ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಒರಿಸ್ಸಾ → ಒಡಿಶಾ (2) using AWB
೩೬ ನೇ ಸಾಲು:
ದೇಶದ ಎಲ್ಲ ರಾಜ್ಯಗಳ ಪೈಕಿ ಆಂಧ್ರ ಪ್ರದೇಶವು ಎರಡನೇ ಅತಿ ಉದ್ದದ ಕರಾವಳಿ (೯೭೨ km)ಪ್ರದೇಶವನ್ನು ಹೊಂದಿದೆ. ಗುಜರಾತ್‌‌ ರಾಜ್ಯವು ಅತಿ ಉದ್ದದ ಕರಾವಳಿ (೧೬೦೦ km)ಯನ್ನು ಹೊಂದಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.<ref>{{cite web|url=http://www.aponline.gov.in/quick%20links/apfactfile/apfactmain.html |title=:: Citizen Help |publisher=APOnline |date=1956-11-01 |accessdate=2009-03-03}}</ref>
 
ಆಂಧ್ರ ಪ್ರದೇಶವು ೧೨°೪೧' ಮತ್ತು ೨೨°N ಅಕ್ಷಾಂಶ ಹಾಗೂ ೭೭° ಮತ್ತು ೮೪°೪೦'E ರೇಖಾಂಶಗಳ ನಡುವೆ ಇದೆ. ಇದು ಉತ್ತರದಲ್ಲಿ ಮಹಾರಾಷ್ಟ್ರ, ಛತ್ತಿಸ್‌ಗಡ ಮತ್ತು ಒರಿಸ್ಸಾಒಡಿಶಾ ರಾಜ್ಯಗಳು, ಪೂರ್ವದಲ್ಲಿ ಬಂಗಾಳಕೊಲ್ಲಿ, ದಕ್ಷಿಣಕ್ಕೆ ತಮಿಳುನಾಡು ಹಾಗೂ ಪಶ್ಚಿಮಕ್ಕೆ ಕರ್ನಾಟಕ ರಾಜ್ಯವನ್ನು ತನ್ನ ಗಡಿಯನ್ನಾಗಿ ಹೊಂದಿದೆ. ಆಂಧ್ರ ಪ್ರದೇಶವು ಐತಿಹಾಸಿಕವಾಗಿ "''ಭಾರತದ ಅನ್ನದ ಪಾತ್ರೆ'' " ಎಂದು ಕರೆಯಲ್ಪಟ್ಟಿದೆ. ಏಕೆಂದರೆ, ೭೭%ಗೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ.
ಇದರ <ref>http://www.irri.org/science/ricestat/data/may2008/WRS2008-Table07.pdf</ref> ಎರಡು ಪ್ರಮುಖ ನದಿಗಳಾದ [[ಗೋದಾವರಿ ನದಿ|ಗೋದಾವರಿ]] ಮತ್ತು [[ಕೃಷ್ಣಾ ನದಿ|ಕೃಷ್ಣಾ]] ರಾಜ್ಯದ ಉದ್ದಗಲಕ್ಕೂ ಹರಿಯುತ್ತವೆ. [[ಪುದುಚೆರಿ]] (ಪಾಂಡಿಚೆರಿ) ರಾಜ್ಯದ [[ಯಾಣಂ (ಭಾರತ)|ಯಾಣಮ್]] ಜಿಲ್ಲೆಯ ಪರಾವೃತ ಪ್ರದೇಶವು (೧೨ sq mi (೩೦ km²)) ರಾಜ್ಯದ ಈಶಾನ್ಯ ಭಾಗದಲ್ಲಿನ ಗೋದಾವರಿ ನದಿ ಮುಖಜ ಭೂಮಿ ಪ್ರದೇಶದಲ್ಲಿದೆ.
