ಅಂಟಾರ್ಕ್ಟಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೫೩ ನೇ ಸಾಲು:
[[File:NASA and NOAA Announce Ozone Hole is a Double Record Breaker.png|thumb|Image of the largest Antarctic [[ozone hole]] ever recorded due to [[chlorofluorocarbon|CFCs]] accumulation (September 2006)]]
ಸದ್ಯ 39 ದೇಶಗಳು ಅಂಟಾರ್ಕ್‍ಟಿಕ ಖಂಡದ ಅಧ್ಯಯನದಲ್ಲಿ ತೊಡಗಿವೆ. ಪ್ರತಿವರ್ಷವೂ ಈ ಖಂಡ ಕುರಿತು ಅನೇಕ ಹೊಸ ಅಂಶಗಳು ಬೆಳಕಿಗೆ ಬರುತ್ತಿವೆ. ಖಂಡದ ಹಿಮದ ಅಧ್ಯಯನ. ಪವನವಿಜ್ಞಾನ, ಭೂಕಾಂತತ್ವ, ಭೂಕಂಪನ ವಿಜ್ಞಾನ, ಅಯನೋಗೋಳದ ಭೌತವಿಜ್ಞಾನ ಮುಂತಾದವನ್ನು ಕುರಿತಂತೆ ಮಾಹಿತಿಗಳನ್ನು ಪಡೆಯಲು ಇಲ್ಲಿನ ಕಾಯಂ ಪರಿಶೋಧನಾ ಕೇಂದ್ರಗಳು ಸರ್ವಋತುವಿನಲ್ಲೂ ಕೆಲಸಮಾಡುತ್ತವೆ. ಹಾಗೆಯೇ ಮುಕ್ತವಾಗಿ ವೈಜ್ಞಾನಿಕ ಮಾಹಿತಿಗಳನ್ನೂ ಹಂಚಿಕೊಳ್ಳುತ್ತವೆ. ಅಂಟಾರ್ಕ್‍ಟಿಕ ಖಂಡದ ಸುತ್ತಣ ದಕ್ಷಿಣ ಸಾಗರದಲ್ಲಿರುವ ಸಮೃದ್ಧ ಪೋಷಕಗಳ ಬಗ್ಗೆ ಅನೇಕ ಕೇಂದ್ರಗಳು ಆಸಕ್ತಿ ತಳೆದಿವೆ. ಈ ನೀರಿನಲ್ಲಿರುವ [[ಮೀನು]]ಗಳ ರಕ್ತದಲ್ಲಿ ಪ್ರತಿಶೀತಲ ಅಂಶವಿದ್ದು ಚಳಿಗಾಲದಲ್ಲಿ ಅತ್ಯಂತ ಶೈತ್ಯವನ್ನು ನಿಭಾಯಿಸುವುದರ ಗುಟ್ಟನ್ನು ಜೀವ ವಿಜ್ಞಾನಿಗಳು ಅರಿತಿದ್ದಾರೆ. ಪೆಂಗ್ವಿನ್, ಸೀಲ್, ಕ್ರಿಲ್ ಕುರಿತು ಈಗ ಮಾಡಿರುವ ಅಧ್ಯಯನ ಅವುಗಳ ಜೀವಿ ಪರಿಸ್ಥಿತಿಯ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಒದಗಿಸಿದೆ. ದಕ್ಷಿಣ ಸಾಗರದ ಆಹಾರದ ಮೊದಲ ಕೊಂಡಿ ಎನಿಸಿರುವ ಕ್ರಿಲ್ ಎಂಬ ಸೀಗಡಿಗಳ ಸಂತಾನೋತ್ಪತ್ತಿಯನ್ನು ಕುರಿತು ಮಾಡಿರುವ ಅಧ್ಯಯನಗಳು ಅವುಗಳನ್ನು ಹೇಗೆ ಬೆಳೆಸಬೇಕೆಂಬುದರ ಬಗ್ಗೆ ಹೊಸ ಪರಿಕಲ್ಪನೆ ಮಾಡಲು ಅವಕಾಶ ನೀಡಿವೆ.ಭೂವಿಜ್ಞಾನಿಗಳು ಈ ಖಂಡದ ಬಹುತೇಕ ಶಿಲೆಗಳ ಬಗ್ಗೆ ಅಧ್ಯಯನ ಮಾಡಿ ಹಿಂದೆ ಗೊಂಡ್ವಾನ ಖಂಡದ ಕೇಂದ್ರ ಭಾಗವಾಗಿದ್ದ ಅಂಟಾರ್ಕ್‍ಟಿಕದ ಭೂವಿಜ್ಞಾನ ಇತರ ಸದಸ್ಯ ಖಂಡಗಳ ಭೂವಿಜ್ಞಾನಕ್ಕೆ ಹೇಗೆ ತಾಳೆಯಾಗುತ್ತವೆ ಎನ್ನುವುದನ್ನು ಸಮೀಕ್ಷೆಗಳಿಂದ ದೃಢಪಡಿಸಿದ್ದಾರೆ. ಈ ಖಂಡ ಈಗಿನದಕ್ಕಿಂತ ಹೆಚ್ಚು ಹಿಮರಾಶಿಯಿಂದ ಕೂಡಿತ್ತೆಂದು ಪ್ರಾಗ್ವಾತಾವರಣ ಕುರಿತು ಹಿಮವಿಜ್ಞಾನಿಗಳು ಮಾಡಿರುವ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. 1982ರಲ್ಲಿ ಅಂಟಾರ್ಕ್‍ಟಿಕ ಖಂಡದಿಂದ ದೊರೆತ ಸ್ತನಿಗಳ ಪಳೆಯುಳಿಕೆ, 1986ರಲ್ಲಿ ದೊರೆತ [[ಡೈನೋಸಾರ್‍]]ಗಳ ಪಳೆಯುಳಿಕೆ ಈ ಖಂಡ ಹಿಂದೆ ಉಷ್ಣವಲಯದಲ್ಲಿದ್ದುದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸುತ್ತವೆ. 1984ರಲ್ಲಿ ಅಂಟಾರ್ಕ್‍ಟಿಕ ಖಂಡದ ಅಲೆನ್ ಹಿಲ್ಸ್ ಎಂಬ ಭಾಗದ ಬಳಿ 1.9 ಕಿ.ಗ್ರಾಂ. ತೂಕದ ಆಲೂಗಡ್ಡೆ ಗಾತ್ರದ [[ಉಲ್ಕೆ]]ಯ ತುಂಡು (ಂಐಊ-84001) ಸಿಕ್ಕಿತು. ಇದು [[ಮಂಗಳಗ್ರಹ]]ದಿಂದ ಸಿಡಿದು ಬಂದಿರುವ ತುಂಡೆಂದು ಖಚಿತವಾಗಿದೆ. ಅಂಟಾರ್ಕ್‍ಟಿಕದ ಹಿಮದ ಹಾಳೆಯ ಮೇಲೆ ಉಲ್ಕಾ ತುಂಡುಗಳನ್ನು ಸಂಗ್ರಹಿಸುವುದೇ ಒಂದು ದೊಡ್ಡ ಕಾರ್ಯಚಟುವಟಿಕೆಯಾಗಿದೆ. ಅಂತೆಯೇ ಚಂದ್ರ ಶಿಲೆಯ ತುಣುಕುಗಳನ್ನೂ ಇಲ್ಲಿನ ಹಿಮದ ಹಾಳೆಯಿಂದ ಸಂಗ್ರಹಿಸಲಾಗಿದೆ. ಇದುವರೆಗೆ ಅಂಟಾರ್ಕ್‍ಟಿಕ ಖಂಡದಿಂದ ಸುಮಾರು 15,000 ಉಲ್ಕಾ ತುಂಡುಗಳನ್ನು ಹೆಕ್ಕಿ ತೆಗೆದಿದ್ದಾರೆ. ಇವು ಒಂದೊಂದೂ [[ಸೌರವ್ಯೂಹ]]ದ ಉಗಮ, ವಿಕಾಸ ಕುರಿತು ಹೆಚ್ಚಿನ ಮಾಹಿತಿಗಳನ್ನು ಒದಗಿಸುತ್ತವೆ. ರೇಡಿಯೋ ತರಂಗಗಳನ್ನು ಕಳಿಸಿ ಹಿಮದ ಸ್ತರಗಳ ಕೆಳಗೆ ಸಿಹಿನೀರಿನ ಸರೋವರವಿರುವುದನ್ನು ಪತ್ತೆಹಚ್ಚಲಾಗಿದೆ. [[ಉಪಗ್ರಹ]]ಗಳ ನೆರವಿನಿಂದ ಹಿಮದ ಹಾಳೆಗಳ ಚಲನೆಯನ್ನು ಕರಾರುವಾಕ್ಕಾಗಿ ವಿಜ್ಞಾನಿಗಳು ಅಳೆದಿದ್ದಾರೆ. 1985ರಲ್ಲಿ ಬ್ರಿಟಿಷ್ ಸಂಶೋಧನಾ ತಂಡವೊಂದು ಅಂಟಾರ್ಕ್‍ಟಿಕದ ನೆತ್ತಿಯ ಮೇಲೆ ಸ್ಟ್ರಾಟೋಗೋಳದಲ್ಲಿ [[ಓಜೋನ್ ಪದರ]] ತೆಳುವಾಗಿ ಅಮೆರಿಕ ಸಂಯುಕ್ತ ಸಂಸ್ಥಾನದಷ್ಟು ವಿಸ್ತೀರ್ಣದ ರಂಧ್ರ ಉಂಟಾಗಿರುವುದಾಗಿ ವರದಿ ಮಾಡಿತು. ಅದರಿಂದ ತೂರಿಬರುವ [[ಅತಿನೇರಿಳೆ ಕಿರಣ]]ಗಳು ಭೂಜೀವಿಗಳಿಗೆ ಅತ್ಯಂತ ಮಾರಕ ಎಂದು ತಿಳಿದ ಮೇಲೆ ಓಜೋನ್ ವಲಯವನ್ನು ಛಿದ್ರಮಾಡುವ ಮಾನದ ನಿರ್ಮಿತ [[ಕ್ಲೋರೋಫ್ಲೂರೋ ಕಾರ್ಬನ್]] ಪ್ರಮಾಣವನ್ನು ತಗ್ಗಿಸಲು ಅಂತಾರಾಷ್ಟ್ರೀಯ ಒಡಂಬಡಿಕೆಯಾಗಿದೆ. ಮಾನವ ಸ್ವಭಾವದ ಮೇಲೆ ಅಂಟಾರ್ಕ್‍ಟಿಕದ ಏಕಾಂತತೆ ಬೀರುವ ಪರಿಣಾಮವನ್ನು ಅನೇಕ ದಶಕಗಳಿಂದ [[ಮನೋವಿಜ್ಞಾನಿ]]ಗಳು ಅಧ್ಯಯನ ಮಾಡುತ್ತಿದ್ದಾರೆ. ಅಂಟಾರ್ಕ್‍ಟಿಕ ನಿಸರ್ಗವೇ ಒದಗಿಸಿರುವ ಜೀವಂತ ವಿಜ್ಞಾನ ಪ್ರಯೋಗಾಲಯ
==ವಿಶೇಷತೆ==
