ಕ್ಷ-ಕಿರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನ ವಿಸ್ತರಿಸಿದ್ದು
No edit summary
೧ ನೇ ಸಾಲು:
 
[[ಚಿತ್ರ:X-Ray Skull.jpg|right|thumb|150px||ಒಂದು ಕ್ಷ-ಕಿರಣ ಚಿತ್ರ]]
'''ಕ್ಷ-ಕಿರಣ''' ಒಂದು ರೀತಿಯ ವಿದ್ಯುತ್ಕಾಂತೀಯ ವಿಕಿರಣ. ೦.೦೧ ರಿಂದ ೧೦ ನ್ಯಾನೋಮೀಟರ್ ವರೆಗಿನ ತರಂಗಾಂತರವನ್ನು(wavelength) ಹೊಂದಿರುವ ವಿದ್ಯುತ್ಕಾಂತೀಯ [[ವಿಕಿರಣ]]ಗಳಿಗೆ ಕ್ಷ-ಕಿರಣಗಳೆಂದು ಕರೆಯಲಾಗುತ್ತದೆ. ಈ ವಿಕಿರಣಗಳ ತರಂಗಾಂತರ ಗಾಮಾ ವಿಕಿರಣಗಳಿಗಿಂತ ಹೆಚ್ಚು ಮತ್ತು ಅತಿನೇರಳೆ ವಿಕಿರಣಗಳಿಗಿಂತ ಕಡಿಮೆ. ಕ್ಷ- ಕಿರಣಗಳು 3x10<sup>16</sup> Hzರಿಂದ 3x10<sup>18</sup> Hz ರವರೆಗಿನ ವ್ಯಾಪ್ತಿಯ ಕಂಪನಾಂಕವನ್ನು ಹೊಂದಿದ್ದು 100eVನಿಂದ 100keVನಷ್ಟು ಅಗಾಧ ಶಕ್ತಿಯನ್ನು ಹೊಂದಿರುತ್ತವೆ ಕ್ಷ-ಕಿರಣಗಳನ್ನು ಕಂಡುಹಿಡಿದವರು ''ಜರ್ಮನಿಯ ವಿಲ್‍ಹೆಲ್ಮ್ ರಾಂಟ್‍ಜೆನ್.'' ಇದನ್ನು ರಾಂಟ್ ಜೆನ್ ನ ವಿಕಿರಣಗಳು ಎಂದೂ ಕೂಡ ಕರೆಯುತ್ತಾರೆ. ಈ ವಿಕಿರಣಗಳಿಗೆ ಕ್ಷ ವಿಕಿರಣಗಳು ಎಂದು ಹೆಸರನ್ನು ನೀಡಿದವನು '''ವಿಲ್‍ಹೆಲ್ಮ್ ರಾಂಟ್‍ಜೆನ್.'''<ref>{{Cite web |title=X-Rays |url=http://missionscience.nasa.gov/ems/11_xrays.html |publisher=NASA |accessdate=November 7, 2012}}</ref> ಏಕೆಂದರೆ ಅವನ ಪ್ರಕಾರ ಈ ವಿಕಿರಣಗಳು ಅಪರಿಚಿತವಾದ ಹೊಸ ಪ್ರಕಾರದ ವಿಕಿರಣಗಳಾಗಿದ್ದವು. ಈ ಸಂಶೋಧನೆಗಾಗಿ [[ಭೌತಶಾಸ್ತ್ರ]] ಕ್ಷೇತ್ರದ ಮೊದಲ '''[[ನೊಬೆಲ್]] ಬಹುಮಾನವನ್ನು ೧೯೦೧'''ರಲ್ಲಿ ವಿಲ್‍ಹೆಲ್ಮ್ ರಾಂಟ್‍ಜೆನ್ ರಿಗೆ ನೀಡಲಾಯಿತು.
[[File:WilhelmRöntgen.JPG|thumb|170px|ವಿಲ್‍ಹೆಲ್ಮ್ ರಾಂಟ್‍ಜೆನ್.]]
