ಸಾಗರಿಕ ಕ್ಷಿಪಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
 
೨೯ ನೇ ಸಾಲು:
'''ಸಾಗರಿಕ''' [[ಭಾರತೀಯ ನೌಕಾದಳ]]ದ [[ಜಲಾಂತರ್ಗಾಮಿ ಹಡಗು]]ಗಳಿಂದ ಉಡಾವಣೆ ಮಾಡಬಲ್ಲ ಒಂದು [[ಕ್ಷಿಪಣಿ]]. ಇದು ಗರಿಷ್ಠ ೭೫೦ [[ಕಿ.ಮಿ.]] ದೂರದವರೆಗೆ ಸಂಚರಿಸಬಲ್ಲದು.
 
ಮೊಟ್ಟ ಮೊದಲಬಾರಿಗೆ [[ಭಾರತ]] ಜಲಾಂತರ್ಗಾಮಿ ಚಾಲಿತ "ಸಾಗರಿಕಾ" ಕ್ಷಿಪಣಿಯನ್ನು[[ಕ್ಷಿಪಣಿ]]ಯನ್ನು ಯಶಸ್ವಿಯಾಗಿ ಪರೀಕ್ಷಿಸಿ ತನ್ನ ಶಸ್ತ್ರಾಸ್ತ್ರ ಬತ್ತಳಿಕೆಗೆ ಸೇರಿಸಿಕೊಂಡಿತು. ಇದರಿಂದಾಗಿ ಪರಮಾಣು ಸಿಡಿತಲೆಗಳನ್ನು ಎಲ್ಲ ನೆಲೆಗಳಿಂದ - ಅಂದರೆ ಭೂಮಿ, ಆಗಸ, ಮತ್ತು ಸಮುದ್ರದೊಳಗಿಂದ - ಉಡಾಯಿಸಿ ನಿಗಧಿತ ಗುರಿಗೆ ತಲುಪಿಸಿ ಸ್ಫೋಟಿಸಬಲ್ಲ ಸಾಮಥ್ರ್ಯ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತವೂ ಕೂಡ ಸೇರಿದೆ. ಇದರಿಂದಾಗಿ ಯಾವುದಾದರೊಂದು ರಾಷ್ಟ್ರ ಭಾರತದ [[ಭೂಮಿ]] ಮತ್ತು ಆಗಸದಲ್ಲಿನ ಪರಮಾಣು ಕ್ಷಿಪಣಿ ನೆಲೆಗಳನ್ನು ನಾಶಗೊಳಿಸಿದಲ್ಲಿ ಭಾರತ ನಿರಾತಂಕವಿಲ್ಲದೇ ಸಾಗರದೊಳಗಿನ ಜಲಾಂತರ್ಗಾಮಿ ನೌಕಾನೆಲೆಯಿಂದ ಕ್ಷಿಪಣಿಗಳನ್ನು ಹಾರಿಬಿಟ್ಟು ಧಾಳಿ ನಡೆಸಬಹುದು. ತನ್ನದೇ ಸ್ವಂತ ಜಲಾಂತರ್ಗಾಮಿ ನೌಕೆ ಹೊಂದಿಲ್ಲದ ಕಾರಣ, ಸಾಗರಿಕಾ ಕ್ಷಿಪಣಿಯನ್ನು ಸಾಗರದಾಳದ ತಾತ್ಕಾಲಿಕ ನೆಲೆಯಿಂದ ಇದನ್ನು ಉಡಾಯಿಸಲಾಯಿತು. ಭಾರತದ ಈ ಪರೀಕ್ಷೆಯಿಂದಾಗಿ [[ಏಷ್ಯಾ]] ಖಂಡದಲ್ಲಿ ಶಸ್ತ್ರಾಸ್ತ್ರ ಪೈಪೋಟಿ ಇನ್ನೂ ಹೆಚ್ಚುತ್ತದೆಂದು [[ಪಾಕಿಸ್ತಾನ]] ಆತಂಕ ವ್ಯಕ್ತಪಡಿಸಿದೆ.
 