*ಅಂಟಾರ್ಕ್ಟಿಕಾ ವಿಸ್ತಾರ ಹದಿನಾಲ್ಕು ದಶಲಕ್ಷ ಚದರ ಕಿಲೋಮೀಟರ್‌ (ಇದು ಸುಮಾರು ನಮ್ಮ ದೇಶದ ಮೂರುವರೆ ಪಟ್ಟು ವಿಸ್ತೀರ್ಣ). ಇಪ್ಪತ್ತು ದಶಲಕ್ಷ ಚದರ ಕಿ.ಮೀ. ವಿಸ್ತಾರದ ಒಂದು ಮಹಾಸಾಗರದಿಂದ– ಅದೇ ‘ದಕ್ಷಿಣ ಸಾಗರ’– ಪರಿವರಿಸಲ್ಪಟ್ಟಿದೆ. ಬೆಟ್ಟ ಗುಡ್ಡ ಬಯಲು ಕಣಿವೆ ಹಿಮನದಿ, ಅಗ್ನಿಪರ್ವತ ಹಾಗೆಲ್ಲ ವೈವಿಧ್ಯಮಯ ಲಕ್ಷಣಗಳ ನೆಲಾವಾರದ ಅಂಟಾರ್ಕ್ಟಿಕಾದಲ್ಲಿ ಹಿಮ ಹಾಸುನದೇ ಸರ್ವ ಸಾಮ್ರಾಜ್ಯ. ಸರಾಸರಿ ಎರಡು ಕಿ.ಮೀ., ಮತ್ತು ಗರಿಷ್ಠ ನಾಲ್ಕೂವರೆ ಕಿ.ಮೀ. ದಪ್ಪದ ಗಟ್ಟಿ ಹಿಮಹಾಸಿನಿಂದ ಮುಚ್ಚಿಹೋಗಿರುವ ಅಂಟಾರ್ಕ್ಟಿಕಾದಲ್ಲಿ ಜಗತ್ತಿನ ಶೇಕಡ ಎಪ್ಪತ್ತುರಷ್ಟು ಶುದ್ಧ ನೀರು ಹಿಮರೂಪದಲ್ಲಿ ಸಂಗ್ರಹಗೊಂಡಿದೆ. ಭೂ ತಳದ ನೆಲೆ ಮತ್ತು ಭೂ ಅಕ್ಷದ ವಾಲುವಿಕೆ– ಈ ಎರಡೂ ಕಾರಣಗಳಿಂದ ಈ ಭೂಖಂಡದಲ್ಲಿ '''ಆರು ತಿಂಗಳು ನಿರಂತರ ಹಗಲು, ಇನ್ನು ಆರು ತಿಂಗಳು ಶಾಶ್ವತ ಇರುಳು.'''
 
*ಅಂಟಾರ್ಕ್ಟಿಕಾದ ವಿಶ್ವ ದಾಖಲೆಗಳೂ ಹಲವಾರು: ಸಾಗರ ಮಟ್ಟದಿಂದ ಅತ್ಯಧಿಕ ಎತ್ತರದ ನೆಲ (ಸರಾಸರಿ 6560 ಅಡಿ ಉನ್ನತಿ), ಅತ್ಯಂತ ವೇಗದ ಬೀಸುಗಾಳಿ (ತಾಸಿಗೆ 250 ಕಿ.ಮೀ. ವೇಗ), ಅತ್ಯಂತ ಶೀತಲ ತಾಪಮಾನ (ಶೂನ್ಯಕ್ಕಿಂತ 89 ಡಿಗ್ರಿ ಸೆಲ್ಷಿಯಸ್‌ ಕಡಿಮೆ)... ಇವು ಕೆಲ ಉದಾಹರಣೆಗಳು. ಒಂದು ಹನಿಯೂ ಮಳೆ ಇಲ್ಲ.
==ಈ ಶತಮಾನದ ತಾಪ ಹೆಚ್ಳಳದ ಸಮಸ್ಯೆ==
;ಹಿಮನದಿಗಳ ಹಿಂಜರಿತ
*ಸದ್ಯದ ಅತ್ಯಂತ ಗಂಭೀರ ಪಾರಿಸರಿಕ ಸಮಸ್ಯೆಯಾಗಿರುವ ‘ತಾಪ ಹೆಚ್ಚಳ’ ಅಂಟಾರ್ಕ್ಟಿಕಾದಲ್ಲಿ ತೀವ್ರ ಪ್ರಭಾವ ಬೀರುತ್ತಿದೆ. ಕಳೆದ ನಲವತ್ತು ವರ್ಷಗಳಲ್ಲಿ ಅಂಟಾರ್ಕ್ಟಿಕಾದ ತಾಪಮಾನ ಎರಡೂವರೆ ಡಿಗ್ರಿ ಸೆಲ್ಷಿಯಸ್‌ನಷ್ಟು ಹೆಚ್ಚಿದೆ. ಅದರ ಪರಿಣಾಮಗಳು ಹಲವು.
