ಆಗ್ರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮೦ ನೇ ಸಾಲು:
ಆಗ್ರಾದ ಪ್ರದೇಶದ ಉಲ್ಲೇಖವು [[ಮಹಾಭಾರತ]] ಗ್ರಂಥದಲ್ಲಿದ್ದರೂ ೧೫೦೪ ರಲ್ಲಿ ದೆಹಲಿಯ ಸುಲ್ತಾನನಾದ [[ಸಿಕಂದರ್ ಲೋಧಿ]]ಯು ಸ್ಥಾಪಿಸಿದ ಎಂಬುದು ಈಗ ದೊರೆಯುವ ಸಾಕ್ಷ್ಯ. ಅವನ ಮಗ [[ಇಬ್ರಾಹಿಂ ಲೋಧಿ]]ಯು ಇದನ್ನು [[ಮೊದಲನೆಯ ಪಾಣಿಪತ್ ಯುದ್ಧ]] ದಲ್ಲಿ [[ಬಾಬರ]]ನಿಗೆ ಸೋಲುವವರೆಗೆ ಎಂದರೆ ೧೫೨೬ರ ವರೆಗೆ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ. ೧೫೩೦ರಲ್ಲಿ ಬಾಬರ್‍ನ ನಿಧನದ ನಂತರ ಅವನ ಮಗ [[ಹುಮಾಯೂನ್]] [[ಶೇರ್ ಶಾಹ್]]‍ನಿಂದ ಭಾರತದ ಹೊರಗೆ ಓಡಿಸಲ್ಪಟ್ಟು ನಂತರ ವಿಜಯಿಯಾಗಿ ಪಟ್ಟವನ್ನೇರುವಾಗ ಅವನು ದೆಹಲಿಯನ್ನು ರಾಜಧಾನಿಯನ್ನಾಗಿಸಿಕೊಂಡ. ಹುಮಾಯೂನನ ಮಗ [[ಅಕ್ಬರ್]] ಪುನಃ ರಾಜಧಾನಿಯನ್ನು ಆಗ್ರಾಕ್ಕೆ ಸ್ಥಳಾಂತರಿಸಿದ. ಈ ರೀತಿ ಸ್ಥಳಾಂತರಿಸುವಾಗ ಹಳೆಯ ಆಗ್ರಾವನ್ನು ಬಿಟ್ಟು ಯಮುನಾ ನದಿಯ ಬಲದಂಡೆಯಲ್ಲಿ ಹೊಸ ನಗರವನ್ನು ನಿರ್ಮಿಸಿದ. ಆದುದರಿಂದ ಈ ನಗರಕ್ಕೆ ಅಕ್ಬರಾಬಾದ್ ಎಂಬ ಹೆಸರೂ ಇದೆ. ಇದರ ನಂತರ ಆಗ್ರಾದ ಸುವರ್ಣ ಯುಗ. [[ಅಕ್ಬರ್]],[[ಜಹಾಂಗೀರ್]], [[ಷಾ ಜಹಾನ್]] ನಂತಹ ಚಕ್ರವರ್ತಿಗಳು ಈ ನಗರದಿಂದ ದೇಶವನ್ನು ಆಳಿದರು. ಮುಂದೆ [[ಔರಂಗಜೇಬ]] ೧೬೫೩ರಲ್ಲಿ [[ಔರಂಗಾಬಾದ್]] ಗೆ ಸ್ಥಳಾಂತರಿಸುವವರೆಗೆ ಇದು ಭಾರತದ ರಾಜಧಾನಿಯಾಗಿತ್ತು. ಮೊಘಲರ ಅವನತಿಯ ನಂತರ ಈ ಪ್ರದೇಶ ೧೮೦೩ ರ ವರೆಗೆ ಮರಾಠರ ಸ್ವಾಧೀನವಿದ್ದು ಇದರ ಹೆಸರು ಪುನಃ ಆಗ್ರಾ ಎಂದು ಬದಲಾಯಿತು. ಮುಂದೆ ಇದು ಬ್ರಿಟಿಷರ ವಶವಾಯಿತು.ಇಲ್ಲಿರುವ [[ತಾಜ್ ಮಹಲ್]], [[ಆಗ್ರಾ ಕೋಟೆ]] ಹಾಗೂ [[ ಫತೇಪುರ್ ಸಿಕ್ರಿ ]]ವಿಶ್ವ ಪರಂಪರೆಯ ತಾಣಗಳಾಗಿ ಘೋಷಿತವಾಗಿವೆ.
 
