ಬೆಲ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨ ನೇ ಸಾಲು:
'''ಬೆಲ್ಲ'''ವು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಬಳಸಲಾಗುವ ಒಂದು ಸಾಂಪ್ರದಾಯಿಕ, ಶುದ್ಧೀಕರಿಸದ, ಅಪಕೇಂದ್ರಕವನ್ನು ಉಪಯೋಗಿಸದೆ ತಯಾರಿಸಲಾಗುವ [[ಸಕ್ಕರೆ]]. ಅದನ್ನು ನೇರ ಬಳಕೆಗಾಗಿ ತಯಾರಿಸಲಾಗುತ್ತದೆ. ಈ ಬಗೆಯ ಸಕ್ಕರೆಯು ಕಾಕಂಬಿ ಮತ್ತು ಹಳುಕುಗಳ ಬೇರ್ಪಡಿಸುವಿಕೆಯಿಲ್ಲದ [[ಕಬ್ಬಿನ ರಸ]]ದ ಸಾಂದ್ರಿತ ಉತ್ಪನ್ನ, ಮತ್ತು ಇದರ ಬಣ್ಣವು ಬಂಗಾರ ಕಂದು ಅಥವಾ ಗಾಢ ಕಂದು ಇರಬಹುದು. ಇದು ೫೦ ಪ್ರತಿಶತದವರೆಗೆ [[ಸೂಕ್ರೋಸ್]], ೨೦ ಪ್ರತಿಶತದವರೆಗೆ [[ವಿಲೋಮ ಸಕ್ಕರೆ]]ಗಳು, ೨೦ ಪ್ರತಿಶತದವರೆಗೆ ತೇವಾಂಶ, ಮತ್ತು ಉಳಿದಂತೆ ಬೂದಿ, ಪ್ರೋಟೀನ್‌ಗಳು ಹಾಗೂ ಕಬ್ಬಿನ ಸಿಪ್ಪೆಯ ನಾರುಗಳಂತಹ ಇತರ ಕರಗದ ವಸ್ತುವನ್ನು ಹೊಂದಿದೆ. ಇದು ದಕ್ಷಿಣ ಭಾರತದಲ್ಲಿ ಸಕ್ಕರೆಯ ಬದಲಿಗಾಗಿಗಾಗಿಯೂ ಬಳಸುತ್ತಾರೆ.
==ಬೆಲ್ಲ ತಯಾರಿಕೆ ವಿಧಾನ==
;ಕರ್ನಾಟಕದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಕೆ:ಬೆಲ್ಲ ತಯಾರಿಸುವ ಜಾಗಕ್ಕೆ "ಆಲೆಮನೆ" ಎನ್ನುವರು.
*ಹೊಲದಿಂದ ತಂದ ತುಂಡರಿಸಿದ ಮೊದಲ ಕಬ್ಬನ್ನು ರಸ ಪಡೆಯಲು ಕಬ್ಬು ಹಿಂಡುವ ಕಣೆಯ (ಕ್ರಷರ್) ಒಳಗೆ ಹಾಕುವುದು.
*ನಂತರ ಕಬ್ಬಿ ಹಾಲನ್ನು (ರಸ) ಶೋದಿಸಿ ದೊಡ್ಡ ಕುದಿಯುವ ಕಬ್ಬಿಣದ ಬಾನಿಯಲ್ಲಿ (ದೊಡ್ಡಕಡಾಯಿ) ಹಾಕಿ ಅಡಿಯಲ್ಲಿ ಬೆಂಕಿಹಾಕಿ ಕುದಿಸಲಾಗುತ್ತದೆ.
*ಶಾಖ ವ್ಯರ್ಥವಾಗದಂತೆ ಗೂಡು ಕುಲುಮೆಯನ್ನು ನೆಲದಲ್ಲಿ ನಿರ್ಮಿಸಲಾಗಿರುತ್ತದೆ.
[[File:Poyyimida penam;.JPG|300px|right|thumb|ಆಲೆಮನೆಯಲ್ಲಿ ಕಬ್ಬಿನಹಾಲನ್ನು ಕುದಿಸಿ ಬೆಲ್ಲ ತಯಾರಿಸುತ್ತಿರುವುದು.]]
*ಇತ್ತೀಚೆಗೆ ಒಂದು ಬಾನಿಯ (ಕಡಾಯಿ) ಬದಲು 3 ರಿಂದ 4 ಬಾನಿಗಳನ್ನು ಸಾಲಿನಲ್ಲಿ ಇಟ್ಟು ಕಬ್ಬಿನ ಹಾಲು ಕುದಿಯುವ ವ್ಯವಸ್ಥೆ ಮಾಡಲಾಗುವುದು ಮತ್ತು ಹೊಗೆ ಕೊಳವೆಯ ಮೂಲಕ ಅನಿಲಗಳು ಎಲ್ಲಾ ನಾಲ್ಕು ಕುದಿಯುವ ಕಡಾಯಿಗಳಿಗೆ ಒಂದರ ನಂತರ ಮತ್ತೊಂದು,ಮತ್ತೆ ಒಂದು; ನಂತರಲ್ಲಿ ಚಿಮಣಿ ಮೂಲಕ ಅಡಿಯಲ್ಲಿ ಬೆಂಕಿಯ ಸುಳಿ ಹೋಗಲು ವ್ಯವಸ್ಥೆ ಮಾಡುವರು.
[[File:Penam kimda mamta.JPG|300px|right |thumb|ಆಲೆಮನೆಯ ಒಲೆ ಮತ್ತು ಬಾನಿಯಲ್ಲಿ ಕಬ್ಬಿನ ಹಾಲು ಕಾಯಿಸುವುದು.]]
* ಕುದಿಯುವ ಸಮಯದಲ್ಲಿ ಮೇಲಕ್ಕೆ ಬಂದ ಎಲ್ಲ ಕಶ್ಮಲಗಳನ್ನು ಉದ್ದ ಕೋಲಿಗೆ ಕಟ್ಟಿದ ಜರಡಿ ಅಥವಾ ಬಟ್ಟೆಯ ಮೂಲಕ ತೆಗೆದುಹಾಕಲಾಗುತ್ತದೆ.
* ಕುದಿಯುವುದರಿಂದ ಎಲ್ಲಾ ನೀರಿನ ಅಂಶ ಆವಿಯಾಗಿ ನಂತರ ಕಬ್ಬಿನ ಹಾಲು (ರಸ) ಗಟ್ಟಿಯಾಗುತ್ತದೆ; ಮಂದವಾದ ಹಳದಿ ವಸ್ತುವು ಎತ್ತಿ ಬಿಟ್ಟಾಗ ದಾರವಾಗುವ ಹದ ಬಂದಾಗ ಕುದಿಯುವ ಬೆಲ್ಲವನ್ನು ತಂಪಾಗಿಸುವ ಅಗಲದ ಸಿಮೆಂಟಿನ ಕಟ್ಟೆಯಿರುವ ಹೊಂಡಕ್ಕೆ ಬಿಡಲಾಗುವುದು ಅಥವಾ ಬೋಗುಣಿಗೆ ಬಿಡಲಾಗುತ್ತದೆ. ಅದನ್ನು ಸ್ವಲ್ಪ ಆರಿದ ನಂತರ ಬೇಕಾದ ಗಾತ್ರಕ್ಕೆ ಬೇಕಾದ ಆಕಾರದ ಅಚ್ಚುಗಳನ್ನು ಮಾಡಲಾಗುವುದು.
"https://kn.wikipedia.org/wiki/ಬೆಲ್ಲ" ಇಂದ ಪಡೆಯಲ್ಪಟ್ಟಿದೆ