ಆಸ್ಟ್ರೇಲಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬೩ ನೇ ಸಾಲು:
==ಪರಿಶೋಧನೆ==
ಆಸ್ಟ್ರೇಲಿಯದ ಭೂ ಪರಿಶೋಧನೆ ಪ್ರಾರಂಭವಾದದ್ದು 1788 ರಲ್ಲಿ, ನ್ಯೂ ಸೌತ್ವೇಲ್ಸ್ ವಸಾಹತು ಸ್ಥಾಪನೆಯಾದ ಅನಂತರ, ಬೇರೆ ದೇಶಗಳಲ್ಲಿ ನಡೆದಂತೆ ಪರಿಶೋಧನೆ ಕೆಲಸ ಉತ್ತರ ಮತ್ತು ಪಶ್ಚಿಮ ತೀರಪ್ರಾಂತ್ಯಗಳಿಂದ ಪ್ರಾರಂಭವಾಗಿ ಪೂರ್ವದ ಮತ್ತು ದಕ್ಷಿಣದ ಪ್ರದೇಶಗಳಿಗೆ ಹರಡುವುದರ ಬದಲು ಆಗ್ನೇಯ ಭಾಗದಿಂದ ಪಶ್ಚಿಮ ಮತ್ತು ಉತ್ತರದ ಪ್ರಾಂತ್ಯಗಳಿಗೆ ಹರಡಿದ್ದು ಆಸ್ಟ್ರೇಲಿಯದ ವೈಶಿಷ್ಟ್ಯ. ಇದಕ್ಕೆ ಕಾರಣ, ಈ ಆಗ್ನೇಯ ಭಾಗ ಹಿತಕರ ವಾಯುಗುಣವನ್ನು ಹೊಂದಿರುವುದು ಮತ್ತು ಪಶ್ಚಿಮ ಭಾಗಗಳು ಹೆಚ್ಚಾಗಿ ಮರಳುಗಾಡು ಪ್ರದೇಶವಾಗಿರುವುದು. 1788ಕ್ಕೆ ಮುಂಚೆಯೇ ಚಿನ್ನ ದೊರಕಬಹುದೆಂಬ ಆಸೆಯಿಂದ ಅನೇಕ ಸಾಹಸಿಗರು ಬಂದು ಹೋಗಿದ್ದರು. ವ್ಯವಸ್ಥಿತವಾದ ವಸಾಹತು ಸ್ಥಾಪನೆ ಆದದ್ದು 1788ರಲ್ಲಿ ಆರ್ಥರ್ ಫಿಲಿಪ್ ಎಂಬ ಬ್ರಿಟಿಷ್ ಅಧಿಕಾರಿ 759 ಕೈದಿಗಳೊಡನೆ ಪೋರ್ಟ್ ಜಾಕ್ಸನ್ ಎಂಬಲ್ಲಿ ಬಂದಿಳಿದಾಗ, ಇವರು ವ್ಯವಸಾಯಯೋಗ್ಯವಾದ ಭೂಮಿಯನ್ನು ಹುಡುಕುತ್ತ ತಿರುಗಿದರು. ಪಶ್ಚಿಮಕ್ಕೆ ಬ್ಲೂಮೌಂಟನ್ ತಲಪಿ ತಪ್ಪಲಿನಲ್ಲಿ ನೆಲಸುನಾಡನ್ನು ನಿರ್ಮಿಸಿಕೊಂಡರು. ಅಲ್ಲಿಯ ತನಕ ರಸ್ತೆಯೂ ನಿರ್ಮಿತವಾಯಿತು. ಈ ಪರ್ವತವನ್ನು ದಾಟಿ ಪಶ್ಚಿಮಕ್ಕೆ ಹರಡಿದ್ದ ನದೀಬಯಲು ಪ್ರದೇಶವನ್ನು ಕಂಡುಹಿಡಿಯಲು ಸ್ವಲ್ಪ ಕಾಲ ಬೇಕಾಯಿತು. ಮುಂದೆ ಪಶ್ಚಿಮದ ತಪ್ಪಲಿನಲ್ಲೂ ವಸತಿಗಳು ಸ್ಥಾಪಿತವಾದುವು. ಇನ್ನೂ ಪಶ್ಚಿಮಕ್ಕೆ ಜೌಗುಪ್ರದೇಶವಿರುವುದೆಂದು ಆಕ್ಸ್ಲಿ ಎಂಬಾತ ತಿಳಿಸಿದ ಮೇಲೆ, ತಮಗೆ ನೈರುತ್ಯಕ್ಕಿದ್ದ ಪ್ರಾಂತ್ಯದಲ್ಲಿ ಪರಿಶೋಧನೆ ನಡೆಸಿದರು. ಸ್ನೋಯಿ ಮೌಂಟನ್ಗಳವರೆಗೂ ಅವರ ಪರಿಶೋಧನೆ ಸಾಗಿತು. 1824ರಲ್ಲಿ ಮರೆನದಿಯನ್ನು ಗುರುತಿಸಿದರು. ದಕ್ಷಿಣ ತೀರದ ಪೋರ್ಟ್ ಫಿಲಿಪ್ಗೆ ಮಾರ್ಗವನ್ನು ಕಂಡುಹಿಡಿದರು. ಉತ್ತರದ ಬಯಲುಪ್ರದೇಶದ ಸಂಶೋಧನೆಯೂ ಸಾಗಿತ್ತು. 1827ರಲ್ಲಿ ಕನ್ನಿಂಗ್ಹ್ಯಾಂ ಎಂಬಾತ ಡಾರ್ಲಿಂಗ್ ನದಿಯ ವಿಶಾಲವಾದಬಯಲು ಮೇಡು ಪ್ರದೇಶವನ್ನು ಕಂಡುಹಿಡಿದ. ಹೀಗೆ ಆಸ್ಟ್ರೇಲಿಯದ ಆಗ್ನೇಯ ಭಾಗವೆಲ್ಲ ಪರಿಶೋಧಿಸಲ್ಪಟ್ಟಿತು, ಮೆಲ್ಬರ್ನ್ನಿಂದ ಬ್ರಿಸ್ಬೇನ್ವರೆಗು ಸಂಶೋಧಕರಿಗೆ ಈ ಕಾಲದಲ್ಲಿ ಪರಿಶೋಧನೆಯ ಹುಚ್ಚೇ ಹಿಡಿದಿತ್ತೆನ್ನ ಬಹುದು. ಮುಂದೆ ಖಂಡದ ಮಧ್ಯ ಮತ್ತು ಉತ್ತರದ ಪ್ರದೇಶಗಳು ಅವರ ಗಮನವನ್ನು ಸೆಳೆದುವು. ದಕ್ಷಿಣ ಮತ್ತು ಪಶ್ಚಿಮ ಆಸ್ಟ್ರೇಲಿಯಗಳಿಗೆ ಸಂಪರ್ಕವನ್ನುಂಟುಮಾಡುವ ಭೂಮಾರ್ಗವನ್ನು ಕಂಡುಹಿಡಿಯಲು ಹೊರಟ ಟಾರೆನ್ಸ್ ಎಂಬಾತ 2080 ಕಿಮೀ ದೂರ ನೀರೇ ಸಿಗದ ಮರಳುಗಾಡಿನಲ್ಲಿ ಅಲೆಯಬೇಕಾಯಿತು. ಲೀಚ್ಹಾರ್ಟ್ ಎಂಬಾತ ಉತ್ತರದಲ್ಲಿ ಕ್ವೀನ್ಸ್ ಲೆಂಡ್ನಿಂದ ಅರ್ನ್ಹೆಂಲ್ಯಾಂಡ್ವರೆಗೂ ಹೋಗಿ ಭೂಮಾರ್ಗವನ್ನು ಕಂಡುಹಿಡಿದಿದ್ದಲ್ಲದೆ ಕಾರ್ಪೆಂಟೇರಿಯ ಕೊಲ್ಲಿಗೆ ಹರಿಯುವ ನದಿಗಳನ್ನೂ ಗುರುತಿಸಿದ.