ವೇಗೋತ್ಕರ್ಷಗೊಂಡ ಎಲೆಕ್ಟ್ರಾನ್ ಗಳು ಲೋಹದ ಗುರಿಗೆ ಬಡಿದು ಶಕ್ತಿಯುತವಾದ ವಿಕಿರಣಗಳನ್ನು ಬಿಡುಗಡೆ ಮಾಡುತ್ತವೆ ಇವೇ ಕ್ಷ-ಕಿರಣಗಳಾಗಿರುತ್ತವೆ .ಮೂಲಭೂತವಾಗಿ ಕ್ಷ-ಕಿರಣಗಳು ಮತ್ತು ಗಾಮಾ ವಿಕಿರಣಗಳ ನಡುವಿನ ವ್ಯತ್ಯಾಸವನ್ನು ಅವುಗಳನ್ನು ಯಾವ ಮೂಲದಿಂದ ಪಡೆಯಲಾಗಿದೆ ಎಂಬುದರಿಂದ ನಿರ್ಧರಿಸಲಾಗುತ್ತದೆ. ಅಂದರೆ ಕ್ಷ-ಕಿರಣಗಳು '''electron''' ಗಳಿಂದ ಹೊರಸೂಸಲ್ಪಡುತ್ತವೆ ಮತ್ತು ಗಾಮಾ [[ವಿಕಿರಣ]]ಗಳು ಪರಮಾಣುವಿನ ಬೀಜಕೇಂದ್ರದಿಂದ ಹೊರಸೂಸಲ್ಪಡುತ್ತವೆ .. <ref name="Dendy">{{Cite book |last= Denny |first= P. P. |author2= B. Heaton |title= Physics for Diagnostic Radiology |publisher= CRC Press |year= 1999 |location= USA |page= 12 |url= https://books.google.com/?id=1BTQvsQIs4wC&pg=PA12 |isbn= 0-7503-0591-6}}</ref><ref>{{Cite book |last= Feynman |first= Richard |authorlink= |author2=Robert Leighton |author3=Matthew Sands |title= The Feynman Lectures on Physics, Vol.1 |publisher= Addison-Wesley |year= 1963 |location= USA |pages= 2–5 |isbn= 0-201-02116-1}}</ref><ref>{{Cite book |last= L'Annunziata |first= Michael |author2=Mohammad Abrade |title= Handbook of Radioactivity Analysis |publisher= Academic Press |year= 2003 |page= 58 |url= https://books.google.com/?id=b519e10OPT0C&pg=PA58&dq=gamma+x-ray |isbn= 0-12-436603-1}}</ref><ref>{{Cite book |last= Grupen |first= Claus |author2=G. Cowan |author3=S. D. Eidelman |author4=T. Stroh |title= Astroparticle Physics |publisher= Springer |year= 2005 |page= 109 |isbn= 3-540-25312-2}}</ref>ಆದರೆ ಈ ಹೇಳಿಕೆಯ ಬದಲಾಗಿ ಈ ಎರಡು ವಿಕಿರಣಗಳ ನಡುವಿನ ತರಂಗಾಂತರದ ವ್ಯತ್ಯಾಸದಿಂದ ಗುರುತಿಸುವುದು ಸೂಕ್ತವಾಗುತ್ತದೆ. ಕ್ಷ-ಕಿರಣಗಳನ್ನು ಕಠಿಣ ಮತ್ತು ಮೆದು ಕ್ಷ -ಕಿರಣಗಳು ಎಂದು ಎರಡು ವಿಧವಾಗಿ ವಿಂಗಡಿಸಬಹುದು . <ref>{{Cite web |url=http://physics.nist.gov/cgi-bin/ffast/ffast.pl?Formula=H2O&gtype=5&range=S&lower=0.300&upper=2.00&density=1.00 |title=Physics.nist.gov |publisher=Physics.nist.gov |accessdate=2011-11-08}}</ref> ಕ್ಷ-ಕಿರಣಗಳು ವಸ್ತುವಿನ ಮೂಲಕ ಹಾದು ಹೋಗುವಾಗ ಅಣುಬಂಧಗಳಲ್ಲಿ ಬದಲಾವಣೆ ತರುವಂತಹ ಅಗಾಧ ಶಕ್ತಿಯನ್ನು ಹೊಂದಿರುತ್ತವೆ. ಕ್ಷ-ಕಿರಣಗಳು ವಸ್ತುವಿನ ಮೂಲಕ ಸಲೀಸಾಗಿ ಚೆದುರದೆ ಮತ್ತು ಹೀರಲ್ಪಡದೆ ಸಾಗುವ ಗುಣವನ್ನು ಹೊಂದಿವೆ. ಈ ವಿಕಿರಣಗಳ ತರಂಗಾಂತರ ('''wavelength''') ಗೋಚರ ಬೆಳಕಿಗಿಂತ ಕಡಿಮೆಯಿರುವುದರಿಂದ ಸೂಕ್ಷ್ಮದರ್ಶಕದ ಮೂಲಕ ಗೋಚರಿಸದ ವಸ್ತುವಿನ ರಚನೆಯನ್ನು ವೀಕ್ಷಿಸಬಹುದಾಗಿದೆ. ಈ ವಿಕಿರಣಗಳನ್ನು ಬಳಸಿ ಹರಳುಗಳಲ್ಲಿ (crystal) ಪರಮಾಣುಗಳ ಸ್ಥಾನವನ್ನು ನಿರ್ಧರಿಸಲು ಸಾಧ್ಯವಿದೆ. ಈ ವಿಕಿರಣಗಳು ಉನ್ನತ ಮಟ್ಟ್ತದ ಹಾದು ಹೋಗುವ ಗುಣವನ್ನು ಹೊಂದಿರುವುದರಿಂದ ಇವುಗಳನ್ನು ಒಂದು ವಸ್ತುವಿನ ಆಂತರಿಕ ಚಿತ್ರಗಳನ್ನು ಪಡೆಯಲು ವೈದ್ಯಕೀಯ ರಂಗದಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಪರಿಶೋಧಕ ಯಂತ್ರಗಳಲ್ಲಿ ( scanner) ವ್ಯಾಪಕವಾಗಿ ಬಳಸುತ್ತಾರೆ.