==ಆಗ್ರಾ ಪ್ರವಾಸೋದ್ಯಮ==
ಆಗ್ರಾವು ಆಗ್ರಾ , ಜೈಪುರ್ ಮತ್ತು ದೆಹಲಿಗಳನ್ನು ಒಳಗೊಂಡಿರುವ ಸುವರ್ಣ ತ್ರಿಕೋನದ ಒಂದು ಭಾಗವಾಗಿದೆ. ದೆಹಲಿಗೆ ಇದು ಹತ್ತಿರವಿರುವುದರಿಂದಾಗಿ ಹಲವಾರು ಪ್ರವಾಸಿಗರು ಒಂದು ದಿನದ ಪ್ರವಾಸದ ಸಲುವಾಗಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ತಾಜ್ ಮಹಲ್ ಜೊತೆಗೆ ಮತ್ತಷ್ಟು ಸ್ಥಳಗಳನ್ನು ನೋಡಲು ಬರುವ ಪ್ರವಾಸಿಗರಿಗಾಗಿ ಇಲ್ಲಿ ಹಲವಾರು ಹೋಟೆಲ್ ಮತ್ತು ಲಾಡ್ಜ್ ಗಳು ಇಲ್ಲಿವೆ.
 
ಸಮೀಪದಲ್ಲಿರುವ ಫತೇಪುರ್ ಸಿಕ್ರಿ ಮತ್ತು ಮಥುರಾಗಳಿಗೆ ಇಲ್ಲಿ ಸ್ಥಳ ವೀಕ್ಷಣಾ ಪ್ರವಾಸಗಳು ಲಭ್ಯವಿವೆ. ಈ ನಗರದಲ್ಲಿ ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದಿರುವ ಒಂದು ಮಾರುಕಟ್ಟೆಯಿದೆ. ಇದರಲ್ಲಿ ಪ್ರವಾಸಿಗರು ತಮಗೆ ಬೇಕಾದ ಆಭರಣಗಳು ಮತ್ತು ಸ್ಥಳೀಯ ಕರಕುಶಲ ವಸ್ತುಗಳನ್ನು ಕೊಂಡು ಕೊಳ್ಳಬಹುದು. ಇದರ ಜೊತೆಗೆ ಇಲ್ಲಿನ ದಲ್ಲಾಳಿಗಳು, ರಿಕ್ಷಾದವರು ಮತ್ತು ಅನಧಿಕೃತ ಮಾರ್ಗದರ್ಶಿಗಳನ್ನು ನಿಭಾಯಿಸಲು ತಯಾರಾಗಿರಿ.
 
==ಆಗ್ರಾ ಮತ್ತು ಅದರ ಸುತ್ತ ಮುತ್ತ ಇರುವ ಪ್ರವಾಸಿ ಸ್ಥಳಗಳು==
ಆಗ್ರಾದಲ್ಲಿರುವ ಐತಿಹಾಸಿಕ ಕಟ್ಟಡಗಳು ನಿಸ್ಸಂಶಯವಾಗಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಪ್ರವಾಸಿಗರು ತಾಜ್ ಮಹಲ್ ಜೊತೆಗೆ ಯಮುನಾ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಆಗ್ರಾ ಕೋಟೆ ಮತ್ತು ಅಕ್ಬರನ ಸಮಾಧಿಗೆ ಭೇಟಿ ನೀಡಬಹುದು. ಚೀನಿ ಕಾ ರೌಝಾ, ದಿವಾನ್- ಇ-ಅಮ್ ಮತ್ತು ದಿವಾನ್- ಇ-ಖಾಸ್ ಕಟ್ಟಡಗಳು ಮೊಘಲರ ಕಾಲದ ವಾಸ್ತುಶಿಲ್ಪ ವೈಭವದ ಒಳನೋಟವನ್ನು ಒದಗಿಸುತ್ತವೆ. ಇತ್‍ಮಡ್- ಉದ್- ದೌಲಾಹ್ ಸಮಾಧಿ, ಮರಿಯಂ ಝಮಾನಿ ಸಮಾಧಿ, ಜಸ್ವಂತ್ ಕಿ ಛಾತ್ರಿ, ಚೌಸತ್ ಖಂಬ ಮತ್ತು ತಾಜ್ ವಸ್ತು ಸಂಗ್ರಹಾಲಯ ಇಲ್ಲಿ ನೋಡಬೇಕಾಗಿರುವ ಆಕರ್ಷಣೆಗಳ ಪಟ್ಟಿಯಲ್ಲಿ ಸೇರಿವೆ.
 
