ಕುರುಡುಮಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
 
[[Image:Pillar8.jpg|thumb|ಕುರುಡುಮಲೆ ಸೋಮೇಶ್ವರ ದೇವಸ್ಥಾನದಲ್ಲಿನ ಚೋಳರ ಶೈಲಿಯ ಶಿಲ್ಪಕಲೆಯುಳ್ಳ ಒಂದು ಸ್ಥಂಭ.]]
 
==ದಂತಕಥೆಗಳು==
ಕುರುಡು ಮಲೆಯ ಸುತ್ತಲು ಇರುವ ಇನ್ನಿತರ ದಂತಕಥೆಗಳು ಹೀಗಿವೆ, ಕುರುಡು ಮಲೆ ಎಂಬ ಹೆಸರು ಕೂಡು ಮತ್ತು ಮಲೆ ಎಂಬ ಪದಗಳಿಂದ ಬಂದಿದೆ. ಇದರರ್ಥ ಸೇರುವ, ಭೇಟಿಯಾಗುವ ಸ್ಥಳವೆಂದು ಅರ್ಥ. ಸ್ಥಳೀಯರ ನಂಬಿಕೆಗಳಂತೆ ಈ ಸ್ಥಳವು ದೇವರುಗಳಿಗೆ ಬೇಸರವಾದಾಗ ಅವರು ಕಾಲ ಕಳೆಯುವ ಉದ್ದೇಶದಿಂದ ಭೂಮಿಗೆ ಇಳಿದು ಬರುವ ಸ್ಥಳವೆಂದು ಭಾವಿಸಲಾಗಿದೆ.
 
ಇಲ್ಲಿನ ಗಣೇಶ ದೇವಾಲಯವು 13.5 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಹೊಂದಿದೆ ಮತ್ತು ದೇವಾಲಯದ ವಿನ್ಯಾಸವನ್ನು ಎರಡು ವಿಭಿನ್ನ ಶೈಲಿಗಳಲ್ಲಿ ನಿರ್ಮಿಸಲಾಗಿದೆ. ಇದರ ಕುರಿತು ದಂತಕಥೆಗಳಿದ್ದು ಅದರ ಪ್ರಕಾರ ಈ ದೇವಾಲಯವನ್ನು ಇತಿಹಾಸ ಪ್ರಸಿದ್ಧ ಶಿಲ್ಪಿಗಳಾದ ಜಕಣಾಚಾರಿ ಮತ್ತು ಅವನ ಮಗ ಡಕಣಾಚಾರಿ ಇಬ್ಬರು ವಿನ್ಯಾಸಗೊಳಿಸಿದರು ಎಂದು ಹೇಳಲಾಗುತ್ತದೆ.
 
ಕುರುಡುಮಲೆಯಲ್ಲಿ ಸೋಮೇಶ್ವರ ದೇವಾಲಯವಿದ್ದು, ಅದು ಇಲ್ಲಿನ ಗಣಪತಿ ದೇವಾಲಯಕ್ಕಿಂತ ಹಳೆಯದಾಗಿದೆ. ಇದರ ನಿರ್ಮಾಣ ಕಾಲವು ನಮ್ಮನ್ನು ಚೋಳರ ಆಡಳಿತ ಕಾಲದಷ್ಟರವರೆಗು ಕೊಂಡೊಯ್ಯುತ್ತದೆ.
 
ಕುರುಡುಮಲೆ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 100 ಕಿ.ಮೀ ದೂರದಲ್ಲಿದ್ದು, ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು.
 
==ಕೆಳಗಿನ ಲೇಖನಗಳನ್ನೂ ನೋಡಿ==
"https://kn.wikipedia.org/wiki/ಕುರುಡುಮಲೆ" ಇಂದ ಪಡೆಯಲ್ಪಟ್ಟಿದೆ