ಜೋಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಉಲ್ಲೇಖ ಲಿಂಕ್ ತಿದ್ದುಪಡಿ
ಚು ಉಲ್ಲೇಖ ಲಿಂಕ್ ತಿದ್ದುಪಡಿ
೨೦ ನೇ ಸಾಲು:
ಜೋಳವು ಹಲವು ಆಫ್ರಿಕಾ, ಏಷಿಯಾದ ದೇಶಗಳ ಆಹಾರ ಧಾನ್ಯವಾಗಿದೆ. ಜೋಳದ ೨೫ ಜೀವಸಂಕುಲಗಳಲ್ಲಿ ೧೭ ಜೀವಸಂಕುಲಗಳು ಆಸ್ಟ್ರೇಲಿಯಕ್ಕೆ ಸ್ಥಳೀಯವಾಗಿವೆ. ಇದಲ್ಲದೆ ಇವುಗಳಲ್ಲಿ ಕೆಲವರ ವ್ಯಾಪ್ತಿಯು ಆಫ್ರಿಕಾ, ಏಶಿಯಾ, ಮಧ್ಯಅಮೆರಿಕ ಮತ್ತು ಕೆಲವೊಂದು ಹಿಂದೂ ಹಾಗೂ ಶಾಂತಿ ಮಹಾಸಾಗರದ ದ್ವೀಪಗಳಿಗೆ ಹರಡಿದೆ<ref>English Wikipedia Sorghum link https://en.wikipedia.org/wiki/Sorghum access date 2016-07-14</ref> ಸಾಮಾನ್ಯವಾಗಿ ಸಾಗುವಳಿ ಮಾಡುವ ಜೋಳವು <i>ಸೋರ್ಗಮ್ ಬೈಕಾಲರ</i> ಜೀವಸಂಕುಲಕ್ಕೆ ಸೇರಿದೆ.
 
ಜೋಳ ಪದವನ್ನು ಕನ್ನಡದಲ್ಲಿ ಜೋಳದ ಸಸ್ಯ ಹಾಗೂ ಕಾಳಿಗೂ (ಧಾನ್ಯ) ಬಳಸಲಾಗುತ್ತದೆ. ಇಂಗ್ಲೀಶ್ ಸಂವಾದಿ ಪದಗಳು <i>ಜೋವರ್</i> ಅಥವಾ <i>ಸೋರ್ಗಮ್</i>. ಇದು ಭಾರತದ ಪ್ರಮುಖ ಕಿರುಧಾನ್ಯಗಳಲ್ಲಿ (ಮಿಲೆಟ್ ಅಥವಾ ಸಿರಿಧಾನ್ಯ) ಒಂದು. ಜಾಗತಿಕ ಧಾನ್ಯ ಉತ್ಪಾದನೆಯಲ್ಲಿ ಅದು ಐದನೆಯ ಸ್ಥಾನದಲ್ಲಿದೆ <ref> Awika M. Joshep, [http://pubs.acs.org/doi/pdf/10.1021/bk-2011-1089.ch001 | "Chapter1 Major Cereal Grains Production and Use around the World"]”, access date 2016-07-14</ref>. ಭಾರತದಲ್ಲಿ ಬೆಳೆಯುವ ಧಾನ್ಯಗಳಲ್ಲಿ ಅದರ ಸ್ಥಾನ ಐದನೆಯದು (ಮೆಕ್ಕೆಜೋಳ ಮತ್ತು ಸಜ್ಜೆಯ ನಂತರದ ಸ್ಥಾನ). <ref> [http://eands.dacnet.nic.in/latest_20011.htm | “Normal (average of 2005-06 - 2009-10) Area, Production and Yield of Major Crops in India”] access date 2016-07-14 (from Direcorate of Economics and Statistics, Department of Agriculture, Govt of India. </ref>. ಭಾರತದ ಜೋಳ ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ ಮಹಾರಾಷ್ಟ್ರ ನಂತರ ಎರಡನೆಯದು<ref name=D>[http://agropedia.iitk.ac.in/content/area-production-and-yield-jowar-major-producing-states | ”Area, Production and Yield of Jowar in major Producing States”], Agropedia, access date 2016-07-14</ref>. ಅಮೆರಿಕ ಸಂಯುಕ್ತ ಸಂಸ್ಥಾನಗಳಂತಹ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಇದನ್ನು ಪ್ರಮುಖವಾಗಿ ಪಶು ಆಹಾರವಾಗಿ ಬಳಸಿದರೆ, ಭಾರತದ ಕೆಲವು ಭಾಗಗಳಲ್ಲಿ ಮತ್ತು ಹಲವು ಆಫ್ರಿಕಾ ಹಾಗೂ ಏಷಿಯಾದ ದೇಶಗಳಲ್ಲಿ ಮಾನವ ಆಹಾರವಾಗಿ ಧಾನ್ಯವನ್ನು ಬಳಸಲಾಗುತ್ತದೆ. ಕರ್ನಾಟಕದ ಉತ್ತರ ಭಾಗದಲ್ಲಿ ಜೋಳ ಪ್ರಮುಖ ಆಹಾರ ಧಾನ್ಯಗಳಲ್ಲೊಂದು.
==ಹುಟ್ಟು==
ಈಗ ಬೆಳೆಯಲಾಗುತ್ತಿರುವ ಜೋಳದ ವನ್ಯ ಸಸ್ಯ ಸಂಬಂಧಿಗಳು ಸಹಾರದ ದಕ್ಷಿಣಕ್ಕಿರುವ ಆಫ್ರಿಕಾಕ್ಕೆ ಸೀಮಿತವಾಗಿದೆ. ಜೊಹರಿ ಮತ್ತು ಹಾಫ್ “ಬಹುಶಹ” ಎಮೆನ್ ಮತ್ತು ಸೂಡಾನ್‌ಗಳ ಸಹ ಎಂದು ಸೇರಿಸುವ ಮೂಲಕ ಇಲ್ಲಿಯೂ ಇದನ್ನು ಬೆಳೆಯಾಗಿಸುವುದು ಅಥವಾ ವನ್ಯಸಸ್ಯಗಳಿಂದ ಒಂದು ಬೆಳೆಯನ್ನಾಗಿ ಅಭಿವೃದ್ಧಿ ಪಡಿಸಿರ ಬಹುದು ಎಂದು ಸೂಚಿಸುತ್ತಾರೆ<ref name=A>Daniel Zohary and Maria Hopf, Domestication of plants in the Old World, third edition (Oxford: University Press, 2000),p. 89 (Wikipedia English Commercia sorghum reference)</ref>. ಭಾರತೀಯ ಉಪಖಂಡದಲ್ಲಿನ ಅತಿ ಪುರಾತನ ಜೋಳದ ಇರುವಿಕೆಯನ್ನು ಹರಪ್ಪ ಪೂರ್ವದ ಹಂತಗಳಲ್ಲಿ ಪತ್ತೆಹಚ್ಚಲಾಗಿದೆ (ಕ್ರಿ ಪೂ ೨೭೫೦-೨೫೦೦). ಇಂದು ಪ್ರಮುಖವಾಗಿ ಈ ಬೆಳೆಯನ್ನು ಬೆಳೆಯುವ ಪ್ರದೇಶವಾದ ಮಹಾರಾಷ್ಟ್ರದಲ್ಲಿ ಇದರ ಇರುವಿಕೆಯನ್ನು ಅಹೆಮದ್‌ನಗರ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳ ದೈಮಾಬಾದ್‌ನಲ್ಲಿನ ಸವಲ್ಡ ಹಂತ ಮತ್ತು ನಂತರದ ಹಂತಗಳಲ್ಲಿ (ಕಾಲಮಾನ I ಕ್ರಿ ಪೂ ೨೨೦೦-೨೦೦೦) ಪತ್ತೆಹಚ್ಚಲಾಗಿದೆ.