ಕರ್ಕಾಟಕ ಸಂಕ್ರಾಂತಿ ವೃತ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
[[File:World map with tropic of cancer.svg|thumb|ಕರ್ಕಾಟಕ ಸಂಕ್ರಾಂತಿ ವೃತ್ತ]]
ಕರ್ಕಾಟಕ ಸಂಕ್ರಾಂತಿ ವೃತ್ತ : ಸಮಭಾಜಕ ವೃತ್ತಕ್ಕೆ (ಭೂಮಧ್ಯರೇಖೆ-ಟೆರ್ರೆಸ್ಟ್ರಿಯಲ್ ಇಕ್ವೇಟರ್) 23 ಡಿಗ್ರಿ 27’ಉತ್ತರದಲ್ಲಿ ಭೂಗೋಳದ ಮೇಲೆ ಎಳೆದ ಸಮಾಂತರ ಅಲ್ಪವೃತ್ತ (ಟ್ರಾಪಿಕ್ ಆಫ್ ಕ್ಯಾನ್ಸರ್). ಇದು ಸೂರ್ಯನ ದೈನಂದಿನ ಪಥಗಳ (ಸೂರ್ಯ ಮೂಡುವಲ್ಲಿಂದ ಕಂತುವ ತನಕ ಒಂದು ಹಗಲು ಆಕಾಶದಲ್ಲಿ ಸಾಗಿದ ದಾರಿಯ ಹೆಸರು ದೈನಂದಿನ ಪಥ) ಅತಿ [[ಉತ್ತರ]] ಗಡಿ ; ಎಂದರೆ ಕರ್ಕಾಟಕ ಸಂಕ್ರಾಂತಿ ವೃತ್ತಕ್ಕಿಂತ ಉತ್ತರಕ್ಕೆ ಸೂರ್ಯನ ಸಂಚಾರವಿಲ್ಲ. ದೈನಂದಿನ ಪಥಗಳನ್ನು ನೆಲದ ಮೇಲಿನ ಯಾವುದೇ ಸ್ಥಿರ ನೆಲೆಗಳ ಆಧಾರದಿಂದ ಗುರುತಿಸುತ್ತ ಹೋಗಬೇಕು. ಆಗ ಒಂದು ವಿಶೇಷವನ್ನು ಗಮನಿಸಬಹುದು; ಡಿಸೆಂಬರ್ 21 ರಿಂದ ಜೂನ್ 22ರ ತನಕ ಈ ಪಥಗಳು ಕ್ರಮೇಣ ಉತ್ತರದೆಡೆಗೆ ಜಾರುತ್ತ ಸಾಗುವುವು; [[ಜೂನ್]] 22ರಂದು [[ಉತ್ತರ]] ಎಲ್ಲೆಯನ್ನು ತಲಪಿ ಮರುದಿನದಿಂದ ದಕ್ಷಿಣದೆಡೆಗೆ ಜಾರತೊಡಗುವುವು. ಕರ್ಕಾಟಕ ಸಂಕ್ರಾಂತಿ ವೃತ್ತವೆಂಬ ಹೆಸರು [[ಉತ್ತರ]]ದ ಎಲ್ಲೆಗೆ ರೂಢಿಗೆ ಬಂದ ದಿವಸಗಳಂದು (ಸಹಸ್ರಾರು ವರ್ಷಗಳ ಹಿಂದೆ) ಕರ್ಕಾಟಕ ರಾಶಿ ಸೂರ್ಯನ ಅತಿ ಉತ್ತರಸ್ಥಾನವಾಗಿತ್ತು. ಸೂರ್ಯ ಈ ರಾಶಿಗೆ ಬಂದ ದಿವಸ ಕರ್ಕಾಟಕ ಸಂಕ್ರಮಣ; ಅಂದು ಸೂರ್ಯನದೈನಂದಿನ ಪಥ ವಿಷುವದ್ವೖತ್ತದಿಂದ (ಸೆಲೆಸ್ಟಿಯಲ್ ಇಕ್ವೇಟರ್) 23 ಡಿಗ್ರಿ 27’ ಉತ್ತರದಲ್ಲಿ ಅದಕ್ಕೆ ಸಮಾಂತರವಾದ ಅಲ್ಪ ವೃತ್ತ.