ರಾಮನಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "States and territories of India": unwanted link. (TW)
೯೫ ನೇ ಸಾಲು:
*ಈ ಪ್ರದೇಶ ಬೆಟ್ಟಗಳಿಂದ ಸುತ್ತುವರಿದಿದ್ದು ಪರ್ವತಾರೋಹಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ ಹಾಗೂ ಇದು ಈ ಪ್ರದೇಶದ ಪ್ರವಾಸೋದ್ಯಮಕ್ಕೂ ಆಸರೆಯಾಗಿದೆ. ರಾಮನಗರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವುದರಿಂದ ಇಲ್ಲಿಗೆ ಈ ಎರಡೂ ನಗರಗಳಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.
 
==ರಾಮನಗರ ಜಿಲ್ಲೆಯ ಕಲೆ==
ರಾಮನಗರ ಜಿಲ್ಲೆಯು ವಿಶೇಷವಾಗಿ ಜಾನಪದ ಕಲೆಗೆ ಹೆಸರು ವಾಸಿಯಾದ ಜಿಲ್ಲೆ. ಇಲ್ಲಿ ಅನೇಕ ಪ್ರಕಾರದ ಜಾನಪದ ಕಲೆಗಳು ಅನಾವರಣಗೊಂಡಿವೆ. ಅದಕ್ಕಾಗಿಯೇ ವಿಶೇಷವಾಗಿ ಜಾನಪದ ಲೋಕವನ್ನು ಕಾಣಬಹುದು. ಜಾನಪದ ಕಲೆಗಳ ಸಂಗ್ರಹ ಇಲ್ಲಿದೆ. ಜಾನಪದ ಗಾಯನದಲ್ಲಿ ಬಾನಂದೂರು ಕೆಂಪಯ್ಯನವರು ಹೆಸರುವಾಸಿಯಾಗಿದ್ದಾರೆ. ಅನೇಕ ಹಳ್ಳಿಗಳಲ್ಲಿ ತಾಸು ಗಟ್ಟಲೆಯಲ್ಲದೆ, ದಿನಗಟ್ಟಲೆ ವಿವಿಧ ಕೆಲಸ ಕಾರ್ಯಗಳು, ಸಂಪ್ರದಾಯ ಆಚರಣೆಯ ಜಾನಪದ ವಿವಿಧ ಪ್ರಕಾರದ ಗೀತೆಗಳನ್ನು ಹಾಡುವ ಹಿರಿಯ ತಲೆಗಳು ಜಿಲ್ಲೆಯಲ್ಲಿವೆ.
 
==ಶಾಸ್ತ್ರೀಯ ಸಂಗೀತ==
ರಾಮನಗರ ಜಿಲ್ಲೆಯಲ್ಲಿ ಶಾಸ್ತ್ರೀಯ ಸಂಗೀತದ ಕೊರತೆ ಕಾಣುತ್ತದೆ. ಆದರೆ ಇತಿಹಾಸವನ್ನು ಕೆದಕಿದಾಗ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸಾತನೂರಿನ ಗ್ರಾಮದಲ್ಲಿ ಪುಂಡರೀಕ ವಿಠಲನೆಂಬ ಶ್ರೇಷ್ಠ ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕನಿದ್ದದ್ದು ತಿಳಿದುಬರುತ್ತದೆ. ಈತ ಅಕ್ಬರನ ಆಸ್ಥಾನದಲ್ಲಿ, ತಾನ್ ಸೇನನ ಸಮಕಾಲೀನನಾಗಿದ್ದನಂತೆ. ಈತ ಅಕ್ಬರನ ಬಿರುದಿನೊಂದಿಗೆ ಗೌರವಿಸಲ್ಪಟ್ಟವನೆಂದು ಹೇಳಲಾಗಿದೆ. ಇವನು ಆಗಿನ ಕಾಲಕ್ಕೆ ದಕ್ಷಿಣ ಭಾರತದ ಖ್ಯಾತ ಹಿಂದೂಸ್ಥಾನಿ ಗಾಯಕನಾಗಿದ್ದನೆಂದು ಸ್ಮರಿಸುತ್ತಾರೆ.
 