<ref> Sing, Purushottam “Chapter8 History of Millet Cultivation in India” in Editors. Lallanji Gopal and V. C. Srivastav (2008), Concept Publishing Company, [https://books.google.co.in/books?id=FvjZVwYVmNcC&dq ''History of Agriculture in India, Up to C. 1200 A.D.''], pages 107-108.</ref>
೩೦ ನೇ ಸಾಲು:
ಜೋಳದ ಧಾನ್ಯಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕ ಸಂಯುಕ್ತ ಸಂಸ್ಥಾನವು ಅದನ್ನು ಪ್ರಧಾನವಾಗಿ ಕುಕ್ಕಟ (ಪೌಲ್ಟ್ರಿ) ಮತ್ತು ಪಶು ಆಹಾರವಾಗಿ ಬಳಸುತ್ತದೆ. ಆದರೆ ಇದರ ಧಾನ್ಯವು ಮಹಾರಾಷ್ಟ್ರ, ಉತ್ತರ ಮತ್ತು ಪೂರ್ವ ಕರ್ನಾಟಕ, ಆಂಧ್ರ ಪ್ರದೇಶದ ರಾಯಲಸೀಮ ಭಾಗಗಳಲ್ಲಿ ಪ್ರಧಾನವಾಗಿ ಜೋಳದ ರೊಟ್ಟಿಯಾಗಿ ಬಳಕೆಯಲ್ಲಿದೆ. ಇದರ ಸೊಪ್ಪೆ (ಕಾಂಡವು) ಪಶುಗಳ ಆಹಾರವಾಗಿ ಬಳಕೆಯಲ್ಲಿದೆ.
===ಧಾನ್ಯ ಜೋಳದ ಸಾಗುವಳಿ===
ನಿರ್ದಿಷ್ಟ ವರುಷದಲ್ಲಿ ಜೋಳವು ಅತಿ ಹೆಚ್ಚು ಧಾನ್ಯ ಇಳುವರಿ ನೀಡಬೇಕಾದರೆ ಸರಾಸರಿ ತಾಪಮಾನ ೨೫° ಸೆಲ್ಸಿಯಸ್ ಇರಬೇಕಾಗುತ್ತದೆ. ದಿನದ ತಾಪಮಾನ ೩೦° ಸೆ (ಸೆಲ್ಸಿಯಸ್) ಇದ್ದಾಗ ಅತಿಹೆಚ್ಚು //ದ್ಯುತಿಸಂಶ್ಲೇಷಣೆ ಇರುತ್ತದೆ. ರಾತ್ರಿಯ ತಾಪಮಾನ ಕೆಲವು ದಿನಗಳಿಗೂ ಹೆಚ್ಚು ೧೩° ಸೆ. ಕಡಿಮೆಯಾದರೆ ಗಿಡದ ಧಾನ್ಯ ಉತ್ಪಾದನೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಮಣ್ಣಿನ ತಾಪಮಾನ ೧೭° ಸೆ. ಆಗುವವರೆಗೂ ಬೀಜ ನಾಟುವುದು ಉಪಯುಕ್ತವಲ್ಲ. ಅದು ೪೫° ಸೆ. ನಷ್ಟು ಹೆಚ್ಚಿನ ಉಷ್ಟಾಂಶವನ್ನು ತಾಳಿಕೊಳ್ಳ ಬಲ್ಲದು ಆದರೆ ೮° ಸೆ. ಗೂ ಕಡಿಮೆ ತಾಪಮಾನವು ಹೂಬಿಡುವುದು ಮತ್ತು ಪರಾಗಸಂಪರ್ಕಕ್ಕೆ ದಕ್ಕೆಯುಂಟು ಮಾಡುತ್ತದೆ. ಹೂಬಿಡುವ ಹಂತದಲ್ಲಿ ೧೩°ಸೆ ಕಡಿಮೆ ತಾಪಮಾನ ಕಾಳುಕಟ್ಟುವುದರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇದನ್ನು ಉತ್ತರ ಭಾರತದಲ್ಲಿ ಹಿಂಗಾರಿನಲ್ಲಿ ಬೆಳೆಯುವುದಿಲ್ಲ.