ಮೈಕ್ರೋಸಾಫ್ಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧೭ ನೇ ಸಾಲು:
೯೦ ರ ದಶಕದ ಮಧ್ಯದಲ್ಲಿ ಮೈಕ್ರೋಸಾಫ್ಟ್ ಅಂತರ್ಜಾಲಕ್ಕೆ ಸಂಬಂಧಪಟ್ಟ ತಂತ್ರಾಂಶಗಳನ್ನು ಸಹ ಮಾರಾಟ ಮಾಡಲಾರಂಭಿಸಿತು. ಎಮ್ ಎಸ್ ಎನ್ ಎಂಬ ಪ್ರಮುಖ ಅಂತರ್ಜಾಲ ಸೇವೆಯನ್ನು ಆರಂಭಿಸಿತು. ೧೯೯೬ ರಲ್ಲಿ ಎನ್ ಬಿ ಸಿ ಸಂಸ್ಥೆಯಂದಿಗೆ ಸೇರಿ ಎಮ್ ಎಸ್ ಎನ್ ಬಿ ಸಿ ಎಂಬ ಕೇಬಲ್ ಟಿವಿ ಚಾನಲ್ ಅನ್ನು ಆರಂಭಿಸಲಾಯಿತು. ಪಿಡಿಎ, ಮೊಬೈಲ್ ಫೋನ್ ಮೊದಲಾದ ಕಿರು ಯಂತ್ರಗಳ ಮೇಲೆ ಕೆಲಸ ಮಾಡಬಲ್ಲ ವಿಂಡೋಸ್ ಸಿಇ ಎಂಬ ಕಾರ್ಯಾಚರಣ ವ್ಯವಸ್ಥೆಯನ್ನು ಬಿಡುಗಡೆ ಮಾಡಲಾಯಿತು.
 
ಅಂತರ್ಜಾಲದಲ್ಲಿ ತಾಣಗಳನ್ನು ಭೇಟಿ ನೀಡಲು ಮೈಕ್ರೋಸಾಫ್ಟ್ ನ ತಂತ್ರಾಂಶವಾದ ಇಂಟರ್ನೆಟ್ ಎಕ್ಸ್ಪ್ಲೋರರ್ ಅನ್ನು ವಿಂಡೋಸ್ ಮತ್ತು ಮ್ಯಾಕ್ - ಈ ಎರಡೂ ಕಾರ್ಯಾಚರಣ ವ್ಯವಸ್ಥೆಗಳಿಗೆ ಬಿಡುಗಡೆ ಮಾಡಲಾಯಿತು. ತನ್ನ ಸ್ಪರ್ಧಾಳು ತಂತ್ರಾಂಶ ನೆಟ್ ಸ್ಕೇಪ್ ಗಿಂತ ಇದು ಹೆಚ್ಚು ಯಶಸ್ವಿಯಾಗಲಾರಂಭಿಸಿತು. ಇದಕ್ಕೆ ಸಂಬಂಧಪಟ್ಟಂತೆ ೧೯೯೪ ರ ಒಂದು ಒಪ್ಪಂದವನ್ನು ಮೈಕ್ರೋಸಾಫ್ಟ್ ಮೀರಿತ್ತು ಎಂದು ೧೯೯೭ ರಲ್ಲಿ ಅಮೆರಿಕದ ನ್ಯಾಯ ಇಲಾಖೆ ದೂರು ದಾಖಲಿಸಿಕೊಂಡಿತು. ಏಪ್ರಿಲ್ ೩, ೨೦೦೮೨೦೦೦ ರಂದುದಂದು ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಮೈಕ್ರೋಸಾಫ್ಟ್ ಸಂಸ್ಥೆ ಗ್ರಾಹಕರ ಹಿತರಕ್ಷಣೆಗಾಗಿ ಇಬ್ಭಾಗವಾಗಬೇಕೆಂಬ ತೀರ್ಪು ನೀಡಿತು.
 
೧೯೯೮ ರಲ್ಲಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ನ ಅಧ್ಯಕ್ಷ ಸ್ಥಾನವನ್ನು ಸ್ಟೀವ್ ಬಾಮರ್ ಅವರಿಗೆ ಬಿಟ್ಟುಕೊಟ್ಟರು; ಆದರೆ ಸಂಸ್ಥೆಯ ಚೇರ್ಮನ್ ಆಗಿ ಮುಂದುವರೆದರು. ೧೯೯೮ ರಲ್ಲಿ ವಿಂಡೋಸ್ ೯೮, ೨೦೦೧ ರಲ್ಲಿ ವಿಂಡೋಸ್ ಎಕ್ಸ್ ಪಿ ಬಿಡುಗಡೆಯಾದವು. ಎಕ್ಸ್ ಬಾಕ್ಸ್ ಎಂಬ ಟಿವಿ ಆಟಗಳನ್ನಾಡುವ ಯಂತ್ರದ ಬಿಡುಗಡೆಯ ನಂತರ ಮೈಕ್ರೋಸಾಫ್ಟ್ ಗೇಮಿಂಗ್ ಮಾರುಕಟ್ಟೆಯನ್ನೂ ಪ್ರವೇಶಿಸಿತು.
"https://kn.wikipedia.org/wiki/ಮೈಕ್ರೋಸಾಫ್ಟ್" ಇಂದ ಪಡೆಯಲ್ಪಟ್ಟಿದೆ