ಗೂಢಚರ್ಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೪೧ ನೇ ಸಾಲು:
 
 
ಎರಡನೆಯ ಮಹಾಯುದ್ಧ ಕಾಲದಲ್ಲಿ ಅನೇಕ ದೇಶಗಳ ಗೂಢಚಾರರು ವಿಶಿಷ್ಟ ಶಿಕ್ಷಣ ಕೇಂದ್ರಗಳಲ್ಲಿ ತರಬೇತಿ ಪಡೆದರು. ರೇಡಿಯೋ ಪ್ರೇಷಕಗಳನ್ನು ರಚಿಸುವುದು; ಆಕಾಶವಿಮಾನ, ಹಡಗುಗಳನ್ನು ವರ್ಗೀಕರಿಸಿ ಸರಿಯಾಗಿ ವರ್ಣಿಸುವುದು; ಫಿಲ್ಮಿನ ಮೇಲೆ ಬಹು ಸಣ್ಣ ಅಕ್ಷರಗಳಲ್ಲಿ ಬರೆದ ಸಂದೇಶಗಳಿರುವ ಸೂಕ್ಷ್ಮಗುರುತುಗಳನ್ನು (ಮೈಕ್ರೋಡಾಟ್ಸ್‌) ಉಪಯೋಗಿಸುವ ಕ್ರಮ; ಗುಪ್ತ ಲಿಪಿ, ಗುಪ್ತ ಬರವಣಿಗೆ, ಅದೃಶ್ಯ ಶಾಯಿಯ ಉಪಯೋಗ; ವಿದೇಶೀ ಭಾಷೆ, ಪದ್ಧತಿ, ಚರಿತ್ರೆಗಳಿಗೆ ಅನುಸಾರವಾಗಿ ವರ್ತಿಸುವುದು; ಹೊಸಬರೊಡನೆ ಗೆಳೆತನ ಬೆಳೆಸುವುದು; ಕಪಟ ವೇಷಗಳನ್ನು ಧರಿಸುವುದು; ರಾಸಾಯನಿಕಗಳಿಂದ ದ್ರಾವಣ ಮಾಡುವುದು; ಗುಪ್ತ ಸಂಕೇತಗಳು ಮುಂತಾದವನ್ನು ಕಲಿತರು. ಬೇಹುಕಾರರು ಸಮಾಚಾರಗಳನ್ನು ಸಂಗ್ರಹಿಸಲು ನಾನಾವಿಧಗಳನ್ನು ಅನುಸರಿಸುತ್ತಾರೆ-ಕಾಗದಪತ್ರಗಳು, ನಕ್ಷೆ, ಮ್ಯಾಪ್, ಏಕಸ್ವ ಮುಂತಾದವನ್ನು ಕದಿಯುವುದು; ಫೋಟೊ ತೆಗೆಯುವುದು; ಲಂಚ ಕೊಡುವುದು; ಸುಲಭವಾಗಿ ಬಚ್ಚಿಟ್ಟು ಕೈಯಲ್ಲಿ ಒಯ್ಯುವಂಥ ನಿಸ್ತಂತು ಯಂತ್ರಗಳನ್ನು (ವೈರ್ಲೆಸ್ ಸೆಟ್ಸ್‌) ಉಪಯೋಗಿಸುವುದು; ಎಕ್ಸ್‌ಕಿರಣ ಸಲಕರಣೆ, ಮೈಕ್ರೋಫೋನುಗಳಿಂದ ಗೋಡೆಯಾಚೆ ನಡೆಯುವ ಮಾತುಗಳನ್ನು ಹೊಂಚಿ ಕೇಳುವುದು; ವಾಯು ತರಂಗಗಳಲ್ಲಿನ ಗುಪ್ತ ಸಂದೇಶಗಳನ್ನು ಹಿಡಿಯುವುದು ನಿಸ್ತಂತುವಿನಿಂದ ಕದ್ದು ಕೇಳುವುದು ಇತ್ಯಾದಿ. ನೀರಿನೊಳಗೆ ಹುದುಗಿಕೊಂಡು ಮೇಲಿರುವ ಹಡಗುಗಳಲ್ಲಾಗುವ ಸಂಗತಿಗಳನ್ನು ಕೇಳಲೂ ಶತ್ರುವಿನ ಹೊಸ ನಮೂನೆಯ ಹಡಗುಗಳನ್ನು ಅನ್ವೇಷಿಸಲೂ ಸಾಧ್ಯವಾಗುವಂತೆ ನೂತನ ಸಲಕರಣೆಗಳಾಗಿವೆ. ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿಸಿ ಅವು ಭೂಮಿಯನ್ನು ಸುತ್ತುತ್ತಿರುವಾಗ ಇತರ ದೇಶಗಳ ಭೂಸ್ಥಿತಿ, ಸೇನಾರಚನೆಗಳನ್ನು ಚಿತ್ರಿಸಿ, ಆ ಚಿತ್ರಗಳನ್ನು ಭೂಮಿಗೆ ಕಳಿಸುವ ವಿಧಗಳೂ ಬಂದಿವೆ. ಬ್ರಿಟನ್ನಿನ [[ಸ್ಕಾಟ್ಲೆಂಡ್‌ ಯಾರ್ಡ್‌|ಸ್ಕಾಟ್ಲೆಂಡ್ಯಾರ್ಡ್]], ಫ್ರಾನ್ಸಿನ ಡುಕ್ಸೆಮಿ ಬ್ಯುರೋ ಮತ್ತು ರಷ್ಯದ ಕೆ.ವಿ.ಡಿ. ಸಂಸ್ಥೆಗಳಲ್ಲಿ ಗೂಢಚರ್ಯೆಯ ಇಲಾಖೆಗಳೇ ಇವೆ. ಚೀನದ ಗೂಢಚಾರರಂತೂ ಜಗತ್ತಿನಾದ್ಯಂತ ಹರಡಿಕೊಂಡಿದ್ದಾರೆ.
 
 
"https://kn.wikipedia.org/wiki/ಗೂಢಚರ್ಯೆ" ಇಂದ ಪಡೆಯಲ್ಪಟ್ಟಿದೆ