ಜೋಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ref correction
ಚು →‎ಧಾನ್ಯ ಜೋಳದ ಸಾಗುವಳಿ: ಉಲ್ಲೇಖ ಲಿಂಕ್ ತಿದ್ದುಪಡಿ
೩೦ ನೇ ಸಾಲು:
ಜೋಳದ ಧಾನ್ಯಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕ ಸಂಯುಕ್ತ ಸಂಸ್ಥಾನವು ಅದನ್ನು ಪ್ರಧಾನವಾಗಿ ಕುಕ್ಕಟ (ಪೌಲ್ಟ್ರಿ) ಮತ್ತು ಪಶು ಆಹಾರವಾಗಿ ಬಳಸುತ್ತದೆ. ಆದರೆ ಇದರ ಧಾನ್ಯವು ಮಹಾರಾಷ್ಟ್ರ, ಉತ್ತರ ಮತ್ತು ಪೂರ್ವ ಕರ್ನಾಟಕ, ಆಂಧ್ರ ಪ್ರದೇಶದ ರಾಯಲಸೀಮ ಭಾಗಗಳಲ್ಲಿ ಪ್ರಧಾನವಾಗಿ ಜೋಳದ ರೊಟ್ಟಿಯಾಗಿ ಬಳಕೆಯಲ್ಲಿದೆ. ಇದರ ಸೊಪ್ಪೆ (ಕಾಂಡವು) ಪಶುಗಳ ಆಹಾರವಾಗಿ ಬಳಕೆಯಲ್ಲಿದೆ.
===ಧಾನ್ಯ ಜೋಳದ ಸಾಗುವಳಿ===
ನಿರ್ದಿಷ್ಟ ವರುಷದಲ್ಲಿ ಜೋಳವು ಅತಿ ಹೆಚ್ಚು ಧಾನ್ಯ ಇಳುವರಿ ನೀಡಬೇಕಾದರೆ ಸರಾಸರಿ ತಾಪಮಾನ ೨೫° ಸೆಲ್ಸಿಯಸ್ ಇರಬೇಕಾಗುತ್ತದೆ. ದಿನದ ತಾಪಮಾನ ೩೦° ಸೆ (ಸೆಲ್ಸಿಯಸ್) ಇದ್ದಾಗ ಅತಿಹೆಚ್ಚು //ದ್ಯುತಿಸಂಶ್ಲೇಷಣೆ ಇರುತ್ತದೆ. ರಾತ್ರಿಯ ತಾಪಮಾನ ಕೆಲವು ದಿನಗಳಿಗೂ ಹೆಚ್ಚು ೧೩° ಸೆ. ಕಡಿಮೆಯಾದರೆ ಗಿಡದ ಧಾನ್ಯ ಉತ್ಪಾದನೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಮಣ್ಣಿನ ತಾಪಮಾನ ೧೭° ಸೆ. ಆಗುವವರೆಗೂ ಬೀಜ ನಾಟುವುದು ಉಪಯುಕ್ತವಲ್ಲ. ಅದು ೪೫° ಸೆ. ನಷ್ಟು ಹೆಚ್ಚಿನ ಉಷ್ಟಾಂಶವನ್ನು ತಾಳಿಕೊಳ್ಳ ಬಲ್ಲದು ಆದರೆ ೮° ಸೆ. ಗೂ ಕಡಿಮೆ ತಾಪಮಾನವು ಹೂಬಿಡುವುದು ಮತ್ತು ಪರಾಗಸಂಪರ್ಕಕ್ಕೆ ದಕ್ಕೆಯುಂಟು ಮಾಡುತ್ತದೆ. ಹೂಬಿಡುವ ಹಂತದಲ್ಲಿ ೧೩°ಸೆ ಕಡಿಮೆ ತಾಪಮಾನ ಕಾಳುಕಟ್ಟುವುದರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇದನ್ನು ಉತ್ತರ ಭಾರತದಲ್ಲಿ ಹಿಂಗಾರಿನಲ್ಲಿ ಬೆಳೆಯುವುದಿಲ್ಲ.