"ಏಕಾದಶಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಏಕಾದಶ''' ಈ [[ಸಂಸ್ಕೃತ]] ಪದದ ಅರ್ಥ ಹನ್ನೊಂದು(೧೧).ಹಿಂದೂ ಪಂಚಾಂಗದ ೧೨ ಮಾಸಗಳ [[ಶುಕ್ಲ ಪಕ್ಷ| ಶುಕ್ಲ ಪಕ್ಷದ]] ಮತ್ತು [[ ಕೃಷ್ಣ ಪಕ್ಷ|ಕೃಷ್ಣ ಪಕ್ಷದ]] ಹನ್ನೊಂದನೆಯ ದಿನವನ್ನು ''ಏಕಾದಶಿ'' ಎನ್ನಲಾಗುತ್ತದೆ.ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ.ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ,[[ ಉಪವಾಸ ]]ಮಾಡುವ ಸಂಪ್ರದಾಯವಿದೆ.ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ,ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ,ನಿರಾಹಾರ ವ್ರತವನ್ನು ಆಚರಿಸುತ್ತಾರೆ.ಏಕಾದಶಿಯ ದಿನ ಉಪವಾಸವಿದ್ದು,ಮಾರನೆಯ ದಿನ ಅಂದರೆ ದ್ವಾದಶಿಯಂದು ಬೆಳಿಗ್ಗೆ ೯ ಘಂಟೆಯೊಳಗಾಗಿ '''ಪಾರಣೆ'''(ಊಟ)ಮಾಡುವ ಸಂಪ್ರದಾಯವಿದೆ. ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ.
 
'''ವೈಕುಂಠ ಏಕಾದಶಿ''' ಏಕಾದಶಿಗಳಲ್ಲಿ ವಿಶೇಷ ದಿನ.ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚು. ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ [[ವೈಕುಂಠ]] ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ಪ್ರತೀತಿಯಿದೆ.೨೦೦೬ನೇ ವರ್ಷದಲ್ಲಿ ಈ ದಿನ ಡಿಸೆಂಬರ್ ೩೦ನೇ ತಾರೀಖು ಬರುತ್ತದೆ.
 
ವೈಕುಂಠ ಏಕಾದಶಿಯ ದಿನ ವೈಕುಂಠದ (ಸ್ವರ್ಗದ ಅಥವಾ ವಿಷ್ಣುಲೋಕದ) ಬಾಗಿಲು ತೆರೆದಿರುತ್ತದೆ ಎಂದು ಪ್ರತಿತೀ ಇದೆ. ಅಂದು ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯು ಇದೆ.
 
{{ಚುಟುಕು}}

edits

"https://kn.wikipedia.org/wiki/ವಿಶೇಷ:MobileDiff/69219" ಇಂದ ಪಡೆಯಲ್ಪಟ್ಟಿದೆ