ಇಸ್ಲಾಂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Sufism is part of Sunni
೬೬ ನೇ ಸಾಲು:
* [[ಷಿಯಾ]]
* [[ಸುನ್ನಿ]]
*
* [[ಸೂಫಿ]]
== ಪ್ರಮುಖ ಹಬ್ಬಗಳು ==
* [[ಈದ್-ಉಲ್-ಫಿತರ್]] ([[ರಂಜಾನ್]])
೭೪ ನೇ ಸಾಲು:
'''[[ಇಸ್ಲಾಮ್]]''' ಧರ್ಮದಲ್ಲಿ '''[[ಜಿಹಾದ್]]''' ಅಂದರೆ ಹೋರಾಡು ಎಂದರ್ಥ. ತನ್ನ ಕಾಮನೆಗಳ ವಿರುದ್ಧ ಹೋರಾಡುವುದು ಒಂದು '''[[ಜಿಹಾದ್]]''' ಆಗಿದೆ. ಈಗಿರುವಂತೆ ಭಯೋತ್ಪಾದನಾ ಕೃತ್ಯಗಳಿಗೂ ಜಿಹಾದಿಗೆ ಯಾವುದೆ ಸಂಬಂಧವಿಲ್ಲ. '''[[ಜಿಹಾದ್]]''' ಎಂಬ ಪದವು ಬಹಳ ಗಾಢವಾದ ಅರ್ಥವನ್ನು ಹೊಂದಿದೆ.
==ಇಸ್ಲಾಂ ತುಳಿದು ಬಂದ ಹಾದಿ==
ಸರಿಸುಮಾರು ೧೪೫೦ ವರ್ಷಗಳ ಹಿಂದೆ ಅರೇಬಿಯಾ ಮರುಭೂಮಿಯಲ್ಲಿರುವ ಮಕ್ಕಾನಗರಿಯ ಇತಿಹಾಸವು ಅತ್ಯದ್ಭುತ ತಿರುವನ್ನು ಕಂಡಿತು. ತನ್ನ ಬಾಲ್ಯದಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದವನೊಬ್ಬಮೇಯಿಸುತ್ತಿದ್ದವru ತನ್ನ ೪೦ನೇ ವಯಸ್ಸಿನಲ್ಲಿ ಮರಳುಗಾಡಿನಲ್ಲಿ ಕ್ರಾಂತಿಯ ಬಿರುಗಾಳಿಯನ್ನೆಬ್ಬಿಸಿದ ರೋಚಕ ಕಥೆಯಿದು. ಅಚ್ಚರಿ ಮೂಡಿಸುವ ಈ ಕ್ರಾಂತಿಯು ಬಿರುಗಾಳಿಯಂತೆ ಅಖಂಡ ಅರಬ್ ದೇಶ ಮಾತ್ರವಲ್ಲ ಇಡೀ ಜಗತ್ತನ್ನೇ ವ್ಯಾಪಿಸಿತು.ತಂದೆಯ ಮುಖವನ್ನು ನೋಡದ ಬಾಲ್ಯದಲ್ಲೇ ತಾಯಿಯ ವಿಯೋಗದ ವೇದನೆಯನ್ನನುಭವಿಸಿದ ಮತ್ತದರ ಬೆನ್ನಲ್ಲೇ ಪ್ರೀತಿಯ ತಾತರನ್ನೂ ಕಳಕೊಂಡು ಒಬ್ಬಂಟಿಗನಾಗಿ ಸಂಕಷ್ಟದಲ್ಲಿ ಸಿಲುಕಿದ ಓರ್ವ ನಿರಕ್ಷರಿ ಅನಾಥನ ಮೂಲಕ ಮಾನವ ಜಗತ್ತಿಗೆ ದೊರೆತ ಅನುಗ್ರಹೀತ ಹಾಗೂ ಅವಿಸ್ಮರಣೀಯ ಕ್ರಾಂತಿಯ ಕಥೆಯಿದು. ಈ ಕ್ರಾಂತಿಯ ಹೆಸರೇ'ಇಸ್ಲಾಂ'ಆಗಿದೆ. ಆದಿ ಮಾನವನೂ ಮೊತ್ತ ಮೊದಲ ಪ್ರವಾದಿಯೂ ಆದ ಹ. ಆದಮ್ (ಅ)ರಿಂದ ಹಿಡಿದು ಮಾನವ ಮಾರ್ಗದರ್ಶನಕ್ಕಾಗಿ ಹಂತ ಹಂತವಾಗಿ ಆಗಮಿಸುತ್ತಿದ್ದ ಪ್ರವಾದಿಗಳ ಸರಪಳಿಯ ಕೊನೆಯ ಕೊಂಡಿಯಾಗಿ ಈ ಮಹಾನ್ ಕ್ರಾಂತಿಕಾರಿ ಪ್ರವಾದಿಯು ಜಗತ್ತಿಗಾಗಮಿಸಿದರು. ಅವರೇನೂ ಹೊಸ ಸಂದೇಶವನ್ನು ನೀಡಲಿಲ್ಲ ಬದಲಾಗಿ ತನಗಿಂತ ಮುಂಚೆ ಪ್ರತ್ಯೇಕ ಕಾಲ ಮತ್ತು ಸಮುದಾಯಗಳಲ್ಲಿ ಆಗಮಿಸುತ್ತಿದ್ದ, ಪ್ರವಾದಿಗಳೆಂದು ಕರೆಯಲ್ಪಡುತ್ತಿದ್ದ ಸತ್ಪುರುಷರು ನೀಡಿದ "ಏಕ ಮತ್ತು ನೈಜ ಆರಾಧ್ಯನಾದ ಅಲ್ಲಾಹನನ್ನು ಮಾತ್ರ ಆರಾಧಿಸಿರಿ" ಎಂಬ ಸಂದೇಶವನ್ನೇ ಅವರೂ ಸಾರಿದರು. [[ಆಡಮ್]] ಎಂದು ನಾಮಾಂಕಿತರಾದ ಹ.