orange) having nominally Marxist–Leninist governments]]
ಹೀಗೆ ಕಮ್ಯೂನಿಸಂ ಎಂಬ ನಾಮಾಂಕಿತದಿಂದ ಮಾರ್ಕ್ಸ್, ಎಂಗೆಲ್ಸರು ತಮ್ಮದೇ ಆದ ಹೊಸ ರೂಪದ ಸಮಾಜವಾದವನ್ನು ಕಮ್ಯೂನಿಸಂ ಎಂದು ಕರೆದರಲ್ಲದೆ ಅದೊಂದು ಮಾತ್ರ ವೈಜ್ಞಾನಿಕ ಸಮಾಜವಾದವೆಂದು ಹೇಳಿದರು. ಈ ಪ್ರಣಾಳಿಕೆಯ ಪ್ರಕಟಣೆ ವಿಶ್ವದ ಒಂದು ಮುಖ್ಯ ಘಟನೆ, ಸಮಾಜವಾದದ ತತ್ತ್ವ ಪರಂಪರೆಯಲ್ಲಿ ಇದಕ್ಕೊಂದು ವಿಶಿಷ್ಟಸ್ಥಾನವಿದೆ. ಈ ಪ್ರಣಾಳಿಕೆಯಲ್ಲಿ ಉಕ್ತವಾಗಿರುವ ಸೂತ್ರಗಳನ್ನೂ ಇವುಗಳ ವ್ಯಾಖ್ಯಾನರೂಪವಾಗಿ ಮಾಕ್ರ್ಸ್‌-ಎಂಗೆಲ್ಸ್‌ ಮತ್ತು ಅವರ ಅನುಯಾಯಿಗಳು ರಚಿಸಿರುವ ಇತರ ಗ್ರಂಥಗಳನ್ನೂ ಹೆರೆನಂಬಿ ಅವನ್ನು ಅನುಸರಿಸುವವರು ಕಮ್ಯೂನಿಸ್ಟರೆನಿಸಿಕೊಂಡಿದ್ದಾರೆ. ಅದರಲ್ಲಿ ಉದಾಹರಿಸಿರುವ ತತ್ತ್ವಗಳನ್ನು ವಿಶದಪಡಿಸುವ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಾಕ್ರ್ಸ್‌-ಎಂಗೆಲ್ಸ್‌ ರ ತತ್ತ್ವಗಳನ್ನು ಅನುಷ್ಠಾನಕ್ಕೆ ತಂದಿರುವ [[ಸೋವಿಯತ್ ರಷ್ಯ]], [[ಪೋಲೆಂಡ್]], ಪುರ್ವಜರ್ಮನಿ, [[ಜೆಕೋಸ್ಲವಾಕಿಯ]], [[ಯುಗೋಸ್ಲಾವಿಯ]], [[ಹಂಗರಿ]], [[ಬಲ್ಗೇರಿಯ]], [[ರೊಮೇನಿಯ]], [[ಆಲ್ಬೇನಿಯ]], [[ಕ್ಯೂಬ]], [[ಚೀನ]], [[ಉತ್ತರಕೊರಿಯ]], ಉತ್ತರ ವಿಯೆಟ್ನಾಮ್ ಇವನ್ನು ಕಮ್ಯೂನಿಸ್ಟ್‌ ದೇಶಗಳೆಂದು ಕರೆಯುವ ವಾಡಿಕೆಯಿದೆ. ಉಳಿದವು ಕಮ್ಯೂನಿಸ್ಟೇತರ ದೇಶಗಳು.
