ಬೆಲ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨ ನೇ ಸಾಲು:
'''ಬೆಲ್ಲ'''ವು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಬಳಸಲಾಗುವ ಒಂದು ಸಾಂಪ್ರದಾಯಿಕ, ಶುದ್ಧೀಕರಿಸದ, ಅಪಕೇಂದ್ರಕವನ್ನು ಉಪಯೋಗಿಸದೆ ತಯಾರಿಸಲಾಗುವ [[ಸಕ್ಕರೆ]]. ಅದನ್ನು ನೇರ ಬಳಕೆಗಾಗಿ ತಯಾರಿಸಲಾಗುತ್ತದೆ. ಈ ಬಗೆಯ ಸಕ್ಕರೆಯು ಕಾಕಂಬಿ ಮತ್ತು ಹಳುಕುಗಳ ಬೇರ್ಪಡಿಸುವಿಕೆಯಿಲ್ಲದ [[ಕಬ್ಬಿನ ರಸ]]ದ ಸಾಂದ್ರಿತ ಉತ್ಪನ್ನ, ಮತ್ತು ಇದರ ಬಣ್ಣವು ಬಂಗಾರ ಕಂದು ಅಥವಾ ಗಾಢ ಕಂದು ಇರಬಹುದು. ಇದು ೫೦ ಪ್ರತಿಶತದವರೆಗೆ [[ಸೂಕ್ರೋಸ್]], ೨೦ ಪ್ರತಿಶತದವರೆಗೆ [[ವಿಲೋಮ ಸಕ್ಕರೆ]]ಗಳು, ೨೦ ಪ್ರತಿಶತದವರೆಗೆ ತೇವಾಂಶ, ಮತ್ತು ಉಳಿದಂತೆ ಬೂದಿ, ಪ್ರೋಟೀನ್‌ಗಳು ಹಾಗೂ ಕಬ್ಬಿನ ಸಿಪ್ಪೆಯ ನಾರುಗಳಂತಹ ಇತರ ಕರಗದ ವಸ್ತುವನ್ನು ಹೊಂದಿದೆ. ಇದು ದಕ್ಷಿಣ ಭಾರತದಲ್ಲಿ ಸಕ್ಕರೆಯ ಬದಲಿಗಾಗಿಗಾಗಿಯೂ ಬಳಸುತ್ತಾರೆ.
==ಬೆಲ್ಲ ತಯಾರಿಕೆ ವಿಧಾನ==
;ಕರ್ನಾಟಕದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಕೆ:
*ಹೊಲದಿಂದ ತಂದ ತುಂಡರಿಸಿದ ಮೊದಲ ಕಬ್ಬನ್ನು ರಸ ಪಡೆಯಲು ಕಬ್ಬು ಹಿಂಡುವ ಕಣೆಯ (ಕ್ರಷರ್) ಒಳಗೆ ಹಾಕುವುದು.
*ನಂತರ ಕಬ್ಬಿ ಹಾಲನ್ನು (ರಸ) ಶೋದಿಸಿ ದೊಡ್ಡ ಕುದಿಯುವ ಕಬ್ಬಿಣದ ಬಾನಿಯಲ್ಲಿ (ದೊಡ್ಡಕಡಾಯಿ) ಹಾಕಿ ಅಡಿಯಲ್ಲಿ ಬೆಂಕಿಹಾಕಿ ಕುದಿಸಲಾಗುತ್ತದೆ.
*ಶಾಖ ವ್ಯರ್ಥವಾಗದಂತೆ ಗೂಡು ಕುಲುಮೆಯನ್ನು ನೆಲದಲ್ಲಿ ನಿರ್ಮಿಸಲಾಗಿರುತ್ತದೆ.
*ಇತ್ತೀಚೆಗೆ ಒಂದು ಬಾನಿಯ (ಕಡಾಯಿ) ಬದಲು 3 ರಿಂದ 4 ಬಾನಿಗಳನ್ನು ಸಾಲಿನಲ್ಲಿ ಇಟ್ಟು ಕಬ್ಬಿನ ಹಾಲು ಕುದಿಯುವ ವ್ಯವಸ್ಥೆ ಮಾಡಲಾಗುವುದು ಮತ್ತು ಹೊಗೆ ಕೊಳವೆಯ ಮೂಲಕ ಅನಿಲಗಳು ಎಲ್ಲಾ ನಾಲ್ಕು ಕುದಿಯುವ ಕಡಾಯಿಗಳಿಗೆ ಒಂದರ ನಂತರ ಮತ್ತೊಂದು,ಮತ್ತೆ ಒಂದು; ನಂತರಲ್ಲಿ ಚಿಮಣಿ ಮೂಲಕ ಅಡಿಯಲ್ಲಿ ಬೆಂಕಿಯ ಸುಳಿ ಹೋಗಲು ವ್ಯವಸ್ಥೆ ಮಾಡುವರು.