೭ ನೇ ಸಾಲು:
== ಕ್ಷ-ಕಿರಣದ ಉಪಯೋಗಗಳು ==
# ಕ್ಷ-ಕಿರಣಗಳನ್ನು ಕ್ಷ-ಕಿರಣ ಬಿಂಬನ (x-ray imaging )ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಅಂದರೆ ದೇಹದ ಒಳಭಾಗಗಳಲ್ಲಿನ ಮುರಿತ, ಊತಗಳು,ಅನಪೇಕ್ಷಿತ ರಚನೆಗಳ ಬಗ್ಗೆ ತಿಳಿಯಲು ಬಳಸಲಾಗುತ್ತಿದೆ.
# ಕ್ಷ-ಕಿರಣಗಳನ್ನು [[ಕ್ಯಾನ್ಸರ್]] ಪೀಡಿತ ಜೀವಕೋಶಗಳನ್ನು ನಾಶಪಡಿಸಲು ಕ್ಷ-ಕಿರಣ ಚಿಕಿತ್ಸೆ (x -ray therapy) ರೂಪದಲ್ಲಿ ಬಳಸಲಾಗುತ್ತದೆ.ಆದರೆ ಈ ರೀತಿ ಮಾಡುವಾಗ ಆರೋಗ್ಯಕರ ಜೀವಕೋಶಗಳು ಸಹ ನಾಶಗೊಳಗಾಗುವ ಸಾಧ್ಯತೆ ಇರುತ್ತದೆ.
#ಕ್ಷ-ಕಿರಣಗಳನ್ನು ಬಳಸಿ ಪರಿಶೋಧಕ ಯಂತ್ರಗಳು ( scanner)ಕೆಲಸ ಮಾಡುತ್ತವೆ .
#ಕ್ಷ-ಕಿರಣಗಳ ಬಳಕೆಯಿಂದ ಹರಳುಗಳಲ್ಲಿನ ಪರಮಾಣುಗಳ ಸ್ಥಾನವನ್ನು ನಿರ್ಧರಿಸಲು ಸಾಧ್ಯವಿದೆ.ಆದ್ದರಿಂದ ಹರಳುಶಾಸ್ತ್ರ(crystallography ) ಕ್ಷೇತ್ರದಲ್ಲಿ ಇದರ ಅಪಾರ ಉಪಯುಕ್ತತೆ ಕಂಡುಬರುತ್ತದೆ.
#ಕ್ಷ -ಕಿರಣಗಳನ್ನು ಹಳೆಯ ಕಲಾಕೃತಿಗಳ, ಚಿತ್ರಗಳ ಆಯುಷ್ಯ ತಿಳಿಯಲು ಮತ್ತು ಅವುಗಳಲ್ಲಿರುವ ಬ್ರಷ್ ಸ್ಟ್ರೋಕ್ ಗಳ (brush stroke )ಬಗ್ಗೆ ತಿಳಿಯಲು ಬಳಸುತ್ತಾರೆ.
== ಕ್ಷ-ಕಿರಣದ ದುಷ್ಪರಿಣಾಮಗಳು ==
#ಪದೇ ಪದೇ ಕ್ಷ-ಕಿರಣಗಳಿಗೆ ದೇಹವನ್ನು ಒಡ್ಡುವುದರಿಂದ ದೇಹದ ಆರೋಗ್ಯವಂತ ಜೀವಕೋಶಗಳು[[ಜೀವಕೋಶ]] ನಾಶವಾಗುವ ಸಾಧ್ಯತೆ ಇರುತ್ತದೆ.<ref>[http://lghidey-x-rays.blogspot.in/2011/10/x-rays-advantages-and-disadvantages.html X-rays: Advantages and Disadvantages]</ref>
#ಕ್ಷ-ಕಿರಣಗಳು ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸುತ್ತವೆ .
#ಅತಿಯಾಗಿ ಕ್ಷ-ಕಿರಣಗಳನ್ನು ಬಳಸಿ ಕಾರ್ಯನಿರ್ವಹಿಸಿದರೆ ನಮ್ಮ ಜೀವಕೋಶಗಳ [[ಡಿ.ಎನ್.ಎ|ಡಿಎನ್ಎ]] (DNA) ಸಂರಚನೆಯೇ ಏರುಪೇರಾಗುವ ಸಾಧ್ಯತೆ ಕಂಡಬರುತ್ತದೆ.
 
==ಉಲ್ಲೇಖಗಳು==
"https://kn.wikipedia.org/wiki/ಕ್ಷ-ಕಿರಣ" ಇಂದ ಪಡೆಯಲ್ಪಟ್ಟಿದೆ