1859-70ರವರೆಗಿನ ಅವಧಿಯಲ್ಲಿ ಚಿನ್ನದ ನಿಕ್ಷೇಪಗಳು ಆಸ್ಟ್ರೇಲಿಯದಲ್ಲಿವೆಯೆಂದು ತಿಳಿದಮೇಲೆ, ಅನೇಕ ಪರಿಶೋಧಕರ ಗಮನ ಇವುಗಳ ಕಡೆ ತಿರುಗಿತು. 1853-56ರವರೆಗೆ ಯುರೋಪಿನಲ್ಲಿ ನಡೆದ [[ಕ್ರಿಮಿಯ ಯುದ್ಧವೂಯುದ್ಧ]]ವೂ ಅನೇಕರನ್ನು ಯುರೋಪಿಗೆ ಸೆಳೆಯಿತು. ಗಂಗಾನದಿಯಂಥ ದೊಡ್ಡ ನದಿಯೊಂದು ಆಸ್ಟ್ರೇಲಿಯದ ವಾಯವ್ಯ ಪ್ರಾಂತ್ಯದಲ್ಲಿದೆಯೆಂದು ಆಗ ಅನೇಕರ ಭಾವನೆಯಾಗಿತ್ತು. ಅದರ ಪರಿಶೋಧನೆಗಾಗಿ ಸರ್ಕಾರ ಅಪಾರ ಹಣ ವೆಚ್ಚಮಾಡಿತು. ಕೊನೆಗೆ ಆ ಪ್ರಾಂತ್ಯದಲ್ಲಿ ಅಂಥ ದೊಡ್ಡ ನದಿಯಿಲ್ಲವೆಂಬುದು ಖಚಿತವಾದರೂ ಅಲ್ಲಿ ಅತ್ಯಂತ ಉಪಯುಕ್ತವಾದ ಕಿಂಬರ್ಲಿ ಹುಲ್ಲುಗಾವಲುಗಳನ್ನು ಕಂಡುಹಿಡಿದಂತಾಯಿತು. 1861ರಲ್ಲಿ ಸ್ಟೂ ಆರ್ಟ್ ಎಂಬಾತ ಅತ್ಯಂತ ಪ್ರಯಾಸದಿಂದ ಅಡಿಲೇಡ್ನಿಂದ ಅರ್ನ್ಹೆಂಲ್ಯಾಂಡ್ಗೆ ಮಧ್ಯಭಾಗದ ಮೂಲಕ ಹೋಗುವ ಮಾರ್ಗವನ್ನು ಕಂಡುಹಿಡಿದ. 1871-1939ರ ಅವಧಿಯಲ್ಲಿ ಖಂಡದ ಪಶ್ಚಿಮ ಭಾಗದ ಮಧ್ಯದಲ್ಲಿರುವ ವಿಶಾಲ ಮರುಭೂಮಿಯ ಪರಿಶೋಧನೆ ನಡೆದು, ಅದರ ಮೂಲಕ ಟೆಲಿಗ್ರಾಫ್ ತಂತಿ ಮಾರ್ಗವನ್ನು ನಿರ್ಮಿಸಲನುಕೂಲವಾಯಿತು.