<ref name=B>Gangaiah B, [http://nsdl.niscair.res.in/jspui/bitstream/123456789/527/1/Millets%20(Sorghum,%20Pearl%20Millet,%20Finger%20Millet)%20-%20%20Formatted.pdf | “Agronomy – Kharif Crops Millets Sorghum (Jowar) Pearl Millet (Bajra) Finger Millet”] access date 2016-07-14</ref> ಉಷ್ಣವಲಯದಲ್ಲಿ ಬೆಳೆಯ ಬಹುದಾದ (ಮತ್ತು ಬೆಳೆಯುತ್ತಿರುವ) ಇನ್ನೊಂದು ಧಾನ್ಯ ಭತ್ತಕ್ಕೆ ಹೋಲಿಸಿದರೆ ಇದರ ನೀರಿನ ಅಗತ್ಯ ಕಡಿಮೆ.<ref name=C> [http://www.aboutcivil.org/water-requirements-of-crops.html|”Irrigation Water Requirement of Crops”] access date 2016-07-14</ref> ಸಾಮಾನ್ಯವಾಗಿ ಜೋಳವನ್ನೂ ಒಳಗೊಂಡು ಎಲ್ಲಾ ಬೆಳೆಗಳ ಸಾಗುವಳಿ ಪದ್ಧತಿಗಳು ಒಂದು ಕೃಷಿ ವಲಯದಿಂದ ಇನ್ನೊಂದು ಕೃಷಿ ವಲಯಕ್ಕೆತುಸು ಭಿನ್ನವಾಗುತ್ತವೆ. ಹೀಗಾಗಿ ಇಲ್ಲಿನ ಜೋಳದ ಸಾಗುವಳಿಯ ವಿವರಗಳು ಹೆಚ್ಚಾಗಿ ಭಾರತಕ್ಕೆ ಸೀಮಿತವಾಗಿವೆ.
*<b>ಬಿತ್ತನೆಯ ವಿವರಗಳು</b>: ಭಾರತದಲ್ಲಿ ಈ ಬೆಳೆಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿಯೂ ಬೆಳೆಯಲಾಗುತ್ತದೆ. ಅತ್ಯುತ್ತಮ ಹೆಕ್ಟೇರಿನಲ್ಲಿನ ಸಸ್ಯಗಳ ಸಂಖ್ಯೆ ನಿರಾವರಿಯಲ್ಲಿ (ಎಲ್ಲಾ ಕಾಲಗಳಲ್ಲಿಯೂ) ೧,೫೦,೦೦೦ ದಿಂದ ೨,೦೦,೦೦೦ ಇದ್ದರೆ ಈ ಸಂಖ್ಯೆ ಖುಷ್ಕಿಯಲ್ಲಿ ೧,೩೫,೦೦೦ ವಿರುತ್ತದೆ. ೪೫x೧೫ ಸೆಂಮೀ ಅಥವಾ ೬೦x೧೦ ಸೆಂಮೀಗಳ ಮೂಲಕ ಪಡೆಯ ಬಹುದು. ಇದನ್ನು ಹೆಕ್ಟೇರಿಗೆ ೮-೧೦ ಕೆಜಿ ಬಿತ್ತುವ ಮೂಲಕ ಪಡೆಯ ಬಹುದು. ಇದನ್ನು ಬಿತ್ತನೆಯು ಮೊಳೆತ ನಂತರ ದಟ್ಟಣೆ ಕಡಿಮೆ ಮಾಡುವ ಮೂಲಕ ಸಾಧಿಸ ಬಹುದು. ಬಹಳಷ್ಟು ಹೆಚ್ಚು ಇಳುವರಿಯ ಮತ್ತು ಹೈಬ್ರಿಡ್ ತಳಿಗಳು ೯೦-೧೨೦ ದಿನಗಳಲ್ಲಿ ಕಟಾವಿಗೆ ಬರುತ್ತವೆ.<ref name=B />
*<b>ತಳಿಗಳು</b>: ಹಲವು ಸುಧಾರಿತ ಹಾಗೂ ಹೈಬ್ರಿಡ್ ತಳಿಗಳನ್ನು ಬಿತ್ತನೆಗೆ ಶಿಪಾರಸು ಮಾಡಲಾಗಿದೆ. ಕರ್ನಾಟಕಕ್ಕೆ ಸೀಮಿತವಾಗಿ ಈ ತಳಿಗಳ ಯಾದಿಯನ್ನು ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ.