* ಕುದಿಯುವ ಸಮಯದಲ್ಲಿ ಮೇಲಕ್ಕೆ ಬಂದ ಎಲ್ಲ ಕಶ್ಮಲಗಳನ್ನು ಉದ್ದ ಕೋಲಿಗೆ ಕಟ್ಟಿದ ಜರಡಿ ಅಥವಾ ಬಟ್ಟೆಯ ಮೂಲಕ ತೆಗೆದುಹಾಕಲಾಗುತ್ತದೆ.
* ಕುದಿಯುವುದರಿಂದ ಎಲ್ಲಾ ನೀರಿನ ಅಂಶ ಆವಿಯಾಗಿ ನಂತರ ಕಬ್ಬಿನ ಹಾಲು (ರಸ) ಗಟ್ಟಿಯಾಗುತ್ತದೆ; ಮಂದವಾದ ಹಳದಿ ವಸ್ತುವು ಎತ್ತಿ ಬಿಟ್ಟಾಗ ದಾರವಾಗುವ ಹದ ಬಂದಾಗ ಕುದಿಯುವ ಬೆಲ್ಲವನ್ನು ತಂಪಾಗಿಸುವ ಅಗಲದ ಸಿಮೆಂಟಿನ ಕಟ್ಟೆಯಿರುವ ಹೊಂಡಕ್ಕೆ ಬಿಡಲಾಗುವುದು ಅಥವಾ ಬೋಗುಣಿಗೆ ಬಿಡಲಾಗುತ್ತದೆ. ಅದನ್ನು ಸ್ವಲ್ಪ ಆರಿದ ನಂತರ ಬೇಕಾದ ಗಾತ್ರಕ್ಕೆ ಬೇಕಾದ ಆಕಾರದ ಅಚ್ಚುಗಳನ್ನು ಮಾಡಲಾಗುವುದು.
 
*ಮಲೆನಾಡಿನಲ್ಲಿ ಕುದಿದ ಬೆಲ್ಲವನ್ನು ನಾದಿದ ತಿಳಿಹಿಟ್ಟನ ಹದಕ್ಕೆ ತಂದು ಡಬ್ಬಗಳಲ್ಲಿ ತುಂಬುವರು. ಇನ್ನೂ ಕೆಲವರು ಬೇಡಿಕೆ ಇದ್ದರೆ ದೋಸೆಯ ಹಿಟ್ಟನ ಹದಕ್ಕೆ ಬಾನಿಯಿಂದ ತೆಗೆದು ಜೇನುತುಪ್ಪದ ರೀತಿಯ "ಜೋನಿ ಬೆಲ್ಲ"ಮಾಡಿ ಡಬ್ಬ ತುಂಬುವರು. ಡಬ್ಬದಲ್ಲಿ ಕಾಲುಭಾಗ ಅಥವಾ ಅದಕ್ಕೂ ಕಡಿಮೆ ಜೋನಿಬೆಲ್ಲ ಇರುವುದು, ಅದರ ತಳದಲ್ಲಿ ಚಮಚೆಯಿಂದ ತೆಗೆಯಬಹುದಾದ ಗಟ್ಟಿ ಬೆಲ್ಲ ಇರುವುದು. ಹೀಗೆ ಈಗ ಬೆಲ್ಲ ತಯಾರಿ ಆಗುವುದು.