==ಪೂರ್ವ ಸ್ಥಿತಿ==
ಮಾರ್ಕ್ಸ್-ಎಂಗೆಲ್ಸ್‌ರು ತಮ್ಮ ವೈಜ್ಞಾನಿಕ ಸಮಾಜವಾದವನ್ನು ಪ್ರತಿಪಾದಿಸುವ ಮುನ್ನವೂ ಪ್ರಚಾರದಲ್ಲಿದ್ದ ಹಲವು ಸಮಾಜವಾದಿ ತತ್ತ್ವಗಳನ್ನು ಇಲ್ಲಿ ಪ್ರಸ್ತಾಪಿಸಬಹುದಾಗಿದೆ. ನೊಂದ ಜೀವಿಗಳ ಪರವಾಗಿ ವಾದಿಸುತ್ತಿದ್ದವರೂ ಸಮಾಜದಲ್ಲಿಯ ಶೋಷಣೆ-ಅಸಮತೆಗಳನ್ನು ಪ್ರತಿಭಟಿಸುತ್ತಿದ್ದವರೂ ಸಮಾಜ ಸುಧಾರಣಾಪ್ರಿಯರೂ ಸಮಾಜವಾದದಿಂದ ಆಕರ್ಷಿತರಾಗಿದ್ದರು. [[ಥಾಮಸ್ ಮೋರ್]], ಕೆಂಪನೆಲ್ಲ ಮತ್ತು ಇತರರು ಆದರ್ಶ ಸಮಾಜವನ್ನು ಚಿತ್ರಿಸಿದ್ದಾರೆ. ಇಂಗ್ಲೆಂಡಿನ ಜರಾಲ್ಡ್‌ವಿನ್ ಸ್ಟಾನ್ಲೇ, [[ರಾಬರ್ಟ್ ಓವೆನ್]], ಫ್ರಾನ್ಸಿನ ಫೂರ್ಯೇ, ಸೇಂಟ್ ಸೈಮನ್, ಜರ್ಮನಿಯ ವೈಟ್ಲಿಂಗ್ ಮೊದಲಾದವರೂ ಅವರ ಅನುಯಾಯಿಗಳೂ ಸಾಮಾಜಿಕ ಅಸಮಾನತೆ, ವರ್ಗವಿರಸ, ಶೋಷಣೆ, ದಬ್ಬಾಳಿಕೆ, ತಾರತಮ್ಯ ಮುಂತಾದವನ್ನು ತೊಡೆದುಹಾಕಿ, ಸುಧಾರಿತ ಸಮಾಜ ನಿರ್ಮಾಣವಾಗಬೇಕೆಂದು ತಮ್ಮ ಬರೆಹಗಳ ಮೂಲಕ ಪ್ರಚಾರ ನಡೆಸಿದ್ದರು. ಇಂಥ ಸುಧಾರಣಾಕಾಂಕ್ಷಿಗಳನ್ನೆಲ್ಲ ಒಂದಲ್ಲ ಒಂದು ಬಗೆಯ ಸಮಾಜವಾದಿಗಳೆಂದು ಕರೆಯುವುದು ರೂಢಿಯಾಗಿತ್ತು. ಇಂಥವರು ಸಮಾಜವಾದಿ ಸಮಾಜದ ಸ್ಥಾಪನೆಗೆ ಆರಿಸಿಕೊಂಡ ಕ್ರಮಗಳೂ ಗಮನಾರ್ಹ. [[ಆಸ್ತಿಕ]]ರೆಲ್ಲರೂ ದೇವರಲ್ಲಿ ಮೊರೆ ಹೊಕ್ಕಿದ್ದರು. ಅನನ್ಯ ದೈವಭಕ್ತಿ. ಇಹಪ್ರಪಂಚದ ಬಂಧನಗಳಾದ ಹೆಣ್ಣು ಹೊನ್ನು ಮಣ್ಣುಗಳ ತ್ಯಾಗ. ವಿರಕ್ತ ಜೀವನ, ತಪಸ್ಸು, ಪುಜೆ, ದಾನ ಇವುಗಳ ಪ್ರತಿಪಾದಕರಿವರು. ವ್ಯಕ್ತಿಗಳು ಸೇರಿ ಸಮಾಜವಾಗಿರುವುದರಿಂದ ವ್ಯಕ್ತ ಪರಿಪಕ್ವತೆಯಿಂದ ಸಮಾಜದ ಪರಿಪಕ್ವತೆಯಾಗುವುದೆಂದೂ ಆಗ ಸಮಾಜವನ್ನು ಕಾಡುತ್ತಿರುವ ಲಾಲಸೆ, ಈರ್ಷ್ಯೆ, ಅಸಮಾನತೆ, ಮೋಹಗಳಿಂದ ಬಿಡುಗಡೆಯಾಗುವುದೆಂದೂ ಸುಧಾರಿತ ಸಮಾಜದ ಜನನವಾಗುವುದೆಂದೂ ಇವರ ಭಾವನೆಯಾಗಿತ್ತು. ಇದಕ್ಕಾಗಿ ಹಲವು ನೀತಿಸೂತ್ರಗಳೂ ಪುಜಾವಿಧಿಗಳೂ ಧ್ಯಾನವಿಧಿಗಳೂ ರಚಿತವಾದುವು. ಇನ್ನು ಕೆಲವರು ಸಮಾಜದಲ್ಲಿ ಕಂಡುಬರುವ ಅನಿಷ್ಟವೆಲ್ಲವೂ ದೈವಲೀಲೆ ಎಂದು ಬಗೆದು, ಮನುಷ್ಯನ ಪರೀಕ್ಷೆಗಾಗಿಯೆ ಎಲ್ಲವೂ ಉಂಟಾಗಿವೆಯೆಂದು ತಿಳಿಸಿ, ವಿರಕ್ತ ಜೀವನಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟರು. ಪರಲೋಕಸೃಷ್ಟಿ, ಪಾಪವಿಮೋಚನೆ, ದೇವರ ಪುನರಾಗಮನ, ದೇವದೂತರ ಸಂದೇಶ-ಇವಕ್ಕೆ ಅವರಿಂದ ಹೆಚ್ಚಿನ ಪುರಸ್ಕಾರ ಲಭ್ಯವಾಯಿತು. ಮತ್ತೆ ಕೆಲವರು ಪಾರಮಾರ್ಥಿಕ-ಲೌಕಿಕ ಸಮನ್ವಯಸಾಧನೆಗಾಗಿ ಯತ್ನಿಸಿ, ದೇವದೂತರಿಂದಲೂ ಋಷಿಗಳಿಂದಲೂ ಪ್ರೋಕ್ತವಾದ ಬೋಧನೆಗಳ ಪಾಲನೆ, ದಾನ, ಪುಜೆ, ಧ್ಯಾನ-ಇವು ಮೋಕ್ಷಸಮಾಜಕ್ಕೆ ಹೆದ್ದಾರಿ ಎಂದರು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಗಳಿಕೆಯನ್ನೂ ಸಂಪತ್ತನ್ನೂ ತನ್ನದೆಂದು ಬಗೆಯದೆ, ತಾನು ಅದರ ಧರ್ಮದರ್ಶಿಯೆಂದು ತಿಳಿದು ಅವನ್ನು ಅನುಭವಿಸುವುದಾದರೆ ಮತ್ತು ನಿರ್ವಹಿಸುವುದಾದರೆ ಆಗ ಬಡವ-ಶ್ರೀಮಂತರೆಂಬ ಭೇದಗಳಿಗೂ ಒಡೆತನದಿಂದ ಬರುವ ಆರ್ಥಿಕ ಸೌಲಭ್ಯಗಳಿಗೂ ಅಧಿಕಾರ ಶೇಖರಣೆಗಳಿಗೂ ವಿಲಾಸಗಳಿಗೂ ಬಡಜನರಲ್ಲಿ ಮೂಡಿಸುವ ದಾಸ್ಯ ಯಾಚನೆಗಳಿಗೂ ಇರಬಹುದಾದ ವರ್ಗವಿರಸಕ್ಕೂ ಅವಕಾಶವೇ ಉಂಟಾಗುವುದಿಲ್ಲವೆಂಬುದು ಇನ್ನು ಕೆಲವರ ವಾದ. ಕೆಲವರು ಇಷ್ಟಕ್ಕೆ ತೃಪ್ತರಾಗಲಿಲ್ಲ. ಎಲ್ಲರೂ ದೇವರ ಮಕ್ಕಳು. ಆದ್ದರಿಂದ ಸಮಾನತೆ, ಭ್ರಾತೃತ್ವ, ಸಹಜೀವನ ಇವು ಮನುಷ್ಯನ ಆಜನ್ಮಸಿದ್ಧ ಹಕ್ಕುಗಳು. ಆದ್ದರಿಂದ ಸಮಾಜದಲ್ಲಿ ಕಂಡುಬರುವ ಎಲ್ಲ ವಿಧದ ಅಸಮಾನತೆ, ಶೋಷಣೆ, ಸ್ವಾಮ್ಯ, ಒಡೆತನ ಎಲ್ಲವನ್ನೂ ದೇವರ ಹೆಸರಿನಲ್ಲೇ ಇವರು ಪ್ರಶ್ನಿಸಿದರು. ವಿರೋಧಿಸಿದರು. ಆಸ್ತಿಯ ವೈಯಕ್ತಿಕ ಸ್ವಾಮ್ಯಕ್ಕೂ ಒಡೆತನಕ್ಕೂ ಆಸ್ಪದವಿಲ್ಲದಂಥ ಸಮಾಜ ವ್ಯವಸ್ಥೆಗೆ ಇವರು ಕರೆಕೊಟ್ಟರು. ಇವರದು ''ಧಾರ್ಮಿಕ ಸಮಾಜವಾದ''. ಈ ಹಲವು ಬಗೆಯ ವಾದಗಳನ್ನು [[ಭಾರತ]]ದಲ್ಲೂ ಕಾಣಬಹುದು. ರಾಜಕೀಯವಾಗಿ, ಇಂಗ್ಲೆಂಡಿನಲ್ಲಿ 1688ರಲ್ಲಿ ನಡೆದ ಕ್ರಾಂತಿಯ ಸಂದರ್ಭದಲ್ಲಿ ಲೆವೆಲರ್ಸ್‌ ಮತ್ತು ಡಿಗ್ಗರ್ ಎಂಬ ಉಗ್ರವಾದಿಗಳು ಜಿರಾಲ್ಡ್‌ ವಿನ್ ಸ್ಟಾನ್ಲೆಯ ನೇತೃತ್ವದಲ್ಲಿ ಕ್ರಿಶ್ಚಿಯನ್ ಧರ್ಮಬೋಧಕರ ಮೂಲತತ್ತ್ವಗಳನ್ನು ಪುನಃ ಉದ್ಧರಿಸಿ ಸಮಾನ ಸಮಾಜ ಸ್ಥಾಪನೆಯೇ ಧರ್ಮದ ಪುನರುತ್ಥಾನವೆಂದು ವಾದಿಸಿದರು.
 
೧೨ ನೇ ಸಾಲು:
 
ಬುದ್ಧಿಯ ಆರಾಧಕರು ಸಮಾಜದಲ್ಲಿ ಅನ್ಯಾಯವೆಂದು ಬಗೆದದ್ದನ್ನು ಹೊರಹಾಕಲು ತಮ್ಮ ಬುದ್ಧಿಯನ್ನು ಬಳಸಿಕೊಂಡರು. ಸಮಾಜದಲ್ಲಿ ಕಂಡುಬಂದ ಅಸಮಾನತೆ, ಪ್ರತ್ಯೇಕ ಹಕ್ಕುಬಾಧ್ಯತೆ, ಅಂತರ ಶೋಷಣೆ ಎಲ್ಲವೂ ಅಸಮರ್ಥನೀಯ. ಆದ್ದರಿಂದ ಅವನ್ನು ನಾವು ಒಪ್ಪಬೇಕಾದ್ದಿಲ್ಲ; ಅವು ಅಸಂಬದ್ಧ-ಎಂಬುದು ಅವರ ತರ್ಕ. ಆದ್ದರಿಂದ ಇವರಲ್ಲೊಬ್ಬೊಬ್ಬರೂ ತಮಗೆ ನ್ಯಾಯವೆಂದು ಕಂಡುಬಂದ ರೀತಿಯಲ್ಲಿಸಮಾಜದ ಪುನರ್ರಚನೆಯಲ್ಲಿ ತೊಡಗಿದರು. ಬಗೆಬಗೆಯ ಮಾದರಿಗಳನ್ನು ಕಡೆದಿಟ್ಟರು. ಬುದ್ಧಿವಂತರು ಇದನ್ನು ಅಂಗೀಕರಿಸಬೇಕೆಂದು ಕರೆಕೊಟ್ಟರು. ಇನ್ನು ಕೆಲವರು ತಾವು ರಚಿಸಿದ ಕರಡುಯೋಜನೆಗಳನ್ನು ಸಹೃದಯ ರಾಜಮಹಾರಾಜರಿಗೆ ಅರ್ಪಿಸಿ ಅವರ ಬೆಂಬಲದಿಂದ ಅವನ್ನು ಕಾರ್ಯಗತಗೊಳಿಸಲು ಉದ್ಯುಕ್ತರಾದರು. ಆದರೆ ಯಾವುದರಿಂದಲೂ ಏನೂ ಲಾಭವಾಗಲಿಲ್ಲ. ಅವನ್ನು ಕಾರ್ಯಗತ ಮಾಡಲು ಯಾರೂ ಮುಂದೆ ಬರಲಿಲ್ಲ. ಆಗ ಇವರಿಗೆ ಹತಾಶೆ ಕಾದಿತ್ತು. ಇವರಲ್ಲಿ ಉಗ್ರಗಾಮಿಗಳಾದವರನ್ನು ಸಮಾಜಕಂಟಕರೆಂದು ದಮನ ಮಾಡಲಾಯಿತು. ಇನ್ನು ಕೆಲವರು ಪ್ರಯೋಗಾರ್ಥವಾಗಿ ರಚಿಸಿದ್ದ ಆಶ್ರಮ, ನಿಕೇತನ ಸಹಜೀವನ ಕೇಂದ್ರ, ಕುಟೀರಗಳು ಮುರಿದುಬಿದ್ದವು. ಮಿಗಿಲಾಗಿ ಯಾವುದು ಅಂಗೀಕಾರಯೋಗ್ಯವಾದದ್ದು, ಯಾವುದನ್ನು ತ್ಯಜಿಸುವುದರಿಂದ ಸಮಾಜಕ್ಕೆ ಕ್ಷೇಮ ಉಂಟಾಗುತ್ತದೆ ಎಂಬ ಬಗ್ಗೆ ಈ ವಿನ್ಯಾಸಕಾರರಲ್ಲೇ ಒಮ್ಮತವಿರಲಿಲ್ಲ. ಒಬ್ಬನಿಗೆ ನ್ಯಾಯವಾಗಿ ಕಂಡುಬಂದದ್ದು ಇನ್ನೊಬ್ಬನಿಗೆ ವಿಪರೀತವಾಗಿ ಕಂಡುಬಂದಿತ್ತು. ಬುದ್ಧಿಯ ಕುಂಚದಿಂದ ನಿರ್ಮಿತವಾದ ಈ ಅನೇಕ ಕ್ಷೇಮಸಮಾಜಗಳು ಆಕರ್ಷಣೀಯವಾಗಿ ಕಂಡರೂ ಸರ್ವಸಮ್ಮತವಾದ ಒರೆಗಲ್ಲು ಅಥವಾ ಅಳತೆಕೋಲಿನಿಂದ ಅವುಗಳಲ್ಲಿ ಯಾವುದಾದ ರೊಂದನ್ನೂ ಅಂಗೀಕಾರಯೋಗ್ಯವೆಂದು ತೀರ್ಮಾನಿಸುವುದು ಕಷ್ಟದ ಕೆಲಸವಾಗಿತ್ತು.
 
==ಆಧುನಿಕ ಕಮ್ಯೂನಿಸಂ==
ಆದರೆ ಈ ಕಾಲಾವಧಿಯಲ್ಲಿ ಈ ಪಂಗಡಕ್ಕೆ ಸೇರಿದ ಬರೆಹಗಾರರಿಂದ ಹಲವು ಅಮೂಲ್ಯ ಸಂಶೋಧನೆಗಳು ಹೊರಬಿದ್ದವು. ಹಲವೆಡೆ ಅಸ್ಪಷ್ಟವಾಗಿ ಕೆಲವು ಕಡೆ ಸ್ಪಷ್ಟವಾಗಿ ಇನ್ನು ಕೆಲವು ಕಡೆ ಸೂಚ್ಯವಾಗಿ. ಇತಿಹಾಸ ಯಾವುದೋ ಒಂದು ಕ್ರಮಕ್ಕೆ ಒಳಪಟ್ಟು ವಿಕಾಸ ಹೊಂದಿರುವ ಚಿತ್ರವನ್ನು ಅವರು ಮುಂದಿಟ್ಟರು. ಸಮಾಜವೂ ಈ ವಿಕಾಸದ ನಿಯಮದಲ್ಲಿ ಸೇರಿ ಒಂದೊಂದು ಕಾಲದಲ್ಲಿ ಒಂದೊಂದು ವಿಧವಾಗಿ ವಿಶಿಷ್ಟ ಚರ್ಯೆಗಳನ್ನು ಪ್ರದರ್ಶಿಸಿರುವುದಾಗಿ ತಿಳಿಸಿದರು. ಒಂದೊಂದು