ಆದಂ, ನೋಹಾ ಎಂದು ಕರೆಯಲ್ಪಡುವ ಹ.ನೂಹ್, ಅಬ್ರಹಾಂ ಎಂದು ಪ್ರಸಿದ್ಧರಾದ ಹ.ಇಬ್ರಾಹೀಂ, ಡೇವಿಡ್ ಎಂದು ಪ್ರಖ್ಯಾತ ರಾದ ಹ.ದಾವೂದ್, ಮೋಸೆಸ್ ಎಂದು ನಾಮಪಡೆದ ಹ.ಮೂಸಾ, ಏಸುಕ್ರಿಸ್ತ ಎಂದು ಆರಾಧ್ಯ ಪಟ್ಟಕ್ಕೇರಿ ಸಲ್ಪಟ್ಟ ಹ. [[ಈಸಾ]] ಈ ಏಲ್ಲಾ ಗತಕಾಲದ ಪ್ರವಾದಿಗಳೂ ಇದೇ ಸಂದೇಶವನ್ನು ತನ್ನ ತನ್ನ ಸಮುದಾಯಗಳ ಮುಂದಿಟ್ಟಿದ್ದರು.
 
ನಲ್ವತ್ತು ವರ್ಷಗಳ ಕಾಲ ಪ್ರತಿಯೊಂದು ನಿಮಿಷವನ್ನೂ ತನ್ನದೇ ಸಮಾಜದಲ್ಲಿ ಅವರು ಕಳೆದಿದ್ದರು. ತನ್ನ ಉತ್ತಮ ಗುಣನಡತೆ ಮತ್ತು ಪಾವನ, ಪರಿಶುದ್ಧ ಸ್ವಭಾವದಿಂದಾಗಿ ಬಾಲ್ಯದಿಂದಲೇ ಸಮಾಜದ ಪ್ರತಿ ಯೊಬ್ಬ ಸದಸ್ಯನ ಕಣ್ಮಣಿಯಾಗಿದ್ದ ಇವರ ಪ್ರಾಮಾಣಿಕತೆ ಮತ್ತು ಸತ್ಯವಂತಿಕೆ ಜನಜನಿತವಾಗಿತ್ತು, ಆದ್ದರಿಂದಲೇ ಇಡೀ ಜನಾಂಗವೇ ಅವರನ್ನು'[[ಅಲ್ ಅಮೀನ್]]' ಅರ್ಥಾತ್ ಪ್ರಾಮಾಣಿಕ ಮತ್ತು '[[ಅಸ್ಸಾದಿಕ್]]' ಅರ್ಥಾತ್ ಸತ್ಯವಂತ ಎಂಬ ಬಿರುದಿನಿಂದ ಕರೆಯುತ್ತಿತ್ತು. ಎಂದೂ ಯಾರನ್ನೂ ದುಃಖಿಸದ ಇವರು ಸ್ವಯಂ ಇತರರಿಗಾಗಿ ದುಃಖವನ್ನು ಸಹಿಸುತ್ತಿದ್ದರು. ಅವರು ಮೂರ್ತಿಪೂಜಕರ ಜನಾಂಗದಲ್ಲಿದ್ದರು. ಆದರೆ ಅವರೆಂದೂ ಮೂರ್ತಿಪೂಜೆ ಮಾಡಿದವರಲ್ಲ. ವಿಗ್ರಹಾರಾಧನೆಯನ್ನು ಅವರು ದ್ವೇಷಿಸುತ್ತಿದ್ದರು. ಯಾವ ವಸ್ತುವೂ ಪೂಜಾರ್ಹವಲ್ಲವೆಂದು ಅವರ ಅಂತರಾತ್ಮವೇ ಹೇಳುತ್ತಿತ್ತು. ದೇವನು ಕೇವಲ ಒಬ್ಬನೇ ಆಗಿರಲು ಸಾಧ್ಯ ಎಂದು ಅವರ ಮನಸ್ಸು ಸ್ವಯಂ ಸಾಕ್ಷ್ಯವಹಿಸುತ್ತಿತ್ತು. ಆ ಅಜ್ಞಾನಿ ಜನಾಂಗದ ಮಧ್ಯೆ ಅವರು ಕಲ್ಲಿನ ರಾಶಿಯಲ್ಲಿರುವ ವಜ್ರದಂತೆ ಮಿನುಗುತ್ತಿದ್ದರು ಅಥವಾ ಗಾಢ ಅಂಧಕಾರದಲ್ಲಿ ಅವರೊಂದು ಪ್ರಾಕಾಶಮಾನ ದೀಪವಾಗಿದ್ದರು.
"https://kn.wikipedia.org/wiki/ಇಸ್ಲಾಂ_ಧರ್ಮ" ಇಂದ ಪಡೆಯಲ್ಪಟ್ಟಿದೆ