 
==ವಸಾಹತುಗಳು==
1788ರಲ್ಲಿ ಕೆಲವು ಬ್ರಿಟಿಷ್ ಕೈದಿಗಳನ್ನು ಪೋರ್ಟ್ ಜಾಕ್ಸನ್ಗೆ (ಇಂದಿನ ಸಿಡ್ನಿ) ಕರೆತಂದು ಶಿಕ್ಷೆಯನ್ನನುಭವಿಸಲು ಬಿಟ್ಟಾಗಿನಿಂದ ವಸಾಹತುಗಳ ಸ್ಥಾಪನೆಯ ಕೆಲಸ ಪ್ರಾರಂಭವಾಯಿತೆನ್ನಬಹುದು. ಈ ಕೈದಿಗಳೊಂದಿಗೆ, ಅವರನ್ನು ನೋಡಿಕೊಳ್ಳಲು ಅನೇಕ ಬ್ರಿಟಿಷ್ ಅಧಿಕಾರಿಗಳೂ ಸಿಬ್ಬಂದಿಯವರೂ ಬಂದು ನಿಲ್ಲಬೇಕಾಯಿತು. ಕೈದಿಗಳನ್ನು ಮತ್ತೆ ಮತ್ತೆ ಇಲ್ಲಿಗೆ ತರತೊಡಗಿದ ಮೇಲೆ ಇಲ್ಲಿನ ಜನಸಂಖ್ಯೆ ಬೆಳೆಯುತ್ತ ಬಂತು. ಈ ಪದ್ಧತಿಯನ್ನು ನಿಲ್ಲಿಸಿದ್ದು 50 ವರ್ಷಗಳ ಮೇಲೆ. ಅಷ್ಟುಹೊತ್ತಿಗೆ 1,61,000 ಕೈದಿಗಳನ್ನು ತಂದಿದ್ದರು. ಅವರೊಂದಿಗೆ ಸ್ವತಂತ್ರ ನೆಲೆಸಿಗರೂ ಅಧಿಕಸಂಖ್ಯೆಯಲ್ಲಿ ಬಂದರು; ಇವರು ಜೀವನಾನುಕೂಲಗಳನ್ನು ಕಲ್ಪಿಸಿಕೊಳ್ಳುವುದಕ್ಕಾಗಿ ಮಾಡಿದ ಪ್ರಯತ್ನಗಳಿಂದ ದೇಶದ ಆರ್ಥಿಕ ಬೆಳೆವಣಿಗೆಗೆ ಅವಕಾಶವಾಯಿತು. ಖಂಡದ ನಾನಾ ಕಡೆ ಪುನಃ ಪರಿಶೋಧನೆ ನಡೆಯಿತು; ಜನ ಅನುಕೂಲಸ್ಥಳಗಳಲ್ಲಿ ನೆಲೆನಿಂತರು. 6 ವಸಾಹತುಗಳು ನಿರ್ಮಿತವಾದುವು; ನ್ಯೂ ಸೌತ್ವೇಲ್ಸ್ (1766), ವಾನ್ ಡೀಮನ್ಸ್ ಲ್ಯಾಂಡ್ (1825) (1835ರಿಂದ ಟಾಸ್ಮೇನಿಯ), ವೆಸ್ಟರ್ನ್ ಆಸ್ಟ್ರೇಲಿಯ (1829), ಸೌತ್ ಆಸ್ಟ್ರೇಲಿಯ (1834), ವಿಕ್ಟೋರಿಯ (1851), ಕ್ವೀನ್ಸ್ ಲೆಂಡ್ (1859) ಉತ್ತರ ಪ್ರಾಂತ್ಯ (1961). ಜನಸಂಖ್ಯೆ 1820ರಲ್ಲಿ 34,000 ಇದ್ದದ್ದು 1850ರಲ್ಲಿ 4,05,000ಕ್ಕೆ ಏರಿತು. ಈ ಪ್ರಾಂತ್ಯಗಳು ತಮ್ಮದೇ ಆದ ಪ್ರತಿನಿಧಿ ಸರಕಾರವನ್ನು ಹೊಂದಿ ಸ್ವತಂತ್ರವಾಗಿದ್ದುವು. 1991ರಲ್ಲಿ ಅವೆಲ್ಲ ಒಟ್ಟುಗೂಡಿ ಕಾಮನ್ವೆಲ್ತ್ ವ್ಯವಸ್ಥೆಯನ್ನು ನಿರ್ಮಿಸಿಕೊಂಡುವು.
"https://kn.wikipedia.org/wiki/ಆಸ್ಟ್ರೇಲಿಯ" ಇಂದ ಪಡೆಯಲ್ಪಟ್ಟಿದೆ