 
೨೭೯ ನೇ ಸಾಲು:
ಭಾರತದಾದ್ಯಂತ ಇರುವ ಹಿಂದೂಗಳಿಗೆ [[ತಿರುಮಲ-ತಿರುಪತಿ|ತಿರುಪತಿ ಅಥವಾ ತಿರುಮಲ]] ಒಂದು ಬಹು ಮುಖ್ಯ ಯಾತ್ರಾಸ್ಥಳವಾಗಿದೆ. ಇದು ಇಡೀ ಜಗತ್ತಿನಲ್ಲಿನ (ಯಾವುದೇ ಧಾರ್ಮಿಕ ನಂಬುಗೆಗೆ ಸೇರಿದವುಗಳ ಪೈಕಿ) ಅತಿ ಶ್ರೀಮಂತ ಯಾತ್ರಾನಗರವಾಗಿದೆ. ಇದರ ಮುಖ್ಯ ದೇವಸ್ಥಾನವು [[ವೆಂಕಟೇಶ್ವರ|ವೆಂಕಟೇಶ್ವರದೇವರಿಗೆ]] ಸಮರ್ಪಣೆಯಾಗಿದೆ. ತಿರುಪತಿಯು [[ಚಿತ್ತೂರ್‌|ಚಿತ್ತೂರ್]] ಜಿಲ್ಲೆಯಲ್ಲಿದೆ. [[ಸತ್ಯನಾರಾಯಣ ಸ್ವಾಮಿ]] ದೇವಸ್ಥಾನ ಪೂರ್ವ ಗೋದಾವರಿ ಜಿಲ್ಲೆಯ ಅಣ್ಣಾವರಂನಲ್ಲಿರುವ ಪ್ರಸಿದ್ಧ ದೇವಸ್ಥಾನ.
[[ಸಿಂಹಾಚಲಂ]] ಮತ್ತೊಂದು ಜನಪ್ರಿಯ ಯಾತ್ರಾ ಸ್ಥಳವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಸಿಂಹಾಚಲಂ ಯಾತ್ರಾಸ್ಥಳವು, [[ಪ್ರಹ್ಲಾದ|ಪ್ರಹ್ಲಾದನನ್ನು]] ಅವನ ದುಷ್ಠ ತಂದೆ [[ಹಿರಣ್ಯಕಶಿಪು|ಹಿರಣ್ಯಕಶಿಪುವಿನಿಂದ]] ರಕ್ಷಿಸಿದ ಸಂರಕ್ಷಕ ದೇವರಾದ [[ನರಸಿಂಹ|ನರಸಿಂಹನ]] ನೆಲೆಬೀಡಾಗಿತ್ತು ಎಂದು ಪುರಾಣದಲ್ಲಿ ಹೇಳಲಾಗಿದೆ. [[ವಿಜಯವಾಡ]] ನಗರದಲ್ಲಿರುವ [[ಕನಕದುರ್ಗ ದೇವಸ್ಥಾನ|ಕನಕ ದುರ್ಗ ದೇವಸ್ಥಾನ]] ಆಂಧ್ರ ಪ್ರದೇಶದ ಜನಪ್ರಿಯ ದೇವಸ್ಥಾನಗಳಲ್ಲೊಂದು. [[ಶ್ರೀ ಕಾಳಹಸ್ತಿ]] ಯು ಬಹಳ ಮುಖ್ಯವಾದ ಪ್ರಾಚೀನ ಶಿವನ ದೇವಸ್ಥಾನಗಳಲ್ಲಿ ಒಂದಾಗಿದ್ದು, [[ಚಿತ್ತೂರ್‌|ಚಿತ್ತೂರ್‌‌]] ಜಿಲ್ಲೆಯಲ್ಲಿನ [[ಸ್ವರ್ಣಮುಖಿ]] ನದಿಯ ದಡದಲ್ಲಿದೆ.
