ಎಲ್.ವಿ.ಶಾರದಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
'''[[ಎಂ.ಕೆ.ಇಂದಿರಾ]]''' ಅವರ ಕಾದಂಬರಿ ಆಧರಿಸಿದ, ಪ್ರೇಮಾ ಕಾರಂತ್ ನಿರ್ದೇಶನದ '''[[ಫಣಿಯಮ್ಮ]]''' ಚಿತ್ರದಲ್ಲಿ ವಿಧವೆಯಾಗಿ ತಲೆ ಬೋಳಿಸಿಕೊಂಡು, ಕೈಯಲ್ಲಿ ಜಪಸರ ಹಿಡಿದು ಕಣ್ಣೀರಿನಲ್ಲೇ ಜೀವನ ಸಾಗಿಸಿದ ೭೦ ವರ್ಷದ '''ಫಣಿಯಮ್ಮ'''ನ ಅಂತರಂಗವನ್ನು ಶಾರದಾ ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ. ತಾನು ಸಮಾಜದ ಕಟ್ಟುಪಾಡುಗಳಿಗೆ ಒಳಗಾಗಿ ಬದುಕಿದರೂ, ವಿಧವೆಯಾಗಿದ್ದರೂ ಮೈದುನನಿಂದಲೇ ಗರ್ಭಿಣಿಯಾಗುವ ಇನ್ನೋರ್ವ ವಿಧವೆಯ ಪರವಾಗಿ ನಿಲ್ಲುವ ಮೂಲಕ ನವಿರಾಗಿ ಮಹಿಳಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಪಾತ್ರವನ್ನು ಹೃದಯಸ್ಪರ್ಶಿಯಾಗಿ ನಿರ್ವಹಿಸಿದ್ದಾರೆ. ತುಂಬಾ ಕಡಿಮೆ ಸಂಭಾಷಣೆಗಳಿದ್ದ ಈ ಚಿತ್ರದಲ್ಲಿ ವಿಧವೆಯ ನೋವು-ನಲಿವುಗಳನ್ನು ತಮ್ಮ ಕಣ್ಣುಗಳಿಂದಲೇ ಅದ್ಭುತವಾಗಿ ಅಭಿವ್ಯಕ್ತಿಸಿದ್ದರು. ಈ ಪಾತ್ರಕ್ಕಾಗಿ ಶಾರದಾ ತಲೆಕೂದಲನ್ನು ತೆಗೆಸಿಕೊಂಡಿದ್ದು ದೊಡ್ದ ಸುದ್ದಿಯಾಗಿತ್ತು<ref name="ಭಾರತಿ ಹೆಗಡೆ"/>.
 
ಮೊದಲ ಚಿತ್ರಕ್ಕೆ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ ಬಂದದ್ದರಿಂದ ಗುಣಮಟ್ಟದ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳಬೇಕೆಂದು ಶಾರದಾ ನಿರ್ಧರಿಸಿದ್ದರು. ಇದೇ ವೇಳೆಯಲ್ಲಿ '''[[ಎರಡು ಕನಸು]]'''(೧೯೭೪) ಚಿತ್ರದಲ್ಲಿ '''[[ಕಲ್ಪನಾ]]''' ಅಭಿನಯಿಸಿದ ಪಾತ್ರಕ್ಕೆ ಅವಕಾಶ ಬಂದಿತ್ತು. ಎರಡು ದಿನ ಯೋಚಿಸಿ ವ್ಯಾಪಾರಿ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲವೆಂದು ನಿರ್ಧರಿಸಿದ ಶಾರದಾ ಆ ಪಾತ್ರವನ್ನು ತಿರಸ್ಕರಿಸಿದ್ದರು. ವ್ಯಾಪಾರಿ ಚಿತ್ರಗಳ ಹಿನ್ನೆಲೆಯಿಂದ ಬಂದಿದ್ದರೂ ಸಿದ್ದಲಿಂಗಯ್ಯ ಪಾತ್ರಗಳ ತುಮುಲವನ್ನು ಸೂಕ್ಷ್ಮವಾಗಿ ಹಿಡಿಯಬಲ್ಲವರಾಗಿದ್ದರಿಂದ '''[[ಬೂತಯ್ಯನ ಮಗ ಅಯ್ಯು]]'''(೧೯೭೪) ಚಿತ್ರದಲ್ಲಿ ಅಭಿನಯಿಸಿದ ಶಾರದಾ ಅಯ್ಯುವಿನ ಹೆಂಡತಿಯ ಪಾತ್ರದಲ್ಲಿ ಅಭಿನಯಿಸಿದಗಮನಾರ್ಹ ಶಾರದಾಅಭಿನಯ ಅವರ ನಟನೆ ಗಮನಾರ್ಹನೀಡಿದ್ದಾರೆ. ಸಿದ್ದಲಿಂಗಯ್ಯನವರ '''[[ಹೇಮಾವತಿ]]'''(೧೯೭೭) ಚಿತ್ರದಲ್ಲೂ ಚಿಕ್ಕ ಪಾತ್ರವನ್ನು ಪರಿಣಾಮಕಾರಿಯಾಗಿ ಶಾರದಾ ನಿರ್ವಹಿಸಿದ್ದರು. '''ಪ್ರೇಮಾ ಕಾರಂತ'''ರ '''[[ಒಂದು ಪ್ರೇಮದ ಕಥೆ]]'''(೧೯೭೭) ಚಿತ್ರವನ್ನು ಇಷ್ಟ ಪಟ್ಟು '''[[ರಜನೀಕಾಂತ್]]''' ಅವರೊಂದಿಗೆ ಅಭಿನಯಿಸಿದ್ದರು<ref name="ಎನ್.ಎಸ್. ಶ್ರೀಧರ ಮೂರ್ತಿ"/>.
 
ಶಾರದಾ ಅವರ ವೃತ್ತಿಜೀವನದ ಸವಾಲಿನ ಪಾತ್ರವೆಂದರೆ [[ಜಿ.ವಿ.ಅಯ್ಯರ್]] ನಿರ್ದೇಶನದ '''[[ಕುದುರೆ ಮೊಟ್ಟೆ]]'''(೧೯೭೭). ಕಾಮರೂಪಿಯವರ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ಬಾಲ್ಯದಲ್ಲೇ ಗಂಡನನ್ನು ಕಳೆದುಕೊಂಡ '''ಲಕ್ಷ್ಮಿದೇವಿ'''ಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಶಾರದಾ ಅವರ ಇನ್ನಿತರ ಪ್ರಮುಖ ಚಿತ್ರಗಳೆಂದರೆ '''[[ಮೈತ್ರಿ]]'''(೧೯೭೮), '''[[ವಾತ್ಸಲ್ಯ ಪಥ]]'''(೧೯೮೦) ಮತ್ತು '''[[ನಕ್ಕಳಾ ರಾಜಕುಮಾರಿ]]'''(೧೯೯೦). ಸದಾ ಸಮಾಜದ ಕಟ್ಟುಪಾಡುಗಳನ್ನು ಸಡಿಲಿಸುವ ಕಥಾಪಾತ್ರಗಳಲ್ಲಿ ಅಭಿನಯಿಸಿದ ಶಾರದಾ ೧೯೮೦ರ ದಶಕದ ನಂತರದಲ್ಲಿ ಹೊಸ ಅಲೆಯ ಚಿತ್ರಗಳು ಕಡಿಮೆಯಾದ್ದರಿಂದ ಅಭಿನಯದಿಂದ ದೂರ ಉಳಿದಿದ್ದಾರೆ.<ref name="ಭಾರತಿ ಹೆಗಡೆ">{{cite web|title=ಶಾರದೆಯ ಶಕ್ತಿ ಕಣ್ಣುಗಳಲ್ಲಿ ಅಭಿವ್ಯಕ್ತಿ|url=http://m.dailyhunt.in/news/india/kannada/vijayavani-epaper-vijvani/shaaradeya-shakti-kannugalalli-abhivyakti-newsid-42456921|publisher=ವಿಜಯವಾಣಿ}}</ref>
"https://kn.wikipedia.org/wiki/ಎಲ್.ವಿ.ಶಾರದಾ" ಇಂದ ಪಡೆಯಲ್ಪಟ್ಟಿದೆ