"ಸುಬ್ರಹ್ಮಣ್ಯ ಸ್ವಾಮಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ವಿಸ್ತರಣೆ)
[[Image:kukkesubramanya.jpg|thumb|right|ಕುಕ್ಕೆ ಸುಬ್ರಹ್ಮಣ್ಯ]]
 
'''ಕಾರ್ತಿಕೇಯ'''ನು ([[ತಮಿಳು|ತಮಿಳಿನಲ್ಲಿ]] '''ಮುರುಗನ್''') [[ತಮಿಳು]] ಹಿಂದೂಗಳಲ್ಲಿ ಜನಪ್ರಿಯನಾಗಿರುವ ಒಬ್ಬ [[ಹಿಂದೂ]] [[ದೇವತೆ]], ಮತ್ತು ಪ್ರಮುಖವಾಗಿ ತಮಿಳು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಪೂಜಿಸಲ್ಪಡುತ್ತಾನೆ. ವಿಶೇಷವಾಗಿ [[ದಕ್ಷಿಣ ಭಾರತ]] , [[ಸಿಂಗಾಪೂರ್]], [[ಶ್ರೀಲಂಕಾ]], [[ಮಲೇಷ್ಯಾ]] ಹಾಗೂ [[ಮಾರೀಷಸ್]]‌ಗಳಲ್ಲಿ. ಆದರೆ [[ಶ್ರೀಲಂಕಾ]]ದಲ್ಲಿ, [[ಹಿಂದೂ]]ಗಳು ಮತ್ತು [[ಬೌದ್ಧ]] ಧರ್ಮೀಯರು ಇಬ್ಬರೂ ಕಾರ್ತಿಕೇಯನಿಗೆ ಮುಡುಪಾಗಿರುವ ಮತ್ತು ದೇಶದ ದಕ್ಷಿಣದಲ್ಲಿರುವ ಒಂದು ಅತ್ಯಂತ ಪವಿತ್ರ ಬೌದ್ಧ ಮತ್ತು ಹಿಂದೂ ಕ್ಷೇತ್ರವಾದ [[ಕತರಗಾಮಾ]] ದೇವಸ್ಥಾನವನ್ನು ಪೂಜ್ಯಭಾವದಿಂದ ಕಾಣುತ್ತಾರೆ. ಹಾಗೆಯೆ [[ಮಲೇಷ್ಯಾ]]ದ ಪಿನಾಂಗ್, ಕ್ವಾಲಾಲಂಪೂರ್‌ನ ಚೀನೀ ಜನರೂ ಸಹ ಮುರುಗನ್‌ನನ್ನು [[ತಾಯ್ಪೂಸಾಮ್]]‌ನ ಅವಧಿಯಲ್ಲಿ ಪೂಜಿಸುತ್ತಾರೆ.
==ಉಗಮ==
[[ಪಾರ್ವತಿ|ಪಾರ್ವತೀಪುತ್ರನಾದ]] ಕುಮಾರಸ್ವಾಮಿ. ಷಣ್ಮುಖನೆಂಬ ಹೆಸರೂ ಇದೆ. ಕೃತ್ತಿಕೆಯರು ಇವನ ಸಾಕುತಾಯಿಯರು. ಇವನ ಜನ್ಮವಿಚಾರದಲ್ಲಿ ಅನೇಕ ಕಥೆಗಳಿವೆ. [[ಮಹಾಭಾರತ]]ದ ವನಪರ್ವದಲ್ಲಿನ ಕಾರ್ತಿಕೇಯಸ್ತವ ಇವನಿಗೆ ಐವತ್ತೊಂದು ಹೆಸರುಗಳನ್ನು ಸೂಚಿಸುತ್ತದೆ. [[ಈಶ್ವರ]]ನ ಅಗ್ನಿತತ್ತ್ವದಿಂದ ಸ್ಕಂದನಾಗಿ ಜನಿಸಿ ಆರು ಜನ ಮಾತೆಯರ ಹಾಲು ಕುಡಿದು ಷಾಣ್ಮುತುರನಾಗಿ ಶರವಣದಲ್ಲಿ ಬೆಳೆದವನಿವನು. ಶಕ್ತಿಧರನಾಗಿ ದೇವಸೈನಕ್ಕೆ ಅಧಿಪತಿಯಾಗಿ ಅವರಿಗಾಗಿ ರಾಕ್ಷಸ ಸಂಹಾರ ಮಾಡಿದ. ಕ್ರೌಂಚಪರ್ವತ ಧಾರಣ ಮಾಡಿದ. [[ನವಿಲು]] ಈತನ ವಾಹನ.
"https://kn.wikipedia.org/wiki/ವಿಶೇಷ:MobileDiff/690784" ಇಂದ ಪಡೆಯಲ್ಪಟ್ಟಿದೆ