ಉಣ್ಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "Animal": unwanted link. (TW)
೩೩ ನೇ ಸಾಲು:
==ಉಣ್ಣಿಗಳು ತರುವ ರೋಗಗಳು==
ದನಕರುಗಳಲ್ಲಿ ಸಾಕುಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಉಣ್ಣಿಗಳು ರೋಗಗಳನ್ನು ಹರಡುತ್ತವೆ. ಮರುಕಲಿಜ್ವರ ತರುವ ಸ್ಟೈರೊಖೀಟ ಜೀವಾಣುಗಳು, ಚುಕ್ಕೆ ಜ್ವರ ಮುಂತಾದ ರೋಗಗಳನ್ನು ತರುವ ರಿಕೆಟ್ಸಿಯ ಜೀವಿಗಳು ಹರಡುವುದು ಮುಖ್ಯವಾಗಿ ಉಣ್ಣಿಗಳಿಂದಲೇ. ಇದಲ್ಲದೆ ಬಾಬೆಸ್ಸಿಡೆ ಮತ್ತು ಅನಪ್ಲಾಸ್ಮ ಮತ್ತು ಟುಲರೋಮಿಯ ಮುಂತಾದ ಕಾಯಿಲೆಗಳನ್ನು ತರುವ ಬ್ಯಾಕ್ಟೀರಿಯಗಳು ಹರಡುವುದು ಸಹ ಉಣ್ಣಿಗಳಿಂದಲೇ. ಕೆಲವು ಜೀವಾಣುಗಳೂ ಉಣ್ಣಿಗಳಿಂದಾಗಿ ಒಂದು ಪ್ರಾಣಿಯಿಂದ ಮತ್ತೊಂದಕ್ಕೆ ಹರಡುತ್ತ ವೆಂದು ಇತ್ತೀಚೆಗೆ ತಿಳಿದುಬಂದಿದೆ. ಕುರಿಗಳಿಗೆ ಬರುವ ಲ್ಯೂಪಿಂಗ್ ರೋಗಕ್ಕೆ ಕಾರಣವಾದ ವೈರಸ್ಸುಗಳು ಉಣ್ಣಿಗಳಿಂದಲೇ ಹರಡುತ್ತವೆ.
 
ಉಣ್ಣಿ ರಕ್ತಹೀರುವುದರಿಂದಾಗುವ ಅನಾಹುತವೇನೂ ಕಡಿಮೆಯಿಲ್ಲ. ಮಿತಿಮೀರಿದಾಗ ಆಶ್ರಯ ನೀಡಿದ ಪ್ರಾಣಿ ಬದುಕುವುದೇ ಅಸಾಧ್ಯವಾಗಬಹುದು. ಕಾರಣ ರಕ್ತಹೀನತೆ. ಜೆಲ್ಲಿಸನ್ಸ್‌ ಮತ್ತು ಖೋಸ್ ಹೇಳಿರುವ ಪ್ರಕಾರ 60-80 ಹೆಣ್ಣು ಉಣ್ಣಿಗಳು ಒಂದು ಮೊಲವನ್ನು 5-7 ದಿನಗಳ ಅವಧಿಯಲ್ಲಿ ಕೊಂದವು (1938). ರಕ್ತಹೀರುವುದರ ಜೊತೆಗೆ ಉಣ್ಣಿ ಬಿಡುವ ವಿಷ ಪದಾರ್ಥವೂ ಇದಕ್ಕೆ ಕಾರಣ. ಶ್ಜೂಹಾರ್ಥ್‌ ಎಂಬ ವಿಜ್ಞಾನಿ 1950ರಲ್ಲಿ ತಾನು ಸಾಕಿದ್ದ ಉಣ್ಣಿಗಳ ಪಂಜರದೊಳಕ್ಕೆ ಇಲಿಗಳನ್ನು ಬಿಟ್ಟ. ಇಲಿಗಳು ಕೇವಲ ಮೂರು ಗಂಟೆಗಳಲ್ಲಿಯೇ ಸತ್ತುಬಿದ್ದವು. ಉಣ್ಣಿ ಎಲ್ಲಿಯೇ ಇದ್ದರೂ ಅದರ ಆಹಾರ ರಕ್ತ. ಹಸುವಿನ ಕೆಚ್ಚಲಿನ ಮೇಲಿದ್ದರೂ ಅದು ಹೀರುವುದು ರಕ್ತವನ್ನೇ. ಸರ್ವಜ್ಞಕವಿ “ಉಣ್ಣಿ ಕೆಚ್ಚಲೊಳಿದ್ದು ಉಣ್ಣದದು ನೊರೆಹಾಲು” ಎಂದು ಸುಂದರವಾಗಿ ಉಣ್ಣಿಯ ಚಿತ್ರಣ ನೀಡಿದ್ದಾನೆ. 1950ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಸೊರಬ ತಾಲ್ಲೂಕುಗಳಲ್ಲಿ ಕಾಣಿಸಿಕೊಂಡ [[ಮಂಗನ ಕಾಯಿಲೆ]] ಅಥವಾ [[ ಕ್ಯಾಸನೂರು ಅರಣ್ಯಕಾಡಿನ ಕಾಯಿಲೆ ]] ಉಣ್ಣಿಗಳಿಂದ ಹರಡಿತು. ರೋಗಕಾರಕ ವೈರಸ್ಸನ್ನು ಹರಡಲು ಉಣ್ಣಿಗಳು ಮಧ್ಯವರ್ತಿಗಳ ಪಾತ್ರ ವಹಿಸುವುವು.
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಣ್ಣಿ}}
[[ವರ್ಗ:ಪ್ರಾಣಿಗಳು]]
"https://kn.wikipedia.org/wiki/ಉಣ್ಣಿ" ಇಂದ ಪಡೆಯಲ್ಪಟ್ಟಿದೆ