ಈಗಿನ ಪರಿಸ್ಥಿತಿ ನೋಡಿದಾಗ ಶಾಸ್ತ್ರೀಯ ಸಂಗೀತಕ್ಕೆ ಹೇಳಿ ಮಾಡಿಸಿದ ವಾತಾವರಣವಿಲ್ಲ. ರಾಮನಗರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುವ ವಿದ್ವಾನ್ ನಾರಾಯಣ ಅಯ್ಯಂಗಾರ್ ಅವರ ಹೆಸರು ಕೇಳಿಬರುತ್ತದೆ. ಆದರೂ ಕನಕಪುರದ ಕವಿ, ಲೇಖಕ ಯೋಗ ರವೀಶ್ ಭಾರತ್ ರವರನ್ನು ಮದುವೆಯಾಗಿ ಬಂದಿರುವ ವಡವಾಟಿ ಶಾರದಾ ಭರತ್ ಈ ಜಿಲ್ಲೆಯ ಏಕೈಕ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕರಾಗಿದ್ದರೆಂದು ಹೇಳಿದರೆ ತಪ್ಪಾಗಲಾರದು. ಶಾರದಾ ಕೇವಲ ಶಾಸ್ತ್ರೀಯ ಸಂಗೀತಕ್ಕೆ ಸೀಮಿತರಾಗದೆ ವಿಶೇಷವಾಗಿ ವಚನ ಸಂಗೀತ ಗಾಯನದಲ್ಲಿ ಹೆಸರು ಮಾಡಿರುವ ನಮ್ಮ ರಾಜ್ಯದ ಖ್ಯಾತ ಗಾಯಕರು. ಇವರು ಹಾಡುವ ವಚನ ಸಂಗೀತ ಗಾಯನ ಕೇಳಲು ಮಧುರವಾಗಿರುವುದಷ್ಟೇ ಅಲ್ಲದೆ, ವಿಶೇಷವಾದ ವಚನ ಗಾಯನದ ಪರಂಪರೆಯನ್ನು ಪರಿಚಯಿಸುತ್ತದೆ. ಈ ನಿಟ್ಟಿನಲ್ಲಿ ಅವರು ಆಕಾಶವಾಣಿ ಮತ್ತು ದೂರದರ್ಶನದ "ಎ" ಗ್ರೇಡ್ ಕಲಾವಿದರಾಗಿದ್ದಾರೆ. ಇವರು ಸರ್ಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ರಾಮನಗರ ಜಿಲ್ಲೆಯ ಪ್ರಪ್ರಥಮ ಸದಸ್ಯರಾಗಿ ೨೦೧೪ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ ಇವರ ಅವಧಿಯಲ್ಲಿ ೨೧ನೇ ಫ಼ೆಬ್ರವರಿ ೨೦೧೫ರಲ್ಲಿ ರಾಮನಗರ ಜಿಲ್ಲೆಯ ಪ್ರಪ್ರಥಮ ಜಿಲ್ಲಾ ಸಂಗೀತ ನೃತ್ಯೋತ್ಸವವು ನಡೆದಿದೆ. ೧೬ ಮಾರ್ಚ್ ೨೦೧೬ರಲ್ಲಿ ಜಿಲ್ಲೆಯ ಪ್ರಪ್ರಥಮ ಜಿಲ್ಲಾ ಯುವ ಸಂಗೀತ ನೃತ್ಯೋತ್ಸವವು ಜರುಗಿದೆ.
 
ಇತ್ತೀಚಿನ ಒಳ್ಳೆ ಬೆಳವಣಿಗೆಯೆಂದರೆ ಭರತನಾಟ್ಯಕ್ಕೆ ಪ್ರೋತ್ಸಾಹ ದೊರಕುತ್ತಿರುವುದು. ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿಯ ಎಲ್ಲಾ ತಾಲ್ಲೂಕುಗಳಲ್ಲೂ ಭರತ ನಾಟ್ಯ ಕಲಿಸುತ್ತಿರುವವರು ಹೆಚ್ಚಾಗುತ್ತಿರುವುದರಿಂದ ಭರತನಾಟ್ಯ ಕಲಾವಿದರು ಸೃಷ್ಟಿಯಾಗುತ್ತಿದ್ದಾರೆ. ಕಲೆಯ ಅಭಿವೃದ್ಧಿ ದೃಷ್ತಿಯಿಂದ ಇದೊಂದು ಒಳ್ಳೆಯ ಬೆಳವಣಿಗೆಯಾಗಿದೆ.
 
<gallery>
"https://kn.wikipedia.org/wiki/ರಾಮನಗರ" ಇಂದ ಪಡೆಯಲ್ಪಟ್ಟಿದೆ