ದೇವರಾಯನ ದುರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು {{commons category|Devarayanadurga}}
No edit summary
೩೫ ನೇ ಸಾಲು:
 
ಇಲ್ಲಿನ ನರಸಿಂಹ ದೇವರ ಜಾತ್ರೆಯು ಬಹಳ ಪ್ರಸಿದ್ದ. ಪ್ರತಿ ವರ್ಷವೂ ಇಲ್ಲಿ ನೆಡೆಯುವ ಜಾತ್ರೆಗೆ ಸಾವಿರಾರು ಜನರು ಸೇರುತ್ತಾರೆ. ಹತ್ತಿರದಲ್ಲಿರುವ ದುರ್ಗದ ಹಳ್ಳಿಯಲ್ಲಿರುವ ಶ್ರೀ ವಿದ್ಯಾಶಂಕರ ಸ್ವಾಮಿಯ ದೇವಾಲಯವೂ ಬಹಳ ಸುಂದರವಾಗಿದೆ. ಈ ದೇವಾಲಯವು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ, ಇದು ದೇವರಾಯನ ದುರ್ಗಕ್ಕೆ ಹೋಗುವ ದಾರಿಯಲ್ಲಿರುವ [[ನಾಮದ ಚಿಲುಮೆ]]ಗೆ ಕೇವಲ ೩ ಕಿ.ಮೀ ದೂರದಲ್ಲಿದೆ.
 
==ದೇವರಾಯನದುರ್ಗದಲ್ಲಿ ನೋಡಬೇಕಾದ ಸ್ಥಳಗಳು.==
ಈ ಬೆಟ್ಟದ ಮೂರು ವಿಭಿನ್ನ ಎತ್ತರಗಳಲ್ಲಿ ಭೋಗ ನರಸಿಂಹ, ಯೋಗ ನರಸಿಂಹ ಮತ್ತು ಲಕ್ಷ್ಮಿ ನರಸಿಂಹ ಎಂಬ ಮೂರು ದೇವಾಲಯಗಳಿವೆ. ಭೋಗ ನರಸಿಂಹ ದೇವಾಲಯವು ಬೆಟ್ಟದ ಬುಡದಲ್ಲಿದೆ. ಯೋಗನರಸಿಂಹ ದೇವಾಲಯವು ಬೆಟ್ಟದ ತುದಿಯಲ್ಲಿ ಇದೆ. ಲಕ್ಷ್ಮಿ ನರಸಿಂಹ ದೇವಾಲಯವು ಬೆಟ್ಟದ ಮೊದಲ ಭಾಗದಲ್ಲಿ ಕಂಡು ಬರುತ್ತದೆ.
 
ಇಲ್ಲಿನ ಮತ್ತೊಂದು ಆಕರ್ಷಣೆ ನಾಮದ ಚಿಲುಮೆ. ಸ್ಥಳೀಯ ದಂತಕತೆಗಳ ಪ್ರಕಾರ ಶ್ರೀ ರಾಮನು ತನ್ನ ಬಿಲ್ಲಿನಿಂದ ಬಿಟ್ಟ ಬಾಣದಿಂದ ಚಿಮ್ಮಿದ ಚಿಲುಮೆಯೆ ಇದಂತೆ. ಭಕ್ತಾಧಿಗಳ ಪ್ರಕಾರ ಚಿಲುಮೆಯ ಬಳಿಯಲ್ಲಿ ಶ್ರೀ ರಾಮನ ಹೆಜ್ಜೆಗುರುತು ಇದೆಯಂತೆ. ಇಲ್ಲಿನ ಕಾಡಿನಲ್ಲಿನ ನರ್ಸರಿಯಲ್ಲಿ ಅಪರೂಪದ ಅಯುರ್ವೇದಿಕ ಗಿಡ ಮೂಲಿಕೆಗಳನ್ನು ಬೆಳೆಯಲಾಗಿದೆ. ಇಲ್ಲಿ ಶ್ರೀ ನರಸಿಂಹ ಜಯಂತಿ ಮತ್ತು ರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸುತ್ತಾರೆ.
 
ದೇವರಾಯನದುರ್ಗವು ಬೆಂಗಳೂರಿನಿಂದ 65 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಸಮೀಪದ ರೈಲು ನಿಲ್ದಾಣವು ತುಮಕೂರಿನಲ್ಲಿದೆ. ಈ ಸ್ಥಳಕ್ಕೆ ಬಸ್ಸುಗಳ ಸೌಕರ್ಯವು ಉತ್ತಮವಾಗಿದೆ.
 
{{commons category|Devarayanadurga}}
"https://kn.wikipedia.org/wiki/ದೇವರಾಯನ_ದುರ್ಗ" ಇಂದ ಪಡೆಯಲ್ಪಟ್ಟಿದೆ