ಅಂಟಿಕೆ -ಪಂಟಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೩ ನೇ ಸಾಲು:
ಮೂರು ದಿನವಾದ ಮೇಲೆ ದೀಪದ ಬತ್ತಿಯನ್ನು ಹಣತೆಯಿಂದ ತೆಗೆದು ಹಲಸಿನ ಮರದ ಕೊಂಬೆಯ ಮೇಲಿಟ್ಟು ಅದಕ್ಕೆ ಕೈ ಮುಗಿಯುತ್ತಾರೆ.“ಅಂಟಿಕೆ-ಪಂಟಿಕೆ ಔಂತ್ಲ” ಎಂದು ಕರೆಯುವ ಸಾಮೂಹಿಕ ಔತಣಕೂಟವನ್ನು ಏರ್ಪಡಿಸುತ್ತಾರೆ. ಮೇಳದಲ್ಲಿ ಸಂಗ್ರಹಿಸಿದ ದವಸ-ಧಾನ್ಯ ಹಾಗೂ ಹಣದಿಂದ ಔತಣಕೂಟದ ಖರ್ಚುಗಳನ್ನು ಭರಿಸುತ್ತಾರೆ. ಅಂದು ಊರಿನವರಲ್ಲದೆ ಸುತ್ತಲಿನ ಊರಿನವರನ್ನು ಸ್ವಾಗತಿಸುತ್ತಾರೆ. ಜ್ಯೋತಿ ಕಳುಹಿಸಲು ಒಂದು ನಿಗದಿತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಊರಿನ ಹಲಸಿನ ತೋಪಿನ ದೊಡ್ಡ ಬಯಲೇ ಸಮಾರಂಭದ ಸ್ಥಳವಾಗಿರುತ್ತದೆ. ಹಾಲು ಸುರಿಸುವ ಆಲ, ಹಲಸು ಮರಗಳ ಬುಡದಲ್ಲಿ ಜ್ಯೋತಿಯನ್ನು ಇಟ್ಟು, ಎಡೆ ಮಾಡಿ, ಪೂಜೆ ಸಲ್ಲಿಸುತ್ತಾರೆ.ಈ ಸಂದರ್ಭದಲ್ಲಿ ದೀಪ ಹಿಡಿದ ದೀಪಧಾರಿಗಳು ಜ್ಯೋತಿ ಕಳುಹಿಸುವ ಪದಗಳನ್ನು ಹಾಡುತ್ತಾರೆ. “ಒಂದೇ ಬಟ್ಟಲು ಒಂದೇ ಬೆಲ್ಲದಚ್ಚು, ಒಂದೆಲೆ ಹಲಸು ಬಲಬಂದು, ಒಂದೆಲೆ ಹಲಸು ಬಲಬಂದು ಜ್ಯೋತಮ್ಮ ತಾಯಿ, ಒಂದೆ ದೀವಿಗೆಲೆ ಗುಡಿದುಂಬಿ, ಒಂದೆ ದೀವಿಗೆಲೆ ಗುಡಿದುಂಬಿ ಜ್ಯೋತಮ್ಮ ತಾಯಿ, ಇಂದ್ಹೋಗಿ ಮುಂದೆ ಬರಬೇಕು” ಎಂದು ಹಾಡುತ್ತಾರೆ.
ಈ ಸಂಪ್ರದಾಯವು ದೀಪ ಮತ್ತು ಅದಕ್ಕೆ ಸಂಬಂಧಿಸಿದ ನಂಬಿಕೆಯ ಅಂಶ ಎದ್ದು ಕಾಣುತ್ತದೆ. ದೀಪ ಅಂಟಿಸುವ ಕ್ರಿಯೆ ಪ್ರಧಾನವಾಗಿಯೂ, ಸುಗ್ಗಿ ಒಳ್ಳೆಯದನ್ನು ಹೊತ್ತು ತರಲಿ ಎಂಬ ಹಾರೈಕೆ ವ್ಯಕ್ತವಾಗಿದೆ. ಮಲೆನಾಡಿನ ಸಾಂಸ್ಕೃತಿಕ ಕನ್ನಡಿಯಂತಿರುವ ಈ ಸಂಪ್ರದಾಯವು ಅಜ್ಞಾನವನ್ನು, ಕತ್ತಲನ್ನು ಆ ಮೂಲಕ ಸಂಕಷ್ಟಗಳನ್ನು ಕಳೆಯುವ ಮುಖ್ಯ ಆಶಯವನ್ನು ಹೊಂದಿದೆ.
==ಉಲ್ಲೇಖ==
==Further Reading==
http://www.classicalkannada.org/DataBase/KANNADA%20UNICODE%20HTML/Folklore%20and%20Folk%20literature/ANTIGE-PANTIGE.htm
http://kanaja.in/%E0%B2%9C%E0%B2%BE%E0%B2%A8%E0%B2%AA%E0%B2%A6-%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%9F%E0%B3%8D%E0%B2%9F/
"https://kn.wikipedia.org/wiki/ಅಂಟಿಕೆ_-ಪಂಟಿಕೆ" ಇಂದ ಪಡೆಯಲ್ಪಟ್ಟಿದೆ