ಲುಧಿಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೮ ನೇ ಸಾಲು:
ಪಂಜಾಬ್ ರಾಜ್ಯದಲ್ಲಿರುವ ಬೃಹತ್ ವಾಟರ್ ಪಾರ್ಕ್ ಹಾರ್ಡಿಸ್ ವರ್ಲ್ಡ್ ಆಗಿದೆ. ಇದು ನಗರದಿಂದ ೧೩.೧ ಕಿ.ಮೀ. ದೂರದಲ್ಲಿ ಲುಧಿಯಾನ-ಜಲಂಧರ್ ಹೈವೇಯಲ್ಲಿದೆ. ಇದರ ಆವರಣದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ಪಾರ್ಟಿ ಏರಿಯಾ ಮತ್ತು ಆಹಾರ ಮಳಿಗೆಗಳಿವೆ. ಪಾರ್ಕ್ ನ ಒಳಗಡೆಯಿರುವ ವಾಟರ್ ಸಿಟಿ ಐಸ್ ಸ್ಕೇಟಿಂಗ್‌ನಂತಹ ಹಲವಾರು ರೀತಿಯ ಮನೋರಂಜನಾ ಚಟುವಟಿಕೆಗಳನ್ನು ಪ್ರವಾಸಿಗಳಿಗೆ ಒದಗಿಸಿಕೊಡುತ್ತಿದೆ. ಪ್ರವಾಸಿಗಳು ನದಿಯ ಬಳಿ ವಿಶ್ರಾಂತಿ ಪಡೆಯಬಹುದು ಮತ್ತು ವಿಶ್ವದ ದೊಡ್ಡ ವಾಟರ್ ಕೋಸ್ಟರ್ ನಲ್ಲಿ ರೈಡ್ ಮಾಡಬಹುದು. ಇಲ್ಲಿರುವ ತಂಪಾದ ಮತ್ತು ಪುಟಿದೇಳುವ ಅಲೆಗಳ ಕೊಳ ಮಕ್ಕಳಲ್ಲಿ ಈ ಪ್ರದೇಶವನ್ನು ಜನಪ್ರಿಯವಾಗಿಸುವಂತೆ ಮಾಡಿದೆ.
 
=== ನೆಹರೂ ಗುಲಾಬಿ ಉದ್ಯಾನ===
೨೭ ಎಕರೆ ಜಾಗದಲ್ಲಿ ವ್ಯಾಪಿಸಿರುವ ಈ ಉದ್ಯಾನ ಏಶ್ಯಾದ ಅತೀ ದೊಡ್ಡ ಗುಲಾಬಿ ಉದ್ಯಾನ. ಸುಮಾರು ೧೬೦೦ ಬಗೆಯ ಗುಲಾಬಿಗಳ ಸುಮಾರು ೧೭೦೦೦ ಗಿಡಗಳು ಈ ಉದ್ಯಾನದಲ್ಲಿದೆ. ಪ್ರತೀ ವರ್ಷ ಇಲ್ಲಿ ಗುಲಾಬಿ ಉತ್ಸವ ನಡೆಯುತ್ತಿದ್ದು, ಇದನ್ನು ವೀಕ್ಷಿಸಲು ಸ್ಥಳೀಯರು ಹಾಗೂ ಹೊರಗಿನವರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭವ್ಯ ಕಾರಂಜಿಗಳಿಂದ ಉದ್ಯಾನದ ಸೌಂದರ್ಯ ಹೆಚ್ಚಿಸಿರುವುದಲ್ಲದೆ ನಗರಕ್ಕೆ ವಿಶ್ವಮಾನ್ಯತೆಯನ್ನು ತಂದುಕೊಟ್ಟಿದೆ. ಇದು ವಾಕಿಂಗ್ ಮಾಡುವವರಿಗೆ ಪ್ರಶಾಂತವಾದ ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಒಳ್ಳೆಯ ಸ್ಥಳ.
 
"https://kn.wikipedia.org/wiki/ಲುಧಿಯಾನ" ಇಂದ ಪಡೆಯಲ್ಪಟ್ಟಿದೆ