೧೫೩ ನೇ ಸಾಲು:
| '''೮೬೦'''
|}
*<b>ಗೊಬ್ಬರ ಮತ್ತು ಕ್ರಿಮಿಕೀಟಗಳಿಂದ ರಕ್ಷಣೆ</b>: ಶಿಪಾರಸು ಮಾಡಿದ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಹಾಗೂ ರಸಗೊಬ್ಬರಗಳನ್ನು ಕೊಡುವುದು (ಅದರಲ್ಲಿಯೂ ವಿಶೇಷವಾಗಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್) ಅಗತ್ಯವಿದೆ. ಜೋಳವನ್ನು ಬಾಧಿಸುವ ಮುಖ್ಯ ಕೀಟಗಳು: ಸುಳಿ ನೊಣ, ಚಿಕ್ಕಣ ದುಂಬಿ, ಮಿಡತೆ, ಕಾಂಡ ಕೊರೆಯುವ ಹುಳು, ಸುಳಿ ತಿಗಣೆ ಮತ್ತು ತೆನೆ ತಿಗಣೆ. ಬಾಧಿಸುವ ಮುಖ್ಯ ರೋಗಗಳು: ತುಕ್ಕು ರೋಗ, ಕೇದಿಗೆ ರೋಗ, ಎಲೆ ಚುಕ್ಕೆ ರೋಗ, ಎಲೆ ಮಚ್ಚಿಗರೋಗ, ಜೋನಿ ರೋಗ, ಕಾಂಡದ ಕಪ್ಪು ಕೊಳೆ ರೋಗ ಮತ್ತು ಕಾಡಿಗೆ ರೋಗ. ಇವುಗಳಿಂದ ಕಾಪಾಡಲು ಶಿಪಾರಸು ಮಾಡಿದ ಕ್ರಿಮಿನಾಶಕಗಳನ್ನು ಸಿಂಪಡಿಸ ಬೇಕಾದ ಅಗತ್ಯವಿರುತ್ತದೆ. ಇಂತಹ ಗೊಬ್ಬರ ಮತ್ತು ಕ್ರಿಮಿಕೀಟಗಳಿಂದ ರಕ್ಷಣೆಗೆ ಕ್ರಿಮಿನಾಶಗಳು ಸಿಂಪಡಿಸುವುದನ್ನು ಕೃಷಿ ವಿಶ್ವವಿದ್ಯಾಲಯಗಳು (ಅಥವಾ ಸರಕಾರ) ಅಧಿಕ ಇಳುವರಿಗೆ ಸುಧಾರಿತ ಬೇಸಾಯದ ಕ್ರಮಗಳಾಗಿ ಸೂಚಿಸುತ್ತವೆ.<ref>ಅಧಿಕ ಇಳುವರಿಗೆ ಸುಧಾರಿತ ಬೇಸಾಯ ಕ್ರಮಗಳು (ಕರ್ನಾಟಕ ಈಶಾನ್ಯ ಪ್ರದೇಶದಲ್ಲಿ (ಪ್ರದೇಶ ೧, ವಲಯ ೧ ಮತ್ತು ೨)), ಕೃಷಿ ವಿಶ್ವವಿದ್ಯಾಲಯ, ದಾರವಾಢ ಮತ್ತು ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಬೆಂಗಳೂರು ೧೯೯೭</ref>
 
===ಉಪಯೋಗ===
"https://kn.wikipedia.org/wiki/ಜೋಳ" ಇಂದ ಪಡೆಯಲ್ಪಟ್ಟಿದೆ