ಸಿಂಹಾಚಲಂ ಕ್ಷೇತ್ರವು ಪರ್ವತದ ಮೇಲಿರುವ ಪುಣ್ಯಕ್ಷೇತ್ರವಾಗಿದ್ದು ವಿಶಾಖಪಟ್ಟಣಂನಿಂದ ೧೬ ಕಿ.ಮೀ.ನಷ್ಟು ದೂರದಲ್ಲಿದೆ ಹಾಗೂ ನಗರದ ಉತ್ತರ ದಿಕ್ಕಿನಲ್ಲಿರುವ ಬೆಟ್ಟದ ಮತ್ತೊಂದು ಭಾಗದಲ್ಲಿದೆ. ಇದು ಅತಿ ಮನೋಹರ ಶಿಲ್ಪಕಲೆಯನ್ನು ಒಳಗೊಂಡ ಆಂಧ್ರ ಪ್ರದೇಶದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದ್ದು, ದಟ್ಟವಾದ ಅರಣ್ಯದಿಂದ ಆವೃತವಾಗಿರುವ ಬೆಟ್ಟಗಳ ಮಧ್ಯದಲ್ಲಿ ಸ್ಥಾಪಿತಗೊಂಡಿದೆ. ಅತ್ಯಂತ ಸುಂದರವಾಗಿ ಕೆತ್ತಲಾಗಿರುವ ೧೬ ಕಂಬಗಳ ನಾಟ್ಯ ಮಂಟಪ ಮತ್ತು ೯೬ ಕಂಬಗಳ ಕಲ್ಯಾಣ ಮಂಟಪಗಳು ದೇವಸ್ಥಾನದ ಉತ್ಕೃಷ್ಠ ವಾಸ್ತುಶೈಲಿಗೆ ಸಾಕ್ಷಿಯಾಗಿವೆ. ತನ್ನ ಸ್ಥಾನವನ್ನು ಅಲಂಕರಿಸಿರುವ ದೈವವಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿಗೆ ಚಂದನದ ದಪ್ಪ ಲೇಪನವನ್ನು ಮಾಡಲಾಗಿದೆ. ಇದು, [[ವಿಷ್ಣು|ವಿಷ್ಣುವಿನ]] ಅವತಾರಗಳಲ್ಲೊಂದಾದ [[ನರಸಿಂಹ ಸ್ವಾಮಿ|ನರಸಿಂಹ ಸ್ವಾಮಿಗೆ]] ಸಮರ್ಪಿಸಲಾದ ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದ್ದು, [[ಚೋಳ|ಚೋಳರ]] ದೊರೆಯಾದ ಕುಲೋತ್ತುಂಗ ೧೧ ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಿದ. ಒರಿಸ್ಸಾದಒಡಿಶಾದ ಗಜಪತಿ ದೊರೆಗಳ ಮೇಲೆ ವಿಜಯಿಯಾಗಿ ಹೊರಹೊಮ್ಮಿದ ನೆನಪಿಗಾಗಿ [[ಶ್ರೀ ಕೃಷ್ಣದೇವ ರಾಯ|ಶ್ರೀ ಕೃಷ್ಣ ದೇವರಾಯ]]ನು ಸ್ಥಾಪಿಸಿದ ವಿಜಯ ಸ್ಢಂಭ ಇಲ್ಲಿದೆ. ಈ ದೇವಸ್ಥಾನದಲ್ಲಿ ಪ್ರಾಚೀನ [[ತೆಲುಗು]] ಶಾಸನಗಳನ್ನು ಕಾಣಬಹುದು. ಈ ದೇವಾಲಯವು ಭಾರತದಲ್ಲಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲೊಂದು.ಇದು ದ್ರಾವಿಡ (ದಕ್ಷಿಣ ಭಾರತದ) ವಾಸ್ತುಶೈಲಿಯನ್ನು ಹೊಂದಿದೆ.ನೆರೆಹಾವಳಿ, ಚಂಡಮಾರುತ, ಭೂಕಂಪ ಮತ್ತು ಸುನಾಮಿಯಂತಹ ನೈಸರ್ಗಿಕ ವಿಕೋಪಗಳಿಂದ ವೈಜಾಗ್‌ನ್ನು ಈ ಸ್ವಾಮಿಯು ರಕ್ಷಿಸುತ್ತಿದ್ದಾನೆ ಎಂಬ ಜನಪ್ರಿಯ ನಂಬಿಕೆಯು ಇಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ, ಇಲ್ಲಿಯವರೆಗೂ ನೈಸರ್ಗಿಕ ವಿಕೋಪಗಳಿಂದ ಒಂದೇ ಒಂದು ಸಾವು ಕೂಡ ಸಂಭವಿಸಿಲ್ಲ. ಪತಿ-ಪತ್ನಿಯಾಗ ಬಯಸುವ ಜೋಡಿಗಳು ಮದುವೆಗೆ ಮುಂಚೆ ಈ ದೇವಸ್ಥಾನಕ್ಕೆ ಹೋಗುವುದು ಒಂದು ವಾಡಿಕೆಯಾಗಿದೆ. ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ಜನಸಂದಣಿಯಿರುವ ಕೂಡಿರುವ ದೇವಸ್ಥಾನಗಳಲ್ಲಿ ಈ ದೇವಸ್ಥಾನವೂ ಒಂದು.
