ಅಂಟಿಕೆ -ಪಂಟಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
==ಮುನ್ನುಡಿ===
[[ಶಿವಮೊಗ್ಗ]] ಮತ್ತು [[ಉತ್ತರ ಕನ್ನಡ]] ಜಿಲ್ಲೆಯ ಕೆಲವು ಭಾಗಗಳಲ್ಲಿ ಪ್ರಚಾರದಲ್ಲಿರುವ ಒಂದು [[ಸಂಪ್ರದಾಯ]]. ಇದಕ್ಕೆ ಹಬ್ಬ ಹಾಡುವುದು, ದೀಪ ನೀಡುವುದು ಎಂಬ ಹೆಸರುಗಳೂ ಇವೆ. ತೀರ್ಥಹಳ್ಳಿಯ ಸುತ್ತಮುತ್ತ ಮಾತ್ರ ಇದಕ್ಕೆ ಅಂಟಿಕೆ ಪಂಟಿಕೆ ಎನ್ನುತ್ತಾರೆ.ಅಂಟಿಗೆ-ಪಂಟಿಗೆಯು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯ ಕೆಲವು ಭಾಗಗಳಲ್ಲಿ ಪ್ರಚಲಿತದಲ್ಲಿರುವ ಕಲೆ. ಅವಂಟಿಗ್ಯೋ-ಪವಂಟಿಗ್ಯೋ, ಅಡೀಪೀಡಿ, ಅಂಟಿ ಪಂಟಿ, ಅವಟಿಗೋ ಪವಟಿಗೋ, ಜೌಂಟಿಗ್ಯೋ-ಸುಂಟಿಗ್ಯೋ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಮುಖ್ಯವಾಗಿ ದೀವರು, ಲಿಂಗಾಯಿತರು, ಬಂಟರು, ಒಕ್ಕಲಿಗರು ಹಾಗೂ ಹಸಲರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಅಂಟಿಗೆ ಪಂಟಿಗೆ ಪದಗಳಲ್ಲಿ ಅಂಟಿಗೆ ಕುರಿತು ಗೋಜಲುಗಳಿವೆ. "ಅಂಟಿಸುವುದೇ ಅಂಟಿಗೆ" ಎನ್ನುವ ಅರ್ಥದಲ್ಲಿ ಆ ಪದವನ್ನು ಇಲ್ಲಿ ಪರಿಗಣಿಸುವುದು ಅವೈಜ್ಞಾನಿಕವಲ್ಲ. ಆದರೆ ಪಂಟಿಗೆಯ ಬಗೆಗೆ ಇನ್ನೂ ಗೊಂದಲಗಳಿವೆ. ವಿದ್ವಾಂಸರು ತಮಿಳಿನ ಪಂಟಿಗೈ ಪದ ಕುರಿತು ಉಲ್ಲೇಖಿಸಿದ್ದಾರೆ. ಪಂಟಿಗೈ ಪದಕ್ಕಿರುವ ಹಬ್ಬ ಎನ್ನುವ ಅರ್ಥದಲ್ಲಿ ಅಂಟಿಗೆ ಪಂಟಿಗೆಯನ್ನು ದೀಪಾವಳಿ ಹಬ್ಬ ಎಂಬ ಮೂಲಾರ್ಥವಿರಬಹುದು ಎಂದಿದ್ದಾರೆ. ಈ ದೆಸೆಯಲ್ಲಿ ಚರ್ಚೆಗೆ ಅವಕಾಶವಿರುವುದರಿಂದ ಮುಂದಿನ ವಿವರಣೆಯನ್ನು ನೀಡಲಾಗಿದೆ.
