ಆರ್ಟಿಯೊಡ್ಯಾಕ್ಟೈಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "Chordate": unwanted link. (TW)
೫೩ ನೇ ಸಾಲು:
ಉತ್ತರ ಅಮೆರಿಕದಲ್ಲಿ, ಆಟಿಲೊಕ್ಯಾಪ್ರಿಡೀ ಕುಟುಂಬ ಮಯೋಸೀನ್ ಕಾಲದಲ್ಲಿ ಕಂಡುಬಂದಿತು. ಈ ಬಳಗದ ಜೀವಿಯಾದ ಪ್ರಾಂಗ್‍ಹಾರ್ನ್ ಕೊಂಬುಗಳು, ಜಿಂಕೆಗಳಲ್ಲಿರು ವಂತೆ ಎರಡಾಗಿ ಕವಲೊಡೆದಿವೆ. ಇವುಗಳ ಕೊಂಬಿನ ಹೊರಹೊದಿಕೆ ವರ್ಷಂಪ್ರತಿ ಉದುರಿ ಬೀಳುತ್ತದೆ. ನೈಜ ಎರಳೆಗಳಲ್ಲಿರುವಂತೆ ಇವುಗಳಲ್ಲಿ ಪ್ರತಿಯೊಂದು ಕೊಂಬಿನಲ್ಲಿರುವ ಮಧ್ಯಭಾಗದ ಅಸ್ಥಿ ಏನೇ ಆದರೂ ತಲೆಬುರುಡೆ ಸ್ಥಿರವಾಗಿ ನಾಟಿಕೊಂಡಿರುತ್ತದೆ. ಮೊದಲು ಈ ಬಳಗದಲ್ಲಿ ವಿಲಕ್ಷಣವಾದ ಕೊಂಬುಗಳನ್ನುಳ್ಳ ಹಲವು ಪ್ರಾಣಿಗಳು ಹುಟ್ಟಿದ್ದವು. ಆದರೆ ಈಗ ಪ್ರಾಂಗ್‍ಹಾರ್ನ್ ಎರಳೆಯ ಒಂದು ಜಾತಿ ಮಾತ್ರ ಜೀವಂತವಾಗಿದೆ. ಮೆಲುಕುಹಾಕುವ ಪ್ರಾಣಿಗಳಲ್ಲಿ ಅತ್ಯಂತ ವಿಶೇಷವಾದ ವೈಶಿಷ್ಟ್ಯವನ್ನುಳ್ಳದ್ದೂ ವೈವಿಧ್ಯವನ್ನುಳ್ಳದ್ದೂ ಎಂದರೆ ಬೋವಿಡೀ ಕುಟುಂಬ. ಇವು ಟೊಳ್ಳುಗೊಂಬಿನ ಮೆಲಕುಹಾಕುವ ಸ್ತನಿಗಳು. ಈ ಕುಟುಂಬ ಏಷ್ಯಾದಲ್ಲಿ ಮಯೋಸೀನ್ನ ಕಾಲಾವಧಿಯಲ್ಲಿ ಕಾಣಿಸಿಕೊಂಡಿತು. ಅನಂತರ ಇದು ಯುರೋಪ್, ಆಫ್ರಿಕ ಮತ್ತು ಹೊಸ ಪ್ರಪಂಚಕ್ಕೂ ಹರಡಿತು. ಈ ಕುಟುಂಬದ ಜೀವಿಸಿರುವ ಪ್ರತಿನಿಧಿಗಳೆಂದರೆ- ಸಾಕಿದ ದನಕರುಗಳು, ಆಡುಗಳು, ಕುರಿಗಳು, ಎರಳೆಗಳು, ನೀಲಗಾಯಿಗಳು, ಚಿಗರೆಗಳು. ಸಾಮಾನ್ಯವಾಗಿ ಗಂಡು ಮತ್ತು ಹೆಣ್ಣುಗಳೆರಡರಲ್ಲೂ ಒಂದು ಜೊತೆ ಟೊಳ್ಳು ಕೊಂಬುಗಳಿರುತ್ತವೆ. ಇವುಗಳಲ್ಲಿ ಕವಲೊಡೆ ಯುವ ಕೊಂಬುಗಳು ಉದುರಿಬೀಳುವುದಿಲ್ಲ. ಬೋವಿಡೀ ಕುಟುಂಬದಲ್ಲಿ ಸಾಕುವ ಪ್ರಾಣಿಗಳೇ ಅಧಿಕ.
==ಬಾಹ್ಯ ಸಂಪರ್ಕಗಳು==
*ಅಚ್ಚರಿಯ ಕಡವೆ ಮೂಸ್:[[http://www.prajavani.net/article/%E0%B2%85%E0%B2%9A%E0%B3%8D%E0%B2%9A%E0%B2%B0%E0%B2%BF%E0%B2%AF-%E0%B2%95%E0%B2%A1%E0%B2%B5%E0%B3%86-%E0%B2%AE%E0%B3%82%E0%B2%B8%E0%B3%8D]]
*[http://www.ultimateungulate.com/NewTaxonomy.html Ungulate Taxonomy: A new perspective from Groves and Grubb (2011)]
[[ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಆರ್ಟಿಯೊಡ್ಯಾಕ್ಟೈಲ" ಇಂದ ಪಡೆಯಲ್ಪಟ್ಟಿದೆ