[[ಚಿತ್ರ:Hussain Sagar lake, Hyderabad.jpg|thumb|250px|right|ಹುಸೇನ್‌ ಸಾಗರ್ ಸರೋವರದ ಮೇಲಿನ ಬುದ್ಧನ ವಿಗ್ರಹ]]
[[ಶ್ರೀ ಶೈಲಂ]], ಆಂಧ್ರ ಪ್ರದೇಶದ ಮತ್ತೊಂದು ಮಹತ್ವದ ದೇವಾಲಯವಾಗಿದ್ದು, ಇದೂ ಕೂಡ ರಾಷ್ಟ್ರಮಟ್ಟದ ಪ್ರಾಮುಖ್ಯತೆಯನ್ನು ಪಡೆದಿದೆ. ಇದು [[ಶಿವ]] ದೇವರಿಗೆ ಸಮರ್ಪಿಸಲ್ಪಟ್ಟಿರುವ ದೇವಾಲಯವಾಗಿದೆ. ವಿವಿಧ [[ಜ್ಯೋತಿರ್ಲಿಂಗಂ|ಜ್ಯೋತಿರ್ಲಿಂಗ]]ಗಳಿರುವ ಹಲವು ಸ್ಥಳಗಳ ಪೈಕಿ ಇದೂ ಒಂದಾಗಿದೆ. ''[[ಸ್ಜಂದ ಪುರಾಣ|ಸ್ಕಂದ ಪುರಾಣ]]'' ದಲ್ಲಿ "ಶ್ರೀ ಶೈಲ ಕಾಂಡಂ' ಎಂಬ ಅಧ್ಯಾಯವಿದ್ದು ಅದು ಸಂಪೂರ್ಣವಾಗಿ ಈ ಸ್ಥಳಕ್ಕೇ ಸಂಬಂಧಿಸಿದ್ದಾಗಿದೆ. ಈ ಅಧ್ಯಾಯದಲ್ಲಿ ಈ ಸ್ಥಳದ ಪ್ರಾಚೀನ ಮೂಲದ ಬಗ್ಗೆ ಉಲ್ಲೇಖವಿದೆ. ಕಳೆದ ಸಹಸ್ರಮಾನದ ತಮಿಳು ಸಂತರು ಈ ದೇವಾಲಯದ ಕುರಿತು ಹಾಡಿ ಹೊಗಳಿರುವುದರಿಂದಲೂ ಇದರ ಪ್ರಾಚೀನತೆಯು ದೃಢಪಟ್ಟಿದೆ.[[ಆದಿ ಶಂಕರ|ಆದಿ ಶಂಕರರು]] ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಮತ್ತು ಆ ಸಮಯದಲ್ಲಿಯೇ ತಮ್ಮ "''[[ಶಿವಾನಂದ ಲಹರಿ]]'' "ಯನ್ನು ರಚಿಸಿದರು ಎಂದು ಹೇಳಲಾಗಿದೆ. ಶಿವನ ಪವಿತ್ರ ಬಸವನಾಗಿರುವ ವೃಷಭನು, ಶಿವ ಮತ್ತು [[ಪಾರ್ವತಿ|ಪಾರ್ವತಿಯರು]] ತನ್ನ ಎದುರು ಮಲ್ಲಿಕಾರ್ಜುನ ಮತ್ತು ಭ್ರಮರಾಂಬರ ರೂಪದಲ್ಲಿ ಕಾಣಿಸಿಕೊಳ್ಳುವವರೆಗೂ [[ಮಹಾಕಾಳಿ]] ದೇವಸ್ಥಾನದಲ್ಲಿ ತಪಸ್ಸು ಮಾಡಿದ್ದ ಎಂಬುದೊಂದು ನಂಬಿಕೆಯಿದೆ. ಈ ದೇವಸ್ಥಾನವು ೧೨ ಪವಿತ್ರ [[ಜ್ಯೋತಿರ್ಲಿಂಗಗಳು|ಜ್ಯೋತಿರ್ಲಿಂಗ]]ಗಳಲ್ಲಿ ಒಂದಾಗಿದೆ. [[ರಾಮ|ಶ್ರೀರಾಮ ಸ್ವಾಮಿ]]ಯು ಸ್ವತಃ ಇಲ್ಲಿ ಸಹಸ್ರಲಿಂಗಗಳನ್ನು ಪ್ರತಿಷ್ಠಾಪಿಸಿದ; ಜೊತೆಗೆ ಪಾಂಡವರು ಪಂಚಪಾಂಡವ ಲಿಂಗಗಳನ್ನು ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದರು ಎನ್ನಲಾಗಿದೆ. ಶ್ರೀ ಶೈಲಂ ಕ್ಷೇತ್ರವು [[ಕರ್ನೂಲ್‌]] ಜಿಲ್ಲೆಯಲ್ಲಿದೆ.
"https://kn.wikipedia.org/wiki/ಆಂಧ್ರ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