ಘಟ್ಟವೂ ವಿಶಿಷ್ಟವಾದದ್ದೆಂಬುದನ್ನು ಇವರು ಕಂಡಿದ್ದರು. ಅತ್ಯಂತ ಅನಾಗರಿಕತೆಯಿಂದ ಆರಂಭವಾದ ಸಮಾಜ ಕ್ರಮವಾಗಿ ಪ್ರಾಚೀನ ಮತ್ತು ಊಳಿಗಮಾನ್ಯ ಘಟ್ಟಗಳನ್ನು ದಾಟಿ ಪ್ರಜಾಸಮಾಜದ (ಸಿವಿಲ್ ಸೊಸೈಟಿ) ಹಂತ ಮುಟ್ಟಿದೆ. ಈ ಘಟ್ಟಗಳ ಪರಿವರ್ತನೆ ಏತಕ್ಕೆ ಉಂಟಾಯಿತೆಂದು ಅನೇಕರು ಕಾರಣಗಳನ್ನು ಹುಡುಕುತ್ತಿದ್ದಾಗ, [[ಜರ್ಮನಿ]]ಯ [[ತತ್ತ್ವಜ್ಞಾನಿ]]ಯಾದ ಹೆಗೆಲ್ ಹೊಸ ಸಿದ್ಧಾಂತವೊಂದರ ಮೂಲಕ ಇತಿಹಾಸದ ಸಮಾಜದ ಚಲನೆ ಮತ್ತು ವಿಕಾಸಗಳನ್ನು ಸಮರ್ಥಿಸಿ ಅವೆಲ್ಲವೂ ಭಾವನೆಗಳ (ಐಡಿಯ) ಚಲನೆಯ ಪ್ರತಿರೂಪವೆಂದು ಹೇಳಿದ. ಒಂದೊಂದು ಕಾಲದಲ್ಲಿ ಒಂದೊಂದು ರೂಪದಲ್ಲಿ ಭಾವನೆಗಳು ವ್ಯಕ್ತಗೊಂಡಿವೆ. ಈಗ ಅವು ತಮ್ಮ ಗುರಿ ಮುಟ್ಟಿವೆ. ಇಂದಿನ ಪ್ರಜಾಸಮಾಜದ ರೂಪ ತಾಳಿವೆ-ಎಂದು ಆತ ತಿಳಿಸಿದ. ಇನ್ನು ಕೆಲವರು ಈ ಭಾವನಾತ್ಮಕ ವಿಕಾಸವಾದವನ್ನು ವಿರೋಧಿಸಿದರು. ಸಮಾಜದಲ್ಲಿ ಕಂಡುಬರಬಹುದಾದ ಚಲನೆ, ವಿಕಾಸ ಮತ್ತು ವಿವಿಧ ಘಟ್ಟಗಳು ವಿಕಾಸ ಹೊಂದುತ್ತಿರುವ ಭಾವನೆಯ ಪ್ರತಿರೂಪವಲ್ಲವೆಂಬುದು ಅವರ ವಾದ. ಸಮಾಜದಲ್ಲಿ ಕಂಡುಬರುವ ಬದಲಾವಣೆ, ಪರಿವರ್ತನೆ, ಹಳೆಯ, ಹೊಸ ಭಾವನೆಗಳು-ಎಲ್ಲವೂ ಸಮಾಜದಲ್ಲೇ ಹುದುಗಿರುವ ಸ್ವಯಂಚಲನೆಗೆ ಒಳಪಟ್ಟಿವೆಯೆಂದೂ ಸಮಾಜವಿಕಾಸದಲ್ಲಿ ದೈವಿಕ ಅಥವಾ ಭಾವನೆಯ ಕೈವಾಡವಿಲ್ಲವೆಂದೂ, ವಿಕಾಸವೆಂಬುದು ಭಾವನೆಯ ಬೆಳೆವಣಿಗೆಯ ಪ್ರತಿರೂಪವಾಗಿರದೆ, ಭಾವನೆಯೇ ವಿಕಾಸಹೊಂದುತ್ತಿರುವ ಸ್ಥಿತಿಗತಿಗಳ ಪ್ರತಿರೂಪವಾಗಿ ವ್ಯಕ್ತಗೊಂಡಿದೆಯೆಂದೂ ತಿಳಿಸಿದರು.
"https://kn.wikipedia.org/wiki/ಕಮ್ಯೂನಿಸಮ್" ಇಂದ ಪಡೆಯಲ್ಪಟ್ಟಿದೆ