ಗೋಕಾಕ ಆಯೋಗ ರಚನೆಯ ಹಿನ್ನಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಗೋಕಾಕ ಆಯೋಗವು ರಚನೆಯಾಗುವ''' ಹಿಂದೆ ಕರ್ನಾಟಕದ ಪ್ರೌಢಶಾಲೆಗಳಲ್ಲಿ ಕಲಿಸುತ...
 
ಸಣ್ಣ ಬದಲಾವನೆ
೧ ನೇ ಸಾಲು:
'''ಗೋಕಾಕ ಆಯೋಗವು ರಚನೆಯಾಗುವ''' ಹಿಂದೆ ಕರ್ನಾಟಕದ[[ಕರ್ನಾಟಕ]]ದ ಪ್ರೌಢಶಾಲೆಗಳಲ್ಲಿ ಕಲಿಸುತ್ತಿದ್ದ ವಿವಿಧ ಭಾಷೆಗಳ[[ಭಾಷೆ]]ಗಳ ವಿಷಯದಲ್ಲಿ ಒಂದು ವಿವಾದವೆದ್ದಿತ್ತು. ವಿವಿಧ ಮಾಧ್ಯಮದ ಪ್ರೌಢಶಾಲೆಗಳಲ್ಲಿ ಕನ್ನಡ, ಇಂಗ್ಲಿಷು, ತಮಿಳು, ತೆಲುಗು, ಮರಾಠಿ ಮುಂತಾದ ಆಡುಮಾತುಗಳ ಜೊತೆಗೆ ಸಂಸ್ಕೃತವೂ[[ಸಂಸ್ಕೃತ]]ವೂ ಪ್ರಥಮ ಭಾಷೆಯಾಗಿತ್ತು. ಪ್ರಾಥಮಿಕ ಶಾಲೆಗಳಲ್ಲಿ ಸಂಸ್ಕೃತ ಕಲಿಯುವ ವ್ಯವಸ್ಥೆ ಇರದಿದ್ದರೂ, ಪ್ರೌಢಶಾಲೆಗಳಲ್ಲಿ ಆ ಭಾಷೆಯನ್ನು ಮೊದಲ ಭಾಷೆಯಾಗಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸದಿಂದ ಶಿಕ್ಷಣ ಪ್ರಾರಂಭವಾಗುತ್ತಿತ್ತು. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯು ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಆರಿಸಿಕೊಂಡಿದ್ದರೆ ತುಂಬ ಸುಲಭವಾದ ಪಾಠಗಳನ್ನು ಕಲಿತು, ಸಾಕಷ್ಟು ಹೆಚ್ಚು ಕಲಿತ ಇತರ ಭಾಷೆಗಳ ವಿದ್ಯಾರ್ಥಿಗಳಿಗಿಂತ ತುಂಬ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದ. ಅಲ್ಲದೆ, ವಿದ್ಯಾರ್ಥಿಗಳನ್ನು ಆಕರ್ಷಿಸುವ ದೃಷ್ಟಿಯಿಂದ ಸಂಸ್ಕೃತ ಅಧ್ಯಾಪಕರು ತುಂಬ ಧಾರಾಳವಾಗಿ ಅಂಕಗಳನ್ನು ಕೊಡುವ ರೀತಿಯಿತ್ತು. ಈಗಲೂ ಇದೆ.
 
ಸಂಸ್ಕೃತವನ್ನು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯು ಕಲಿಯುವುದು ಮೂರು ವರ್ಷಗಳ ಕಾಲ ಮಾತ್ರ; ಕನ್ನಡ ವಿದ್ಯಾರ್ಥಿ ಪ್ರಾಥಮಿಕ ಮೊದಲ ತರಗತಿಯಿಂದಲೇ, ಅಂದರೆ ಹತ್ತು ವರ್ಷಗಳ ಕಾಲ ಕಲಿಯುತ್ತಾನೆ. ಮೂರು ವರ್ಷ ಮಾತ್ರ ಕಲಿತ ಭಾಷೆಯ ಮಟ್ಟದೊಂದಿಗೆ ಅದನ್ನು ಹೋಲಿಸುವುದು ಸರಿಯಲ್ಲ. ಆಲ್ಲದೆ, ಸಂಸ್ಕೃತ ಪತ್ರಿಕೆಯನ್ನು ವಿದ್ಯಾರ್ಥಿಗಳು ಉತ್ತರಿಸುವುದು [[ಕನ್ನಡ]] ಅಥವಾ [[ಇಂಗ್ಲಿಷ್]] ಭಾಷೆಯಲ್ಲಿ. ಹೀಗಾಗಿ, ಸಂಸ್ಕೃತವನ್ನು ಮೊದಲ ಭಾಷೆಯಾಗಿ ಆರಿಸಿಕೊಂಡರೆ ಹೆಚ್ಚು ಅಂಕಗಳನ್ನು ಪಡೆಯಬಹುದು ಎಂಬ ಕಾರಣಕ್ಕಾಗಿಯೇ ಭಾಷೆಯನ್ನು ಆರಿಸಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಬರಬರುತ್ತ ಹೆಚ್ಚಾಗುತ್ತ ಸಾಗಿತು. ಇತರ ಮಾತೃಭಾಷೆಯ ಜನರಿಗಿಂತ ನಿರಭಿಮಾನಿಗಳಾದ ಕನ್ನಡಿಗರು ತಮ್ಮ ಮಕ್ಕಳನ್ನು ಸಂಸ್ಕೃತ ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತಿದ್ದರು.ಅದರ ಪರಿಣಾಮವಾಗಿ ಪ್ರೌಢಶಾಲೆಗಳಲ್ಲಿ ಕನ್ನಡವನ್ನು ಮೊದಲ ಭಾಷೆಯಾಗಿ ಓದುವ ವಿದ್ಯಾರ್ಥಿಗಳ ಸಂಖ್ಯೆಯು ಗಣನೀಯವಾಗಿ ಇಳಿಯತೊಡಗಿತು. ಘನತೆಯ ಪ್ರತೀಕಗಳಾದ ಕೆಲವು ಶಾಲೆಗಳಲ್ಲಿಯಂತೂ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಅತ್ಯಲ್ಪವಾಗಿತ್ತು. ಇದರಿಂದ ಕಾಲೇಜುಗಳಲ್ಲಿ ಕನ್ನಡವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಯಿತು.
 
ಇದರೊಡನೆ ಕನ್ನಡದಂತಹ ಆಡು ನುಡಿಗಳನ್ನು ಮಕ್ಕಳು ಹುಟ್ಟಿದ ಕ್ಷಣದಿಂದಲೇ ಕಿವಿಗೆ ಹಾಕಿಕೊಳ್ಳುತ್ತ ಪ್ರಯತ್ನವಿಲ್ಲದೆ ಆ ಭಾಷೆಯಲ್ಲಿ ವ್ಯವಹರಿಸುವ ಶಕ್ತಿಯನ್ನು ಗಳಿಸಿಕೊಳ್ಳುತ್ತವೆ. ಇದನ್ನೇ ಪ್ರಥಮ ಭಾಷೆಯೆನ್ನುವುದು. ಇಂತಹ ಭಾಷೆಗಳ ಜೊತೆಯಲ್ಲಿ ಪ್ರಪಂಚದಲ್ಲಿ ಯಾರೂ ಮಾತನ್ನೇ ಆಡದ ಸಂಸ್ಕೃತವನ್ನು ಸೇರಿಸುವುದು ಅತ್ಯಂತ ಅವೈಜ್ಞಾನಿಕವಾದ ಪರಿಪಾಠ.