ಮೈಕ್ರೋಸಾಫ್ಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
'''ಮೈಕ್ರೋಸಾಫ್ಟ್''' [[ಅಮೆರಿಕ]]ದಲ್ಲಿ ಕೇಂದ್ರೀಕೃತವಾದ ಬಹುರಾಷ್ಟ್ರೀಯ ಗಣಕಯಂತ್ರ ತಂತ್ರಜ್ಞಾನ ಸಂಸ್ಥೆ. ಗಣಕಯಂತ್ರ, ಮೊಬೈಲ್ ಫೋನ್ ಮತ್ತಿತರ ಸಾಧನಗಳಲ್ಲಿ ಉಪಯೋಗಿಸಬಹುದಾದ ವಿವಿಧ ರೀತಿಯ ತಂತ್ರಾಂಶಗಳನ್ನು ಈ ಸಂಸ್ಥೆ ವಿಕಸನಗೊಳಿಸಿ ಮಾರಾಟ ಮಾಡುತ್ತದೆ. ಇದರ ಅತ್ಯಂತ ಯಶಸ್ವಿ ತಂತ್ರಾಂಶಗಳೆಂದರೆ [[ವಿಂಡೋಸ್]] ಕಾರ್ಯಾಚರಣ ವ್ಯವಸ್ಥೆ ಮತ್ತು [[ಮೈಕ್ರೋಸಾಫ್ಟ್ ಆಫೀಸ್]] ಗುಂಪಿನ ತಂತ್ರಾಂಶಗಳು. ಈ ಸಂಸ್ಥೆಯನ್ನು ಸ್ಥಾಪಿಸಿದವರು [[ಬಿಲ್ ಗೇಟ್ಸ್]].
 
==ಚರಿತ್ರೆ==
 
===೧೯೭೫-೧೯೮೫: ಸ್ಥಾಪನೆ===
ಆಲ್ಟೇರ್ ೮೮೦೦ ಗಣಕಯಂತ್ರದ ಬಿಡುಗಡೆಯ ನಂತರ, ಆ ಯಂತ್ರದ ಮೇಲೆ [[ಬೇಸಿಕ್]] ಭಾಷೆಯನ್ನು ಉಪಯೋಗಿಸಲು ತಂತ್ರಾಂಶವೊಂದನ್ನು ಬಿಲ್ ಗೇಟ್ಸ್ ಪ್ರದರ್ಶಿಸಿದರು. ಈ ಗಣಕಯಂತ್ರವನ್ನು ತಯಾರಿಸುತ್ತಿದ್ದ ಸಂಸ್ಥೆ ಈ ತಂತ್ರಾಂಶವನ್ನು ಮಾರಾಟ ಮಾಡಲು ಒಪ್ಪಿಗೆಯಿತ್ತ ನಂತರ ಬಿಲ್ ಗೇಟ್ಸ್ [[ಹಾರ್ವರ್ಡ್]] ವಿಶ್ವವಿದ್ಯಾಲಯವನ್ನು ಬಿಟ್ಟು ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸ್ಥಾಪಿಸಿದರು.
 
ಮೈಕ್ರೋಸಾಫ್ಟ್ ಸಂಸ್ಥೆಯ ಮೊದಲ ಯಶಸ್ಸು "ಡಾಸ್" ಕಾರ್ಯಾಚರಣ ವ್ಯವಸ್ಥೆ. ಐಬಿಎಮ್ ಸಂಸ್ಥೆಯ ಗಣಕಯಂತ್ರಗಳಿಗೂ ಈ ಕಾರ್ಯಾಚರಣ ವ್ಯವಸ್ಥೆಯನ್ನು ವಿಸ್ತರಿಸಿದ ಮೇಲೆ ಮೈಕ್ರೋಸಾಫ್ಟ್ ದೊಡ್ಡ ಸಂಸ್ಥೆಯಾಗಿ ಬೆಳೆಯಿತು.
 
===೧೯೮೫-೧೯೯೫: ಒಎಸ್/೨ ಮತ್ತು ವಿಂಡೋಸ್===
ಆಗಸ್ಟ್ ೧೯೮೫ ರಲ್ಲಿ ಮೈಕ್ರೋಸಾಫ್ಟ್ ಮತ್ತು ಐಬಿಎಮ್ ಸೇರಿ ಒಎಸ್/೨ ಎಂಬ ಕಾರ್ಯಾಚರಣ ವ್ಯವಸ್ಥೆಯನ್ನು ಹೊರತಂದರು. ಇದೇ ವರ್ಷದಲ್ಲಿ ಮೈಕ್ರೋಸಾಫ್ಟ್ ತನ್ನ ಪ್ರಸಿದ್ಧ [[ವಿಂಡೋಸ್]] ಕಾರ್ಯಾಚರಣ ವ್ಯವಸ್ಥೆಯನ್ನೂ ಬಿಡುಗಡೆ ಮಾಡಿತು. ಮಾರ್ಚ್ ೧೩, ೧೯೮೬ ರಂದು ತನ್ನ ಷೇರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು.
 
೧೯೮೯ ರಲ್ಲಿ [[ಮೈಕ್ರೋಸಾಫ್ಟ್ ಆಫೀಸ್]] ಎಂಬ ತಂತ್ರಾಂಶ ಸಲಕರಣೆಗಳ ಸಮೂಹವನ್ನು ಬಿಡುಗಡೆ ಮಾಡಿತು.
 
{{ಚುಟುಕು}}
"https://kn.wikipedia.org/wiki/ಮೈಕ್ರೋಸಾಫ್ಟ್" ಇಂದ ಪಡೆಯಲ್ಪಟ್ಟಿದೆ