<ref name=B>Gangaiah B, [http://nsdl.niscair.res.in/jspui/bitstream/123456789/527/1/Millets%20(Sorghum,%20Pearl%20Millet,%20Finger%20Millet)%20-%20%20Formatted.pdf | “Agronomy – Kharif Crops Millets Sorghum (Jowar) Pearl Millet (Bajra) Finger Millet”] access date 2016-07-14</ref> ಉಷ್ಣವಲಯದಲ್ಲಿ ಬೆಳೆಯ ಬಹುದಾದ (ಮತ್ತು ಬೆಳೆಯುತ್ತಿರುವ) ಇನ್ನೊಂದು ಧಾನ್ಯ ಭತ್ತಕ್ಕೆ ಹೋಲಿಸಿದರೆ ಇದರ ನೀರಿನ ಅಗತ್ಯ ಕಡಿಮೆ.<ref name=C> [http://www.aboutcivil.org/water-requirements-of-crops.htm lhtml ”Irrigation Water Requirement of Crops”] access date 2016-07-14</ref> ಸಾಮಾನ್ಯವಾಗಿ ಜೋಳವನ್ನೂ ಒಳಗೊಂಡು ಎಲ್ಲಾ ಬೆಳೆಗಳ ಸಾಗುವಳಿ ಪದ್ಧತಿಗಳು ಒಂದು ಕೃಷಿ ವಲಯದಿಂದ ಇನ್ನೊಂದು ಕೃಷಿ ವಲಯಕ್ಕೆತುಸು ಭಿನ್ನವಾಗುತ್ತವೆ. ಹೀಗಾಗಿ ಇಲ್ಲಿನ ಜೋಳದ ಸಾಗುವಳಿಯ ವಿವರಗಳು ಹೆಚ್ಚಾಗಿ ಭಾರತಕ್ಕೆ ಸೀಮಿತವಾಗಿವೆ.
*<b>ಬಿತ್ತನೆಯ ವಿವರಗಳು</b>: ಭಾರತದಲ್ಲಿ ಈ ಬೆಳೆಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿಯೂ ಬೆಳೆಯಲಾಗುತ್ತದೆ. ಅತ್ಯುತ್ತಮ ಹೆಕ್ಟೇರಿನಲ್ಲಿನ ಸಸ್ಯಗಳ ಸಂಖ್ಯೆ ನಿರಾವರಿಯಲ್ಲಿ (ಎಲ್ಲಾ ಕಾಲಗಳಲ್ಲಿಯೂ) ೧,೫೦,೦೦೦ ದಿಂದ ೨,೦೦,೦೦೦ ಇದ್ದರೆ ಈ ಸಂಖ್ಯೆ ಖುಷ್ಕಿಯಲ್ಲಿ ೧,೩೫,೦೦೦ ವಿರುತ್ತದೆ. ೪೫x೧೫ ಸೆಂಮೀ ಅಥವಾ ೬೦x೧೦ ಸೆಂಮೀಗಳ ಮೂಲಕ ಪಡೆಯ ಬಹುದು. ಇದನ್ನು ಹೆಕ್ಟೇರಿಗೆ ೮-೧೦ ಕೆಜಿ ಬಿತ್ತುವ ಮೂಲಕ ಪಡೆಯ ಬಹುದು. ಇದನ್ನು ಬಿತ್ತನೆಯು ಮೊಳೆತ ನಂತರ ದಟ್ಟಣೆ ಕಡಿಮೆ ಮಾಡುವ ಮೂಲಕ ಸಾಧಿಸ ಬಹುದು. ಬಹಳಷ್ಟು ಹೆಚ್ಚು ಇಳುವರಿಯ ಮತ್ತು ಹೈಬ್ರಿಡ್ ತಳಿಗಳು ೯೦-೧೨೦ ದಿನಗಳಲ್ಲಿ ಕಟಾವಿಗೆ ಬರುತ್ತವೆ.<ref name=B />
*<b>ತಳಿಗಳು</b>: ಹಲವು ಸುಧಾರಿತ ಹಾಗೂ ಹೈಬ್ರಿಡ್ ತಳಿಗಳನ್ನು ಬಿತ್ತನೆಗೆ ಶಿಪಾರಸು ಮಾಡಲಾಗಿದೆ. ಕರ್ನಾಟಕಕ್ಕೆ ಸೀಮಿತವಾಗಿ ಈ ತಳಿಗಳ ಯಾದಿಯನ್ನು ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ.