 
==ಸಂಪ್ರದಾಯ==
[[ದೀಪಾವಳಿ]]ಯ [[ಬಲಿಪಾಡ್ಯಮಿ]] ದಿನದಿಂದ ಹಿಡಿದು ಮೂರು ದಿನಗಳವರೆಗೆ ಹಳ್ಳಿಯ ರೈತರು (ಒಕ್ಕಲಿಗರು ದೇವರು, ಹಸಲರು ಮುಂತಾದ ವರ್ಗಗಳವರು) ಮನೆ ಮನೆಗೂ ದೀಪಾವಳಿಯ ಬೆಳಕಿನ ದಿವ್ಯ ಸಂದೇಶವನ್ನು ಒಯ್ಯುತ್ತ ಜ್ಯೋತಿ ಹಚ್ಚಿ ಹೀಗೆ ಹಾಡುತ್ತಾರೆ, 'ಮಣ್ಣಲ್ಲಿ ಹುಟ್ಟಿದೆ, ಮಣ್ಣಲ್ಲಿ ಬೆಳೆದೆ, ಎಣ್ನೆಲಿ ಕಣ್ನಬಿಟ್ಟಿದೆ, ಜಗಜ್ಯೋತಿ ನಾ ಸತ್ಯದಿಂದ ಉರಿವೆ ಜಗಜ್ಯೋತಿ'. “ಬಾಗಿಲು ಬಾಗಿಲು ಚಂದ ಈ ಮನೆಯ ಬಾಗಿಲು ಚಂದ, ಬಾಗಿಲ ಮ್ಯಾಲೇನು ಬರೆದಾರೆ, ಬಾಗಿಲ ಮ್ಯಾಲೇನು ಬರೆದಾರೆ ಸಿರಿಕೈಲಿ, ಕೊಚ್ಚು ಪಾಲುವಾಣದ ಗಿಳಿವಿಂಡು, ಅಂದುಳ, ಮನೆಗೆ ಚಂದುಳ್ಳ ಕದವು, ಚಂದುಳ್ಳ ಕದಕ ಚಿನ್ನದ ಅಗಣಿಯ,ತೆಗೆ ಸೈ ವಜ್ರದ ಅಗಣೀಯ! ಆ ಮನೆ ದೀಪಧಾರಿಗಳಿಗೆ ಅಂದದ ಅರಮನೆಯಾಗಿ, ಚಿನ್ನದ ಬಾಗಿಲಾಗಿ, ವಜ್ರದ ಅಗಣಿಯಾಗಿ ಹಾಡುಗಳಲ್ಲಿ ವರ್ಣಿತವಾಗುತ್ತವೆ. ಬಾಗಿಲನ್ನು ತೆರೆದು ದೀಪಧಾರಿಗಳನ್ನು ಬರಮಾಡಿಕೊಳ್ಳುತ್ತಾರೆ. ಮನೆಯ ಒಡತಿ ದೀಪಕ್ಕೆ ಎಣ್ಣೆ ಎರೆದು, ದೀಪದಿಂದ ತನ್ನ ಹಣತೆಗೆ ಅಂಟಿಸಿಕೊಂಡು ಒಲೆಯ ಬೆಂಕಿಯಲ್ಲಿ ಅಗ್ನಿ ಗೂಡಿಸುತ್ತಾಳೆ. ಹಣತೆಯನ್ನು ದೇವರ ಮುಂದೆ ಇಟ್ಟು ಕೈ ಮುಗಿಯುತ್ತಾಳೆ. ದೀಪಧಾರಿಗಳು “ರನ್ನಾದಟ್ಟಾಕೆ ಬಣ್ಣದೇಣಿಯಾ ಚಾಚಿ, ಸಾಲೆಣ್ಣೆ ಕೊಡುವ ಬಾಯಿಬಿಚ್ಚಿ, ಸಾಲೆಣ್ಣೆ ಕೊಡವ ಬಾಯಿಬಿಚ್ಚಿ ಎಣ್ಣೆಯ ಬಗಸಿ, ಜ್ಯೋತಮ್ಮ ಗೆಣ್ಣೆ ಎರೆ ಬನ್ನಿ, ಎಣ್ಣೆಯ ನೆರೆದಾರೆ ಪುಣ್ಯಾದ ಫಲ ನಿಮಗೆ, ಮುಂದಣ ದೇವರಿಗೊಂದರಿಕ್ಯಾದ, ಮುಂದಣ ದೇವರಿಗೊಂದರಿಕ್ಯಾದ ಕಾರಣದಿಂದ, ಕಾಮನುಡುಗಾರು ನುಡಿಸ್ಯಾರು, ಕಾಮನುಡುಗಾರು ಏನೆಂದು ನುಡಿಸ್ಯಾರು, ಕಂದಯ್ಯರ ಫಲವೇ ತಮಗಾದು ಕಾರಣದಿಂದ, ಸಾವಿರ ಕಾಲ ಸುಖಿಬಾಳಿ” ಎಂದು ಹಾಡುತ್ತಾರೆ.
"https://kn.wikipedia.org/wiki/ಅಂಟಿಕೆ_-ಪಂಟಿಕೆ" ಇಂದ ಪಡೆಯಲ್ಪಟ್ಟಿದೆ