== ಸಾಗರದಾಳದಿಂದ [[ಕ್ಷಿಪಣಿ]] ಧಾಳಿ ==
ಸಾಗರದಾಳದಿಂದ ಭೂಮಿಯ ಮೇಲ್ಮೈನಲ್ಲಿರುವ ಗುರಿ ತಲುಪಬಲ್ಲ ಸಾಗರಿಕಾ ಕ್ಷಿಪಣಿ ಅಭಿವೃದ್ಧಿಗಾಗಿ ಕಳೆದ ಹತ್ತು ವರ್ಷಗಳಿಂದ ಭಾರತದ ವಿಜ್ಞಾನಿಗಳು ಪ್ರಯತ್ನ ನಡೆಸಿದ್ದರು. ಅದೀಗಷ್ಟೆ ಯಶಗಳಿಸಿದೆ. ಸಾಗರದ ನೂರಾರು ಅಡಿಗಳ ಆಳದಲ್ಲಿ ಸಬ್-ಮೆರೀನ್ ಅಥವಾ ಜಲಾಂತರ್ಗಾಮಿ ಯುದ್ದನೌಕಾ ನೆಲೆಯಿಂದ ಕ್ಷಿಪಣಿಗಳನ್ನು ಭೂಮಿಯ ಮೇಲಿನ ನಿಗಧಿತ ಗುರಿಯಿಟ್ಟು ಹೊಡೆಯುವುದು ಒಂದು ಸಂಕ್ಲಿಷ್ಟ ಪ್ರಕ್ರಿಯೆಯೇ ಸರಿ. ಮೊದಲ ಹಂತದಲ್ಲಿ ಜಲಾಂತರ್ಗಾಮಿ ನೌಕೆಯಲ್ಲಿರುವ ಎತ್ತರದ ಟ್ಯೂಬಿನಿಂದ ಶಕ್ತಿಯುತವಾದ ಅನಿಲ ಜನರೇಟರ್ ಸಹಾಯದಿಂದ ಕ್ಷಿಪಣಿಯನ್ನು ಚಿಮ್ಮಿಸಲಾಗುತ್ತದೆ. ಈ [[ಕ್ಷಿಪಣಿ]]ಯು ಸಾಗರದಾಳದಿಂದ ಚಿಮ್ಮಿ ಸಾಗರದ ಮೇಲ್ಮೈ ತಲುಪಿದಾಕ್ಷಣ ಕ್ಷಿಪಣಿಯಲ್ಲಿರುವ ರಾಕೆಟ್ಟನ್ನು ಸ್ವಯಂಚಾಲಿತವಾಗಿ ಉಢಾಯಿಸಲಾಗುತ್ತದೆ ಮತ್ತು ಈ ಕ್ಷಿಪಣಿಯು[[ಕ್ಷಿಪಣಿ]]ಯು ಉಢಾವಣೆಯ ನಂತರ ಗುರಿ ಮುಟ್ಟಲು ಯಾವ ಪಥದಲ್ಲಿ ಸಾಗಬೇಕೆಂಬುದನ್ನು ಜಲಾಂತಗರ್ಾಮಿ ನೌಕೆಯ ಸಲಹಾ ವ್ಯವಸ್ಥೆಯು ನಿರ್ದೇಶಿಸುತ್ತದೆ. ಸದ್ಯಕ್ಕೆ ಸಾಗರಿಕಾ ಕ್ಷಿಪಣಿಯು 300ಕಿ.ಮೀ ದೂರದ ವ್ಯಾಪ್ತಿಯನ್ನು ಹೊಂದಿದೆ.
 
ಜಲಾಂತರ್ಗಾಮಿ ನೌಕೆಗಳು:
"https://kn.wikipedia.org/wiki/ಸಾಗರಿಕ_ಕ್ಷಿಪಣಿ" ಇಂದ ಪಡೆಯಲ್ಪಟ್ಟಿದೆ