೧೫೯ ನೇ ಸಾಲು:
*<b>ಆಹಾರವಾಗಿ</b> ದಕ್ಷಿಣ ಭಾರತದ ಜೋಳದ ರೊಟ್ಟಿಗಳ ರೂಪದಲ್ಲಿಯಲ್ಲದೆ ಆಹಾರವಾಗಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಬಳಸುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಗಂಜಿಯಂತಹ ಮಂದ ಆಹಾರವಾಗಿ ತಯಾರಿಸುತ್ತಾರೆ. ಉತ್ತರ ಸೋತೊನಲ್ಲಿ ಇದನ್ನು <i>ಮಾಬೆಲೆ</i> ಎಂದು ಕರೆದರೆ ಇಂಗ್ಲೀಶ್‌ನಲ್ಲಿ ಇದನ್ನು ಕಂದು ಗಂಜಿ ಎಂದು ಕರೆಯುತ್ತಾರೆ. ಹುದುಗಿಸುವಿಕೆಯ ಮೂಲಕ ಇಥಿಯೋಪಿಯಾದಲ್ಲಿ <i>ಇಂಜೆರ</i> ಎಂದು ಕರೆಯಲಾದ ಮತ್ತು ಸುಡಾನಿನಲ್ಲಿ //ಕಿಸ್ರಾ ಎಂದು ಕರೆಯಲಾದ ರೊಟ್ಟಿಯನ್ನು ತಯಾರಿಸಲಾಗುತ್ತದೆ. ಅರಬ್ ಆಹಾರದಲ್ಲಿ ಗಂಜಿ, ಸೂಪ್‌ಗಳಂತಹ ಹಲವು ಆಹಾರಗಳನ್ನು ತಯಾರಿಸಲಾಗುತ್ತದೆ. ಮೆಕ್ಕೆಜೋಳದಂತೆ ಅದನ್ನು ಪಾಪ್‌ಕಾರ್ನ್ ಸಹ ಮಾಡಬಹುದು ಆದರೆ ಹಾಗೆ ಮಾಡಿದ ಕಾರ್ನ್ ತುಸು ಸಣ್ಣದಾಗಿರುತ್ತದೆ.
{| class="wikitable" style="text-align: center;"
|+ ೧೦೦ ಗ್ರಾಂ ಜೋಳದಲ್ಲಿನ ಮುಖ್ಯ ಪೋಷಕಾಂಶಗಳು<ref>[http://www.medindia.net/calories-in-indian-food/common_foods/cereal_grains_and_products/jowar.htm | ”Cereal Grains and Products - Common Foods Jowar”] acess date 2016-07-14</ref>
! ಪೋಷಕಾಂಶ
! ಪ್ರಮಾಣ
"https://kn.wikipedia.org/wiki/ಜೋಳ" ಇಂದ ಪಡೆಯಲ್ಪಟ್ಟಿದೆ