 
*ಹಿಂದೆ ಕಬ್ಬು ಹಿಂಡಲು 8"-10” ದಪ್ಪದ ಎರಡು ಅಡಿ ಎತ್ತರದ ದುಂಡನೆಯ ಕಬ್ಬಿಣದ ಕಣೆಯನ್ನು ತ್ರಿಕೋನಾಕಾರವಾಗಿ ಜೋಡಿಸಿ, ಅದನ್ನು ಉದ್ದ ನೊಗಕ್ಕೆ ಅಳವಡಿಸಿ ಕೋಣಗಳನ್ನು ಕಟ್ಟಿ ಕೋಣಗಳು ಸುತ್ತತಿರುಗುವ ಕ್ರಿಯೆಯಿಂದ ಕಣೆ ತಿರುಗಿಸುತ್ತಿದ್ದರು. ಆ ಕಣೆಗಳ ನಡುವೆ ಕಬ್ಬುಕೊಟ್ಟು (ತುರಕಿ) ಅದು ಜಜ್ಜಿ ರಸ ಬರುವಂತೆ ಮಾಡುತ್ತಿದ್ದರು. ಮಲೆನಾಡಿನಲ್ಲ್ಲಿ ಅದನ್ನು ಸೋಯಿಸಿ ದೊಡ್ಡ ಕಡಾಯಿಯಲ್ಲಿ (ಕಬ್ಬಿಣದ ಬಾನಿ)ಕಾಯಿಸಿ ತೆಳುವಾದ ಇಡ್ಡಲಿ ಹಿಟ್ಟಿನಂತಿರುವ ಹಳದಿ ಬಣ್ಣದ ಅಥವಾ ನಸು ಕಪ್ಪು ಬಣ್ಣದ ಬೆಲ್ಲವನ್ನು ಬಿಸಿ ಆರಿದ ನಂತರ ಕೊಡದ ಆಕೃತಿಯ ಮಡಕೆಗೆ ತುಂಬಿ ಅದರ ಬಾಯಿಗೆ ಮಣ್ಣಿನ ಸಣ್ಣ ತಟ್ಟೆಯಿಟ್ಟು ಮಣ್ಣಿನಿಂದ ಗಾಳಿಯಾಡದಂತೆ ಮೆತ್ತುತ್ತಿದ್ದರು.ನಂತರದ ದಿನಗಳಲ್ಲಿ ಗಡಿಗೆ ಅಥವಾ ಮಡಕೆಯ ಬದಲು ತಗಡಿನ ಡಬ್ಬಿಗಳಲ್ಲಿ ತುಂಬುತ್ತಿದ್ದರು ಈಗ ಪ್ಲಾಸ್ಟಿಕ್ ಡಬ್ಬಗಳಲ್ಲಿ ತುಂಬುವರು.
 
*ಬಯಲುಸೀಮೆಯ ಕಡೆ ಬೆಲ್ಲವನ್ನು ಇನ್ನೂ ಗಟ್ಟಿಹದದಲ್ಲಿ ಬಿಸಿ ಬೆಲ್ಲವನ್ನು ಬಾನಿಯಿಂದ ಇಳಿಸಿ ಉಂಡೆಗಳನ್ನು ಮಾಡುವರು ಅಥವಾ ಬಕೇಟಿನ ಮಾದರಿಯ ಆನೆಪಿಂಟೆ ಬೆಲ್ಲ ಮಾಡುವರು. ಒಂದು ಕೆಜಿ ಯಿಂದ ಹದಿನೈದು ಕೆಜಿಯವರೆಗೂ ತೂಗುವ ಬೆಲ್ಲದ ಅಚ್ಚು ಮಾಡುವರು. ಹೀಗೆ ಅಚ್ಚುಮಾಡಲು ಕೆಲವರು ಅಡಿಗೆ ಸೋಡಾ, ಸುಣ್ಣ ಮತ್ತು ಇತರೆ ವನಸ್ಪತಿ ವಸ್ತುಗಳನ್ನು, ಬಣ್ಣ ಮತ್ತು ತೂಕ ಬರಲು ಸೇರಿಸವರು. ಆದರೆ ಅದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.<ref>https://www.organicfacts.net/health-benefits/other/what-is-jaggery.html </ref>
 
==ವಿವರ==
*ಕಬ್ಬಿನ ರಸದಿಂದ ತಯಾರಿಸಲಾಗುವ ಉತ್ಪನ್ನ ಬೆಲ್ಲ. ಸಂಸ್ಕರಿಸದ ಸಕ್ಕರೆ ಉತ್ಪನ್ನ ಎಂದೂ ಕರೆಯಲಾಗುತ್ತದೆ. ವಿಶ್ವದ ಬೆಲ್ಲ ಉತ್ಪಾದನೆಯಲ್ಲಿ ಭಾರತದ್ದು 70% ಪಾಲು ಬೆಲ್ಲದ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಅತಿ ಹೆಚ್ಚು ಸಕ್ಕರೆ ಬಳಸುವ ದೇಶ ಭಾರತಭಾರತದಲ್ಲಿ ಸುಮಾರು ನಲವತ್ತು ಲಕ್ಷ ಎಕರೆ ಭೂಮಿಯಲ್ಲಿ ಕಬ್ಬನ್ನು ಬೆಳೆಯಲಾಗುತ್ತಿದೆ. ಭಾರತದಲ್ಲಿ 3 ಕೋಟಿ ಟನ್ ಕಬ್ಬು ಬೆಳೆಯುತ್ತಿದ್ದು, ಅದರಲ್ಲಿ 36% ಬೆಲ್ಲ ತಯಾರಿಕೆಗೆ ಬಳಸಲಾಗುತ್ತಿದೆ.
"https://kn.wikipedia.org/wiki/ಬೆಲ್ಲ" ಇಂದ ಪಡೆಯಲ್ಪಟ್ಟಿದೆ