ಭಾರತದ ಇತರ ನಗರಗಳಂತೆ ಆಗ್ರಾವು ಸಹ ಧಾರ್ಮಿಕ ಸಹಿಷ್ಣುತೆಯನ್ನು ಪ್ರತಿಬಿಂಬಿಸುತ್ತಿದೆ. ಇಲ್ಲಿರುವ ಜಾಮಾ ಮಸೀದಿಯು ಪ್ರಖ್ಯಾತ ಹಿಂದೂ ದೇವಾಲಯವಾದ ಬಾಗೇಶ್ವರ್ ದೇವಾಲಯದೊಂದಿಗೆ ಸ್ಥಳವನ್ನು ಹಂಚಿಕೊಂಡಿದೆ. ಬೇರೆ ನಗರಗಳಲ್ಲಿರುವಂತೆ ಆಗ್ರಾದಲ್ಲಿ ಸಹ ನಯನ ಮನೋಹರ ತಾಣಗಳು, ವಾಸನೆಗಳು ಮತ್ತು ಗೌಜು ಗದ್ದಲಗಳನ್ನು ತನ್ನಲ್ಲಿ ಒಳಗೊಂಡಿದೆ. ಇದರ ಜೊತೆಗೆ ಸೋಮಿ ಬಾಗ್ ಮತ್ತು ಮೆಹ್ತಾಬ್ ಬಾಗ್‍ನಂತಹ ಪ್ರಶಾಂತವಾದ ಉದ್ಯಾನವನಗಳನ್ನು ನಾವಿಲ್ಲಿ ಕಾಣಬಹುದು. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳು ನೋಡಲು ತುಂಬಾ ಸೊಗಸಾಗಿರುತ್ತವೆ. ಅಲ್ಲದೆ ತಾಜ್ ಮಹಲ್ ಸಹ ಜನರ ಗೌಜು ಗದ್ದಲದಿಂದ ದೂರದಲ್ಲಿ ನೆಲೆಗೊಂಡಿದೆ.
 
ಆಗ್ರಾಗೆ ಕೇವಲ ಪ್ರವಾಸಿಗರು ಮಾತ್ರ ಆಕರ್ಷಿತರಾಗುತ್ತಾರೆ ಎಂದು ತಿಳಿಯಬೇಡಿ. ಇಲ್ಲಿರುವ ಕೀತಂ ಕೆರೆ ಮತ್ತು ಸುರ್ ಸರೋವರ್ ಪಕ್ಷಿಧಾಮಕ್ಕೆ ವಿದೇಶಿ ಹಕ್ಕಿಗಳಾದ ಹೆರ್ಜಾಲೆ, ಸೈಬಿರಿಯನ್ ಕೊಕ್ಕರೆ, ಸರಸ್ ಕೊಕ್ಕರೆಗಳು, ಬ್ರಾಹ್ಮಣಿ ಬಾತುಕೋಳಿಗಳು, ಗೀಸ್ ಮತ್ತು ಗಡ್‍ವಲ್ ಹಾಗು ಹಂಸಗಳು ಸಹ ಆಕರ್ಷಿತಗೊಂಡು ಭೇಟೀ ನೀಡುತ್ತವೆ.
==ಪ್ರಮುಖ ಸ್ಥಳಗಳು==
{{ಮುಖ್ಯ |ತಾಜ್ ಮಹಲ್}}
"https://kn.wikipedia.org/wiki/ಆಗ್ರಾ" ಇಂದ ಪಡೆಯಲ್ಪಟ್ಟಿದೆ