 
*ಅಂಟಾರ್ಕ್ಟಿಕಾದ ಪಶ್ಚಿಮ ಭಾಗದ ಕಡಲಂಚಿನುದ್ದಕ್ಕೂ ಅಸ್ತಿತ್ವದಲ್ಲಿರುವ ಹಿಮನದಿಗಳ ಪ್ರತಿ ಹತ್ತರಲ್ಲಿ ಒಂಬತ್ತು ಹಿಂದೆ ಸರಿಯುತ್ತಿವೆ. ಹನ್ನೆರಡು ವರ್ಷಗಳಿಂದ ಈಚೆಗೆ ಈ ಹಿಂಜರಿತದ ವೇಗ ಹೆಚ್ಚುತ್ತಲೂ ಇದೆ. ಉದಾಹರಣೆಗೆ ಜಾಗತಿಕವಾಗಿ ಸಾಗರ ಮಟ್ಟವನ್ನು ನಾಲ್ಕು ಅಡಿ ಹೆಚ್ಚಿಸಬಲ್ಲ ‘ಥ್ವೈಟ್‌್ಸ ಹಿಮನದಿ’ ಮತ್ತು ಸಾಗರ ಮಟ್ಟವನ್ನು ಇಪ್ಪತ್ತು ಅಡಿ ಏರಿಸಬಲ್ಲಷ್ಟು ಜಲದಾಸ್ತಾನಿನ ‘ಟೋಟ್ಟೆನ್‌ ಹಿಮನದಿ’ – ಈ ಪ್ರತಿಯೊಂದೂ ಲಕ್ಷಾಂತರ ಚದರ ಕಿ.ಮೀ. ವಿಸ್ತಾರ ಕಡಿಮೆಗೊಂಡಿವೆ.
 
* ಈ ಭೂಖಂಡದ ಸುಪ್ರಸಿದ್ಧ ‘ಲಾರ್ಸೆನ್‌ ಐಸ್‌ ಶೆಲ್ಫ್‌’ ಪ್ರಸ್ತುತ ಶೇಕಡ ನಲವತ್ತು ಭಾಗ ಕರಗಿದೆ. 220 ಮೀಟರ್‌ ದಪ್ಪದ ಆ ‘ಐಸ್‌ ಶೆಲ್ಫ್‌’ನ (ಹಾಗೆಂದರೆ ನೆಲದಿಂದ ಕಡಲಿಗೂ ಚಾಚಿ ಹರಡಿದ ಹಿಮಹಾಸು) 3250 ಚದರ ಕಿ.ಮೀ.ನಷ್ಟು ಭಾಗ ಕಣ್ಮರೆಯಾಗಿದೆ. ಹಾಗೆ ಏಳು ಪ್ರಮುಖ ಐಸ್‌ ಶೇಲ್ಫ್‌ಗಳ ಒಟ್ಟು ಸಮೀಪ 13500 ಚದರ ಕಿ.ಮೀ. ವಿಸ್ತಾರದ ಹಿಮ ಕರಗಿ ನೀರಾಗಿ ಕಡಲಿಗಿಳಿದಿದೆ.
 
* ಅಂಟಾರ್ಕ್ಟಿಕಾದ ಹಿಮಹಾಸುಗಳು, ಹಿಮನದಿಗಳು ಮತ್ತು ಹಿಮಚಾಚುಗಳನ್ನು ಅಭ್ಯಸಿಸುತ್ತಿರುವ ತಜ್ಞರು ವಿವರಿಸುವಂತೆ ಇವುಗಳ ಕರಗುವ ಕುಸಿಯುವ ಕುಗ್ಗುವ ವೇಗ ಮುಂದಿನ ಹತ್ತು ವರ್ಷಗಳಲ್ಲಿ ದುಪ್ಪಟ್ಟಾಗಲಿದೆ. ಕರಗುವ ಅಂಟಾರ್ಕ್ಟಿಕಾದಿಂದ ಸಾಗರ ಮಟ್ಟ ಏರಿ ಜಗದಾದ್ಯಂತ ನೆಲ–ಕಡಲುಗಳ ಸಕಲ ಜೀವಾವಾರಗಳೂ ಇಡೀ ಭೂ ಜೀವಜಾಲವೂ ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶವಿದೆ.<ref>www.prajavani.net/article/ಆತಂಕಗಳ-ನೆರಳಲ್ಲಿ-ಅಂಟಾರ್ಕ್ಟಿಕಾ(<ಗೂಗಲ್)</ref>
 
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ಅಂಟಾರ್ಕ್ಟಿಕ" ಇಂದ ಪಡೆಯಲ್ಪಟ್ಟಿದೆ